ಧಾರ್ಮಿಕ

ವಜ್ರದೇಹಿ ಶ್ರೀಗೆ ಸಿಸಿಬಿ ನೋಟೀಸ್!?

ಮಂಗಳೂರು: ದಕ್ಷಿಣ ಕನ್ನಡದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಟಿಕೆಟ್ ಡೀಲ್ ವಿಷಯವಾಗಿ ಹಿಂದೂ ಮುಖಂಡೆ ಚೈತ್ರ ಕುಂದಾಪುರ ಹಾಗೂ ಹಾಲಶ್ರೀ ಸ್ವಾಮಿಜಿ ಬಂಧನವಾಗಿ ತಿಂಗಳು ಕಳೆದಿದೆ. ಇದೀಗ  ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ ಕಮಿಷನರ್ ರೀನಾ ಸುವರ್ಣ ಅವರು ಶ್ರೀಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಚೈತ್ರ ಇಡಿಗೆ ಬರೆದ ಪತ್ರದಲ್ಲಿ ವಜ್ರದೇಹಿ ಮಠದ […]

ವಜ್ರದೇಹಿ ಶ್ರೀಗೆ ಸಿಸಿಬಿ ನೋಟೀಸ್!? Read More »

ಕುಕ್ಕೆಗೆ ಆಗಮಿಸಿದ ಎಚ್.ಡಿ. ದೇವೇಗೌಡ ದಂಪತಿ | ಹೆಲಿಕಾಫ್ಟರ್ ರದ್ದು ಮಾಡಿ, ವಿಮಾನದಲ್ಲಿ ಆಗಮಿಸಿದ ಮಾಜಿ ಪ್ರಧಾನಿ

ಸುಬ್ರಹ್ಮಣ್ಯ : ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ ಅ. 9ರಂದು ಬೆಳಿಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡ ದಂಪತಿ ಅ. 8ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಮೂಲಕ ಬಂದು ಅಲ್ಲಿಂದ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಮಾಡಿ ಅ. 9ರಂದು ಪ್ರಾತಃ ಕಾಲ ವಿಶೇಷ ಸೇವೆ ನೆರವೇರಿಸಿದರು. ಹೆಚ್.ಡಿ. ದೇವೇಗೌಡ ದಂಪತಿ ನಿನ್ನೆ

ಕುಕ್ಕೆಗೆ ಆಗಮಿಸಿದ ಎಚ್.ಡಿ. ದೇವೇಗೌಡ ದಂಪತಿ | ಹೆಲಿಕಾಫ್ಟರ್ ರದ್ದು ಮಾಡಿ, ವಿಮಾನದಲ್ಲಿ ಆಗಮಿಸಿದ ಮಾಜಿ ಪ್ರಧಾನಿ Read More »

ಪರಸ್ಪರ ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ | ಇರ್ದೆ- ಪೇರಳ್ತಡ್ಕ ನವೀಕೃತ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ. ದೇಶದ ಸ್ವಾತಂತ್ರ್ಯಕ್ಕೆ ಇಲ್ಲಿರುವ ಎಲ್ಲಾ ಧರ್ಮಗಳ ನೇತಾರರು ಹೋರಾಟ ಮಾಡಿದ್ದಾರೆ. ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ನಮ್ಮ ದೇಶಕ್ಕೆ ಸುಲಭದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನಾವಿಂದು ದೇಶದ ಇತಿಹಾಸವನ್ನು ಮರೆತು ಧರ್ಮ, ಜಾತಿಯ ಹೆಸರಿನಲ್ಲಿ ಕಚ್ಚಾಟ ನಡೆಸಿ ಭಾರತದ ಸೌಂದರ್ಯವನ್ನೇ ಹಾಳುಮಾಡುತ್ತಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಬೆಟ್ಟಂಪಾಡಿ ಗ್ರಾಮದ ಇರ್ದೆ ಪೇರಲ್ತಡ್ಕದಲ್ಲಿ ನವೀಕೃತಗೊಂಡ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಾ ಧರ್ಮಗಳು

