ಧಾರ್ಮಿಕ

8 ವರ್ಷದ ಮಂಗೋಲಿಯನ್ ಬಾಲಕ : ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಆಧ್ಯಾತ್ಮಿಕ ನಾಯಕ

ದೆಹಲಿ : ಬೌದ್ಧ ಧರ್ಮದ ಸರ್ವೋಚ್ಛ ಧರ್ಮಗುರು ದಲೈ ಲಾಮಾ ಅವರು 8 ವರ್ಷದ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಮಂಗೋಲಿಯನ್ ಬಾಲಕನಿಗೆ ಟಿಬೆಟ್ ಧರ್ಮಗುರು ದಲೈ ಲಾಮಾ ಅವರು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯ 10ನೇ ಲಾಮಾ ಎಂದು ಕರೆಯಲ್ಪಡುವ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಹೆಸರಿಟ್ಟಿದ್ದಾರೆ ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ ಸುದ್ದಿ ವೆಬ್ ಸೈಟ್ ವೊಂದು ಈ ಬಗ್ಗೆ […]

8 ವರ್ಷದ ಮಂಗೋಲಿಯನ್ ಬಾಲಕ : ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಆಧ್ಯಾತ್ಮಿಕ ನಾಯಕ Read More »

ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ

ಪುತ್ತೂರು: ದೇವಸ್ಥಾನ, ದೈವಸ್ಥಾನಗಳಲ್ಲಿನ ಕಲ್ಮಶಗಳು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಿಂದ ದೂರವಾಗಿ ಭಕ್ತಿ ನೆಲೆಗೊಳ್ಳುವವ ಕಾರ್ಯವಾಗುತ್ತಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ನುಡಿದರು. ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವದ ಅಂಗವಾಗಿ ಭಾನುವಾರ ನಡೆದ  ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಾವು ಗಳಿಸುವ ಸಂಪತ್ತು ಧರ್ಮಾಧಾರಿತವಾಗಿರಬೇಕು. ಅಧರ್ಮದಿಂದ ಸಂಪಾಧಿಸುವ ಸಂಪತ್ತು ಶಾಶ್ವತವಲ್ಲ. ದೈಹಿಕವಾಗಿ ದೊರೆಯುವ ಸುಖವೇ ಮುಖ್ಯವಲ್ಲ.

ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದ ಕಟ್ಟೆ ಪುನರ್ ನಿರ್ಮಾಣಕ್ಕೆ ಚಾಲನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದಲ್ಲಿರುವ,  ಕೆರೆ ಆಯನ ನಡೆಯುವ ಶ್ರೀ ದೇವರ ಕಟ್ಟೆಯನ್ನು ಶಿಲಾಮಯ ಕಟ್ಟೆಯಾಗಿ ರೂಪುಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿ, ಜಾತ್ರೋತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದಲ್ಲಿರುವ , ದೇವರು ಕುಳಿತುಕೊಳ್ಳುವ, ಕೆರೆ ಆಯನ  ಮಾಡುವ ಕಟ್ಟೆಯನ್ನು ಶಿಲಾಮಯ ಕಟ್ಟೆಯನ್ನಾಗಿ  ನಿರ್ಮಾಣ ಮಾಡಿ ಅಲ್ಲಿರುವ ವರುಣನ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದ ಕಟ್ಟೆ ಪುನರ್ ನಿರ್ಮಾಣಕ್ಕೆ ಚಾಲನೆ Read More »

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ | ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಸಮರ್ಪಣೆಯಾಯಿತು. ಬೆಳಗ್ಗೆ ಶ್ರೀ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆದ ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹೊರೆಕಾಣಿಕೆಗೆ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆ ಮುಖ್ಯರಸ್ತೆಯಿಂದ ಹೊರಟು ದರ್ಬೆ, ಬೆದ್ರಾಳ ಮೂಲಕ ದೇವಸ್ಥಾನವನ್ನು ತಲುಪಿತು. ಮಧ್ಯಾಹ್ನ 12 ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಯಿತು. ಸಂಜೆ

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ | ಹೊರೆಕಾಣಿಕೆ ಮೆರವಣಿಗೆ Read More »

