ಧಾರ್ಮಿಕ

ಗರ್ಭಗುಡಿ ಪ್ರವೇಶ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿ ಕಿಡಿ

ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿರುವ ರಾಜ್ಯ ಬಿಜೆಪಿ ಘಟಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. 39 ಸೆಕೆಂಡುಗಳ ಈ ವಿಡಿಯೋದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ದೇವಾಲಯದ ಪ್ರವೇಶ ದ್ವಾರದ ಬಳಿ ನಿಂತಿರುವುದನ್ನು ಕಾಣಬಹುದು. ಅಲ್ಲಿಂದ ಅವರನ್ನು ಗರ್ಭಗುಡಿಗೆ ಬರುವಂತೆ ಮನವಿ ಮಾಡಿದರೂ, ಅವರು ಪ್ರವೇಶಿಸಲು ನಿರಾಕರಿಸುತ್ತಾರೆ. ಅವರ […]

ಗರ್ಭಗುಡಿ ಪ್ರವೇಶ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿ ಕಿಡಿ Read More »

ನೆಕ್ಕರೆ ದೈವಸ್ಥಾನದ ವಾರ್ಷಿಕ ನೇಮೋತ್ಸವ |ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಮಾ. 23 ಹಾಗೂ 24ರಂದು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆಯಲ್ಲಿರುವ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ದೈವಸ್ಥಾನದಲ್ಲಿ ನಡೆಯಲಿರುವ ಚತುರ್ಥ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಆನುವಂಶಿಕ ಮೊಕ್ತೇಸರ ಬಾಬು ಎನ್. ನೆಕ್ಕರೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ನೆಕ್ಕರೆ, ಅಧ್ಯಕ್ಷ ರವಿ ಮುಕ್ವೆ, ಉಪಾಧ್ಯಕ್ಷ ಶಿವರಾಮ

ನೆಕ್ಕರೆ ದೈವಸ್ಥಾನದ ವಾರ್ಷಿಕ ನೇಮೋತ್ಸವ |ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಜ. 4: ಉಡುಪಿ ಪುತ್ತಿಗೆ ಮಠಾಧೀಶರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ

ಪುತ್ತೂರು: ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ವಿಚಾರದಲ್ಲಿ ಭಾರತವನ್ನು ಪ್ರತಿನಿಧಿಸಿದ ಅಪರೂಪದ ಯತಿಗಳಾದ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ನಡೆಯಲಿದೆ ಎಂದು ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 4ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪೌರ ಸನ್ಮಾನದ ಜೊತೆಗೆ ಶ್ರೀಗಳಿಂದ ಕೋಟಿ ಗೀತಾ ಲೇಖನ

ಜ. 4: ಉಡುಪಿ ಪುತ್ತಿಗೆ ಮಠಾಧೀಶರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ Read More »

ಕುಕ್ಕೆ ಸುಬ್ರಹ್ಮಣ್ಯ: ಮಾವುತನನ್ನು ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ‘ಯಶಸ್ವಿ’ಯ ಮಾವುತರಾಗಿದ್ದ ಶ್ರೀನಿವಾಸ ಗೌಡ ಧರ್ಮಸ್ಥಳ ಅವರು ಭಾನುವಾರ ನಿವೃತ್ತರಾದರು. ಈ ಸಂದರ್ಭ ಯಶಸ್ವಿಯು ಶ್ರೀನಿವಾಸ ಅವರಿಗೆ ಹಾರ ಹಾಕಿ ಸೊಂಡಿಲನ್ನು ಅವರ ತಲೆಯ ಮೇಲಿರಿಸಿ ಗೌರವ ಸಲ್ಲಿಸಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಮಾವುತರಾಗಿ ಸುಮಾರು 15 ವರ್ಷ ಅವರು ಸೇವೆ ಸಲ್ಲಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಶ್ರೀನಿವಾಸ ಅವರನ್ನು ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ: ಮಾವುತನನ್ನು ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’ Read More »

ಮನೆ ಮನೆಗೆ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ | ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ

ಉಪ್ಪಿನಂಗಡಿ: ಅಯ್ಯೋಧ್ಯೆ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆ ಮನೆ-ಮನೆ ವಿತರಣಾ ಕಾರ್ಯಕ್ರಮ ಹಿರೇಬಂಡಾಡಿ ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಶ್ರೀ ಸುಬ್ರಹ್ಮಣ್ಯ ದೇವರ ಮುಂದೆ ಪ್ರಾರ್ಥನೆ ನಡೆದು, ಬಳಿಕ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರತಿಯೊಬ್ಬ ಹಿಂದೂವಿನ ಮನೆಗೂ ಈ ಮಂತ್ರಾಕ್ಷತೆ ತಲುಪಿ, ಶ್ರೀ ರಾಮನ ಪುಣ್ಯ ಕಾರ್ಯವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಇದೇ ಸಂದರ್ಭ ತಿಳಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಪ್ರಮುಖರು ಮನೆ ಮನೆ ಭೇಟಿ ನೀಡಿ ಮಂತ್ರಾಕ್ಷತೆ ವಿತರಿಸಿದರು.

