ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ ಶನಿವಾರ ರಾತ್ರಿ ನಡೆಯಿತು. ದೀಪೋತ್ಸವದ ಅಂಗವಾಗಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಂಜೆ ಬಲಿ ಉತ್ಸವ ನಡೆದು ಬಳಿಕ ಮಹಾಮಂಗಳಾರತಿ ನಡೆಯಿತು. ಮಹಾಮಂಗಳಾರತಿಯ ದೀಪದಿಂದ ದೇವಸ್ಥಾನ ರಥಬೀದಿ ಸಹಿತ ಒಳಾಂಗಣದಲ್ಲಿ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರಿಂದ ಅಚ್ಚುಕಟ್ಟಾಗಿ ಜೋಡಿಸಿಡಲಾದ ಹಣತೆಗೆ ಉರಿಸಲಾಯಿತು. ದೇವಸ್ಥಾನದ ಇಡಿ ವಠಾರ ಹಣತೆಯ ಬೆಳಕಿನಿಂದ ಸೇರಿದ್ದ ಸಾವಿರಾರು ಭಕ್ತಾದಿಗಳಲ್ಲಿ ಭಕ್ತಿಯನ್ನುಂಟು ಮಾಡಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹೊರಾಂಗಣದಲ್ಲಿ ಕುಣಿತ ಭಜನೆ […]
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ Read More »










