ರಾಜ್ಯ

ಮನೆ ಮೇಲೆ ಬಿದ್ದ ಬಸ್‌ : 30 ಪ್ರಯಾಣಿಕರಿಗೆ ಗಾಯ

ಬಾಳೆಹೊನ್ನೂರು: ಬೆಂಗಳೂರಿನಿಂದ ಶೃಂಗೇರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಮೂರುಗದ್ದೆ ಮತ್ತು ಜಲದುರ್ಗದ ನಡುವೆ ಜಯಪುರ ಬಳಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿ ಬಿದ್ದು 30 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೆಂಗಳೂರು ಡಿಪೋಗೆ ಸೇರಿದ ಬಸ್‌ನಲ್ಲಿ 45 ಪ್ರಯಾಣಿಕರಿದ್ದರು. ಪುಟ್ಟಪ್ಪ ಪೂಜಾರಿ ಎಂಬವರ ಮನೆಯ ಮೇಲೆ ಬಸ್ ಉರುಳಿ ಬಿದ್ದಿದೆ. ಗಾಯಗೊಂಡ 10 ಮಂದಿಯನ್ನು ಜಯಪುರದ ಸರ್ಕಾರಿ ಆಸ್ಪತ್ರೆಗೆ ಜನರನ್ನು ದಾಖಲಿಸಲಾಗಿದ್ದು, ಚಾಲಕ ವೆಂಕಪ್ಪ ಸೇರಿದಂತೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪ ಆಸ್ಪತ್ರೆಗೆ […]

ಮನೆ ಮೇಲೆ ಬಿದ್ದ ಬಸ್‌ : 30 ಪ್ರಯಾಣಿಕರಿಗೆ ಗಾಯ Read More »

ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪಿತೂರಿ : ಕಿಕ್‌ಬ್ಯಾಕ್‌ ಆರೋಪಕ್ಕೆ ಸಿದ್ದರಾಮಯ್ಯ ಕಿಡಿ

ಗಣಿ ಗುತ್ತಿಗೆಯಲ್ಲಿ 500 ಕೋ.ರೂ. ಕಿಕ್‌ಬ್ಯಾಕ್‌ ಪಡೆದ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಬೆಂಗಳೂರು: ಗಣಿ ಗುತ್ತಿಗೆ ನವೀಕರಣದಲ್ಲಿ 500 ಕೋ. ರೂ. ಕಿಕ್‌ಬ್ಯಾಕ್‌ ಪಡೆದಿರುವ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಇಂತಹ ಅಪಪ್ರಚಾರಗಳು ನಾನು ಅಧಿಕಾರಕ್ಕೆ ಬಂದಾಗಿನಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವು ದುಷ್ಟಶಕ್ತಿಗಳು ರಾಜಭವನವನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ.2015ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಎಂಎಂಡಿಆರ್‌-1957 ಕಾಯ್ದೆಯಲ್ಲಿ ನವೀಕರಣವು

ಹುರುಳಿಲ್ಲದ ವಿಷಯಕ್ಕೆ ವಿಷ ತುಂಬುವ ಪಿತೂರಿ : ಕಿಕ್‌ಬ್ಯಾಕ್‌ ಆರೋಪಕ್ಕೆ ಸಿದ್ದರಾಮಯ್ಯ ಕಿಡಿ Read More »

ಗ್ಯಾಸ್‌ ಕಟ್ಟರ್‌ನಿಂದ ಎಟಿಎಂ ಕತ್ತರಿಸಿ 18 ಲ.ರೂ. ಕಳ್ಳತನ

ಬೆಂಗಳೂರು: ಗ್ಯಾಸ್ ಕಟ್ಟರ್ ಬಳಸಿ ಎಟಿಎಂನ್ನು ಕತ್ತರಿಸಿ 18 ಲ.ರೂ. ಕಳ್ಳತನ ಮಾಡಿದ ಘಟನೆ ಇಂದು ನಸುಕಿನ ಹೊತ್ತು ಕಲಬುರಗಿ ನಗರದಲ್ಲಿ ಸಂಭವಿಸಿದೆ. ಕಲಬುರಗಿಯ ರಾಮನಗರದ ಬಳಿ ಇರುವ ಎಸ್‌ಬಿಐ ಎಟಿಎಂನಿಂದ ಕಳ್ಳರು ಹಣ ದೋಚಿದ್ದಾರೆ. ಮಂಗಳವಾರ ಸಂಜೆ 3 ಗಂಟೆಗೆ ಬ್ಯಾಂಕ್ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸಿದ್ದರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಎಟಿಎಂನಲ್ಲಿ ಸೆಕ್ಯೂರಿಟಿ ಇಲ್ಲದನ್ನು ಗಮನಿಸಿದ ಖದೀಮರು ಕನ್ನ ಹಾಕಿದ್ದಾರೆ. ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ಲಾಕ್ ಸ್ಪ್ರೇ ಮಾಡಿ ಗ್ಯಾಸ್ ಕಟ್ಟರ್‌ನಿಂದ

