ಧಾರ್ಮಿಕ

ಪುತ್ತೂರಿಗೆ ಟೂರಿಸಂ ಮಾನ್ಯತೆಗೆ ಪ್ರಯತ್ನ | ನವೀಕೃತ ಶ್ರೀ ಮಹಾಲಿಂಗೇಶ್ವರ ಸಭಾಭವನ ಸಮರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ | ಗೋಲೋಕ ಉತ್ಸವ ಕುರಿತು ಯೋಜನೆ: ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಕರಾವಳಿ ಭಾಗ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಪುತ್ತೂರನ್ನು ಟೂರಿಸಂ ಪ್ರದೇಶ ಆಗುವ ನಿಟ್ಟಿನಲ್ಲಿ ಮಾನ್ಯತೆ ನೀಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮಾಸ್ಟರ್ ಪ್ಲಾನ್ ಸಹಿತ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ನವೀಕೃತಗೊಂಡಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಸಭಾಭವನದ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಈಗಾಗಲೇ ಅಭಿವೃದ್ಧಿ ಕಾರ್ಯಕ್ರಮಗಳಲ್ಲೊಂದಾದ ಸಭಾಭವನ ಸಮರ್ಪಣೆ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಕಾರಂಜಿ, ಕೆರೆಯ […]

ಪುತ್ತೂರಿಗೆ ಟೂರಿಸಂ ಮಾನ್ಯತೆಗೆ ಪ್ರಯತ್ನ | ನವೀಕೃತ ಶ್ರೀ ಮಹಾಲಿಂಗೇಶ್ವರ ಸಭಾಭವನ ಸಮರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ | ಗೋಲೋಕ ಉತ್ಸವ ಕುರಿತು ಯೋಜನೆ: ಕೇಶವ ಪ್ರಸಾದ್ ಮುಳಿಯ Read More »

ನವೀಕರಣಗೊಂಡ ಶ್ರೀ ಮಹಾಲಿಂಗೇಶ್ವರ ಸಭಾಭವನ ಇಂದು ಸಮರ್ಪಣೆ | ಹೀಗಿರಲಿದೆ ಸಮರ್ಪಣಾ ಕಾರ್ಯಕ್ರಮ

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೀಕರಣಗೊಂಡ ಶ್ರೀ ಮಹಾಲಿಂಗೇಶ್ವರ ಸಭಾಭವನ ಸಮರ್ಪಣೆ ಸಮಾರಂಭ ಇಂದು (ನ. 20) ನಡೆಯಲಿದೆ. ಬೆಳಿಗ್ಗೆ ಶ್ರೀ ರುದ್ರ ಹವನ ಸಹಿತ ಗಣಪತಿ ಹವನ ನಡೆದು 11 ಗಂಟೆಗೆ ಪೂರ್ಣಾಹುತಿಗೊಳ್ಳಲಿದೆ. ಬಳಿಕ ದೇವಸ್ಥಾನ ವಠಾರದಲ್ಲಿ ಪುನರುತ್ಥಾನದ ವಿವಿಧ ಕಾರ್ಯಗಳ ಕುರಿತು ನಿಧಿ ಸಂಚಯನ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಗಿರೀಶ್ ನಂದನ್,

ನವೀಕರಣಗೊಂಡ ಶ್ರೀ ಮಹಾಲಿಂಗೇಶ್ವರ ಸಭಾಭವನ ಇಂದು ಸಮರ್ಪಣೆ | ಹೀಗಿರಲಿದೆ ಸಮರ್ಪಣಾ ಕಾರ್ಯಕ್ರಮ Read More »