ಬೆಳ್ಳಿಪ್ಪಾಡಿ: ಮಾ. 25ರಂದು ಕಲ್ಕುಡ ಕಲ್ಲುರ್ಟಿ ವಾರ್ಷಿಕ ನೇಮೋತ್ಸವ

ಪುತ್ತೂರು: ಬೆಳ್ಳಿಪ್ಪಾಡಿಯ ಕಾರಣಿಕದ ರಾಜನ್ ದೈವ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ 25ರಂದು ವಾರ್ಷಿಕ ನೇಮೋತ್ಸವ ನಡೆಯಲಿದೆ. ಬೆಳ್ಳಿಪ್ಪಾಡಿ ಕೋಡಿಯಡ್ಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ರಾತ್ರಿ 8ಕ್ಕೆ ರಾಜನ್ ದೈವ ಹಾಗೂ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವಾರ್ಷಿಕ ನೇಮೋತ್ಸವ ಜರಗಲಿದೆ. ಇದೇ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳ್ಳಿಪ್ಪಾಡಿ: ಮಾ. 25ರಂದು ಕಲ್ಕುಡ ಕಲ್ಲುರ್ಟಿ ವಾರ್ಷಿಕ ನೇಮೋತ್ಸವ Read More »

ಬಂಗಾರ್ ಕಾಯರ್ ಕಟ್ಟೆಯ ಪುನರ್ ನವೀಕರಣಕ್ಕೆ ಚಾಲನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಬಂಗಾರ್ ಕಾಯರ್ ಕಟ್ಟೆಯ ನವೀಕರಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕರೂ, ಸಮಿತಿ ಸದಸ್ಯರೂ ಆಗಿರುವ ವೇ. ಮೂ. ವಿ.ಎಸ್. ಭಟ್ ಅವರು ಪೂಜಾ ವಿಧಿವಿಧಾನ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು ಕಾಮಗಾರಿಗೆ ಚಾಲನೆ ನೀಡಿದರು. ಇಂಜಿನಿಯರ್ ಹಾಗೂ ಗುತ್ತಿಗೆದಾರ ಶಂಕರ ಭಟ್ಟ್, ಚಾಕರಿಯವರ ಕುಟುಂಬ, ನೆರೆಕರೆಯ ಭಕ್ತರು, ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಂಗಾರ್ ಕಾಯರ್ ಕಟ್ಟೆಯ ಪುನರ್ ನವೀಕರಣಕ್ಕೆ ಚಾಲನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜಾಗದಲ್ಲಿ ಆಶ್ಲೇಷ ಬಲಿ ಪೂಜೆ, ಅರ್ಧ ಏಕಾಹ ಭಜನೆ, ಜನಜಾಗೃತಿ ಸಭೆ

ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ನಗರದ ಬೊಳುವಾರಿನಲ್ಲಿರುವ ಜಾಗದಲ್ಲಿ ಆಶ್ಲೇಷ ಬಲಿ, ಅರ್ಧ ಏಕಾಹ ಭಜನೆ ಹಾಗೂ ಜನಜಾಗೃತಿ ಸಭೆ ಶುಕ್ರವಾರ ರಾತ್ರಿ ನಡೆಯಿತು. ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಾರಿಂಜೇಶ್ವರ ದೇವಸ್ಥಾನದ ಸುತ್ತ ಗಣಿಗಾರಿಕೆ ನಡೆಯಬಾರದು ಎಂಬ ಹೋರಾಟಕ್ಕೆ ಸಂಘಟನೆ ಮೂಲಕ ಯಶಸ್ಸು ಸಿಕ್ಕಿದೆ. ಬೊಳುವಾರಿ ಕುಕ್ಕೆ ಕ್ಷೇತ್ರಕ್ಕೆ ಜಾಗ ದಾನ ಕೊಟ್ಟವರು ಬ್ರಾಹ್ಮಣರು. ಈ ಜಾಗವನ್ನು ಮತ್ತೆ ಸ್ವಾಧೀನ ಪಡೆಯಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಾಗಲಿ,

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜಾಗದಲ್ಲಿ ಆಶ್ಲೇಷ ಬಲಿ ಪೂಜೆ, ಅರ್ಧ ಏಕಾಹ ಭಜನೆ, ಜನಜಾಗೃತಿ ಸಭೆ Read More »