ಗ್ಯಾಸ್‌ ಕಟ್ಟರ್‌ನಿಂದ ಎಟಿಎಂ ಕತ್ತರಿಸಿ 18 ಲ.ರೂ. ಕಳ್ಳತನ Read More »

ಏ.12ರಿಂದ ಸುಬ್ರಹ್ಮಣ್ಯ-ಬೆಂಗಳೂರು ನಡುವೆ ಹೊಸ ರೈಲು : ಸೋಮಣ್ಣ

ಬೆಂಗಳೂರು: ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಬೆಂಗಳೂರು ನಡುವೆ ಏ.12ರಿಂದ ಹೊಸ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಬುಧವಾರ ಘೋಷಣೆ ಮಾಡಿದ್ದಾರೆ. ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಕರ್ನಾಟಕದಲ್ಲಿ ರೈಲ್ವೆ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿ ಮಹತ್ವದ ಮಾಹಿತಿ ಹಂಚಿಕೊಂಡರು. ಏ.12 ರಂದು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದು ಹೊಸ ರೈಲು ಬಿಡುತ್ತಿದ್ದೇವೆ. ದಿನಕ್ಕೆ ನಾಲ್ಕು ಬಾರಿ ಹೋಗಿ ಬಲಿದೆ ಎಂದು

ಏ.12ರಿಂದ ಸುಬ್ರಹ್ಮಣ್ಯ-ಬೆಂಗಳೂರು ನಡುವೆ ಹೊಸ ರೈಲು : ಸೋಮಣ್ಣ Read More »

ಹಿಂದೂ ಕಾರ್ಯಕರ್ತನ ಮೇಲೆ ಎಸ್‌ಪಿ ಹಲ್ಲೆ ಆರೋಪ : ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಕಾರವಾರ: ಹಿಂದೂ ಸಂಘಟನೆ ಕಾರ್ಯಕರ್ತನನ್ನು ವಿಚಾರಣೆ ನೆಪದಲ್ಲಿ ಪೊಲೀಸ್‌ ಠಾಣೆಗೆ ಕರೆಸಿ ಎಸ್‌ಪಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಭಟ್ಕಳದಲ್ಲಿ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ನಿನ್ನೆ ರಾತ್ರಿ ಹೆದ್ದಾರಿ ತಡೆದು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಭಟ್ಕಳದ ಹನುಮ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಹಲ್ಲೆಗೊಳಗಾಗಿದ್ದು, ಭಟ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಶಿರಸಿಯಲ್ಲಿ ರೌಡಿಶೀಟರ್ ಪೆರೇಡ್ ಮಾಡಿದ್ದ ಎಸ್ಪಿ ಎಂ.ನಾರಾಯಣ್‌ 6 ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ

ಹಿಂದೂ ಕಾರ್ಯಕರ್ತನ ಮೇಲೆ ಎಸ್‌ಪಿ ಹಲ್ಲೆ ಆರೋಪ : ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ Read More »

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ 93.90 ಶೇ ಪಡೆದು ಪ್ರಥಮ ಸ್ಥಾನ ಗಳಿಸಿಕೊಂಡರೆ, 93.57 ಶೇ ಫಲಿತಾಂಶದೊಂದಿಗೆ ದ.ಕ 2ನೇ ಸ್ಥಾನ ಪಡೆದುಕೊಂಡಿದೆ. 48.45% ಫಲಿತಾಂಶ ಪಡೆದು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಗಳಿಸಿದೆ. ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಫಲಿತಾಂಶವು ಮಧ್ಯಾಹ್ನ 1.30 ರ ನಂತರ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ Read More »

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ

ಕಾಂಗ್ರೆಸ್‌ ಪಾಲಿಗೆ ವರವಾದ ನಿರ್ಧಾರ ಮಂಗಳೂರು : ಬೆಲೆ ಏರಿಕೆಯನ್ನು ಪ್ರಧಾನ ವಿಷಯವಾಗಿಟ್ಟುಕೊಂಡು ಜನಾಕ್ರೋಶ ಯಾತ್ರೆ ಪ್ರಾರಂಭಿಸಿರುವ ರಾಜ್ಯ ಬಿಜೆಪಿಗೆ ಕೇಂದ್ರ ಸರಕಾರ ನಿನ್ನೆ ಕೈಗೊಂಡ ನಿರ್ಧಾರವೊಂದು ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ನಿನ್ನೆ ದಿಢೀರ್‌ ಎಂದು ಕೇಂದ್ರ ಸರಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಇದರ ಜೊತೆಗೆ ಪೆಟ್ರೋಲು ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ತಲಾ 2 ರೂ.ಯಂತೆ ಹೆಚ್ಚಿಸಿದೆ. ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರದ ವತಿಯಿಂದ ಆಗಿರುವ

