ಧಾರ್ಮಿಕ

ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀರಾಮ ರಕ್ಷಾಸ್ತ್ರೋತ್ರ ಮಂತ್ರ ಪಠಣ | ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ ನೆನಪಿಗಾಗಿ ಬಿಲ್ವಪತ್ರೆ, ಪಾರಿಜಾತ ಗಿಡ ನಾಟಿ

ಚಾರ್ವಾಕ: ಅಯೋಧ್ಯ ಶ್ರೀ ರಾಮ ಜನ್ಮ ಭೂಮಿ ಪ್ರಾಣ ಪ್ರತಿಷ್ಠೆ ಅಂಗವಾಗಿ ಚಾರ್ವಕ ನಾಣಿಲ ಉಪವಾಸತಿ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ರಾಮ ರಕ್ಷಾ ಸ್ತೋತ್ರ ಮಂತ್ರ ಪಠಣ, ನಾಲ್ಕಂಭ ಉಳ್ಳಾಲ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅವಿಸ್ಮರಣೀಯ ನೆನಪಿಗಾಗಿ ಪವಿತ್ರ ಬಿಲ್ವಪತ್ರೆ ಹಾಗೂ ಪಾರಿಜಾತ ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ಭಕ್ತಾದಿಗಳು ವೀಕ್ಷಿಸಿ ಪುನೀತರಾದರು. ಮಧ್ಯಾಹ್ನ […]

ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀರಾಮ ರಕ್ಷಾಸ್ತ್ರೋತ್ರ ಮಂತ್ರ ಪಠಣ | ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ ನೆನಪಿಗಾಗಿ ಬಿಲ್ವಪತ್ರೆ, ಪಾರಿಜಾತ ಗಿಡ ನಾಟಿ Read More »

ನಾಳೆ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಬಂಟಿಂಗ್ಸ್, ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಟ್ಟ ದೈವಸ್ಥಾನ | ವಾಹನ ಸಂಚಾರದಲ್ಲಿ ಬದಲಾವಣೆ

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ವಾರ್ಷಿಕ ನೇಮೋತ್ಸವ ಜ.24 ಬುಧವಾರ ನಡೆಯಲಿದ್ದು, ಎಲ್ಲಾ ಸಿದ್ಧತೆಗಳು ನಡೆದಿದೆ. ದೈವಸ್ಥಾನ ಹಾಗೂ ಮುಖ್ಯರಸ್ತೆಯಲ್ಲಿ ಸುಮಾರು 500 ಮೀ.ನಷ್ಟು ಉದ್ದಕ್ಕೆ ತಳಿರು ತೋರಣ, ಕೇಸರಿ ಬಂಟಿಂಗ್ಸ್, ವಿದ್ಯುತ್ ಬಲ್ಬುಗಳಿಂದ ಈಗಾಗಲೇ ಸಿಂಗರಿಸಲಾಗಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 7 ಗಂಟೆಗೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು

ನಾಳೆ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಬಂಟಿಂಗ್ಸ್, ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಟ್ಟ ದೈವಸ್ಥಾನ | ವಾಹನ ಸಂಚಾರದಲ್ಲಿ ಬದಲಾವಣೆ Read More »

ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವಾರ್ಪಣೆ

ಕೆದಿಲ: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಟೆ ಅಂಗವಾಗಿ ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ರಾಮ ಭಕ್ತರಿಂದ ಭಜನೆ, ಬಳಿಕ ಶ್ರೀ ರಾಮ ಕಲ್ಪೋಕ್ತ ಪೂಜೆ, ಸಾಮೂಹಿಕ ರಾಮತಾರಕ ಮಂತ್ರ ನಡೆಯಿತು. ಕಾರ್ಯಕ್ರಮದಲ್ಲಿ ಕರಸೇವಕರಿಗೆ ಗೌರವಾರ್ಪಣೆ ನಡೆಯಿತು. ಮೈರ ಕೃಷ್ಣ ಭಟ್ ಕರಸೇವೆಗೆ  ತೆರಳಿದವರನ್ನು ಪ್ರಶಂಸಿಸಿದರು. ಕರಸೇವೆಯ ಸಮಯದಲ್ಲಿ ಭಾಗವಹಿಸಿದವರು ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು. ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮವನ್ನು ಪರದೆಯ ಮೂಲಕ ಸುಮಾರು 500ಕ್ಕೂ ಮಿಕ್ಕಿ ರಾಮಭಕ್ತರು ವೀಕ್ಷಿಸಿದರು.

ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವಾರ್ಪಣೆ Read More »

ಎಣ್ಮೂರು ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದಿಂದ ಎಣ್ಮೂರು ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವ ಸನ್ಮಾನ

ಕಡಬ: ಎಣ್ಮೂರು ಕೋಟಿ-ಚೆನ್ನಯ ನಗರದ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ವತಿಯಿಂದ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಎಮ್ಮೂರಿನ ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ಗಣಪತಿ ಹವನ, ಶ್ರೀರಾಮನಾಮ ತಾರಕ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಶ್ರೀರಾಮ ದೇವರಿಗೆ ಕಲಶಾಭಿಷೇಕ ನಡೆದು, ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಗಣರಾಜ ಕೆದಿಲ ಹಾಗೂ ಯತೀಶ್ ರೈ ದುಗಲಡ್ಕ, ಪ್ರಫುಲ್ಲಚಂದ್ರ

ಎಣ್ಮೂರು ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದಿಂದ ಎಣ್ಮೂರು ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವ ಸನ್ಮಾನ Read More »

ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ರಾಮ ತಾರಕ ಮಂತ್ರ ಜಪ, ಭಜನೆ | ಕರಸೇವಕರಿಗೆ ಗೌರವಾರ್ಪಣೆ

ಉಪ್ಪಿನಂಗಡಿ: ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮ ಪ್ರಾಣ ಪ್ರತಿಷ್ಠೆ ಪ್ರಯುಕ್ತ ರಾಮ ತಾರಕ ಮಂತ್ರ ಜಪ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ ಎಲ್‍.ಇ.ಡಿ. ಪರದೆಯಲ್ಲಿ ಅಯೋಧ್ಯೆ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ನಡೆಯಿತು. ಇದೇ ಸಂದರ್ಭ ಕರಸೇವಕರಿಗೆ ಗೌರವಾರ್ಪಣೆ ನಡೆಯಿತು.

ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ರಾಮ ತಾರಕ ಮಂತ್ರ ಜಪ, ಭಜನೆ | ಕರಸೇವಕರಿಗೆ ಗೌರವಾರ್ಪಣೆ Read More »

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ರಾಮಕ್ಷತ್ರೀಯ ಸೇವಾ ಸಂಘದಿಂದ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ

ಪುತ್ತೂರು: ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ ಹಾಗೂ ರಾಮಕ್ಷತ್ರೀಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಗಮಿಸಿದ ರಾಮಭಕ್ತರು ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯನ್ನು ಎಲ್‍.ಇ.ಡಿ. ಪರದೆ ಮೂಲಕ ವೀಕ್ಷಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಮತ್ತು ಆಂಜನೇಯ ವೇಷಧಾರಿಗಳನ್ನು ಬೊಳುವಾರಿನಿಂದ ಮೆರವಣಿಗೆ ಮೂಲಕ ಕರೆ ತರಲಾಯಿತು. ಕರಸೇವಕ ಚಂದ್ರಶೇಖರ ರಾವ್ ಬಪ್ಪಳಿಗೆ

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ರಾಮಕ್ಷತ್ರೀಯ ಸೇವಾ ಸಂಘದಿಂದ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ Read More »

ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ | ಕರಸೇವಕರಿಗೆ ಸನ್ಮಾನ

ಪುತ್ತೂರು: ಆರ್ಯಾಪು ಗ್ರಾಮದ ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಂಡಿತು. ಲೋಕಾರ್ಪಣೆ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀ ರಾಮನ ಕರಸೇವೆಯಲ್ಲಿ ಭಾಗಿಯಾದ ವಿಶ್ವನಾಥ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಪೂಜಾರಿ, ನಗರಸಭೆ ಸದಸ್ಯೆ ದೀಕ್ಷಾ ಪೈ, ಮತ್ತಿತರರು ಉಪಸ್ಥಿತರಿದ್ದರು.

ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ | ಕರಸೇವಕರಿಗೆ ಸನ್ಮಾನ Read More »

ಕಾವುನಲ್ಲಿ ಪುತ್ತಿಲ ಪರಿವಾರದಿಂದ ಶ್ರೀ ರಾಮನಿಗೆ ಹಣತೆ ದೀಪ

ಪುತ್ತೂರು: ಕಾವು ಪುತ್ತಿಲ ಪರಿವಾರ ಘಟಕದ ವತಿಯಿಂದ ಅಯೋಧ್ಯೆಯಲ್ಲಿ ನೆಲೆನಿಂತ ಶ್ರೀ ರಾಮನ ಸಂಭ್ರಮವನ್ನು ಕಾವು ಪಂಚವಟಿ ನಗರದ ಶ್ರೀ ಪಂಚಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸಂಜೆ ಹಣತೆ ದೀಪಗಳನ್ನು ಹಚ್ಚುವ ಮೂಲಕ ಆಚರಿಸಲಾಯಿತು. ಪುತ್ತಿಲ ಪರಿವಾರದ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರೂ ಸೇರಿದಂತೆ ಅನೇಕ ಹಿರಿಯ ರಾಮಭಕ್ತರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಭ್ರಮಾಚರಣೆಯ ಅಂಗವಾಗಿ ಕಾವು ಮೂರೂ ಪೇಟೆಯಲ್ಲಿ ಪಾಯಸ ಮತ್ತು ಲಾಡು ವಿತರಿಸಲಾಯಿತು.

ಕಾವುನಲ್ಲಿ ಪುತ್ತಿಲ ಪರಿವಾರದಿಂದ ಶ್ರೀ ರಾಮನಿಗೆ ಹಣತೆ ದೀಪ Read More »

ನಿಮ್ಮ ಮಕ್ಕಳು ಕೋರ್ಟು ಕೇಸಿಗೆ ಅಲೆದಾಡದಂತೆ ನೋಡಿಕೊಳ್ಳಿ | ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಶೋಕ್ ರೈ

ಪುತ್ತೂರು: ರಾಜಕೀಯದವರು ತಮ್ಮ ಲಾಭಕ್ಕೋಸ್ಕರ ಯಾರದ್ದೋ ಮಕ್ಕಳನ್ನು ಬಲಿಪಶು ಮಾಡುವ ಚಾಲ್ತಿ ಇದ್ದು ಕೆಟ್ಟ ಚಟುವಟಿಕೆಯಲ್ಲಿ ನಿಮ್ಮ ಮಕ್ಕಳು ಭಾಗಿಗಳಾಗಿ ಅವರು ಜೀವನ ಪೂರ್ತಿ ಕೋರ್ಟು, ಕೇಸು ಅಲೆದಾಡದಂತೆ ನೋಡಿಕೊಳ್ಳಿ ಎಂದು ಪುತ್ತೂರು ಶಸಕರಾದ ಅಶೋಕ್ ರೈ ಹೇಳಿದರು. ಅವರು ಬೊಳ್ಳಾಣ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು. ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ

ನಿಮ್ಮ ಮಕ್ಕಳು ಕೋರ್ಟು ಕೇಸಿಗೆ ಅಲೆದಾಡದಂತೆ ನೋಡಿಕೊಳ್ಳಿ | ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಶೋಕ್ ರೈ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಸ್ಕ್ರೀನ್ ಮೂಲಕ ಶ್ರೀರಾಮ ಪ್ರಾಣಪ್ರತಿಷ್ಠೆ ವೀಕ್ಷಿಸಿದ ಭಕ್ತಾದಿಗಳು

ಪುತ್ತೂರು: ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಸೋಮವಾರ ನಡೆಯಿತು. ಬೆಳಿಗ್ಗೆಯಿಂದ ಎಲ್‍ ಇಡಿ ಸ್ಕ್ರೀನ್ ಮೂಲಕ ರಾಮಭಕ್ತರಿಗೆ ಶ್ರೀ ರಾಮನ ಪ್ರಾಣಪ್ರತಿಷ್ಠೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತಾದಿಗಳು ಶ್ರೀ ರಾಮ ಪ್ರಾಣ ಪ್ರತಿಷ್ಠೆಯನ್ನು ವೀಕ್ಷಿಸುವ ಮೂಲಕ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಅನ್ನಸಂತರ್ಪನೆ ಜರಗಿತು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಸ್ಕ್ರೀನ್ ಮೂಲಕ ಶ್ರೀರಾಮ ಪ್ರಾಣಪ್ರತಿಷ್ಠೆ ವೀಕ್ಷಿಸಿದ ಭಕ್ತಾದಿಗಳು Read More »

error: Content is protected !!
Scroll to Top