ಮನೆ ಮನೆಗೆ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ | ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಕುಂಬ್ಲಾಡಿ ಬಾಲಸುಬ್ರಹ್ಮಣ್ಯ ದೇವಸ್ಥಾನ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ

ಚಾರ್ವಾಕ : ಅಯೋಧ್ಯೆಯಿಂದ ತರಲಾದ ಪವಿತ್ರ ಮಂತ್ರಾಕ್ಷತೆಯನ್ನು ಚಾರ್ವಾಕ ಕಪಿಲೇಶ್ವರ ದೇವಸ್ಥಾನದಿಂದ ಕುಂಬ್ಲಾಡಿ ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ತರಲಾಯಿತು. ಜ.22 ರಂದು ಅಯೋಧ್ಯೇಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ಕಪಿಲೇಶ್ವರ ದೇವಸ್ಥಾನದಿಂದ ಅಯೋದ್ಯೆಯ ಮಂತ್ರಾಕ್ಸತೆ ಇಂದು ಬೆಳಿಗ್ಗೆ ಕುಂಬ್ಲಾಡಿ ಬಾಲಸುಬ್ರಮಣ್ಯ ದೇವಸ್ಥಾನಕ್ಕೆ ತಂದು ಬಳಿಕ ಅರ್ಚಕರು ಪವಿತ್ರ ಮಂತ್ರಾಕ್ಷತೆಗೆ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಕಪಿಲೇಶ್ವರ ದೇವಸ್ಥಾನದ ಅರ್ಚಕರಾದ ವೆಂಕಟಕೃಷ್ಣ ಭಟ್, ಕುಂಬ್ಲಾಡಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಚರ್ಕರಾದ ನೂತನ್ ಭಟ್, ಗಣಪತಿ ಭಟ್, ಸತೀಶ್

ಕುಂಬ್ಲಾಡಿ ಬಾಲಸುಬ್ರಹ್ಮಣ್ಯ ದೇವಸ್ಥಾನ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ Read More »

ಪರಮಪೂಜ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದಲ್ಲಿ ನಡೆದ ಮಹಾಗುರುಗಳ ಶ್ರೀ ಪಾದುಕಾ ಪೂಜೆ, ಸುವರ್ಣ ಪುಷ್ಪಾ ಹಾರ ಸಮರ್ಪಣ ಸಂಕಲ್ಪ

ಶೃಂಗೇರಿ: ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶೃಂಗೇರಿ ಶಾಖಾ ಮಠದಲ್ಲಿ ಡಿ.26 ರಿಂದ 28ರ ವರೆಗೆ ಆಯೋಜಿಸಲಾಗಿರುವ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ಮಹಾಗುರುಗಳ ಶ್ರೀಪಾದುಕಾಪೂಜೆ ಹಾಗೂ ಸುವರ್ಣ ಪುಷ್ಪಾ ಹಾರ ಸಮರ್ಪಣ  ಸಂಕಲ್ಪ ಡಿ.27 ಬುಧವಾರ ಬೆಳಿಗ್ಗೆ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನೆರವೇರಿತು.

ಪರಮಪೂಜ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದಲ್ಲಿ ನಡೆದ ಮಹಾಗುರುಗಳ ಶ್ರೀ ಪಾದುಕಾ ಪೂಜೆ, ಸುವರ್ಣ ಪುಷ್ಪಾ ಹಾರ ಸಮರ್ಪಣ ಸಂಕಲ್ಪ Read More »

ಜ.6: ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ | ಶ್ರೀ ಅರಸು ಮುಂಡ್ಯತ್ತಾಯ, ಗ್ರಾಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

