ಧಾರ್ಮಿಕ

ಕೊಡಿಪ್ಪಾಡಿ ಕ್ಷೇತ್ರದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ‘ತೊಟ್ಟಿಲು ಪೂಜೆ’  

ಪುತ್ತೂರು: ಪುತ್ತೂರಿನಲ್ಲಿ ಪೌರ ಸನ್ಮಾನ ಸ್ವೀಕರಿಸಲು ಗುರುವಾರ ಸಂಜೆ ಪುತ್ತೂರಿಗೆ ಆಗಮಿಸಲಿರುವ ಪುತ್ತಿಗೆ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರಿ ಸುಶ್ರೀಂದ್ರ ತೀರ್ಥ ಸ್ವಾಮೀಜಿಗಳು ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನಕ್ಕೆ ರಾತ್ರಿ ಭೇಟಿ ನೀಡಿದರು. ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ದೇವಸ್ಥಾನದಲ್ಲಿ ಪಟ್ಟದ ದೇವರಿಗೆ ‘ತೊಟ್ಟಿಲು ಪೂಜೆ ಸೇವೆ’ ನೆರವೇರಿಸಿ, ಆಶೀರ್ವಚನ ನೀಡಿದರು. ಭಕ್ತಾದಿಗಳು ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡ ಹರಿಪ್ರಸಾದ್ ವೈಲಾಯ ಕರಾಯ ಹಾಗೂ ಮನೆಯವರು, ಶ್ರೀ ಕ್ಷೇತ್ರದ […]

ಕೊಡಿಪ್ಪಾಡಿ ಕ್ಷೇತ್ರದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ‘ತೊಟ್ಟಿಲು ಪೂಜೆ’   Read More »

ಶ್ರೀ ಕೃಷ್ಣನಿಗೆ ಗೀತೆ ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ | ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು

ಪುತ್ತೂರು: ಶ್ರೀಕೃಷ್ಣನಿಗೆ ಪ್ರಿಯವಾದ ಗೀತೆಯನ್ನು ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ ಎಂದು ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು. ಅವರು ಪರ್ಯಾಯ ಪುತ್ತಿಗೆ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರ ಪೌರ ಸನ್ಮಾನ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಗುರುವಾರ ಸಂಜೆ ನಡೆದ ಪೌರ ಸನ್ಮಾನ ಹಾಗೂ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಷ ದೀಕ್ಷೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜಗತ್ತಿಗೆ ಕೃಷ್ಣನ ಅನುಗ್ರಹವಾಗುವ ನಿಟ್ಟಿನಲ್ಲಿ ಗೀತಾ

ಶ್ರೀ ಕೃಷ್ಣನಿಗೆ ಗೀತೆ ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ | ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು Read More »

 ಜ.7: 2ನೇ ವರ್ಷದ ‘ಜಲಾಲಿಯ್ಯಾ ರಾತೀಬ್ ಮಸ್ಲಿಸ್’

ಪುತ್ತೂರು: ಕೆಮ್ಮಾಯಿ ಬಸ್ತಾನುಲ್ ಬಾದುಷ ಮಸ್ಲಿಸ್ ಮತ್ತು ಜಲಾಲಿಯ್ಯಾ ರಾತೀಬ್ ಸಮಿತಿ ಜಂಟಿ ಆಶ್ರಯದಲ್ಲಿ 2ನೇ ವರ್ಷದ ‘ಜಲಾಲಿಯ್ಯಾ ರಾತೀಬ್ ಮಸ್ಲಿಸ್’ ಜ.7ರಂದು ಕೆಮ್ಮಾಯಿಯ ತಂಙಳ್ ನಿವಾಸದಲ್ಲಿ ನಡೆಯಲಿದೆ ಎಂದು ಜಲಾಲಿಯ್ಯಾ ರಾತೀಬ್ ಸಮಿತಿ ಸಂಚಾಲಕ ಇಸಾಕ್ ಸಾಲ್ಮರ ತಿಳಿಸಿದ್ದಾರೆ. ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಕೆಮ್ಮಾಯಿ ಮದ್ರಸಾದ ಮಹಮ್ಮದ್ ಇರ್ಶಾದ್ ಸಖಾಫಿ ಉದ್ಘಾಟಿಸಲಿದ್ದಾರೆ.  ಹಾಜಿ ಸಯ್ಯದ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸುವರು. ಬಿ.ಕೆ.ಅಬ್ದುಲ್ ಮಜೀದ್ ಸ್ವಾಗತಿಸಲಿದ್ದಾರೆ. ಸಾಲ್ಮರದ ಅಲ್ ಹಾಜಿ ಅಸ್ಸಯಿದ್ ಮಹಮ್ಮದ್, ಅಸ್ಸಯಿದ್ ಹಾಮಿದ್