ಪರಸ್ಪರ ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ | ಇರ್ದೆ- ಪೇರಳ್ತಡ್ಕ ನವೀಕೃತ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ Read More »

ಇಂದು ರಾತ್ರಿ ಕುಕ್ಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ

ಸುಬ್ರಹ್ಮಣ್ಯ: ಮಾಜಿ ಪ್ರಧಾನಿ ದೇವೆ ಗೌಡ ಅವರು ಇಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಬಂದು ಸಕಲೇಶಪುರದಲ್ಲಿ ಇಳಿದು ಶ್ರೀ ಕ್ಷೇತ್ರಕ್ಕೆ ಬರುವವರಿದ್ದರು. ಆದರೆ ಸಕಲೇಶಪುರ ಭಾಗದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಹೆಲಿಕಾಪ್ಟರ್ ಬರಲು ಅನಾನುಕೂಲ ವಾತಾವರಣ ಉಂಟಾಗಿದ್ಧ ಹಿನ್ನೆಲೆಯಲ್ಲಿ ಮಂಗಳೂರಿನವರೆಗೆ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ಸುಮಾರು ರಾತ್ರಿ 11:30ಕ್ಕೆ ಸುಬ್ರಹ್ಮಣ್ಯ ತಲುಪಲಿದ್ದಾರೆ.

ಇಂದು ರಾತ್ರಿ ಕುಕ್ಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ Read More »

ಶೃಂಗೇರಿಗೆ ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಭಾಗವತ್ ಭೇಟಿ | ರಾಮ ಮಂದಿರ ಉದ್ಘಾಟನೆಗೆ ಶ್ರೀಗಳಿಗೆ ಆಹ್ವಾನವೇ?

ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಶೃಂಗೇರಿ ಶಾರದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆದರು. ಗುರುವಾರ ಶಾರದ ದೇವಸ್ಥಾನಕ್ಕೆ ಭೇಟಿ ನೀಡಿದ ಮೋಹನ್ ಭಾಗವತ್ ಅವರು ಶಾರದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಿರಿಯ ಶ್ರೀಗಳಾದ ಭಾರತೀತೀರ್ಥ ಶ್ರೀಗಳು ಹಾಗೂ ಕಿರಿಯ ಶ್ರೀ ವಿಧುಶೇಖರ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದರು. ಭಾಗವತ್ ಅವರ ಜತೆ ಐವರು

ಶೃಂಗೇರಿಗೆ ಆರ್.ಎಸ್.ಎಸ್. ಸರಸಂಘಚಾಲಕ್ ಮೋಹನ್ ಭಾಗವತ್ ಭೇಟಿ | ರಾಮ ಮಂದಿರ ಉದ್ಘಾಟನೆಗೆ ಶ್ರೀಗಳಿಗೆ ಆಹ್ವಾನವೇ? Read More »

ಅ. 15ರಿಂದ 24: ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಪುತ್ತೂರು: ಪುತ್ತೂರು ನಗರದ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.15 ರಿಂದ 24ರ ವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಹೋತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 1.30 ಕ್ಕೆ ಮಹಾಪೂಜೆ, ರಾತ್ರಿ 9 ರಿಂದ ದುರ್ಗಾನಮಸ್ಕಾರ ಪೂಜೆ ಹಾಗೂ 9.30 ಕ್ಕೆ ರಾತ್ರಿ ಪೂಜೆ ನಡೆಯಲಿದೆ. ಅ.22 ರಂದು ದುರ್ಗಾಷ್ಟಮಿ, 23 ರಂದು ಮಹಾನವಮಿ ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಅ. 15ರಿಂದ 24: ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ Read More »

ನವರಾತ್ರಿ ಪ್ರಯುಕ್ತ `ನ್ಯೂಸ್ ಪುತ್ತೂರು’ ಆಯೋಜಿಸುತ್ತಿದೆ `ಸರಸ್ವತಿ ಗೀತೆಗಳ ಸ್ಪರ್ಧೆ’