ಪುತ್ತೂರು: ನಗರದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ, ಗಣಹೋಮ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗ್ರಾಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಜ.6 ಶನಿವಾರ ನಡೆಯಲಿದೆ ಎಂದು ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ಸಮಿತಿ ಅಧ್ಯಕ್ಷ ತಾರನಾಥ ರೈ ಬಿ. ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆರಂಭದಲ್ಲಿ ದೈವಸ್ಥಾನ ದೈವಸ್ಥಾನ ಕೇವಲ ಅರ್ಧ ಸೆಂಟ್ಸ್ ಜಾಗ ಹೊಂದಿತ್ತು. ಪ್ರಸ್ತುತ ಭಕ್ತಾದಿಗಳ, ಸ್ಥಳೀಯರ ಸಹಕಾರದಿಂದ  84 ಸೆಂಟ್ಸ್ ಜಾಗ ಹೊಂದಿದೆ. ಶ್ರೀ

ಜ.6: ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ | ಶ್ರೀ ಅರಸು ಮುಂಡ್ಯತ್ತಾಯ, ಗ್ರಾಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ Read More »

ಗೋಧೋಳಿ ಲಗ್ನದಲ್ಲಿ ನಡೆಯಿತು. ಶ್ರೀನಿವಾಸ ಕಲ್ಯಾಣೋತ್ಸವ | ಸಹಸ್ರಾರು ಭಕ್ತಾದಿಗಳ ಗೋವಿಂದ ಉದ್ಘೋಷದೊಂದಿಗೆ ಮಾಂಗಲ್ಯ ಧಾರಣೆ, ಮಹಾಮಂಗಳಾರತಿ, ಪೂಜೆ, ಪ್ರಸಾದ ವಿನಿಯೋಗದ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ | ರಾತ್ರಿ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ಪುತ್ತೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೂಲಕ ಶತಮಾನಗಳ ಹೋರಾಟದ ಫಲವಾಗಿ ಕನಸು ನನಸಾಗುತ್ತಿದೆ. ಈ ನಿಟ್ಟಿನಲ್ಲಿ ವಿಶೇಷ ಜವಾಬ್ದಾರಿ ಇಂದಿನಿಂದ ಆರಂಭವಾಗುತ್ತಿದೆ. ಮುಂದೆ ಆಚಂದ್ರಾರ್ಕವಾಗಿ ರಾಮಮಂದಿರ ಉಳಿಯಬೇಕು. ಮತ್ತೊಮ್ಮೆ ಪರಕೀಯರ ಪಾಲಾಗಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಸೋಮವಾರ ರಾತ್ರಿ ವೈಭವದಿಂದ

ಗೋಧೋಳಿ ಲಗ್ನದಲ್ಲಿ ನಡೆಯಿತು. ಶ್ರೀನಿವಾಸ ಕಲ್ಯಾಣೋತ್ಸವ | ಸಹಸ್ರಾರು ಭಕ್ತಾದಿಗಳ ಗೋವಿಂದ ಉದ್ಘೋಷದೊಂದಿಗೆ ಮಾಂಗಲ್ಯ ಧಾರಣೆ, ಮಹಾಮಂಗಳಾರತಿ, ಪೂಜೆ, ಪ್ರಸಾದ ವಿನಿಯೋಗದ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ | ರಾತ್ರಿ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ Read More »

ಶ್ರೀನಿವಾಸ ಕಲ್ಯಾಣೋತ್ಸವ : ಮಧ್ಯಾಹ್ನ ಹದಿನೈದು ಸಾವಿರ ಭಕ್ತರಿಗೆ ಅನ್ನದಾನ | ರಾತ್ರಿ ಐವತ್ತು ಸಾವಿರ ಭಕ್ತಾದಿಗಳಿಗೆ ಅಡುಗೆ ತಯಾರಿ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವ ಭಾನುವಾರದಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಜರಗುತ್ತಿದ್ದು, ಮಧ್ಯಾಹ್ನ ಬರೋಬ್ಬರಿ 15 ಸಾವಿರ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜೆಯಿಂದ ಡಿ.25 ರ ಕಾರ್ಯಕ್ರಮ ಪ್ರಾರಂಭವಾಯಿತು. ಮಂಗಳೂರಿನ ರಾಗ ಲಾಸ್ಯ ತಂಡದಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು.

ಶ್ರೀನಿವಾಸ ಕಲ್ಯಾಣೋತ್ಸವ : ಮಧ್ಯಾಹ್ನ ಹದಿನೈದು ಸಾವಿರ ಭಕ್ತರಿಗೆ ಅನ್ನದಾನ | ರಾತ್ರಿ ಐವತ್ತು ಸಾವಿರ ಭಕ್ತಾದಿಗಳಿಗೆ ಅಡುಗೆ ತಯಾರಿ Read More »

error: Content is protected !!
Scroll to Top