ರಾಜ್ಯ

ವಿವಾಹಿತನ ಜೊತೆ ಮಗಳ ಪ್ರೇಮ: ಮರ್ಯಾದೆಗಂಜಿ ‌ಸಾವಿಗೆ ಶರಣಾದ ತಾಯಿ ಮತ್ತು ಮಗಳು

ಮಂಡ್ಯ: ವಿವಾಹವಾದ ಪುರುಷನ ಜೊತೆಗೆ ಮಗಳ ಪ್ರೇಮ ಸಂಬಂಧದ ಕಾರಣಕ್ಕೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ (46) ಮತ್ತು ಅವರ ಪುತ್ರಿ ಪ್ರಿಯಾಂಕ(19) ಮೃತಪಟ್ಟವರು. ಪ್ರಿಯಾಂಕ ತನ್ನದೇ ಗ್ರಾಮದ 34 ವರ್ಷದ ಮುತ್ತು ರಾಜ್ ಎಂಬವನ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಆದರೂ ಪ್ರಿಯಾಂಕಳನ್ನು ಪ್ರೀತಿಸುವ‌ ನಾಟಕವಾಡುತ್ತಿದ್ದ. ನಿತ್ಯವೂ ಇವರ ಮನೆಗೆ […]

ವಿವಾಹಿತನ ಜೊತೆ ಮಗಳ ಪ್ರೇಮ: ಮರ್ಯಾದೆಗಂಜಿ ‌ಸಾವಿಗೆ ಶರಣಾದ ತಾಯಿ ಮತ್ತು ಮಗಳು Read More »

ಉದ್ಯಮಿ ಎವಿಆರ್‌ಗೆ ಬೆದರಿಕೆ, ಹಣಕ್ಕಾಗಿ ಬೇಡಿಕೆ: ಕೃಷಿ ತಾಪಂಡ ‌ಮನೆಯಿಂದಲೇ ಆರೋಪಿ ವೈಶಾಖ್ ಬಂಧನ

ಬೆಂಗಳೂರು: ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿಗೆ ಬೆದರಿಕೆ ಒಡ್ಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ‌ ಗೆಳೆಯ ವೈಶಾಖ್‌ನನ್ನು ಎಚ್ ಎ ಎಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕೃಷಿ ತಾಪಂಡ ಮನೆಯಲ್ಲೇ ಬಂಧಿಸಿರುವುದು ಈ ಪ್ರಕರಣದ ಕಾವು ಹೆಚ್ಚಿಸಿದೆ. ಕಳೆದ ಜನವರಿ ತಿಂಗಳಲ್ಲಿ ಎವಿಆರ್‌ಗೆ ಕೊರಿಯರ್ ಒಂದು ಬಂದಿದ್ದು, ಅದರಲ್ಲಿ ನಿನ್ನ ಮತ್ತು ನಟಿಯ ಜಗಳವನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನನ್ನ ಗ್ಯಾರೇಜ್‌ಗೆ ಆರರಿಂದ ಏಳು ಕೋಟಿ ರೂ. ಗಳನ್ನು ನೀಡಬೇಕು.

ಉದ್ಯಮಿ ಎವಿಆರ್‌ಗೆ ಬೆದರಿಕೆ, ಹಣಕ್ಕಾಗಿ ಬೇಡಿಕೆ: ಕೃಷಿ ತಾಪಂಡ ‌ಮನೆಯಿಂದಲೇ ಆರೋಪಿ ವೈಶಾಖ್ ಬಂಧನ Read More »

ಸಾಲದ ಮೇಲಿನ ಬಡ್ಡಿ ದರ ಮನ್ನಾ : ಅಲ್ಪಸಂಖ್ಯಾತರಿಗೆ ಇನ್ನೊಂದು ಬಂಪರ್‌ ಕೊಡುಗೆ

ವಿಪಕ್ಷಗಳ ಭಾರಿ ವಿರೋಧದ ಹೊರತಾಗಿಯೂ ಅನುಷ್ಠಾನಕ್ಕೆ ಮುಂದಾದ ಸರ್ಕಾರ ಬೆಂಗಳೂರು : 2013–14ರಿಂದ 2018–19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾದ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವ ಒನ್‌ಟೈಮ್ ಸೆಟ್ಲ್‌ಮೆಂಟ್ ಯೋಜನೆಗೆ ಇತ್ತೀಚೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ವಿಪಕ್ಷಗಳು ಕಿಡಿ ಕಾರಿದ್ದು, ಅಲ್ಪಸಂಖ್ಯಾತರಿಗೆ ಮಾತ್ರ ಸಾಲದ ಬಡ್ಡಿ ಮನ್ನಾ ಮಾಡಿ ರೈತರು ಮತ್ತು ಹಿಂದುಳಿದ ವರ್ಗಗಳು ಸೇರಿ ಇತರ ಸಮುದಾಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿವೆ.