ಗುರುಂಪುನಾರ್ ಕರಿಕಲ್ಲ ಮೂರ್ತಿ ಭಕ್ತಿಗೀತೆ ಬಿಡುಗಡೆ

ಪುತ್ತೂರು: ಪಡ್ನೂರಿನ ಗುರುಂಪುನಾರ್ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವ ಸನ್ನಿಧಿ ಕುರಿತ ಕರಿಕಲ್ಲ ಮೂರ್ತಿ ಪ್ರಥಮ ಭಕ್ತಿಗೀತೆ ಬಿಡುಗಡೆ ದೈವ ಸನ್ನಿಧಿಯಲ್ಲಿ ನಡೆಯಿತು. ಯುವ ಸಾಹಿತಿ ಮೋಹನ್ ದರ್ಬೆತ್ತಡ್ಕ ಗೀತೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಗುರುಂಪುನಾರ್ ಪೂವಪ್ಪ ಮೇಸ್ತ್ರ ಅವರ ಶುಭ ಆಶೀರ್ವಾದದೊಂದಿಗೆ ಸ್ಥಳ ಸಾನಿಧ್ಯದ ಪ್ರಥಮ ಭಕ್ತಿಗೀತೆ ಪ್ರಶಾಂತ್ ಗುರುಂಪುನಾರ್ ಹಾಗೂ ಭರತ್ ಗುರುಂಪುನಾರ್ ಅವರ ನಿರ್ಮಾಣದಲ್ಲಿ, ಕೇಶವ ಗುರುಂಪುನಾರ್ ಅವರ ಮಾರ್ಗದರ್ಶನದಲ್ಲಿ ಭಕ್ತಿಗೀತೆ ಮೂಡಿ ಬಂದಿದೆ. ಸಾಹಿತ್ಯ – ನವೀನ್ ಎಂ, ಗಾಯನ –

ಗುರುಂಪುನಾರ್ ಕರಿಕಲ್ಲ ಮೂರ್ತಿ ಭಕ್ತಿಗೀತೆ ಬಿಡುಗಡೆ Read More »

ಅನಂತಪುರದಲ್ಲಿ ನಾಳೆ ‘ಮಕರ ಸಂಭ್ರಮ’ | ಪ್ರತ್ಯಕ್ಷವಾದ ಹೊಸ ಮೊಸಳೆಗೆ ನಾಮಕರಣ, ನೈವೇದ್ಯ!!

ಕುಂಬಳೆ: ಬಬಿಯಾ ಮೊಸಳೆಯ ನಿಧನದ ಬಳಿಕ, ಇದೀಗ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿರುವ ಸರೋವರ ಕ್ಷೇತ್ರ ಅನಂತಪುರದಲ್ಲಿ ನ. 17ರಂದು ಮಕರ ಸಂಭ್ರಮ ಕಾರ್ಯಕ್ರಮ ಜರಗಲಿದೆ. ಬೆಳಿಗ್ಗೆ ಗಂಟೆ 10ಕ್ಕೆ ಕ್ಷೇತ್ರದ ಸಭಾಂಗಣದಲ್ಲಿ ಮಕರ ಸಂಭ್ರಮ ಕಾರ್ಯಕ್ರಮ ಜರಗಲಿದ್ದು, ಮಧ್ಯಾಹ್ನ 2.30ಕ್ಕೆ ಭಕ್ತರ ಸಮಾಲೋಚನಾ ಸಭೆ ನಡೆಯಲಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ರಾಮನಾಥ್ ಶೆಟ್ಟಿ ತಿಳಿಸಿದ್ದಾರೆ. ದೇವಸ್ಥಾನದ ಸರೋವರದಲ್ಲಿರುವ ಗುಹೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಬಳಿಕ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅನ್ಯರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು

ಅನಂತಪುರದಲ್ಲಿ ನಾಳೆ ‘ಮಕರ ಸಂಭ್ರಮ’ | ಪ್ರತ್ಯಕ್ಷವಾದ ಹೊಸ ಮೊಸಳೆಗೆ ನಾಮಕರಣ, ನೈವೇದ್ಯ!! Read More »

ಡಿ.3: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿಯಿಂದ ಸಾರ್ವಜನಿಕ ಶ್ರೀ ಲಕ್ಷ್ಮೀಪೂಜೆ | ಆಮಂತ್ರಣ ಬಿಡುಗಡೆ

