ಧಾರ್ಮಿಕ

ಸೆ. 28ರಂದು ಬೃಹತ್ ಮಿಲಾದ್ ಸಮಾವೇಶ, ವಾಹನ ರ್ಯಾಲಿ, ಬುರ್ದಾ ಮಜ್ಲಿಸ್

ಪುತ್ತೂರು: ದ.ಕ. ಜಿಲ್ಲಾ ಯುವಜನ ಪರಿಷತ್ ಪುತ್ತೂರು ತಾಲೂಕು ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ 31ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ಬುರ್ದಾ ಮಜ್ಲಿಸ್ ಸೆ. 28 ಗುರುವಾರ ಸಂಜೆ 7 ಗಂಟೆಗೆ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಯುವಜನ ಪರಿಷತ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಮಾವೇಶದ ಅಂಗವಾಗಿ ಸಂಜೆ 4ಕ್ಕೆ ಕಬಕ ವೃತ್ತದಲ್ಲಿ ಬೃಹತ್ ವಾಹನ ರ್ಯಾಲಿಗೆ ಕಬಕ ಟೈಲರ್ ಇಸ್ಮಾಯಿಲ್ […]

ಸೆ. 28ರಂದು ಬೃಹತ್ ಮಿಲಾದ್ ಸಮಾವೇಶ, ವಾಹನ ರ್ಯಾಲಿ, ಬುರ್ದಾ ಮಜ್ಲಿಸ್ Read More »

ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರ ತಂಡ ಭಾಗಿ

ಪುತ್ತೂರು: ಕಲ್ಮಡ್ಕದ ಕಲಾಗ್ರಾಮ ಆಯೋಜಿಸಿದ ಅಂತರ್ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ “ಭಜನಾ ಸಮರ್ಥ- 2023″ರಲ್ಲಿ ವಿವೇಕಾನಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರ ತಂಡ ಪಾಲ್ಗೊಂಡಿದೆ. ವೆಂಕಟೇಶ್ ಪ್ರಸಾದ್, ಶರ್ಮಿಳಾ, ಶೋಭಾ ಜೆ. ರೈ, ಜ್ಯೋತಿ ದಿವಾಕರ್, ವೀಣಾ ಕುಮಾರಿ, ರೇಷ್ಮಾ, ಕವಿತಾ ಸತೀಶ್, ಜ್ಯೋತಿಲಕ್ಷ್ಮಿ, ಯಶಸ್ವಿನಿ ಟಿ. ಅವರನ್ನು ಒಳಗೊಂಡ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರು ತಂಡದಲ್ಲಿದ್ದರು.

ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರ ತಂಡ ಭಾಗಿ Read More »

ಪೇಜಾವರ ಶ್ರೀ ಜೊತೆ ಮೈಸೂರಿನ ಬಿಬಿ ಕೇರಿಯಲ್ಲಿ ಮನೆ ಮನೆ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಅಯೋಧ್ಯೆಯ ರಾಮಜನ್ಮ ಭೂಮಿ ಟ್ರಸ್ಟ್ ಸಮಿತಿಯ ಸದಸ್ಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜೀಯವರ 36ನೇ ಚಾತುರ್ಮಾಸ್ಯ ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಜರಗುತಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಮೈಸೂರಿನ ಬಿ ಬಿ ಕೇರಿಗೆ ಸೌಹಾರ್ದ ಭೇಟಿ ನೀಡಿದರು. ಸ್ವಾಮೀಜಿ ಜೊತೆ ಅರುಣ್ ಪುತ್ತಿಲ ಅವರು ಜೊತೆಗಿದ್ದರು.ಕಾಲೊನಿಯಲ್ಲಿ ಸ್ವಾಮೀಜಿ ಪಾದಯಾತ್ರೆ ನಡೆಸಿ, ಅಲ್ಲಿನ ನಿವಾಸಿಗಳ ಮನೆಗಳಿಗೂ ಭೇಟಿ ನೀಡಿದರು.