ವಿದ್ಯಾಧಿದೇವತೆ ಸರಸ್ವತಿ. ಮಾತು, ಬರಹ, ಪಾಂಡಿತ್ಯ ಇವಾವುದನ್ನೇ ಆರಂಭಿಸುವುದಿದ್ದರೂ ಸರಸ್ವತಿಗೆ ಅಗ್ರ ಪೂಜೆ. ಹಾಗಾಗಿ ತಾಯಿ ಸರಸ್ವತಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು, ವಾತ್ಸಲ್ಯ. ಇಂತಹ ಶಾರದಾ ಮಾತೆಯನ್ನು ಕೊಂಡಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಈ ಹಿನ್ನೆಲೆಯಲ್ಲಿ ಜನಮನದ ಪ್ರತಿಧ್ವನಿಯಾಗಿರುವ `ನ್ಯೂಸ್ ಪುತ್ತೂರು’ ಈ ಬಾರಿಯ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸರಸ್ವತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ನಿಮ್ಮ ಮನೆಯಲ್ಲೇ ಇದ್ದುಕೊಂಡು, ನೀವೇ ಹಾಡಿದ ಸರಸ್ವತಿ ಗೀತೆಯ ವಿಡಿಯೋವನ್ನು ನಮಗೆ ಕಳುಹಿಸಿಕೊಡಿ. ನೀವು ಹಾಡಿರುವ ಗೀತೆಯನ್ನು ನುರಿತ

ನವರಾತ್ರಿ ಪ್ರಯುಕ್ತ `ನ್ಯೂಸ್ ಪುತ್ತೂರು’ ಆಯೋಜಿಸುತ್ತಿದೆ `ಸರಸ್ವತಿ ಗೀತೆಗಳ ಸ್ಪರ್ಧೆ’ Read More »

ಡಿವೈನ್ ಪಾರ್ಕ್ ಅಂಗಸಂಸ್ಥೆ ಸವಣೂರು ವಿವೇಕ ಜಾಗೃತಿ ಬಳಗದಿಂದ ‘ವಾತ್ಸಲ್ಯ ಶ್ರೀ’ ವಿಶೇಷ ಸತ್ಸಂಗ

ಕಾಣಿಯೂರು: ಸಾಲಿಗ್ರಾಮದ ಡಿವೈನ್ ಪಾರ್ಕ್  ಅಂಗಸಂಸ್ಥೆಯಾದ ಚಾರ್ವಾಕ, ಸವಣೂರು ವಿವೇಕ ಜಾಗೃತಿ ಬಳಗದ ವತಿಯಿಂದ ವಾತ್ಸಲ್ಯ ಶ್ರೀ ವಿಶೇಷ ಸತ್ಸಂಗ ಕಾರ್ಯಕ್ರಮ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ gold man saches company ಯ ಉಪಾಧ್ಯಕ್ಷ ಪ್ರದೀಪ್ ಆರ್. ಗೌಡ ಆರುವಗುತ್ತು ಮಾತನಾಡಿ, ಸ್ವಾಮಿ ವಿವೇಕಾನಂದರು ಜಗತ್ತಿಗೆ ಸನಾತನ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಸಾರಿದ ಮಹಾನ್ ಚೇತನ. ಅವರ ಆದರ್ಶದ ನೆರಳಿನಲ್ಲಿ ಸಾಗುವ ವಿವೇಕ ಜಾಗೃತ ಬಳಗದ ಇಂತಹ ಕಾರ್ಯಕ್ರಮ ಅಪ್ರತಿಮ

ಡಿವೈನ್ ಪಾರ್ಕ್ ಅಂಗಸಂಸ್ಥೆ ಸವಣೂರು ವಿವೇಕ ಜಾಗೃತಿ ಬಳಗದಿಂದ ‘ವಾತ್ಸಲ್ಯ ಶ್ರೀ’ ವಿಶೇಷ ಸತ್ಸಂಗ Read More »

ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನ ಗೋದಾನಿಗಳು ನೀಡಿದ ಗೋವುಗಳ ವಿತರಣೆ | ತುಮಕೂರು ಶ್ರೀ ಸಿದ್ಧಗಂಗಾ ಮಠದಲ್ಲಿ ಗೋದಾನ, ಗೋ ಆಧಾರಿತ ಕೃಷಿಕ ಕುರಿತು ಕಾರ್ಯಾಗಾರ | ಆಶೀರ್ವಚನ ನೀಡಿದ ಶ್ರೀ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ

ತುಮಕೂರು: ತುಮಕೂರು ಬಿಜೆಪಿ ರೈತ ಮೋರ್ಚಾ ಹಾಗೂ ಕರ್ನಾಟಕ ಸುಭಾಷ್ ಪಾಳೇಕರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಆಶ್ರಯದಲ್ಲಿ 101 ನಾಟಿ ಗೋವುಗಳ ವಿತರಣೆ ‘ಗೋ ದಾನ’ ಕಾರ್ಯಕ್ರಮ ಹಾಗೂ ಗೋ ಆಧಾರಿತ ಕೃಷಿಯ ಬಗ್ಗೆ ಮಾಹಿತಿ ಒಂದು ದಿನದ ಕಾರ್ಯಾಗಾರ ಅ. 3ರಂದು ತುಮಕೂರು ಕ್ಯಾತ್ಸಂದ್ರ ಶ್ರೀ ಸಿದ್ಧಗಂಗಾ ಮಠದ ಶ್ರೀ ಗೋಸಲ ಸಿದ್ದೇಶ್ವರ ಸಭಾಭವನದಲ್ಲಿ ನಡೆಯಿತು. ಶ್ರೀ ಮಠದ  ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ

ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನ ಗೋದಾನಿಗಳು ನೀಡಿದ ಗೋವುಗಳ ವಿತರಣೆ | ತುಮಕೂರು ಶ್ರೀ ಸಿದ್ಧಗಂಗಾ ಮಠದಲ್ಲಿ ಗೋದಾನ, ಗೋ ಆಧಾರಿತ ಕೃಷಿಕ ಕುರಿತು ಕಾರ್ಯಾಗಾರ | ಆಶೀರ್ವಚನ ನೀಡಿದ ಶ್ರೀ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ Read More »

ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ: ಪಿ.ಜಿ. ಜಗನ್ನಿವಾಸ ರಾವ್ | ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪದಗ್ರಹಣ

ಪುತ್ತೂರು: ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತದೆ. ದೇವರ ಸ್ವರೂಪ ಪಡೆಯುತ್ತದೆ. ಇಲ್ಲಿ ಅರ್ಚಕನೆಂದರೆ ಯಾರೆಲ್ಲಾ ತ್ರಿಕರಣ ಪೂರ್ವಕವಾಗಿ ಶಿಲೆಯಲ್ಲಿ ದೇವರನ್ನು ಏಕನಿಷ್ಠೆಯಿಂದ ಕಾಣುತ್ತಾರೋ ಆ ಭಕ್ತರೆಲ್ಲರೂ ಒಂದು ರೀತಿಯಿಂದ ಅರ್ಚಕರೇ ಆಗುತ್ತಾರೆ. ಭಗವಂತನನ್ನು ತ್ರಿಕರಣಪೂರ್ವಕವಾಗಿ ಭಜಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪುತ್ತೂರು ನಗರಸಭಾ ಸದಸ್ಯ, ಪಿ.ಜಿ. ಜಗನ್ನಿವಾಸ ರಾವ್ ಹೇಳಿದರು. ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಾಲಿಂಗ ಅಂದರೆ

ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ: ಪಿ.ಜಿ. ಜಗನ್ನಿವಾಸ ರಾವ್ | ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪದಗ್ರಹಣ Read More »

error: Content is protected !!
Scroll to Top