ರಾಜ್ಯ

ಫೂಟ್ಪಾತ್ ಮೇಲೆ ಪ್ರಯಾಣಿಸಲು ಯತ್ನಿಸಿದ ದ್ವಿಚಕ್ರ ಸವಾರನನ್ನು ‌ಮತ್ತೆ ರಸ್ತೆಗಿಳಿಸಿದ ಜವಾಬ್ದಾರಿಯುತ ಮಹಿಳೆ

ತಿರುವನಂತಪುರ: ಕೇರಳದ ಕೋಝಿಕ್ಕೋಡ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿ ಫೂಟ್ಪಾತ್‌ ಮೇಲೆ ದ್ವಿಚಕ್ರ ವಾಹನ ಚಲಾಯಿಸಿದ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬರು ಪಾಠ ಕಲಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ. ವ್ಯಕ್ತಿಯೊಬ್ಬ ರೆಡ್ ಸಿಗ್ನಲ್ ತಪ್ಪಿಸಿಕೊಳ್ಳುವ ಆತುರದಲ್ಲಿ ಜನರು ನಡೆದಾಡಲು ಇರುವ ಫೂಟ್ಪಾತ್ ಮೇಲೆ ದ್ವಿಚಕ್ರ ವಾಹನವನ್ನು ಚಲಾಯಿಸಲು ಯತ್ನಿಸಿದ್ದಾನೆ. ಆ ವೇಳೆ ಫೂಟ್ಪಾತ್ ‌ಮೇಲೆ ನಡೆದುಕೊಂಡು ಬರುತ್ತಿದ್ದ ಮಹಿಳೆ ಆತನ ವಾಹನದ ನೋಂದಣಿ ಸಂಖ್ಯೆಯನ್ನು ತಮ್ಮ ಫೋನಿನಲ್ಲಿ ‌ಸೆರೆ ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಆತನನ್ನು […]

ಫೂಟ್ಪಾತ್ ಮೇಲೆ ಪ್ರಯಾಣಿಸಲು ಯತ್ನಿಸಿದ ದ್ವಿಚಕ್ರ ಸವಾರನನ್ನು ‌ಮತ್ತೆ ರಸ್ತೆಗಿಳಿಸಿದ ಜವಾಬ್ದಾರಿಯುತ ಮಹಿಳೆ Read More »

ಪಿಯುಸಿ ವಿದ್ಯಾರ್ಥಿಗಳ ಜಾಲಿರೈಡ್‌ ಭೀಕರ ಅಪಘಾತಕ್ಕೆ ಕಾರಣ

ಅತಿವೇಗ, ನಿರ್ಲಕ್ಷ್ಯದ ಚಾಲನೆಗೆ ಬೆಳ್ಳಂಬೆಳಗ್ಗೆ 7 ಜೀವಗಳು ಬಲಿ ಬೆಂಗಳೂರು: ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತ ಬೆಂಗಳೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿಗಳ ಜಾಲಿ ರೈಡ್, ಅತಿ ವೇಗದ ಚಾಲನೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಕ್ಸ್‌ಯುವಿ 700 ಕಾರಿನಲ್ಲಿ ಬಂದಿದ್ದ ಆರು ವಿದ್ಯಾರ್ಥಿಗಳು ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದವರು ಎಂಬುದು ಗೊತ್ತಾಗಿದೆ. ನೂತನ ಹೆದ್ದಾರಿಯಲ್ಲಿ ಲಾಂಗ್ ಡ್ರೈವ್‌ಗೆ ಬಂದಿದ್ದ ವೇಳೆ ಅತಿವೇಗವಾಗಿ

ಪಿಯುಸಿ ವಿದ್ಯಾರ್ಥಿಗಳ ಜಾಲಿರೈಡ್‌ ಭೀಕರ ಅಪಘಾತಕ್ಕೆ ಕಾರಣ Read More »

ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್‌ ಬದಲು ಸ್ಮಾರ್ಟ್‌ ಕಾರ್ಡ್‌

4 ಸಾರಿಗೆ ನಿಗಮಗಳಿಂದ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ತೀರ್ಮಾನ ಬೆಂಗಳೂರು: ಸಾರಿಗೆ ಬಸ್​ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯಲ್ಲಿ ತುಸು ಮಾರ್ಪಾಡು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಮುಂದೆ ಆಧಾರ್ ಬದಲಿಗೆ ಶಕ್ತಿ ಯೋಜನೆಯಡಿ ಸ್ಮಾರ್ಟ್‌ ಕಾರ್ಡ್‌ ವಿತರಣೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಗೆ, ಹಲವು ಮತ್ವದ ನಿರ್ಣಯಗಳನ್ನು ಕ್ಯಾಬಿನೆಟ್​​ನಲ್ಲಿ ಕೈಗೊಳ್ಳಲಾಗಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ 4 ಸಾರಿಗೆ ನಿಗಮಗಳು

