ರಾಜ್ಯ

ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ

ಆಪ್ತ ಸಲಹೆಗಾರರೆ ರಾಹುಲ್‌ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದ ಬಿಜೆಪಿ ನಾಯಕ ಬೆಂಗಳೂರು : ರಾಹುಲ್‌ ಗಾಂಧಿಯ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಡಿದ ಆರೋಪ ಸಂಚಲನವುಂಟು ಮಾಡಿದೆ. ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಲೆಹರ್‌ ಸಿಂಗ್‌ ಸಿರೋಯಾ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಹರಕೆಯ ಕುರಿಯಂತೆ ಬಲಿಕೊಡಲು ಮುಂದಾಗಿದೆ ಎಂಬುದು ಸಿರೋಯ ಹೇಳಿದ್ದಾರೆ. ರಾಹುಲ್‌ ಗಾಂಧಿ ಶುದ್ಧ ಹ್ರದಯದ ವ್ಯಕ್ತಿ, ಆದರೆ ಅವರನ್ನು ದುರ್ಬಲಗೊಳಿಸುವ […]

ರಾಹುಲ್‌ ಗಾಂಧಿ ದುರ್ಬಲಗೊಳಿಸಲು ಮತ್ತು ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ನಲ್ಲೇ ಷಡ್ಯಂತ್ರ Read More »

ರಸ್ತೆ ದಾಟುವ ವೇಳೆ ಮಹಿಳೆಗೆ ಬಸ್ ಢಿಕ್ಕಿ : ಸ್ಥಳದಲ್ಲೇ ಮೃತ್ಯು

ಮಂಗಳೂರು : ಬೆಂದೂರ್ ವೆಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಮಾ.30 ರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಐರಿನ್ ಡಿಸೋಜ(55) ಎಂದು ಗುರುತಿಸಲಾಗಿದೆ.ಸಿಟಿ ಬಸ್ ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದು, ಈ ವೇಳೆ ಅದೇ ಬಸ್ಸಿನಿಂದ ಇಳಿದು ಬಸ್ಸಿನ ಮುಂಭಾಗದಿಂದ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಇನ್ನು ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ

ರಸ್ತೆ ದಾಟುವ ವೇಳೆ ಮಹಿಳೆಗೆ ಬಸ್ ಢಿಕ್ಕಿ : ಸ್ಥಳದಲ್ಲೇ ಮೃತ್ಯು Read More »

ಪ್ರಜಾಧ್ವನಿ ಯಾತ್ರೆಯಲ್ಲಿ ಕಲಾವಿದರಿಗೆ ಹಣ ಎಸೆದ ಆರೋಪ : ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಜಾಧ್ವನಿ ಯಾತ್ರೆ ವೇಳೆ ಹಣವನ್ನು ಹಂಚಿದ್ದಾರೆ ಎನ್ನುವ ದೂರಿನ ಮೇರೆಗೆ ಪೊಲೀಸರು ಅವರ ವಿರುದ್ಧ ನಾನ್-ಕಾಗ್ನಿಸೆಬಲ್ ಅಪರಾಧ ಪ್ರಕರಣವನ್ನು ದಾಖಲಿಸಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಮುನ್ನ ಮಂಗಳವಾರ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕಲಾವಿದರಿಗೆ ಹಣ ಎಸೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರದ ವೇಳೆ ನಗದು ಎಸೆದಿದ್ದಾರೆ ಎಂಬ

ಪ್ರಜಾಧ್ವನಿ ಯಾತ್ರೆಯಲ್ಲಿ ಕಲಾವಿದರಿಗೆ ಹಣ ಎಸೆದ ಆರೋಪ : ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು Read More »

ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂಗಾಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ

ಲಿಂಕ್‌ ಕಳುಹಿಸಿ ಹಣ ಎಗರಿಸಿದ ಖದೀಮ ಉಡುಪಿ : ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂ ಬಗ್ಗೆ ಮಾಹಿತಿ ಹುಡುಕಲು ಹೋದ ಮಹಿಳೆಯೊಬ್ಬರು ಸುಮಾರು 2 ಲ.ರೂ. ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಡುಪಿಯ ಜ್ಯೋತಿ (32) ಹಣ ಕಳೆದುಕೊಂಡವರು. ಫೇಸ್‌ಕ್ರೀಂ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ವೇಳೆ ದೊರೆತ ನಂಬರ್‌ಗೆ ಕರೆ ಮಾಡಿದ್ದು, ಆಗ ವ್ಯಕ್ತಿಯೊಬ್ಬ ನೋಂದಣಿ ಮಾಡುವಂತೆ ಸೂಚಿಸಿದ್ದಾನೆ. ಮಾ.22 ರಂದು ಮತ್ತೆ ಕರೆ ಮಾಡಿದ ವ್ಯಕ್ತಿ ಈ ಹಿಂದೆ ಮಾಡಿದ ಮಾಹಿತಿ

