ಧಾರ್ಮಿಕ

ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು

ಪುತ್ತೂರು : ಸಂಭ್ರಮದ ಬಕ್ರೀದ್ ಹಬ್ಬವನ್ನು ಗುರುವಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಆಚರಿಸಿದರು. ಬ್ರಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ ಆಯಾ ತಾಲೂಕು, ವಲಯ ಪ್ರಾರ್ಥನಾ ಮಂದಿರಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳಲ್ಲಿ ಧರ್ಮಗುರುಗಳು ಸಂದೇಶ ನೀಡಿದರು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ಕೋರಿದರು. ಪುತ್ತೂರು ನಗರದಲ್ಲಿ ಹಬ್ಬದ ಹಿನ್ನಲೆಯಲ್ಲಿ ಜನಸಂಖ್ಯೆ ಭಾರೀ ವಿರಳ ಇದ್ದುದು ಕಂಡು ಬಂದಿದ್ದು, ಬಹುತೇಕ ಮುಸ್ಲಿಂ ಬಾಂಧವರು ತಮ್ಮ ಅಂಗಡಿ […]

ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು Read More »

ಮಹಾಲಿಂಗೇಶ್ವರ ದೇವಸ್ಥಾನದ ನೂತನ ಅನ್ನಛತ್ರಕ್ಕೆ ದಾರಂದ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನೂತನ ಅನ್ನಛತ್ತಕ್ಕೆ ದಾರಂದ ಮುಹೂರ್ತ ಜೂ.28 ರಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ನವರತ್ನವನ್ನು ದ್ವಾರ ಇಡುವಲ್ಲಿ ನ್ಯಾಸ ಮಾಡುವ ಮೂಲಕ ಚಾಲನೆ ನೀಡಿದರು. ದೇವಳದ ಪ್ರಧಾನ ಅರ್ಚಕ ವೈದಿಕ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್

ಮಹಾಲಿಂಗೇಶ್ವರ ದೇವಸ್ಥಾನದ ನೂತನ ಅನ್ನಛತ್ರಕ್ಕೆ ದಾರಂದ ಮುಹೂರ್ತ Read More »

ಹಾಸನ ನಗರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ | ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ

ಹಾಸನ : ರಾಜ್ಯಮಟ್ಟದ 514ನೇ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಸಮಾರಂಭ ಹಾಸನ ನಗರದಲ್ಲಿ ಮಂಗಳವಾರ ನಡೆಯಿತು. ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು  ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಕೆ ಎನ್ ರಾಜಣ್ಣ, ತಂಗಡಗಿ ಶಿವರಾಜ್ ಸಂಗಪ್ಪ, ಶಾಸಕರುಗಳಾದ ಕೆ ಎಂ ಶಿವಲಿಂಗೇಗೌಡ, ಸ್ವರೂಪ್ ಪ್ರಕಾಶ್, ಸಿ ಎನ್ ಬಾಲಕೃಷ್ಣ, ಸಿಮೆಂಟ್ ಮಂಜು,

ಹಾಸನ ನಗರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ | ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ Read More »

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಗಿಡಗಳಿಂದ ತುಲಾಭಾರ ಸೇವೆ | ವಿನೂತನ ಪರಂಪರೆಗೆ ನಾಂದಿ ಹಾಡಿದ ತುಲಾಭಾರ ಸೇವೆ

ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಗಿಡಗಳಿಂದ ವಿಶಿಷ್ಟವಾದ ತುಲಾಭಾರ ಸೇವೆ ಸಲ್ಲಿಸುವ ಮೂಲಕ ವಿನೂತನ ಪರಂಪರೆಗೆ ನಾಂದಿ ಹಾಡಲಾಯಿತು. ಹಿರಿಯ ವಿದ್ವಾಂಸ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ತನ್ನ ನಿವಾಸದಲ್ಲಿ ಸ್ವಾಮೀಜಿಯವರಿಗೆ ವೃಕ್ಷ, ಬೀಜ, ಸಸಿಗಳಿಂದ ಕೂಡಿದ ಹಲಸು, ಮಾವು, ಹರಿವೆ, ಅಲಸಂಡೆ, ಹಾಗಲ, ತುಂಬೆ ಮುಂತಾದ ಸಸಿಗಳಿಂದ ತುಲಾಭಾರ ನೆರವೇರಿತು. ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಭಕ್ತರೂ ತುಲಾಭಾರ ಸಸಿಗಳನ್ನು ತಂದಿದ್ದರು. ತುಲಾಭಾರದ ಬಳಿಕ ಈ ಗಿಡಗಳನ್ನು ಭಕ್ತರಿಗೆ