ಮಹಿಳೆಯರ ಉಚಿತ ಪ್ರಯಾಣಕ್ಕೆ ಆಧಾರ್‌ ಬದಲು ಸ್ಮಾರ್ಟ್‌ ಕಾರ್ಡ್‌ Read More »

ಮಾ.6ರಂದು ರಾಜ್ಯ ಬಜೆಟ್‌ ಮಂಡನೆ

ದಾಖಲೆ 17ನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಬೆಂಗಳೂರು : 2026-27ನೇ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ಬಜೆಟ್‌ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಾ.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಮಾ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾ.6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ದಿನವಾದ ಮಾರ್ಚ್ 6ರಂದು ಹಣಕಾಸು ಸಚಿವವರೂ

ಮಾ.6ರಂದು ರಾಜ್ಯ ಬಜೆಟ್‌ ಮಂಡನೆ Read More »

ಕವಿ ಕುವೆಂಪು ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು: ಕುಟುಂಬವರ್ಗ

ಮೈಸೂರು: ನಗರದ ವಿವಿಪುರಂ ನಲ್ಲಿರುವ ರಾಷ್ಟ್ರಪತಿ ಕುವೆಂಪು ಅವರ ಮನೆ ಉದಯರವಿಯನ್ನು ಮಾರುವ ಅಥವಾ ಸರ್ಕಾರದ ವಶಕ್ಕೆ ನೀಡುವ ಯಾವುದೇ ಉದ್ದೇಶ ನಮ್ಮ ಮುಂದೆ ಇಲ್ಲ. ಅದನ್ನು ನಾವೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ಕುವೆಂಪು ಅವರ ಕುಟುಂಬ ವರ್ಗ ಮಾಹಿತಿ ನೀಡಿದೆ. ಈ ಬಗ್ಗೆ ಕುವೆಂಪು ಅವರ ಅಳಿಯ, ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಮಾತನಾಡಿದ್ದು, ಉದಯರವಿ ಎಂಬುದು ಕುವೆಂಪು ಅವರು 60 ವರ್ಷಗಳ ಕಾಲ ಬಾಳಿ ಬದುಕಿದ ಮತ್ತು ಅವರ

ಕವಿ ಕುವೆಂಪು ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು: ಕುಟುಂಬವರ್ಗ Read More »

ಅಭಿವೃದ್ಧಿ ಮಾಡಿದ್ದರೆ ಕಾಂಗ್ರೆಸ್ ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳ ಮೊರೆ ಹೋಗುತ್ತಿರಲಿಲ್ಲ: ಬಿ. ವೈ. ವಿಜಯೇಂದ್ರ

ಬೆಳಗಾವಿ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದರೆ ಅಧಿಕಾರ ಪಡೆಯಲು ಗ್ಯಾರಂಟಿ ಯೋಜನೆಗಳ ಭರವಸೆ ನೀಡುವ ಅಗತ್ಯತೆ ಇರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ರಾಘವೇಂದ್ರ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಆದ್ದರಿಂದಲೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಗ್ಯಾರಂಟಿ ಯೋಜನೆಗಳ ಮೊರೆ ಹೋಗಬೇಕಾಯಿತು ಎಂದು ವ್ಯಂಗ್ಯ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡದವರು ಇಂದು ಕೇಂದ್ರ ಸರ್ಕಾರದ

ಅಭಿವೃದ್ಧಿ ಮಾಡಿದ್ದರೆ ಕಾಂಗ್ರೆಸ್ ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳ ಮೊರೆ ಹೋಗುತ್ತಿರಲಿಲ್ಲ: ಬಿ. ವೈ. ವಿಜಯೇಂದ್ರ Read More »

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ

ಕ್ಷುಲ್ಲಕ ಕಾರಣಕ್ಕೆ ಅಪ್ಪ-ಅಮ್ಮನನ್ನು ಚಾಕುವಿನಿಂದ ಇರಿದು ಕೊಂದ ಟೆಕ್ಕಿ ಪುತ್ರ ಬೆಂಗಳೂರು : ಟೆಕ್ಕಿ ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60) ಮತ್ತು ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ Read More »