ಪುತ್ತೂರು: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿ ಆಯೋಜಕತ್ವದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಪೂಜೆಯ ಆಮಂತ್ರಣ ಬಿಡುಗಡೆ ಕಾಯ೯ಕ್ರಮ  ಕುಂಜೂರು ಶ್ರೀ ದುಗಾ೯ಪರಮೇಶ್ವರೀ  ದೇವಸ್ಥಾನದಲ್ಲಿ ನಡೆಯಿತು. ಡಿ.3 ರಂದು ಹಿಂದೂ ಸಮಾಜದ ಐಕ್ಯತೆಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುವ ಸಾರ್ವಜನಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸುವರು. ಪುತ್ತಿಲ ಪರಿವಾರದ ಆರ್ಯಾಪು ಗ್ರಾಮ ಸಮಿತ ಅಧ್ಯಕ್ಷ ವಿಶ್ವನಾಥ ಗೌಡ ಜಿ. ಸಂಟ್ಯಾರು ಅಧ್ಯಕ್ಷತೆ ವಹಿಸುವರು.

ಡಿ.3: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿಯಿಂದ ಸಾರ್ವಜನಿಕ ಶ್ರೀ ಲಕ್ಷ್ಮೀಪೂಜೆ | ಆಮಂತ್ರಣ ಬಿಡುಗಡೆ Read More »

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಸಾರ್ವಜನಿಕ ಗೋ ಪೂಜೆ

ಕುಪ್ಪೆಪದವು: ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ 4ನೇ ವರ್ಷದ ಸಾರ್ವಜನಿಕ ಗೋ ಪೂಜೆ ಕಾಪಿಕಾಡ್ ಅಯ್ಯಪ್ಪ ಮಂದಿರದಲ್ಲಿ ನಡೆಯಿತು. ಕಾಯಕ್ರಮದ ಅಂಗವಾಗಿ ಇರುವೈಲ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮತ್ತು ಕುಪ್ಪೆಪದವು ಕಲ್ಲಾಡಿ ವೀರ ಶಿವಾಜಿ ಭಜನಾ ಮಂಡಳಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ರಾಮ್ ಸೇನಾ ವಾಯುಪುತ್ರ ಘಟಕದ ಸರ್ವ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಸಾರ್ವಜನಿಕ ಗೋ ಪೂಜೆ Read More »

ದೇಶೀ ತಳಿ ಗೋವಿನ ಸಾಕಾಣೆ ಹೆಚ್ಚಿಸುವ ಯೋಜನೆ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗೋಪೂಜೆಯಲ್ಲಿ ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬಲಿಪಾಡ್ಯಮ ದಿನವಾದ ಸೋಮವಾರ ಗೋಧೋಳಿ ಸಮಯದಲ್ಲಿ ಸಾಮೂಹಿಕ ಗೋಪೂಜೆ ದೇವಸ್ಥಾನದ ಗೋಶಾಲೆಯಲ್ಲಿ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿ.ಎಸ್‍. ಭಟ್ ಹಾಗೂ ವಸಂತ ಕೆದಿಲಾಯ ಗೋಶಾಲೆ ಆವರಣದಲ್ಲಿ ಗೋಪೂಜೆಯ ವಿಧಿ ವಿಧಾನಗಳನ್ನು ನಡೆಸಿದರು. ಪ್ರಶಾಂತ್ ಭಟ್ ಸಹಕರಿಸಿದರು. ಮಹಿಳೆಯರಿಂದ ಗೋಪೂಜೆ ಸೇವೆ ನಡೆಯಿತು. ಬಳಿಕ ಗೋವುಗಳಿಗೆ ಹೂವಿನ ಹಾರ ಹಾಕಿ ಅವಲಕ್ಕಿ, ದೋಸೆಯನ್ನು ತಿನ್ನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ

ದೇಶೀ ತಳಿ ಗೋವಿನ ಸಾಕಾಣೆ ಹೆಚ್ಚಿಸುವ ಯೋಜನೆ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗೋಪೂಜೆಯಲ್ಲಿ ಕೇಶವ ಪ್ರಸಾದ್ ಮುಳಿಯ Read More »