 ಜ.7: 2ನೇ ವರ್ಷದ ‘ಜಲಾಲಿಯ್ಯಾ ರಾತೀಬ್ ಮಸ್ಲಿಸ್’ Read More »

ಕುಮಾರಪರ್ವತದ ತುದಿಯ ಕುಮಾರನ ಪಾದಕ್ಕೆ ಪೂಜೆ

ಸುಬ್ರಹ್ಮಣ್ಯ: ಸುಮಾರು 4 ಸಾವಿರ ಅಡಿ ಎತ್ತರವಿರುವ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ಅವರು ಮಂಗಳವಾರ ಪೂಜೆ ನೆರವೇರಿಸಿದರು. ಈ ಸಂಧರ್ಭ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು. ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಅಧಿಕ

ಕುಮಾರಪರ್ವತದ ತುದಿಯ ಕುಮಾರನ ಪಾದಕ್ಕೆ ಪೂಜೆ Read More »

ವಿಟ್ಲ ಸೀಮೆದೊಡೆಯನ ಜಾತ್ರೆಗೆ ಗೊನೆ ಮುಹೂರ್ತ

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಬುಧವಾರ ನಡೆಯಿತು. ಬಸವನ ಗುಡಿ ರಾಮಣ್ಣ ಗೌಡರ ತೋಟದಲ್ಲಿ ದೇವಳದ ಅರ್ಚಕರು ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಸದಾಶಿವ ವಿ.ಆರ್., ಕೃಷ್ಣಯ್ಯ ಕೆ., ರಾಜಾರಾಮ ವರ್ಮ, ಜಯರಾಮ ಬಲ್ಲಾಳ, ಶ್ರೀಕಂಠ ವರ್ಮ ಮತ್ತು ಅರುಣ್ ಕುಮಾರ್ ವರ್ಮ, ದಿನೇಶ್ ರಾವ್, ಅನಂತ ಪ್ರಸಾದ್, ನಾಗರಾಜ್, ಕುಂಞಣ್ಣ ಗೌಡ ಬಸವನಗುಡಿ, ವಿ. ರಮಾನಾಥ ದೇವಾಡಿಗ, ಪದ್ಮನಾಭ ಮಂಜಲಾಡಿ, ಅಣ್ಣು ಗೌಡ, ರಾಮಣ್ಣ

ವಿಟ್ಲ ಸೀಮೆದೊಡೆಯನ ಜಾತ್ರೆಗೆ ಗೊನೆ ಮುಹೂರ್ತ Read More »

ಗರ್ಭಗುಡಿ ಪ್ರವೇಶ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿ ಕಿಡಿ

ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿರುವ ರಾಜ್ಯ ಬಿಜೆಪಿ ಘಟಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. 39 ಸೆಕೆಂಡುಗಳ ಈ ವಿಡಿಯೋದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ದೇವಾಲಯದ ಪ್ರವೇಶ ದ್ವಾರದ ಬಳಿ ನಿಂತಿರುವುದನ್ನು ಕಾಣಬಹುದು. ಅಲ್ಲಿಂದ ಅವರನ್ನು ಗರ್ಭಗುಡಿಗೆ ಬರುವಂತೆ ಮನವಿ ಮಾಡಿದರೂ, ಅವರು ಪ್ರವೇಶಿಸಲು ನಿರಾಕರಿಸುತ್ತಾರೆ. ಅವರ

ಗರ್ಭಗುಡಿ ಪ್ರವೇಶ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿ ಕಿಡಿ Read More »