ಪೇಜಾವರ ಶ್ರೀ ಜೊತೆ ಮೈಸೂರಿನ ಬಿಬಿ ಕೇರಿಯಲ್ಲಿ ಮನೆ ಮನೆ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ Read More »

ಶ್ರೀ ಮಹಾಲಿಂಗೇಶ್ವರ ದೇವಳದ ಶತರುದ್ರ ಯಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗಿ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶತರುದ್ರ ಯಾಗದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕುಟುಂಬ ಸಮೇತರಾಗಿ ಪಾಲ್ಗೊಂಡರು. ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕೋಟಿ ಜಪ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರು ಶತರುದ್ರಯಾಗ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಳದ ಶತರುದ್ರ ಯಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗಿ Read More »

ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ವೈಭವದ ‘ಪುತ್ತೂರು ಶಾರದೋತ್ಸವ’ | ಪಯ್ಯನ್ನೂರಿನ ಜ್ಯೋತಿಷ್ಯರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಡೆಯಲಿದೆ ಈ ಬಾರಿಯ ಶಾರದೋತ್ಸವ | ಸ್ತಬ್ಧಚಿತ್ರ ಸಹಿತ ವೈಭವದ ಶೋಭಾಯಾತ್ರೆ

ಪುತ್ತೂರು: ಇತಿಹಾಸ ಹೊಂದಿರುವ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಈ ಬಾರಿ 89ನೇ ವರ್ಷದ ಶಾರದೋತ್ಸವ ನಡೆಯಲಿದ್ದು, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ‘ಪುತ್ತೂರು ಶಾರದೋತ್ಸವ” ನಡೆಯಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಶ್ರೀ ಶಾರದಾ ಭಜನಾ ಮಂದಿರ ಹಾಗೂ ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನ ಅವಿನಾಭಾವ ಸಂಬಂಧ ಹೊಂದಿದ್ದು, ಹಿಂದೊಮ್ಮೆ ಯಾವುದೋ ಮಹಾರೋಗ ಪುತ್ತೂರನ್ನು ಬಾಧಿಸಿದ ಸಂದರ್ಭ

ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ವೈಭವದ ‘ಪುತ್ತೂರು ಶಾರದೋತ್ಸವ’ | ಪಯ್ಯನ್ನೂರಿನ ಜ್ಯೋತಿಷ್ಯರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಡೆಯಲಿದೆ ಈ ಬಾರಿಯ ಶಾರದೋತ್ಸವ | ಸ್ತಬ್ಧಚಿತ್ರ ಸಹಿತ ವೈಭವದ ಶೋಭಾಯಾತ್ರೆ Read More »

ಕಿಲ್ಲೇ ಮೈದಾನದ ಗಣಪನಿಗೆ ಮೂಡಪ್ಪ ಸೇವೆ | ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು

ಪುತ್ತೂರು: ಶ್ರೀ ದೇವತಾ ಸಮಿತಿ ವತಿಯಿಂದ ಕಿಲ್ಲೇ ಮೈದಾನದಲ್ಲಿ ಆರು ದಿನಗಳಿಂದ ನಡೆಯುತ್ತಿರುವ ಶ್ರೀ ಗಣೇಶೋತ್ಸವದ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮಧ್ಯಾಹ್ನ ಮೂಡಪ್ಪ ಸೇವೆ ನಡೆಯಿತು. ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ 12ಕ್ಕೆ ಮೂಡಪ್ಪ ಸೇವೆ ನಡೆಯಿತು. ಬಳಿಕ ಸುಗಮ ಸಂಗೀತ, ಯಕ್ಷಗಾನ ತಾಳಮದ್ದಳೆ ನಡೆಯಿತು. ಮಹಾಪೂಜೆ ಬಳಿಕ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಕಾರ್ಯದರ್ಶಿ ರಮೇಶ್, ಕೋಶಾಧಿಕಾರಿ ಸಿ.ಶ್ರೀಧರ ನಾಯಕ್, ಸದಸ್ಯರಾದ ದಿನೇಶ್ ಕುಲಾಲ್ ಪಿ.ವಿ., ಗಣೇಶ್

