ರಾಜ್ಯ

ಅಸಮಾಧಾನಿತ ಶಾಸಕರ ಬಾಯಿಗೆ ಬೀಗ ಜಡಿದ ಸಿದ್ದರಾಮಯ್ಯ

ಬಹಿರಂಗ ಹೇಳಿಕೆ ನೀಡಿ ಮುಜುಗರವುಂಟು ಮಾಡದಂತೆ ತಾಕೀತು ಬೆಂಗಳೂರು: ವಸತಿ ಇಲಾಖೆಯ ಭ್ರಷ್ಟಾಚಾರ ಮತ್ತು ಅನುದಾನ ಸಿಗದ ಕುರಿತು ಧ್ವನಿಯೆತ್ತಿದ್ದ ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೂಡಲೇ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದ ಅಸಮಾಧಾನಿತ ಶಾಸಕ ರಾಜು ಕಾಗೆ ಹಾಗೂ ಭ್ರಷ್ಟಾಚಾರ ಬಾಂಬ್‌ ಸಿಡಿಸಿದ ಶಾಸಕ ಬಿ.ಆರ್‌ ಪಾಟೀಲ್‌ ಅವರನ್ನ ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಆರ್ ಪಾಟೀಲ್‌ಗೆ […]

ಅಸಮಾಧಾನಿತ ಶಾಸಕರ ಬಾಯಿಗೆ ಬೀಗ ಜಡಿದ ಸಿದ್ದರಾಮಯ್ಯ Read More »

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ

ಚಾರ್ಮಾಡಿ, ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ಮಂಗಳೂರು: ಮಳೆ ಅಬ್ಬರಕ್ಕೆ ಸಕಲೇಶಪುರ ಬಳಿ ಶಿರಾಡಿ ಘಾಟಿಯಲ್ಲಿ ಭೂಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಸಂಪರ್ಕ ಕಡಿತವಾಗಿದೆ.ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ Read More »

ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ: ಕಾರಣ ಇಲ್ಲಿದೆ

ಮೈಸೂರು: ಕೆಆರ್‌ ಎಸ್ ಡ್ಯಾಮ್‌ ನ ಕೆಳಗಿರುವ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಹದ ಭೀತಿಯಿಂದ ಈ ಕ್ರಮಕ್ಕೆ ಶ್ರೀರಂಗಪಟ್ಟಣ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಸ್ನಾನಘಟ್ಟ, ಸಂಗಮ, ನಿಮಿಷಾಂಭ ದೇಗುಲ, ಘೋಸಾಯ್ ಘಾಟ್‌ಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಹಾಗೆಯೇ ಕಾವೇರಿ ತಟದಲ್ಲಿ ನಡೆಸುವ ಪಿಂಡ ಪ್ರಧಾನ ಕಾರ್ಯಕ್ಕೂ ನಿರ್ಬಂಧ ಅನ್ವಯವಾಗುತ್ತದೆ. ಕಾವೇರಿ ನದಿಯ ಅಯಕಟ್ಟಿನ ಜಾಗಗಳಲ್ಲಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ

ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ: ಕಾರಣ ಇಲ್ಲಿದೆ Read More »

ಶೃಂಗೇರಿಯ ನೆಮ್ಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಶೃಂಗೇರಿ ಸಮೀಪದ ನೆಮ್ಮಾರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದು ಆತಂಕ ಸೃಷ್ಟಿಯಾಗಿದೆ. ಶೃಂಗೇರಿ – ಕಾರ್ಕಳ ನಡುವಿನ ಸಂಚಾರ ರಸ್ತೆಯನ್ನು ಗುಡ್ಡ ಕುಸಿತದ ಆತಂಕದಿಂದ ಜಿಲ್ಲಾಡಳಿತ ಈಗಾಗಲೇ ಬಂದ್ ಮಾಡಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಅಧಿಕಾರಿಗಳು, ಪೊಲೀಸರು, ಜೆ ಸಿ ಬಿ ವ್ಯವಸ್ಥೆ‌ ಬೀಡು ಬಿಟ್ಟಿದ್ದು, ಅನಾಹುತಗಳಾದಲ್ಲಿ ಶೀಘ್ರ ಕಾರ್ಯಾಚರಣೆಗೆ ಸಜ್ಜಾಗಿವೆ. ಹಾಗೆಯೇ ಗುಡ್ಡ ಕುಸಿತದ ಎಚ್ಚರಿಕೆಯಾಗಿ ರೋಡ್ ಜಾಮ್ ಮಾಡಿ ಮಣ್ಣು ತೆರವು ಕಾರ್ಯ

