ಧಾರ್ಮಿಕ

ಫೆ.10 : ಬೃಹತ್ ಆಧ್ಯಾತ್ಮಿಕ ಸಂಗಮ ‘’ನೂರೇ ಅಜ್ಮೀರ್”

ಪುತ್ತೂರು: ರೆಂಜಿಲಾಡಿ ಇಸ್ಲಾಮಿಕ್ ಸೆಂಟರ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ “ನೂರೇ ಅಜ್ಮೀರ್’’ ಕಾರ್ಯಕ್ರಮ ಫೆ.10 ರಂದು ರೆಂಜಿಲಾಡಿ ಖ್ವಾಜಾ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‍.ಬಿ.ಮುಹಮ್ಮದ್ ದಾರಿಮಿ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಕ್ಷಾಂತರ ಜನರಿಗೆ ಶಾಂತಿ, ಸಮಾಧಾನ ಹಾಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ವಿಶ್ವಾಸಿಗಳ ಸಾಂತ್ವನದ ಭರವಸೆಯ ಬೆಳಕು, ವಿಶೇಷ ಆಧ್ಯಾತ್ಮಿಕತೆಯ ಚೈತನ್ಯ ನೀಡುವ ನಿಟ್ಟಿನಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮ ಪ್ರಸಿದ್ಧಿ ಪಡೆದಿದ್ದು, ಬಡ ಮಕ್ಕಳ […]

ಫೆ.10 : ಬೃಹತ್ ಆಧ್ಯಾತ್ಮಿಕ ಸಂಗಮ ‘’ನೂರೇ ಅಜ್ಮೀರ್” Read More »

ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾವು:ಮಾ.1 ರಿಂದ 3 ರ ವರೆಗೆ ಕಾವು  ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾವು ತುಡರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುಬ್ರಾಯ ಬಲ್ಯಾಯ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಅರಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಚಾಕೋಟೆ, ಶ್ರೀ ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಸುಂದರ ಪೂಜಾರಿ ಕೆರೆಮಾರು, ಉದ್ಯಮಿಗಳಾದ

ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ದೈಪಿಲ ಕ್ಷೇತ್ರದಲ್ಲಿ  ಇಂದು ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ

ಕಾಣಿಯೂರು:  ಚಾರ್ವಾಕ ಗ್ರಾಮದ ದೈಪಿಲದಲ್ಲಿ ಶ್ರೀ ಕ್ಷೇತ್ರ ದೈಪಿಲ, ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆಯುತ್ತಿದೆ. ತಾ.7ರಂದು ಶ್ರೀ ಸ್ಥಾನದಲ್ಲಿ ಸ್ಥಳ ಶುದ್ಧಿ ಹಾಗೂ ಗಣಹೋಮ, ರಾತ್ರಿ ಗಂಟೆ 8ಕ್ಕೆ ಕೊಪ್ಪದಿಂದ ಭಂಡಾರ ತೆಗೆದು ಇಂದು ಬೆಳಗ್ಗೆ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯುತ್ತಿದ್ದು , ಸೇವೆಗಳು ಸಹಿತ ಹರಕೆ ಒಪ್ಪಿಸುವಂತೆ ಭಕ್ತಾದಿಗಳು 12 ಗಂಟೆಗೆ ಮುಂಚಿತವಾಗಿ ಬಂದು

ದೈಪಿಲ ಕ್ಷೇತ್ರದಲ್ಲಿ  ಇಂದು ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ Read More »

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಸುಳ್ಯ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತಿದ್ದು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಬುಧವಾರ ಬೆಳಿಗ್ಗೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಶ್ರೀ ದೇವರ ದರ್ಶನ ಪಡೆದು ಬಳಿಕ ಶ್ರೀ ದೇವರ ಬಲಿ ಉತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ದೇವಿಪ್ರಸಾದ್  ಕಾನತ್ತೂರ್  ಶಾಸಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಅಯೋಧ್ಯೆ ಬಾಲರಾಮನಿಗೆ ರಾಜಸ್ಥಾನದ ತೊಟ್ಟಿಲು ಕೊಡುಗೆ ನೀಡಿದ ಕರಾವಳಿ ಮಾಜಿ ಶಾಸಕ!

ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯಾ ರಾಮನ ಸನ್ನಿಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶ್ರೀಗಳ ಮಾರ್ಗದರ್ಶನದಂತೆ ಶ್ರೀಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ರಜತ ಪಲ್ಲಕ್ಕಿಯನ್ನು ಅರ್ಪಿಸಲು ಸಿದ್ದರಾಗುತ್ತಿರುವಂತೆ ಇತ್ತ ಕಡೆ ಮಂಡಲೋತ್ಸವದಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಂಡಿರುವ ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಅರ್ಪಿಸಲು ಉತ್ಸುಕರಾಗಿದ್ದಾರೆ. ರಾಜಸ್ಥಾನದಲ್ಲಿ ಬೀಟಿಮರದಿಂದ ನಿರ್ಮಿಸಲಾದ ಅತ್ಯಂತ ಸುಂದರ ಕಾಷ್ಠ ರಚನೆಗಳುಳ್ಳ ತೊಟ್ಟಿಲನ್ನು ಖರೀದಿಸಲಾಗಿದ್ದು, ಇದೀಗ

ಅಯೋಧ್ಯೆ ಬಾಲರಾಮನಿಗೆ ರಾಜಸ್ಥಾನದ ತೊಟ್ಟಿಲು ಕೊಡುಗೆ ನೀಡಿದ ಕರಾವಳಿ ಮಾಜಿ ಶಾಸಕ! Read More »

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಭೇಟಿ ನೀಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಾಣಿ: ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು. ದೈವಸ್ಥಾನಕ್ಕೆ ಭೇಟಿ ನೀಡಿದ ಅವರು ಶ್ರೀ ಉಳ್ಳಾಲ್ತಿ ಅಮ್ಮನವರ ದರ್ಶನ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಭೇಟಿ ನೀಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ Read More »

ಕುಂದರ್ ಕುಟುಂಬಸ್ಥರ ನಾಗಬನದಲ್ಲಿ ನಾಗಪ್ರತಿಷ್ಠೆ

ಪಂಜ : ಕುಂದರ್ ಕುಟುಂಬಸ್ಥರ ನಾಗಬನದ ನಾಗಾಪ್ರತಿಷ್ಠೆ ಕಾರ್ಯಕ್ರಮ ಪಂಜದ ಶೆಟ್ಟಿಮೂಲೆ ಎಂಬಲ್ಲಿ ನಡೆಯಿತು. ಕುಟುಂಬದ ಹಿರಿಯರಾದ ರತ್ನಾಕರ ಸುವರ್ಣ, ಆನಂದ ಪೂಜಾರಿ ಅಡೆಕಲ್ಲು, ಹಾಗೂ 150 ಮಂದಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಂಜದ ಶೆಟ್ಟಿಮೂಲೆಯಲ್ಲಿನ ನಾಗಬನದ ಉಸ್ತುವಾರಿಯನ್ನು ಪ್ರಸ್ತುತ ಮಂಗಳೂರಿನ ಕುಂದರ್ ಕುಟುಂಬಸ್ಥರು ನಡೆಸಿಕೊಂಡು ಬರುತಿದ್ದಾರೆ. ಮಂಗಳೂರಿನ ಕುಂದರ್ ಕುಟುಂಬಸ್ಥರು ಮೂಲತಃ ಪಂಜದ ಶೆಟ್ಟಿಮೂಲೆಯವರು. ಹಲವು ವರ್ಷಗಳ ಹಿಂದೆ ಕುಂದರ್ ವಂಶಸ್ಥರು ಎರಡು ಕವಲುಗಳಾಗಿ ಒಂದು ಕವಲು ಮಂಗಳೂರಿನತ್ತ ಪಯಣ ಬೆಳೆಸಿತು ಎಂದು ತಿಳಿದು ಬಂದಿರುತ್ತದೆ.