ನ.14: ಕುಕ್ಕೆ ದೇವಳದಲ್ಲಿ ಗೋಪೂಜೆ

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ರಾಜ್ಯ ಸರಕಾರದ ಆದೇಶದ ಮೇರೆಗೆ ಗೋಪೂಜೆಯನ್ನು ನ.14 ಮಂಗಳವಾರ ನೆರವೇರಲಿದೆ. ಶ್ರೀ ದೇವಳದ ಮುಂಭಾಗದಲ್ಲಿ ಸಂಜೆ 5.30ರಿಂದ 6.30ರ ನಡುವಿನ ಗೋಧೂಳಿ ಲಗ್ನದಲ್ಲಿ ಗೋಪೂಜೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವ ಭಕ್ತರು ಆಗಮಿಸಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ನ.14: ಕುಕ್ಕೆ ದೇವಳದಲ್ಲಿ ಗೋಪೂಜೆ Read More »

ಹಾಸನದ ಹಾಸನಾಂಬೆ ದರ್ಶನ ಪಡೆದ ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಕರ್ನಾಟಕದ ಹಾಸನದಲ್ಲಿ ನೆಲೆಗೊಂಡಿರುವ ಶಕ್ತಿ ದೇವಿ  ಹಾಸನಾಂಬೆ ದೇವಾಲಯ ದರ್ಶನ ಪಡೆದರು.  ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾದ ಮತ್ತು ಪ್ರತಿವರ್ಷ ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಈ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಭಕ್ತರು ವರ್ಷದಲ್ಲಿ ದೀಪಾವಳಿ ಸಮಯದಲ್ಲಿ ಮಾತ್ರ ಈ ದೇವಿಯ ದರ್ಶನವನ್ನು ಮಾಡಬಹುದು ಹಾಸನದ “ಅಧಿದೇವತೆ ಹಾಸನಾಂಬೆ”ಯ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯವರ  ದರ್ಶನ ಪಡೆದರು.

ಹಾಸನದ ಹಾಸನಾಂಬೆ ದರ್ಶನ ಪಡೆದ ಅರುಣ್ ಕುಮಾರ್ ಪುತ್ತಿಲ Read More »

ಅನಂತಪುರ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಂಡ ಮೊಸಳೆ | ಭಕ್ತರಲ್ಲಿ ಸಂತಸ

ಅನಂತಪುರ: ಕಾಸರಗೋಡು: ಇತಿಹಾಸ ಪ್ರಸಿದ್ಧ ಕೇರಳದ ಅನಂತಪುರ ದೇವಸ್ಥಾನದಲ್ಲಿ ಭಕ್ತಾದಿಗಳ ಆಸೆಯಂತೆ ಮೊಸಳೆ ಕಾಣ ಸಿಕ್ಕಿದೆ. ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಮೂಡಿತ್ತು. ಎಲ್ಲರೂ ದೇವರಲ್ಲಿ ಇನ್ನೊಂದು ಬಬಿಯಾದ ಪ್ರತಿಬಿಂಬವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು. ಒಂದು ವಾರದ ಹಿಂದೆ ಭಕ್ತಾದಿಯೊಬ್ಬರು ಮೊಸಳೆ ಕಂಡಂತೆ ಆಯಿತು ಅಂದರೂ ಸಾಕ್ಷ್ಯಾಧಾರ ಇಲ್ಲದಿದ್ದರಿಂದ ನಂಬಲು ಅಸಾಧ್ಯವಾಗಿತ್ತು. ಇದೀಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡಿಸಿದೆ. ದೇವರ ಪ್ರತಿ ಬಿಂಬ

ಅನಂತಪುರ ಕ್ಷೇತ್ರದಲ್ಲಿ ಮತ್ತೆ ಕಾಣಿಸಿಕೊಂಡ ಮೊಸಳೆ | ಭಕ್ತರಲ್ಲಿ ಸಂತಸ Read More »

error: Content is protected !!
Scroll to Top