ಶೃಂಗೇರಿಯ ನೆಮ್ಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ Read More »

ಫತೇಹಬಾದ್, ಬಾದಶಾಹಿಭಾಗ್ ನಗರಗಳ ಹೆಸರು ಬದಲಾವಣೆಗೆ ಮುಂದಾದ ಯುಪಿ ‌ಸರ್ಕಾರ

ಲಕ್ನೋ: ಉತ್ತರ ಪ್ರದೇಶದ ಆಗ್ರಾ ದಲ್ಲಿನ ಫತೇಹಬಾದ್ ಮತ್ತು ಬಾದಶಾಹಿ ಭಾಗ್‌ ನಗರಗಳ ಹೆಸರನ್ನು ಕ್ರಮವಾಗಿ ಸಿಂಧೂರಪುರಂ ಮತ್ತು ಬ್ರಹ್ಮಪುರಂ ಎಂದು ಮರುನಾಮಕರಣ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಸೋಮವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವನೆ ಬಂದಿದ್ದು, ಇದನ್ನು ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ಇದರ ಅನುಮೋದನೆಗಾಗಿ ‌ರಾಜ್ಯ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆಗಳು ನಡೆದಿವೆ. ಈಗಿರುವ ಹೆಸರುಗಳು ಗುಲಾಮಗಿರಿಯನ್ನು ಸೂಚಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫತೇಹಬಾದ್, ಬಾದಶಾಹಿಭಾಗ್ ನಗರಗಳ ಹೆಸರು ಬದಲಾವಣೆಗೆ ಮುಂದಾದ ಯುಪಿ ‌ಸರ್ಕಾರ Read More »

13ನೇ ಅಂತಸ್ತಿನಲ್ಲಿ ರೀಲ್ಸ್ | ಕೆಳಗೆ ಬಿದ್ದು ಯುವತಿ ಮೃತ್ಯು

ಬೆಂಗಳೂರು: ಯುವತಿಯೊಬ್ಬಳು ನಿರ್ಮಾಣ ಹಂತದ ಕಟ್ಟಡದ 13ನೇ ಅಂತಸ್ತಿನಲ್ಲಿ ರೀಲ್ಸ್ ಮಾಡುವ ಸಂದರ್ಭ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಮೃತಪಟ್ಟ ಯುವತಿ   ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು.

13ನೇ ಅಂತಸ್ತಿನಲ್ಲಿ ರೀಲ್ಸ್ | ಕೆಳಗೆ ಬಿದ್ದು ಯುವತಿ ಮೃತ್ಯು Read More »

ಮೂವರು ಡಾಬಾ ಮಾಲೀಕರನ್ನು ಕೊಚ್ಚಿ ಕೊಂದ ಗ್ಯಾಂಗ್‌

ಬೆಂಗಳೂರು: ಡಾಬಾ ಮಾಲಕರನ್ನು ಕೊಚ್ಚಿ ಕೊಲೆ ಮಾಡಿರುವ ಭೀಕರ ಕೃತ್ಯ ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದೆ. ಕಲಬುರಗಿಯ ಹೊರವಲಯದ ಪಟ್ನಾ ಗ್ರಾಮದಲ್ಲಿರುವ ಡಾಬಾದಲ್ಲಿ ಮಂಗಳವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಹತ್ಯೆಗೀಡಾದವರನ್ನು ಸಿದ್ದಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಮೂರು ಜನ ಸಂಬಂಧಿಕರಾಗಿದ್ದು, ಡಾಬಾ ನಡೆಸುತ್ತಿದ್ದರು. ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳು ಡಾಬಾಕ್ಕೆ ನುಗ್ಗಿ ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ

ಮೂವರು ಡಾಬಾ ಮಾಲೀಕರನ್ನು ಕೊಚ್ಚಿ ಕೊಂದ ಗ್ಯಾಂಗ್‌ Read More »