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಗಿಡಗಳಿಂದ ತುಲಾಭಾರ ಸೇವೆ | ವಿನೂತನ ಪರಂಪರೆಗೆ ನಾಂದಿ ಹಾಡಿದ ತುಲಾಭಾರ ಸೇವೆ Read More »

ಶ್ರದ್ಧಾಕೇಂದ್ರಗಳಿಂದ ಗ್ರಾಮದ ಅಭಿವೃದ್ಧಿ : ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ | ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ರಥ ಸಮರ್ಪಣೆ ಪ್ರಯುಕ್ತ ಸಮಾಲೋಚನಾ ಸಭೆ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ರಥ ಸಮರ್ಪಣೆ ಪ್ರಯುಕ್ತ ಸಮಾಲೋಚನಾ ಸಭೆಯು ಜೂ.25 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಶ್ರದ್ಧಾ ಕೇಂದ್ರಗಳನ್ನು ಭಕ್ತಿ ಶ್ರದ್ಧೆಯಿಂದ ಬೆಳೆಸಬೇಕು.ಇದರಿಂದ ಗ್ರಾಮದಲ್ಲಿ ಶಾಂತಿ,ಸೌಹಾರ್ದತೆ  ನೆಲೆಸಲು ಸಾಧ್ಯ.ಬ್ರಹ್ಮರಥದ ನಿರ್ಮಾಣ ಕೆಲಸ ನಡೆಯುತ್ತಿದ್ದು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಕ್ಷೇತ್ರದ ಶಿಲ್ಪಿಗಳಾದ ಮಹೇಶ ಮುನಿಯಂಗಳ ಅವರು ರಥ ನಿರ್ಮಾಣದ ರೂಪುರೇಷೆಗಳ

ಶ್ರದ್ಧಾಕೇಂದ್ರಗಳಿಂದ ಗ್ರಾಮದ ಅಭಿವೃದ್ಧಿ : ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ | ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ರಥ ಸಮರ್ಪಣೆ ಪ್ರಯುಕ್ತ ಸಮಾಲೋಚನಾ ಸಭೆ Read More »

ಜೂ.3 ರಿಂದ ಸೆ.25 : ಎಡನೀರು ಶ್ರೀಗಳ ಚಾತುರ್ಮಾಸ ವೃತಾಚರಣೆ | ಕಲ್ಲಾರೆ ಮಠದಲ್ಲಿ ಹೊರೆಕಾಣಿಕೆ ಸಮರ್ಪಣೆ ಕುರಿತು  ಪೂರ್ವಭಾವಿ ಸಭೆ

 ಪುತ್ತೂರು : ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ ವೃತಾಚರಣೆಯ ಕುರಿತು ಪುತ್ತೂರು ವಲಯ ಸಮಿತಿ ವತಿಯಿಂದ ಸಭೆಯನ್ನು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಆಯೋಜಿಸಲಾಯಿತು. ವಲಯ ಸಮಿತಿ ಅಧ್ಯಕ್ಷ ಡಾ.ಭಾಸ್ಕರ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ ವೃತಾಚರಣೆಗೆ ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆಯಾಗಲಿದ್ದು, ಈ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಜು.3 ರಿಂದ ಸೆ.25ರ ವರೆಗೆ ಚಾತುರ್ಮಾಸ ನಡೆಯಲಿದ್ದು, ಜು.೧೦ ರಂದು ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

ಜೂ.3 ರಿಂದ ಸೆ.25 : ಎಡನೀರು ಶ್ರೀಗಳ ಚಾತುರ್ಮಾಸ ವೃತಾಚರಣೆ | ಕಲ್ಲಾರೆ ಮಠದಲ್ಲಿ ಹೊರೆಕಾಣಿಕೆ ಸಮರ್ಪಣೆ ಕುರಿತು  ಪೂರ್ವಭಾವಿ ಸಭೆ Read More »