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ Read More »

ಬಾಟಲಿ ನೀರು ಕೂಡ ಅಸುರಕ್ಷಿತ : ಆಹಾರ ಇಲಾಖೆ ವರದಿ

ಅನೇಕ ಕಂಪನಿಗಳ ಬಾಟಲಿ ನೀರಿನಲ್ಲಿ ಮಿನರಲ್‌ ಅಂಶ ಇರುವುದಿಲ್ಲ ಬೆಂಗಳೂರು: ಐಸ್‌ಕ್ರೀಮ್‌, ಕೇಕ್‌, ಗೋಬಿಮಂಚೂರಿ… ಹೀಗೆ ನಿತ್ಯ ಸೇವಿಸುವ ಹಲವು ಆಹಾರವಸ್ತುಗಳಲ್ಲಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಕಾರಣವಾಗುವ ರಾಸಾಯನಿಕ ಅಂಶ ಇರುವುದನ್ನು ಪತ್ತೆ ಹಚ್ಚಿ ಜನರಿಗೆ ಎಚ್ಚರಿಕೆ ನೀಡಿರುವ ಆಹಾರ ಇಲಾಖೆ ಈಗ ಬಾಟಲಿಗಳಲ್ಲಿ ಸಿಗುವ ಮಿನರಲ್‌ ವಾಟರ್‌ ಕೂಡ ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ. ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರಿನ ಪೈಕಿ ಶೇ.50ರಷ್ಟು ಬಾಟಲಿಗಳು ಕಳಪೆಯಾಗಿವೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ.

ಬಾಟಲಿ ನೀರು ಕೂಡ ಅಸುರಕ್ಷಿತ : ಆಹಾರ ಇಲಾಖೆ ವರದಿ Read More »

ಮಧ್ಯಾಹ್ನ 1.30ರ ಬಳಿಕ ವೆಬ್‌ಸೈಟಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ

ಫಲಿತಾಂಶ ಸಿಗುವ ವೆಬ್‌ಸೈಟ್‌ www.karresults.nic.in ಮತ್ತು kseab.karnataka.gov.in ಬೆಂಗಳೂರು: 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಇಂದು ಮಧ್ಯಾಹ್ನ 12:30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಸುದ್ಧಿಗೋಷ್ಠಿಯ ಬಳಿಕ ಮಧ್ಯಾಹ್ನ 1.30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಅಪ್‌ಲೋಡ್‌ ಅಗಲಿದೆ.ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1ರಿಂದ ಆರಂಭಗೊಂಡು ಮಾರ್ಚ್ 20ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ವ

ಮಧ್ಯಾಹ್ನ 1.30ರ ಬಳಿಕ ವೆಬ್‌ಸೈಟಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ Read More »

ಬೆಟ್ಟಿಂಗ್‌ ಆ್ಯಪ್ ಜಾಹೀರಾತು : 100ಕ್ಕೂ ಅಧಿಕ ಯೂಟ್ಯೂಬರ್‌ಗಳ ವಿಚಾರಣೆ

ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಐಪಿಎಲ್‌ ಬೆಟ್ಟಿಂಗ್‌ ಪ್ರಸಾರ ಮಾಡಿದ ಆರೋಪ ಬೆಂಗಳೂರು: ಬೆಟ್ಟಿಂಗ್ ಆ್ಯಪ್ ಜಾಹೀರಾತು ಪ್ರಟಿಸಿದ ಆರೋಪದ ಮೇಲೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್‌ಗೌಡ ಸೇರಿದಂತೆ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ನೀಡಿ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.ತಮ್ಮ ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದ ರೀಲ್ಸ್ ಸ್ಟಾರ್‌ಗಳಿಗೆ ಶಾಕ್ ಎದುರಾಗಿದೆ. ತಮ್ಮ ಪೇಜ್‌ಗಳಲ್ಲಿ ಬಿತ್ತರಿಸಿದ್ದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿದ್ದವು. ಹಾಗಾಗಿ ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ

ಬೆಟ್ಟಿಂಗ್‌ ಆ್ಯಪ್ ಜಾಹೀರಾತು : 100ಕ್ಕೂ ಅಧಿಕ ಯೂಟ್ಯೂಬರ್‌ಗಳ ವಿಚಾರಣೆ Read More »

error: Content is protected !!
Scroll to Top