ಕಿಲ್ಲೇ ಮೈದಾನದ ಗಣಪನಿಗೆ ಮೂಡಪ್ಪ ಸೇವೆ | ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ | ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಾದಿಗಳು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ, ಶತರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ಭಾನುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಬೆಳಿಗ್ಗೆ 9 ರಿಂದ ಆರಂಭಗೊಂಡ ಕಾರ್ಯಕ್ರಮದ ಅಂಗವಾಗಿ ಸಹಸ್ರಾರು ಭಕ್ತಾದಿಗಳು ತಮ್ಮ ಮನೆ ಮನೆಗಳಲ್ಲಿ ಓಂ. ಶ್ರೀ ಮಹಾಲಿಂಗೇಶ್ವರಾಯ ನಮಃ ಜಪ ಕೈಗೊಂಡು 108 ನಾಣ್ಯಗಳ ಸಹಿತ ಜಪಯಜ್ಞದ ಕುರಿತು ಬರೆದಿಡಲಾದ ಪ್ರತಿಯನ್ನು ಒಪ್ಪಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀ ದೇವರ ಪ್ರಸಾದ, ಶ್ರೀ ಮಹಾಲಿಂಗೇಶ್ವರ ದೇವರ ಫೋಟೊಗಳನ್ನು ನೀಡಲಾಗುತ್ತಿದೆ,

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ | ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಾದಿಗಳು Read More »

ನಾಳೆ (ಸೆ.24): ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಜಪ, ಶತರುದ್ರಾಭಿಷೇಕ | ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಹಿನ್ನೆಲೆಯಲ್ಲಿ ಕಾರ್ಯಕ್ರಮ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಜಪ, ಶತರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ಸೆ.24 ಭಾನುವಾರ ನಡೆಯಲಿದೆ. ಪುತ್ತೂರಿನಾದ್ಯಂತ ಮನೆ ಮನೆಯಲ್ಲಿ ಸೆ.9 ರಿಂದ ಆರಂಭಗೊಂಡ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ನಡೆಯುತ್ತಿರುವ ಕುರಿತು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಸೆ.24): ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಜಪ, ಶತರುದ್ರಾಭಿಷೇಕ | ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಹಿನ್ನೆಲೆಯಲ್ಲಿ ಕಾರ್ಯಕ್ರಮ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಗಣೇಶೋತ್ಸವ ಜಲಸ್ತಂಭನದೊಂದಿಗೆ ಸಂಪನ್ನ| ಜನಮನ ಸೂರೆಗೊಂಡ ಆಕರ್ಷಕ ಸ್ತಬ್ಧಚಿತ್ರ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಶುಕ್ರವಾರ ರಾತ್ರಿ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಶುಕ್ರವಾರ ಸಂಜೆ ಶ್ರೀ ಮಹಾಗಣಪತಿಗೆ ಮಹಾಪೂಜೆ ಬಳಿಕ ದೇವಸ್ಥಾನದ ವಠಾರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಗುರು ತಂತ್ರಿ ಶ್ರೀ ಗಣೇಶನಿಗೆ ಮಂಗಳಾರತಿ ಬೆಳಗಿ, ತೆಂಗಿನ ಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ವೇದಿಕೆ ಬಳಿ ಶ್ರೀ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಗಣೇಶೋತ್ಸವ ಜಲಸ್ತಂಭನದೊಂದಿಗೆ ಸಂಪನ್ನ| ಜನಮನ ಸೂರೆಗೊಂಡ ಆಕರ್ಷಕ ಸ್ತಬ್ಧಚಿತ್ರ Read More »

ಶ್ರೀ ಶಂಕರಾಚಾರ್ಯರ ಪ್ರತಿಮೆ ಅನಾವರಣ: ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಭೇಟಿ

ಮಧ್ಯಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಸಂದರ್ಭ ಆದಿಚುಂಚನಗಿರಿ ಮಹಾಸಂಸ್ಥಾನದ ಮಹಾಸ್ವಾಮೀಜಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಭೇಟಿ ನೀಡಿದರು. ನರ್ಮದಾ ನದಿ ತೀರಕ್ಕೆ ಆಗಮಿಸಿ, ಬಳಿಕ ಪ್ರತಿಮೆ ಅನಾವರಣ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂರ್ಭದಲ್ಲಿ ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಮೈಸೂರು ಸೋಮೇಶ್ವರನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ದಿಲ್ಲಿ ಶಾಖಾ ಮಠದ

ಶ್ರೀ ಶಂಕರಾಚಾರ್ಯರ ಪ್ರತಿಮೆ ಅನಾವರಣ: ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಭೇಟಿ Read More »

error: Content is protected !!
Scroll to Top