ನೆಕ್ಕರೆ ದೈವಸ್ಥಾನದ ವಾರ್ಷಿಕ ನೇಮೋತ್ಸವ |ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಮಾ. 23 ಹಾಗೂ 24ರಂದು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆಯಲ್ಲಿರುವ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ದೈವಸ್ಥಾನದಲ್ಲಿ ನಡೆಯಲಿರುವ ಚತುರ್ಥ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಆನುವಂಶಿಕ ಮೊಕ್ತೇಸರ ಬಾಬು ಎನ್. ನೆಕ್ಕರೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ನೆಕ್ಕರೆ, ಅಧ್ಯಕ್ಷ ರವಿ ಮುಕ್ವೆ, ಉಪಾಧ್ಯಕ್ಷ ಶಿವರಾಮ

ನೆಕ್ಕರೆ ದೈವಸ್ಥಾನದ ವಾರ್ಷಿಕ ನೇಮೋತ್ಸವ |ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಜ. 4: ಉಡುಪಿ ಪುತ್ತಿಗೆ ಮಠಾಧೀಶರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ

ಪುತ್ತೂರು: ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ವಿಚಾರದಲ್ಲಿ ಭಾರತವನ್ನು ಪ್ರತಿನಿಧಿಸಿದ ಅಪರೂಪದ ಯತಿಗಳಾದ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ನಡೆಯಲಿದೆ ಎಂದು ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 4ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪೌರ ಸನ್ಮಾನದ ಜೊತೆಗೆ ಶ್ರೀಗಳಿಂದ ಕೋಟಿ ಗೀತಾ ಲೇಖನ

ಜ. 4: ಉಡುಪಿ ಪುತ್ತಿಗೆ ಮಠಾಧೀಶರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ Read More »

ಕುಕ್ಕೆ ಸುಬ್ರಹ್ಮಣ್ಯ: ಮಾವುತನನ್ನು ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ‘ಯಶಸ್ವಿ’ಯ ಮಾವುತರಾಗಿದ್ದ ಶ್ರೀನಿವಾಸ ಗೌಡ ಧರ್ಮಸ್ಥಳ ಅವರು ಭಾನುವಾರ ನಿವೃತ್ತರಾದರು. ಈ ಸಂದರ್ಭ ಯಶಸ್ವಿಯು ಶ್ರೀನಿವಾಸ ಅವರಿಗೆ ಹಾರ ಹಾಕಿ ಸೊಂಡಿಲನ್ನು ಅವರ ತಲೆಯ ಮೇಲಿರಿಸಿ ಗೌರವ ಸಲ್ಲಿಸಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಮಾವುತರಾಗಿ ಸುಮಾರು 15 ವರ್ಷ ಅವರು ಸೇವೆ ಸಲ್ಲಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಶ್ರೀನಿವಾಸ ಅವರನ್ನು ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ: ಮಾವುತನನ್ನು ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’ Read More »

ಮನೆ ಮನೆಗೆ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ | ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ

ಉಪ್ಪಿನಂಗಡಿ: ಅಯ್ಯೋಧ್ಯೆ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆ ಮನೆ-ಮನೆ ವಿತರಣಾ ಕಾರ್ಯಕ್ರಮ ಹಿರೇಬಂಡಾಡಿ ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು. ಶ್ರೀ ಸುಬ್ರಹ್ಮಣ್ಯ ದೇವರ ಮುಂದೆ ಪ್ರಾರ್ಥನೆ ನಡೆದು, ಬಳಿಕ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರತಿಯೊಬ್ಬ ಹಿಂದೂವಿನ ಮನೆಗೂ ಈ ಮಂತ್ರಾಕ್ಷತೆ ತಲುಪಿ, ಶ್ರೀ ರಾಮನ ಪುಣ್ಯ ಕಾರ್ಯವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಇದೇ ಸಂದರ್ಭ ತಿಳಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಪ್ರಮುಖರು ಮನೆ ಮನೆ ಭೇಟಿ ನೀಡಿ ಮಂತ್ರಾಕ್ಷತೆ ವಿತರಿಸಿದರು.

ಮನೆ ಮನೆಗೆ ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ | ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ Read More »

error: Content is protected !!
Scroll to Top