ಇಂದು ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ ಆದಿಬೈದೇರುಗಳ ನೇಮೋತ್ಸವ : ಕಟ್ಟಬೀಡಿನಿಂದ ಬಂದ ಭಂಡಾರ
ಪುತ್ತೂರು: ಕಡಬ ತಾಲೂಕಿನ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ ಆದಿಬೈದೇರುಗಳ ನೇಮೋತ್ಸವದ ಇಂದು ರಾತ್ರಿ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 8 ಕ್ಕೆ ನಾಗತಂಬಿಲ, 8.30 ಕ್ಕೆ ಮುಹೂರ್ತ ತೋರಣ, ಮಧ್ಯಾಹ್ನ 12.30 ಕ್ಕೆ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರು ಬಂದು ನೇತ್ರಾದಿ ಗರಡಿಯಲ್ಲಿ ದರ್ಶನ ನಡೆಯಿತು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ನಡೆಯುವ ನೇಮೋತ್ಸವ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್ನ ನಲ್ಲಿ ನೇರ ಪ್ರಸಾರಗೊಳ್ಳಲಿದೆ.
ಇಂದು ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ ಆದಿಬೈದೇರುಗಳ ನೇಮೋತ್ಸವ : ಕಟ್ಟಬೀಡಿನಿಂದ ಬಂದ ಭಂಡಾರ Read More »