ಸಾಲದ ಮೇಲಿನ ಬಡ್ಡಿ ದರ ಮನ್ನಾ : ಅಲ್ಪಸಂಖ್ಯಾತರಿಗೆ ಇನ್ನೊಂದು ಬಂಪರ್‌ ಕೊಡುಗೆ Read More »

ಖಾಲಿ ಟ್ರಂಕ್‌ ತೋರಿಸಿ ಪ್ರತಿಭಟಿಸಿದ ಸಂಸದ ತೇಜಸ್ವಿ ಸೂರ್ಯ

ಮೆಟ್ರೋ ರೈಲು ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಬೆಂಗಳೂರು: ಮೆಟ್ರೋ ದರ ಏರಿಸಿದ್ದನ್ನು ಖಂಡಿಸಿ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಜಯನಗರದ ಶಾಸಕ ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ನೀಡಿದ್ದರೂ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖಾಲಿ ಟ್ರಂಕ್‌ ಹಿಡಿದುಕೊಂಡು ಬಂದ ತೇಜಸ್ವಿ ಸೂರ್ಯ ಟ್ರಂಕ್‌ ತೆರೆದು ರಾಜ್ಯ ಸರ್ಕಾರ ಖಾಲಿಯಾಗಿದೆ ಎಂದು ಹೇಳಿದರು.

ಖಾಲಿ ಟ್ರಂಕ್‌ ತೋರಿಸಿ ಪ್ರತಿಭಟಿಸಿದ ಸಂಸದ ತೇಜಸ್ವಿ ಸೂರ್ಯ Read More »

ಹೋಟೆಲ್‌ನಲ್ಲಿ ತಾಸುಗಟ್ಟಲೆ ಕುಳಿತರೆ ಬರುತ್ತದೆ ಹೆಚ್ಚುವರಿ ಬಿಲ್‌!

ಸಣ್ಣ ಪುಟ್ಟ ಮೀಟಿಂಗ್‌ಗಳನ್ನು ಹೋಟೆಲ್‌ನಲ್ಲೇ ಮುಗಿಸುವವರಿಂದ ಟೇಬಲ್‌ ಚಾರ್ಜ್‌ ವಸೂಲು ಮಾಡಲು ಚಿಂತನೆ ಬೆಂಗಳೂರು : ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಹೋಟೆಲ್‌ಗಳು ಹೊಟ್ಟೆ ಹಸಿವು ತಣಿಸುವ ಕಾಫಿ- ತಿಂಡಿ ಸವಿಯುವ ಜಾಗಗಳಾಗಿ ಉಳಿಯದೆ ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಕೆಲವರು ಅರ್ಧರ್ಧ ಕಾಫಿ ಹಿಡಿದುಕೊಂಡು ಮಾತಾಡುತ್ತಾ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ʼಟೇಬಲ್‌ ಚಾರ್ಜ್ʼ ವಸೂಲು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ವೊಂದರ ಗೋಡೆಯ ಮೇಲೆ ಇಲ್ಲಿ

ಹೋಟೆಲ್‌ನಲ್ಲಿ ತಾಸುಗಟ್ಟಲೆ ಕುಳಿತರೆ ಬರುತ್ತದೆ ಹೆಚ್ಚುವರಿ ಬಿಲ್‌! Read More »

ಗೃಹಲಕ್ಷ್ಮಿ ಸಿಗಬೇಕಾದರೆ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕು

ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗುವುದನ್ನು ತಡೆಯಲು ಹೊಸ ನಿಯಮ ಬೆಂಗಳೂರು : ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗವಾಗುವುದನ್ನು ತಡೆಯುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗಳಿಗೂ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ

ಗೃಹಲಕ್ಷ್ಮಿ ಸಿಗಬೇಕಾದರೆ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕು Read More »

ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು

ಯದ್ವಾತದ್ವಾ ಸ್ಕೂಟಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಬೆಂಗಳೂರು: ಇಬ್ಬರು ಯುವತಿಯರು ಕಂಠಪೂರ್ತಿ ಮದ್ಯ ಸೇವಿಸಿ ಹಾದಿಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ಶನಿವಾರ ತಡರಾತ್ರಿ ನಡೆದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಯರು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಕ್ಯಾಬ್‌ಗೆ ಡಿಕ್ಕಿ ಹೊಡೆದು ಚಾಲಕ ಜೊತೆ ಡಿಕ್ಕಿ ಹೊಡೆದು ಜಗಳ ಮಾಡಿದ್ದಾರೆ. ಕ್ಯಾಬ್‌ ಚಾಲಕ ನಿಮ್ಮದೇ ತಪ್ಪು ಎಂದಿದ್ದಕ್ಕೆ ಮದ್ಯದ ಬೆರಳು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು

ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು Read More »

ಶಾಸಕರ ಪತ್ನಿಯ ಅವಹೇಳನ: ಆರೋಪಿಯ ಬಂಧನ

ಮಂಗಳೂರು: ಶಾಸಕ ವೇದವ್ಯಾಸ ಕಾಮತ್ ಮತ್ತು ಅವರ ಹೆಂಡತಿಯ ಬಗ್ಗೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಆಡಿದ್ದಾರೆ ಎನ್ನಲಾದ ಮಾತುಗಳನ್ನು ಉಲ್ಲೇಖ ಮಾಡಿ ಫೇಸ್‌ಬುಕ್‌ನಲ್ಲಿ ಶಾಸಕರ ಪತ್ನಿಯನ್ನು ವ್ಯಕ್ತಿಯೊಬ್ಬ ಅವಮಾನಿಸಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ಬಂಟ್ವಾಳದ ಅಮ್ಟಾಡಿಯ ಶರತ್ ರೈ ಎಂಬಾತನನ್ನು ಬಂಧಿಸಲಾಗಿದೆ. ಈತ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೇದವ್ಯಾಸ್ ಕಾಮತ್ ಅವರ ಪತ್ನಿಯನ್ನು ಅವಮಾನಿಸುವಂತೆ ಪೋಸ್ಟ್ ಹಾಕಿದ್ದ. ಈ ಸಂಬಂಧ ಮಹಿಳೆಯೊಬ್ಬರು ದೂರು ದಾಖಲು

ಶಾಸಕರ ಪತ್ನಿಯ ಅವಹೇಳನ: ಆರೋಪಿಯ ಬಂಧನ Read More »

ಮೆಟ್ರೋ ದರ ಏರಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಅಸಮಾಧಾನ ಎದ್ದಿದೆ. ಈ ಬಗ್ಗೆ ಮಾತನಾಡಿರುವ ಡಿ.ಸಿ.ಎಂ. ಡಿ. ಕೆ. ಶಿವಕುಮಾರ್ ಅವರು ಮೆಟ್ರೋ ದರ ಪರಿಷ್ಕರಣೆಗೆ ಸಂಬಂಧಿಸಿದ ಹಾಗೆ ಮಾತನಾಡುತ್ತೇವೆ. ಯಾವ ಕಾರಣಕ್ಕೂ ಜನರಿಗೆ ಸಮಸ್ಯೆಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ‌ ಮೂಲಕ ಮೆಟ್ರೋ ದರ ಏರಿಕೆಯಾಗಿದೆ ಎನ್ನುವುದನ್ನು ನೋಡಿದ್ದೇನೆ. ಈ ಬಗ್ಗೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಕೇಂದ್ರ ಸರ್ಕಾರದ ಚೇರ್ಮನ್ ಮೆಟ್ರೋ ಚೇರ್ಮನ್ ಆಗಿದ್ದಾರೆ. ಇಂದು ಅಥವಾ ನಾಳೆ ಅವರೊಂದಿಗೆ ಮಾತುಕತೆ

ಮೆಟ್ರೋ ದರ ಏರಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು? Read More »

ಜೈಲಿನಲ್ಲಿದ್ದ ಉಗ್ರ ಅನಾರೋಗ್ಯದಿಂದ ಸಾವು

ಆರು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಉಗ್ರ ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಧಿಕ್ ಪಾಷಾ (47) ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಸಾದಿಕ್ ಪಾಷಾ ಕಳೆದ ಆರು ತಿಂಗಳಿಂದ ಲೋ ಬಿಪಿ ಹಾಗೂ ಹೈ ಶುಗರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ

ಜೈಲಿನಲ್ಲಿದ್ದ ಉಗ್ರ ಅನಾರೋಗ್ಯದಿಂದ ಸಾವು Read More »

error: Content is protected !!
Scroll to Top