ಆನ್‌ಲೈನ್‌ನಲ್ಲಿ ಫೇಸ್‌ಕ್ರೀಂಗಾಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ Read More »

ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಸಹಪಾಠಿಗಳಿಗೆ 28 ಲಕ್ಷ ರೂ. ಪಂಗನಾಮ

ಮಂಗಳೂರು : ಸುರತ್ಕಲ್‌ನ ಎನ್‌ಐಟಿಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳಿಗೇ ಸುಮಾರು 28 ಲ.ರೂ. ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆ ವಿದ್ಯಾರ್ಥಿ ಯಶ್‌ವರ್ಧನ್‌ ಜೈನ್ ಎಂಬಾತನ ವಿರುದ್ಧ ಕೇಸು ದಾಖಲಾಗಿದೆ.. 2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಅಕ್ಟೋಬರ್ ತಿಂಗಳಿನಲ್ಲಿ ‘ವೈವಿಜೆ ಇನ್‌ವೆಸ್ಟ್‌ಮೆಂಟ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ.

ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ ಸಹಪಾಠಿಗಳಿಗೆ 28 ಲಕ್ಷ ರೂ. ಪಂಗನಾಮ Read More »

ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಸರಣಿ ರಜೆ ತಪ್ಪಿಸಲು ವಾರದ ಮಧ್ಯೆ ಚುನಾವಣೆ

ಬೆಂಗಳೂರು : ಈ ಸಲ ನಡೆಯುವ ವಿಧಾನಸಭೆ ಚುನಾವಣೆ ಮೆ 10 ಬುಧವಾರ ಬರುತ್ತದೆ. ಬುಧವಾರವನ್ನೇ ಆಯ್ಕೆ ಮಾಡಿಕೊಳ್ಳಲು ಚುನಾವಣಾ ಆಯೋಗ ಕಾರಣ ಕೊಟ್ಟಿದೆ. ಒಂದು ವೇಳೆ ಚುನಾವಣೆ ಸೋಮವಾರ ನಿಗದಿ ಮಾಡಿದ್ದರೆ ಆ ದಿನ ರಜೆಯಾದ್ದರಿಂದ ದೀರ್ಘ ವಾರಾಂತ್ಯ ಎಂದು ತೆರಳುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಇದರಿಂದ ಮತದಾನ ಕಡಿಮೆಯಾಗುತ್ತಿತ್ತು. ಮಂಗಳವಾರ ಚುನಾವಣೆ ನಿಗದಿ ಮಾಡಿದ್ದರೂ ಸೋಮವಾರ ಒಂದು ದಿನ ರಜೆ ಪಡೆದುಕೊಂಡರೆ ಒಟ್ಟು ನಾಲ್ಕು ದಿನಗಳ ರಜೆ ಸಿಗುತ್ತದೆ ಎಂದು ಪ್ರವಾಸ ತೆರಳುತ್ತಾರೆ.ಬುಧವಾರವಾದರೆ ಹೆಚ್ಚುವರಿಯಾಗಿ ಎರಡು

ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಸರಣಿ ರಜೆ ತಪ್ಪಿಸಲು ವಾರದ ಮಧ್ಯೆ ಚುನಾವಣೆ Read More »

ದಿವ್ಯಾಂಗರು ಹಾಗೂ ಹಿರಿಯ ಮತದಾರರ ಅನುಕೂಲಕ್ಕಾಗಿ ವೋಟ್‌ ಫ್ರಂ ಹೋಮ್‌

ಈ ಸಲ ಮನೆಯಿಂದಲೇ ಮತಚಲಾಯಿಸುವ ಸೌಲಭ್ಯ ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ ಹಿರಿಯ ಮತ್ತು ವಿಶೇಷ ಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ (ವೋಟ್‌ ಫ್ರಮ್‌ ಹೋಮ್) ಸೌಲಭ್ಯ ಕಲ್ಪಿಸಲಾಗಿದೆ. ನಿನ್ನೆ ಚುನಾವಣೆ ದಿನಾಂಕ ಘೋಷಣೆ ಮಾಡುವಾಗ ಮುಖ್ಯ ಚುನಾವಣಾ ಆಯಕ್ತ ರಾಜೀವ್‌ ಕುಮಾರ್‌ ಇದೇ ಮೊದಲ ಬಾರಿಗೆ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ (ವೋಟ್‌ ಫ್ರಮ್‌ ಹೋಮ್) ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.‌ ದೇಶದಲ್ಲಿ ಇದೇ ಮೊದಲ ಬಾರಿಗೆ

