ಡಿ.12 ರಿಂದ 15 : ಶಾಂತಿಮೊಗರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ
ಕುದ್ಮಾರು: ಶಾಂತಿಮೊಗರು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದವರಿಂದ ಡಿ.14 ರಿಂದ ಡಿ.15 ರ ತನಕ ನಡೆಯಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಶಾಂತಿಮೊಗರಿನಲ್ಲಿ ನಡೆಯಿತು. ಬೆಳ್ತಂಗಡಿ ಲಾಯಿಲದ ದೀಕ್ಷಿತ ಕೆ.ಯುವರಾಜ ಗುರುಸ್ವಾಮಿ ಅವರ ಶುಭಾಶೀರ್ವಾದದೊಂದಿಗೆ, ದೀಕ್ಷಿತ ಮೇದಪ್ಪ ಗುರುಸ್ವಾಮಿ ಮತ್ತು ಆಲಂಕಾರು ಅಯ್ಯಪ್ಪ ಭಕ್ತವೃಂದದ ಹಿರಿತನದಲ್ಲಿ ಜನಾರ್ದನ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ನಡೆಯಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಶಾಂತಿಮೊಗರು ಶ್ರೀ ಅಯ್ಯಪ್ಪ ಭಕ್ತವೃಂದದವರು ಉಪಸ್ಥಿತರಿದ್ದರು.










