ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ | ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಪುನೀತರಾದ ಲಕ್ಷಾಂತರ ಭಕ್ತರು
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅತ್ಯಂತ ವೈಭವದಿಂದ ನಡೆಯುತ್ತಿದ್ದು, ಜಾತ್ರೋತ್ಸವದ ಅಂಗವಾಗಿ ಬುಧವಾರ ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಕಿರುವಾಳು ಭಂಡಾರ ಆಗಮನವಾಯಿತು. ಲಕ್ಷಾಂತರ ಭಕ್ತಾದಿಗಳು ಈ ಸಂದರ್ಭವನ್ನು ಕಣ್ತುಂಬಿಕೊಂಡರು. ಸಂಜೆ 6 ಗಂಟೆಗೆ ಸೂಟೆ ಬೆಳಕಿನೊಂದಿಗೆ ಹೊರಟ ಕಿರುವಾಳು ಬರುವ ದಾರಿಯುದ್ದಕ್ಕೂ ಅಲ್ಲಲ್ಲಿ ಸ್ಥಳೀಯರು ಪಾನೀಯ ವ್ಯವಸ್ಥೆಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಮಲ್ಲಿಗೆ ಅರ್ಪಿಸಿದರು. ರಾತ್ರಿ ಸುಮಾರು 10.30 ಗಂಟೆ ಹೊತ್ತಿಗೆ ಕಿರುವಾಳು ಶ್ರೀ ದೇವಸ್ಥಾನವನ್ನು ತಲುಪಿತು. […]