ಹಲ್ಲೆ ಆರೋಪ : ಮಾಜಿ ಸಚಿವ ಅನಂತ ಕುಮಾರ್‌ ಹೆಗಡೆ ವಿರುದ್ಧ ಎಫ್‌ಐಆರ್‌

ಕಾರು ಓವರ್‌ಟೇಕ್‌ ಮಾಡಿದ ವಿಚಾರದಲ್ಲಿ ಗಲಾಟೆ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್​ಮ್ಯಾನ್ ಮೇಲೆ ಎಫ್​ಐಆರ್ ದಾಖಲಾಗಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್‌ಮ್ಯಾನ್‌ ಶ್ರೀಧರ್, ಚಾಲಕ ಮಹೇಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು ಆ

ಹಲ್ಲೆ ಆರೋಪ : ಮಾಜಿ ಸಚಿವ ಅನಂತ ಕುಮಾರ್‌ ಹೆಗಡೆ ವಿರುದ್ಧ ಎಫ್‌ಐಆರ್‌ Read More »

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ : ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ತಾನು ಸ್ಪರ್ಧೆ ಮಾಡುವುದಿಲ್ಲ ಎನ್ನುವ ಮೂಲಕ ಶಾಸಕ ಮತ್ತು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಸಂಬಂಧ ಎದ್ದಿದ್ದ ಎಲ್ಲಾ ರೀತಿಯ ಊಹಾಪೋಹಗಳಿಗೆ ಮುಕ್ತಾಯ ಹಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಬೆಳಗಾವಿ ಹಾಲು ಒಕ್ಕೂಟದಿಂದ ಕರ್ನಾಟಕ ಹಾಲು ಮಹಾಮಂಡಳಿಗೆ ನಿರ್ದೇಶಕನಾಗಿ ಆಯ್ಕೆಯಾಗುತ್ತೇನೆ ಎಂ ದವರು ಹೇಳಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ಕೆಎಂಎಫ್ ಅಧ್ಯಕ್ಷನಾಗಿ ಹೈನುಗಾರರಿಗೆ ಸಾಕಷ್ಟು ಪ್ರಯೋಜನ ಮಾಡಿಕೊಟ್ಟಿದ್ದೇನೆ. ನನ್ನ ಅವಧಿಯಲ್ಲಿ

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ : ಬಾಲಚಂದ್ರ ಜಾರಕಿಹೊಳಿ Read More »

ಐಶ್ವರ್ಯಾ ಗೌಡ ವಂಚನೆ ಕೇಸ್ : ಡಿ.ಕೆ. ಸುರೇಶ್ ED ವಿಚಾರಣೆಗೆ ಹಾಜರ್

ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಬಳಸಿ ಐಶ್ವರ್ಯಾ ಗೌಡ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ED ವಿಚಾರಣೆಗೆ ಡಿ. ಕೆ. ಸುರೇಶ್ ಇಂದು ಹಾಜರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಡಿ‌.ಕೆ. ಸುರೇಶ್‌ಗೆ ED ಅಧಿಕಾರಿಗಳು ಈ ಹಿಂದೆಯೇ ನೊಟೀಸ್ ಜಾರಿ ಮಾಡಿದ್ದರು. ಕಾಲಾವಕಾಶ ಕೇಳಿದ್ದ ಅವರು ಇಂದು ವಿಚಾರಣೆಗೆ ಹಾಜರಾಗಿರುವುದಾಗಿದೆ. ಶಾಂತಿನಗರದ ED ಕಚೇರಿಯಲ್ಲಿ ಈ ವಿಚಾರಣೆ ನಡೆದಿದೆ. ಈ ಸಂದರ್ಭದಲ್ಲಿ ಕಚೇರಿಯ ಪರಿಸರದಲ್ಲಿ ಭದ್ರತಾ ದೃಷ್ಟಿಯಿಂದ 100 ಪೋಲೀಸರನ್ನು

ಐಶ್ವರ್ಯಾ ಗೌಡ ವಂಚನೆ ಕೇಸ್ : ಡಿ.ಕೆ. ಸುರೇಶ್ ED ವಿಚಾರಣೆಗೆ ಹಾಜರ್ Read More »

error: Content is protected !!
Scroll to Top