ಧಾರ್ಮಿಕ

ಸೆ.1 : ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ 7ನೇ ವರ್ಷದ ಮೊಸರು ಕುಡಿಕೆ ಉತ್ಸವ, ವೈಭವದ ಶೋಭಾಯಾತ್ರೆ

ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಜಂಟಿ ಆಶ್ರಯದಲ್ಲಿ 7ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.1 ಭಾನುವಾರ ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ ಧಾರ್ಮಿಕ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವೈಭವದ ಶೋಭಾಯಾತ್ರೆಗಳೊಂದಿಗೆ ನಡೆಯಲಿದೆ ಎಂದು ಶ್ರೀ ವಿಷ್ಣು ಯುವಕ ಮಂಡಲದ ಗೌರವಾಧ್ಯಕ್ಷ ಸುಂದರ ಪೂಜಾರಿ ಬಡಾವು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ಮುದ್ದುಕೃಷ್ಣ ಸ್ಪರ್ಧೆ, ಭಕ್ತಿಗೀತೆ, ಗೋಣಿಚೀಲ ಓಟ, […]

ಸೆ.1 : ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ 7ನೇ ವರ್ಷದ ಮೊಸರು ಕುಡಿಕೆ ಉತ್ಸವ, ವೈಭವದ ಶೋಭಾಯಾತ್ರೆ Read More »

ಸೆ.5 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ ಸೆ..5 ರಂದು ನಡೆಯಲಿದೆ. ಭಾದ್ರಪದ ಶುಕ್ಲದ ಹಸ್ತಾನಕ್ಷತ್ರದಂದು ಕದಿರು ಕಟ್ಟುವ ಕ್ರಮ ವರ್ಷಂಪ್ರತಿ ಇಲ್ಲಿ ನಡೆಯುತ್ತಿದ್ದು, ಮೊದಲಿಗೆ ಉತ್ಸವಮೂರ್ತಿಯೊಂದಿಗೆ ದೇವಳದ ಪಶ್ಚಿಮ ಭಾಗದ ಅಶ್ವತ್ಥ ಕಟ್ಟೆಯವರೆಗೆ ಚೆಂಡೆ. ವಾದ್ಯದೊಂದಿಗೆ ಸಾಗಿ ಅಲ್ಲಿ ಸಂಗ್ರಹಿಸಿಟ್ಟ ತೆನೆಗಳನ್ನು ತರಲಾಗುತ್ತದೆ. ಬಳಿಕ ಪೂಜೆ ನಡೆದು ದೇಗುಲದ ಗರ್ಭಗುಡಿ, ಪರಿವಾರ ದೇವರ ಗುಡಿಗಳು, ತೀರ್ಥಬಾವಿ. ಉಗ್ರಾಣ, ತುಳಸೀಕಟ್ಟೆ ಇತ್ಯಾದಿಗಳಿಗೆ ಕದಿರನ್ನು ಕಟ್ಟಿದ ಬಳಿಕ ನೆರೆದ ಭಕ್ತರಿಗೆ ಕದಿರನ್ನು

ಸೆ.5 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ Read More »

ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್‍ ನಿಂದ ಮೊಸರು ಕುಡಿಕೆ ಉತ್ಸವ, ಇಬ್ಬರಿಗೆ ಸನ್ಮಾನ

ಮಾಣಿಲ: ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ನ 21ನೇ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಗ್ರಾಮದಲ್ಲಿ ನಲ್ವತ್ತೊಂದು ವರುಷಗಳಿಂದ ಅಂಚೆ ಸೇವೆಗೈಯುತ್ತಿದ್ದ ಧೂಮ ಮಡಿವಾಳ ಮತ್ತು ಆಶಾ ಕಾರ್ಯಕರ್ತೆ ರತ್ನಾವತಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬ್ರೀಟಿಷ್ ತಂತ್ರಜ್ಞಾನ ದ ಪ್ರಮುಖ ಡಾ.ವಿನಯಕುಮಾರ್ ಎಂ.ಎಸ್. ವಹಿಸಿದ್ಜರು. ಮುಖ್ಯ ಅತಿಥಿಗಳಾಗಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ವಿಷ್ಣು ಕನ್ನಡಗುಳಿ, ಧನರಾಜ್ ಬಿರಿಕಾಪು.ಜಗನ್ನಾಥ ರೈ.ಕೆಳಗಿನ ಮನೆ

ತಲೆಕ್ಕಿಮಾರ್ ಶಿವಾಜಿ ಸ್ಪೋರ್ಟ್ಸ್ ಕ್ಲಬ್‍ ನಿಂದ ಮೊಸರು ಕುಡಿಕೆ ಉತ್ಸವ, ಇಬ್ಬರಿಗೆ ಸನ್ಮಾನ Read More »

ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಹಬ್ಬದ ಆಚರಣೆಯ ಹಿನ್ನೆಲೆ ಹಾಗೂ ಮಹತ್ವವನ್ನು ಸಾರುವ ಸಲುವಾಗಿ, ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು. ಭಗವಧ್ಗೀತೆಯ ಪ್ರಥಮ ಅಧ್ಯಾಯದ ಪಠಣ, ಭಜನೆ ಹಾಡು, ಕುಣಿತ ಭಜನೆಗಳು ನಡೆದವು. ಮುದ್ದು ಕೃಷ್ಣ, ಮುದ್ದು ರಾಧೆಯರಿಗೆ ಆರತಿ ಬೆಳಗಿ, ತಿಲಕವಿಟ್ಟು ಹರಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀಕೃಷ್ಣನ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಕಿರೀಟ ತಯಾರಿ, ಮಡಕೆ ಚಿತ್ರಕಲೆ ಹಾಗೂ ಮೊಸರು ಕುಡಿಕೆ

ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ

ಪುತ್ತೂರು: ಮಾತಾ ಪಿತರ ಋಣ, ದೇವ ಋಣ, ಋಷಿ  ಋಣ ಇತ್ಯಾದಿಗಳು ನಮಗಿದ್ದು, ಅವುಗಳನ್ನು ತೀರಿಸುವುದು ನಮ್ಮ ಕರ್ತವ್ಯ. ಅದೇ ರೀತಿ ನಾವು ದೇವರನ್ನು ಭಕ್ತಿಯಿಂದ ನಂಬಿದರೆ ಭಕ್ತರ ಋಣ ತೀರಿಸಲು ಭಗವಂತ ಕೂಡ ಕಾಯುತ್ತಾನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ, ತಾಲೂಕು ಗೊಲ್ಲ (ಯಾದವ ) ಸಂಘ, ಯಾದವ ಸಭಾ ತಾಲೂಕು ಸಮಿತಿ ಸಹಯೋಗದಲ್ಲಿ  ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ Read More »

ಕುದ್ಮಾರು ಸ್ಕಂದಗಣೇಶ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವದ  ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

ಕಡಬ: ತಾಲೂಕಿನ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ.7 ರಂದು ನಡೆಯುವ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಸೋಮವಾರ ಸ್ಕಂದಗಣೇಶ ನಗರದಲ್ಲಿ ನಡೆಯಿತು. ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಮಡಕೆ ಒಡೆಯುವುದು ಮುಂತಾದ ಸ್ಪರ್ಧೆಗಳು ನಡೆದವು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕುದ್ಮಾರು ಸ್ಕಂದಗಣೇಶ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವದ  ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ Read More »

ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು: ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಗೆ ಕೃಷ್ಣ-ರಾಧೆಯರ ವೇಷ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ | ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ. 2)ಜನ್ಮ ದಿನಾಂಕ ಜುಲೈ 19 ಕ್ರಿಪೂ 3228 3) ತಿಂಗಳು : ಶ್ರಾವಣ 4) ದಿನ :  ಅಷ್ಟಮಿ 5) ನಕ್ಷತ್ರ : ರೋಹಿಣಿ 6) ದಿನ  : ಬುಧವಾರ 7) ಸಮಯ : 00:00 A.M. 8)  ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ. 9)  ಮರಣ ದಿನ 18 ಫೆಬ್ರವರಿ ಕ್ರಿಪೂ 3102 10) ಕೃಷ್ಣ 89 ವರ್ಷದವನಿದ್ದಾಗ

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ | ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ Read More »

ಆ.31 : ವಿಎಚ್‍ ಪಿ ವತಿಯಿಂದ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ | ಆ.24 ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ

ಪುತ್ತೂರು: ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ವಿಶ್ವ ಹಿಂದೂ ಪರಿಷದ್ ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರಂಭಗೊಂಡ

ಆ.31 : ವಿಎಚ್‍ ಪಿ ವತಿಯಿಂದ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ | ಆ.24 ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ Read More »

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮೂರು ದಿನಗಳ ಶ್ರೀ ಗುರು ಸಾರ್ವಭೌಮರ  ಆರಾಧನಾ ಮಹೋತ್ಸವಕ್ಕೆ ಮಂಗಳವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ನಡೆದು ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ರಾತ್ರಿ ಮಹಾಪೂಜೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಸೇವೆ ನಡೆಯಿತು. ಬುಧವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ಫಲ ಪಂಚಾಮೃತಾಭಿಷೇಕ, ಶ್ರೀ ಗುರುಗಳ ಆರಾಧನೆ, ಮಹಾಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ Read More »

error: Content is protected !!
Scroll to Top