ವಿನೂತನ ಶೈಲಿಯ ಪ್ರಚಾರಕ್ಕೆ ಮಾದರಿಯಾದ ನಂದಳಿಕೆ ಸಿರಿಜಾತ್ರೆ

ಬಿರು ಬಿಸಿಲಿನಲ್ಲಿ ಬಾಯಾರಿದ ಹಕ್ಕಿಗಳಿಗೆ ಆಸರೆ – ರಸ್ತೆ ಬದಿ ಗಮನಸೆಳೆಯುತ್ತಿರುವ ಆಮಂತ್ರಣ ಕಾರ್ಕಳ : ತುಳುನಾಡಿನ ಕಾರಣಿಕ ಕ್ಷೇತ್ರ ಐತಿಹಾಸಿಕ ಪ್ರಸಿದ್ಧ ಆದಿ ಆಲಡೆ, ಸಿರಿಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆ ಹೀಗೆ ನಾನಾ ಹೆಸರುಗಳಿಂದ ಪ್ರಖ್ಯಾತವಾಗಿರುವ ನಂದಳಿಕೆ ಮಹಾಲಿಂಗೇಶ್ವರ ದೇಗುಲದ ಸಿರಿಜಾತ್ರೆಯು ವಿನೂತನ ಶೈಲಿಯ ಪ್ರಚಾರಕ್ಕೆ ಮಾದರಿಯಾಗಿದೆ. ಈ ಬಾರಿ ಎಪ್ರಿಲ್‌ 6ರಂದು ನಂದಳಿಕೆ ಜಾತ್ರೆ ನಡೆಯಲಿದ್ದು, ಬಿರು ಬಿಸಿಲಿನಲ್ಲಿ ಬಾಯಾರಿದ ಹಕ್ಕಿಗಳಿಗೆ ಆಸರೆ ಎಂಬ ಪರಿಸರ ಜಾಗೃತಿಯುಳ್ಳ ಸಂದೇಶದೊಂದಿಗೆ ಜಾತ್ರೆಯ

ವಿನೂತನ ಶೈಲಿಯ ಪ್ರಚಾರಕ್ಕೆ ಮಾದರಿಯಾದ ನಂದಳಿಕೆ ಸಿರಿಜಾತ್ರೆ Read More »

ಕಾಶ್ಮೀರದಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ | ಸುಬ್ರಹ್ಮಣ್ಯ ನಟ್ಟೋಜ ವಿವರಣೆಯಲ್ಲಿ ಕೇಳಿ

ಪುತ್ತೂರು: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಲವು ವರ್ಷಗಳ ಬಳಿಕ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಶೃಂಗೇರಿ ಶ್ರೀಗಳ ನೇತೃತ್ವದಲ್ಲಿ ಶಾರದಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಪಕ್ಕದಲ್ಲೇ ಇರುವ ಪಿ.ಓ.ಕೆ. ಬಳಿಯಲ್ಲೇ ಶ್ರೀ ಶಾರದಾ ದೇವಾಲಯ ನಿರ್ಮಾಣಗೊಂಡಿದೆ. ಒಟ್ಟು ಕಾರ್ಯಕ್ರಮ, ವ್ಯವಸ್ಥೆಗಳ ಬಗ್ಗೆ ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ವಿವರಿಸಿದ್ದಾರೆ. ಅವರ ಮಾತುಗಳಲ್ಲೇ ಕೇಳಿ…

ಕಾಶ್ಮೀರದಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ | ಸುಬ್ರಹ್ಮಣ್ಯ ನಟ್ಟೋಜ ವಿವರಣೆಯಲ್ಲಿ ಕೇಳಿ Read More »

ಮಾ.27 : ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನೆ | ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

ಪುತ್ತೂರು: ತಾಲೂಕಿನ ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ವತಿಯಿಂದ ಕಾರ್ಯಾಚರಿಸುತ್ತಿರುವ ಮುರ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.27 ಸೋಮವಾರ ಬೆಳಿಗ್ಗೆ 10.45 ಕ್ಕೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಬಾಬು ಗೌಡ ಕಲ್ಲೇಗ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 40 ಲಕ್ಷ ರೂ. ಮೇಲಂತಸ್ತಿನ ಕಟ್ಟಡಕ್ಕೆ ವೆಚ್ಚ ತಗಲಿದ್ದು, ಕಾಮಗಾರಿ ಸಂಪೂರ್ಣಗೊಂಡಿದೆ. ಮೇಲಂತಸ್ತು 2800 ಚದರ ಅಡಿ ಹೊಂದಿದ್ದು, 450 ರಿಂದ 500

ಮಾ.27 : ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನೆ | ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ Read More »

error: Content is protected !!
Scroll to Top