ಮಳೆ, ಬೆಳೆಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ

ಪುತ್ತೂರು: ಪುತ್ತೂರು ಕ್ಷೇತ್ರದ ಜನತೆಗಾಗಿ ಮತ್ತು ಮಳೆ,ಬೆಳೆ ಗಾಗಿ ಪುತ್ತೂರು ಶಾಸಕ ಅಶೋಕ್ ರೈಯವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿದರು.‌ ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದೆ ಆದರೆ ಇನ್ನೂ ಸಮೃದ್ದವಾಗಿ ಮಳೆ ಬಂದಿಲ್ಲ. ಕೇತ್ರದಲ್ಲಿ ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ಬಂದು ಜನರಿಗೆ ನೆಮ್ಮದಿಯನ್ನು ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಮುರಳೀದರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರ್ , ದೇವಸ್ಥಾನದ

ಮಳೆ, ಬೆಳೆಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಯ 50 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ತಯಾರಿ | ಶಾಸಕರ ನೇತೃತ್ವದಲ್ಲಿ ಸಭೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮುಂದಿನ ನಡೆಯ ಕುರಿತು ಸಭೆ ಭಾನುವಾರ ದೇವಸ್ಥಾನದ ಕಚೇರಿಯಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಯೋಜನೆಗಳಾದ ದೇವಸ್ಥಾನದ ಎದುರಿನ ರಥಬೀದಿ ಕೊನೆಯಲ್ಲಿ ಮಹಾದ್ವಾರ ಧಾರ್ಮಿಕ ಶಿಕ್ಷಣ ಕೇಂದ್ರ, ವೇದಪಾಠ ಶಾಲೆ ಕಟ್ಟಡ, ಯಾತ್ರಿ ನಿವಾಸ್, ರಥ ಮಂದಿರ ಹೀಗೆ ಸುಮಾರು 45 ಪ್ರಾಜೆಕ್ಟ್

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಯ 50 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ತಯಾರಿ | ಶಾಸಕರ ನೇತೃತ್ವದಲ್ಲಿ ಸಭೆ Read More »

ಎಡನೀರು ಶ್ರೀಗಳ ತೃತೀಯ ಚಾತುರ್ಮಾಸ್ಯ ವೃತಾಚರಣೆ | ಜೂ.25 ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವೃತಾಚರಣೆ ಜು.3 ರಿಂದ 29 ರ ತನಕ ಶ್ರೀ ಎಡನೀರು ಮಠದಲ್ಲಿ ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿ ಜೂ.25 ರಂದು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಎಡನೀರು ಮಠದ ಅಭಿಮಾನಿಗಳಿಂದ ಸಭೆ ನಡೆಯಲಿದೆ. ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ಸಭೆ ನಡೆದ ಬಳಿಕ ಮಧ್ಯಾಹ್ನ ಶ್ರೀಗಳ ಪಟ್ಟದ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಭಿಕ್ಷಾವಂದನೆ

ಎಡನೀರು ಶ್ರೀಗಳ ತೃತೀಯ ಚಾತುರ್ಮಾಸ್ಯ ವೃತಾಚರಣೆ | ಜೂ.25 ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಪೂರ್ವಭಾವಿ ಸಭೆ Read More »

ಶ್ರೀ ಉಳ್ಳಾಕುಲು ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ಸಾನಿಧ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮ

ಬೆಳಂದೂರು: ಬೆಳಂದೂರು ಗ್ರಾಮದ ಶ್ರೀ ಉಳ್ಳಾಕುಲು, ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ಸಾನಿಧ್ಯ ಕೊಡಿಮಾರು ಅಬೀರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಶಿವರಾಮ ಉಪಾಧ್ಯಾಯ ಮತ್ತು ಜಗನ್ನಾಥ ಕಲ್ಪಡ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹವನ ಮೃತ್ಯುಂಜಯ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು ಸಂಜೆ  ದುರ್ಗಾ ಪೂಜೆ ನಡೆದು  ರಾತ್ರಿ  ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ, ಅಧ್ಯಕ್ಷರಾದ ಉದಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ

ಶ್ರೀ ಉಳ್ಳಾಕುಲು ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ಸಾನಿಧ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮ Read More »

error: Content is protected !!
Scroll to Top