ಕುಂದರ್ ಕುಟುಂಬಸ್ಥರ ನಾಗಬನದಲ್ಲಿ ನಾಗಪ್ರತಿಷ್ಠೆ Read More »

ಫೆ.13: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ, ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ

ಕೆಲಿಂಜ: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ ಫೆ. 14 ಬುಧವಾರ ರಾತ್ರಿ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಫೆ.13 ಮಂಗಳವಾರ ರಾತ್ರಿ ಶ್ರೀ ಉಳ್ಳಾಲ್ತಿ ಮಲರಾಯ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾರ್ ಗುತ್ತಿನಿಂದ ಕೆಲಿಂಜ ಶ್ರೀ ಅಮ್ಮನವರ ಸನ್ನಿಧಾನಕ್ಕೆ ಭಂಡಾರ ಆಗಮನವಾಗಲಿದೆ. ಬೆಳಿಗ್ಗೆ 8 ಗಂಟೆಗೆ ತಂತ್ರಿವರ್ಯರ ಆಗಮನ, 9ಕ್ಕೆ ಪ್ರಾರ್ಥನೆ, ಬಿಂಬ ಶುದ್ಧಿ ನಡೆದು ಬಳಿಕ ಬೆಳಿಗ್ಗೆ 10ಕ್ಕೆ ಬಂಟ್ವಾಳ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ

ಫೆ.13: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ, ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆ Read More »

ಗೊನೆ ಮುಹೂರ್ತ ಕಾರ್ಯಕ್ರಮ- ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜ

ಕೆಲಿಂಜ: ಫೆ. 14ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ಮೆಚ್ಚಿ ಜಾತ್ರೆಯು ನಡೆಯಲಿದ್ದು, ಆ ಪ್ರಯುಕ್ತ ಅನಂತಕೋಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಪ್ರಾರ್ಥನೆ ಸಲ್ಲಿಸಿ  ಪುಂಡಿಕಾಯಿ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.  ಈ ಸಂದರ್ಭ ಊರಿನ ಮೊಕ್ತೇಸರರು, ಊರಿನ ಹಿರಿಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.    ಕ್ಷೇತ್ರದ ಗೊನೆಮುಹೂರ್ತದ ವಿಶೇಷತೆ ಇಲ್ಲಿದೆ : ಜಾತ್ರೋತ್ಸವದ ತಯಾರಿಯ ಬಗ್ಗೆ ಯಾವುದೇ ಸಲಹೆ ಸೂಚನೆಗಳಿದ್ದರೂ ಗೊನೆ ಕಡಿಯುವ ಮೊದಲು ಪ್ರಸ್ತಾಪಿಸಬೇಕು ನಂತರ ಅದರ ಬಗ್ಗೆ ಯಾರೂ ಪ್ರಸ್ತಾಪಿಸುವಂತಿಲ್ಲ.ಹಿಂದಿನ

ಗೊನೆ ಮುಹೂರ್ತ ಕಾರ್ಯಕ್ರಮ- ಶ್ರೀ ಉಳ್ಳಾಲ್ತಿ ದೈವಸ್ಥಾನ ಕೆಲಿಂಜ Read More »

ಪಣೋಲಿಬೈಲಿನಲ್ಲಿ ಕೋಲದ ಹರಕೆ ತೀರಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ | ಮುಸ್ಲಿಂ ಮುಖಂಡರೊಬ್ಬರಿಂದ ವಿರೋಧಿಸಿ ಪೋಸ್ಟ್ ಹಂಚಿಕೆ

ಮಂಗಳೂರು: ಇಷ್ಟಾರ್ಥ ಸಿದ್ಧಿಗಾಗಿ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲ ನೆರವೇರಿಸಿದ್ದು, ಇದೀಗ ಮುಸ್ಲಿಂ  ಮುಖಂಡರೋರ್ವರು ವಿರೋಧ ವ್ಯಕ್ತಪಡಿಸಿದ್ದಾರೆ. ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದ ಖಾದ‌ರ್ ಪ್ರದಾಯ ಬದ್ಧವಾಗಿ ಕೋಲ ನೆರವೇರಿಸಿ ಕಲ್ಲುರ್ಟಿ- ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದರು.. ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬುವವರು ಯು.ಟಿ. ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಕೊರಗಜ್ಜನ ಭಕ್ತ ಯು.ಟಿ ಖಾದರ್ ನನ್ನು ಮುಸ್ಲಿಮರು

ಪಣೋಲಿಬೈಲಿನಲ್ಲಿ ಕೋಲದ ಹರಕೆ ತೀರಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ | ಮುಸ್ಲಿಂ ಮುಖಂಡರೊಬ್ಬರಿಂದ ವಿರೋಧಿಸಿ ಪೋಸ್ಟ್ ಹಂಚಿಕೆ Read More »

error: Content is protected !!
Scroll to Top