ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ | ನಾರಾಯಣ ಗುರುಗಳು ಮೋಡದ ಮಧ್ಯೆ ಮೂಡಿ ಬಂದ ಬೆಳ್ಳಿರೇಖೆ : ಪ್ರೊ. ಎ.ಕೃಷ್ಣಪ್ಪ ಪೂಜಾರಿ
ಪುತ್ತೂರು: ಶೋಷಣೆಯ ಸುಳಿಗೆ ಸಿಲುಕಿದ್ದ ಬಿಲ್ಲವ ಸಮಾಜ ಇಂದು ಈ ಹಂತಕ್ಕೆ ತಲುಪಲು ನಾರಾಯಣ ಗುರುಗಳ ಸಂದೇಶ, ಮಾರ್ಗದರ್ಶನ ಕಾರಣ. ಅನ್ನ, ನೀರು, ಭೂಮಿ, ತಂದೆ- ತಾಯಿಗಳ ಋಣ ನಮ್ಮ ಮೇಲೆ ಇರುವಂತೆ ಎಲ್ಲ ತುಳಿತಕ್ಕೆ ಒಳಗಾದ ಸಮಾಜಗಳಿಗೆ ನಾರಾಯಣ ಗುರುಗಳ ಋಣವಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಬೆಳ್ತಂಗಡಿಯ ಪ್ರೊ..ಎ.ಕೃಷ್ಣಪ್ಪ ಪೂಜಾರಿ ಹೇಳಿದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಪುತ್ತೂರು ನಾರಾಯಣ ಗುರು ಸಭಾಭವನದಲ್ಲಿ […]