ಐಟಿಐ ವಿದ್ಯಾರ್ಥಿಗಳ ಜಗಳ: ಚೂರಿ ಇರಿತದಲ್ಲಿ ಅಂತ್ಯ

ವಿಟ್ಲ: ಐಟಿಐ ವಿದ್ಯಾರ್ಥಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿ, ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಇರಿತಕ್ಕೊಳಗಾದ ಬನ್ವೂರಿನ ಮಹಮ್ಮದ್ ರಿಯಾನ್ ಮತ್ತು ಮಂಜೇಶ್ವರದ ದೈಗೋಳಿ ನಿವಾಸಿ ಯಜೇಶ್ ವಿಶ್ವದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಾದ ರಿಯಾನ್ ಮತ್ತು ಹೇಮಂತ್ ನಡುವೆ ಜಗಳವಾಗಿದ್ದು, ಜಗಳ ಬಿಡಿಸಲು ಬಂದ ಯಜೇಶ್‌ಗೂ ಗಾಯಗಳಾಗಿವೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐಟಿಐ ವಿದ್ಯಾರ್ಥಿಗಳ ಜಗಳ: ಚೂರಿ ಇರಿತದಲ್ಲಿ ಅಂತ್ಯ Read More »

ಅಕ್ರಮ ಕೋಳಿ ಅಂಕಕ್ಕೆ ‌ಪೊಲೀಸ್ ದಾಳಿ

ಮಡಿಕೇರಿ: ಅಕ್ರಮ ಕೋಳಿ ಅಂಕ ಚೆಂಬು ಗ್ರಾಮದಲ್ಲಿ ನಡೆಯುತ್ತಿದ್ದ ಕುರಿತು ಮಾಹಿತಿ ಪಡೆದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಅಳವಡಿಸಲಾಗಿತ್ತು. ಹಲವಾರು ಕೋಳಿಗಳು ‌ಸಹ ಉದ್ದೇಶಿತ ಸ್ಥಳದಲ್ಲಿ ಇದ್ದವು. ದಾಳಿ ನಡೆಸಿದ ಪೊಲೀಸರು ಅಳವಡಿಸಲಾಗಿದ್ದ ಕಬ್ಬಿಣದ ಬೇಲಿಯನ್ನು ‌ವಶಕ್ಕೆ ಪಡೆದಿದ್ದಾರೆ. ಪೊಲೀಸರ ರೈಡ್ ವೇಳೆ ಅಲ್ಲಿ ಸೇರಿದ್ದ ಜನರು ಓಡಿ ಹೋದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಅಕ್ರಮ ಕೋಳಿ ಅಂಕಕ್ಕೆ ‌ಪೊಲೀಸ್ ದಾಳಿ Read More »

ತಾಯಿಯ ಕುಡಿತದ ಚಟಕ್ಕೆ ಬಲಿಯಾಯ್ತು ಮುಗ್ಧ ಮಗಳ ಜೀವ

ಯಾದಗಿರಿ: ಮದ್ಯ ಸೇವನೆ ನಿಲ್ಲಿಸುವಂತೆ ಬೇಡಿಕೊಂಡ ಪುತ್ತಿಯನ್ನೇ ನಿರ್ದಯವಾಗಿ ಹೆತ್ತಮ್ಮನೇ ಕೊಂದು ಹಾಕಿದ ಘಟನೆ ರಾಜೀವ್ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ದುರ್ದೈವಿ‌. ಆರೋಪಿ ಕ್ರೂರಿ‌ ತಾಯಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ನಿರ್ಮಲಾಳಿಗೆ ಕುಡಿತದ ಚಟ ಇದ್ದು, ಅದನ್ನು ಬಿಟ್ಟುಬಿಡುವಂತೆ ಪುಟ್ಟ ಮಗು ಅಮ್ಮನಿಗೆ ಹೇಳಿದ್ದಳು. ಇದರಿಂದ ಕೋಪಗೊಂಡ ನಿರ್ಮಲಾ ಅವಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆಕೆ ಜ್ಯೂಸ್ ಕುಡಿಯಲು ಹಣ ಕೇಳಿದಾಗ ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಥೆ ಕಟ್ಟಿದ್ದಾಳೆ.

ತಾಯಿಯ ಕುಡಿತದ ಚಟಕ್ಕೆ ಬಲಿಯಾಯ್ತು ಮುಗ್ಧ ಮಗಳ ಜೀವ Read More »

error: Content is protected !!
Scroll to Top