ದಿವ್ಯಾಂಗರು ಹಾಗೂ ಹಿರಿಯ ಮತದಾರರ ಅನುಕೂಲಕ್ಕಾಗಿ ವೋಟ್‌ ಫ್ರಂ ಹೋಮ್‌ Read More »

ಧರ್ಮಸ್ಥಳ : ನೇತ್ರಾವತಿ ನದಿಯಲ್ಲಿ ಸ್ನಾನದ ವೇಳೆ ಶ್ಯಾಂಪು, ಸೋಪು ಬಳಕೆ ನಿಷೇಧ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ಸಂದರ್ಭ ಶ್ಯಾಂಪು, ಸೋಪು ಬಳಕೆ ಮಾಡದಂತೆ ಧರ್ಮಸ್ಥಳ ಗ್ರಾ. ಪಂ. ಆದೇಶ ಹೊರಡಿಸಿದೆ.ಪ್ರಸಿದ್ಧ ದೇವಸ್ಥಾನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ಕಳೆಯುತ್ತದೆ ಎಂಬ ನಂಬಿಕೆಯಿದೆ. ಆದರೆ ಸ್ನಾನದ ಸಂದರ್ಭ ಶ್ಯಾಂಪು ಸೋಪು ಬಳಕೆ ಮಾಡುವುದರಿಂದ ನದಿಯಲ್ಲಿರುವ ಜಲಚರಗಳ ಮೇಲೆ ದುಷ್ಪಾರಿಣಾಮ ಬೀರುತ್ತದೆ ಮತ್ತು ಸ್ನಾನಕ್ಕೆ ಯೋಗ್ಯವಾಗದ ನೀರಾಗಿ ಪರಿವರ್ತನೆಯಾಗುತ್ತದೆ.

ಧರ್ಮಸ್ಥಳ : ನೇತ್ರಾವತಿ ನದಿಯಲ್ಲಿ ಸ್ನಾನದ ವೇಳೆ ಶ್ಯಾಂಪು, ಸೋಪು ಬಳಕೆ ನಿಷೇಧ Read More »

ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ | ಕೇಂದ್ರ ಚುನಾವಣಾ ಆಯುಕ್ತ ಘೋಷಣೆ

ಪುತ್ತೂರು: ರಾಜ್ಯ ಚುನಾವಣೆಗೆ ಮುಹೂರ್ತ ದಿನ ನಿಗದಿಯಾಗಿದ್ದು, ಮೇ 10ರಂದು ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಪೂರ್ವಾಂಚಲದ 3 ರಾಜ್ಯಗಳ ಚುನಾವಣೆ ಬಳಿಕ ಇದೀಗ ದಕ್ಷಿಣ ಭಾರತದ ಚುನಾವಣೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿರುವ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ 13ರಂದು ಗೆಜೆಟ್ ನೋಟಿಫಿಕೇಷನ್

ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ | ಕೇಂದ್ರ ಚುನಾವಣಾ ಆಯುಕ್ತ ಘೋಷಣೆ Read More »

ಸಿಎಂ ಬೊಮ್ಮಾಯಿ ಸರ್ಕಾರಿ ಕಾರ್ಯಕ್ರಮಗಳು ರದ್ದು | ಇಂದೇ ನೀತಿ ಸಂಹಿತೆ ಜಾರಿ ಸಾಧ್ಯತೆ!

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಬುಧವಾರ ಮಧ್ಯಾಹ್ನ 11.30ಕ್ಕೆ ದೆಹಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರ ಸರ್ಕಾರಿ ಕಾರ್ಯಕ್ರಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವುದು ಬಹುತೇಕ ಖಚಿತ.ಇಂದು ಸಿಎಂ ಬೊಮ್ಮಾಯಿ ಅವರು ಕೊಪ್ಪಳ ಹಾಗೂ ತವರು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಯೋಜನೆಗೆ

ಸಿಎಂ ಬೊಮ್ಮಾಯಿ ಸರ್ಕಾರಿ ಕಾರ್ಯಕ್ರಮಗಳು ರದ್ದು | ಇಂದೇ ನೀತಿ ಸಂಹಿತೆ ಜಾರಿ ಸಾಧ್ಯತೆ! Read More »

error: Content is protected !!
Scroll to Top