ಧಾರ್ಮಿಕ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ

ಪುತ್ತೂರು: ಮಾತಾ ಪಿತರ ಋಣ, ದೇವ ಋಣ, ಋಷಿ  ಋಣ ಇತ್ಯಾದಿಗಳು ನಮಗಿದ್ದು, ಅವುಗಳನ್ನು ತೀರಿಸುವುದು ನಮ್ಮ ಕರ್ತವ್ಯ. ಅದೇ ರೀತಿ ನಾವು ದೇವರನ್ನು ಭಕ್ತಿಯಿಂದ ನಂಬಿದರೆ ಭಕ್ತರ ಋಣ ತೀರಿಸಲು ಭಗವಂತ ಕೂಡ ಕಾಯುತ್ತಾನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ, ತಾಲೂಕು ಗೊಲ್ಲ (ಯಾದವ ) ಸಂಘ, ಯಾದವ ಸಭಾ ತಾಲೂಕು ಸಮಿತಿ ಸಹಯೋಗದಲ್ಲಿ  ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ […]

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ Read More »

ಕುದ್ಮಾರು ಸ್ಕಂದಗಣೇಶ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವದ  ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

ಕಡಬ: ತಾಲೂಕಿನ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ.7 ರಂದು ನಡೆಯುವ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಸೋಮವಾರ ಸ್ಕಂದಗಣೇಶ ನಗರದಲ್ಲಿ ನಡೆಯಿತು. ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಮಡಕೆ ಒಡೆಯುವುದು ಮುಂತಾದ ಸ್ಪರ್ಧೆಗಳು ನಡೆದವು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕುದ್ಮಾರು ಸ್ಕಂದಗಣೇಶ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವದ  ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ Read More »

ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು: ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಗೆ ಕೃಷ್ಣ-ರಾಧೆಯರ ವೇಷ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ | ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ. 2)ಜನ್ಮ ದಿನಾಂಕ ಜುಲೈ 19 ಕ್ರಿಪೂ 3228 3) ತಿಂಗಳು : ಶ್ರಾವಣ 4) ದಿನ :  ಅಷ್ಟಮಿ 5) ನಕ್ಷತ್ರ : ರೋಹಿಣಿ 6) ದಿನ  : ಬುಧವಾರ 7) ಸಮಯ : 00:00 A.M. 8)  ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ. 9)  ಮರಣ ದಿನ 18 ಫೆಬ್ರವರಿ ಕ್ರಿಪೂ 3102 10) ಕೃಷ್ಣ 89 ವರ್ಷದವನಿದ್ದಾಗ

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ | ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ Read More »

ಆ.31 : ವಿಎಚ್‍ ಪಿ ವತಿಯಿಂದ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ | ಆ.24 ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ

ಪುತ್ತೂರು: ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ವಿಶ್ವ ಹಿಂದೂ ಪರಿಷದ್ ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರಂಭಗೊಂಡ

ಆ.31 : ವಿಎಚ್‍ ಪಿ ವತಿಯಿಂದ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ, ಶೋಭಾಯಾತ್ರೆ | ಆ.24 ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ Read More »

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮೂರು ದಿನಗಳ ಶ್ರೀ ಗುರು ಸಾರ್ವಭೌಮರ  ಆರಾಧನಾ ಮಹೋತ್ಸವಕ್ಕೆ ಮಂಗಳವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ನಡೆದು ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ರಾತ್ರಿ ಮಹಾಪೂಜೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಸೇವೆ ನಡೆಯಿತು. ಬುಧವಾರ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ಫಲ ಪಂಚಾಮೃತಾಭಿಷೇಕ, ಶ್ರೀ ಗುರುಗಳ ಆರಾಧನೆ, ಮಹಾಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ Read More »

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ | ನಾರಾಯಣ ಗುರುಗಳು ಮೋಡದ ಮಧ್ಯೆ ಮೂಡಿ ಬಂದ ಬೆಳ್ಳಿರೇಖೆ : ಪ್ರೊ. ಎ.ಕೃಷ್ಣಪ್ಪ ಪೂಜಾರಿ

ಪುತ್ತೂರು: ಶೋಷಣೆಯ ಸುಳಿಗೆ ಸಿಲುಕಿದ್ದ ಬಿಲ್ಲವ ಸಮಾಜ ಇಂದು ಈ ಹಂತಕ್ಕೆ ತಲುಪಲು ನಾರಾಯಣ ಗುರುಗಳ ಸಂದೇಶ, ಮಾರ್ಗದರ್ಶನ ಕಾರಣ. ಅನ್ನ, ನೀರು, ಭೂಮಿ, ತಂದೆ- ತಾಯಿಗಳ ಋಣ ನಮ್ಮ ಮೇಲೆ ಇರುವಂತೆ ಎಲ್ಲ ತುಳಿತಕ್ಕೆ ಒಳಗಾದ ಸಮಾಜಗಳಿಗೆ ನಾರಾಯಣ ಗುರುಗಳ ಋಣವಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಬೆಳ್ತಂಗಡಿಯ ಪ್ರೊ..ಎ.ಕೃಷ್ಣಪ್ಪ ಪೂಜಾರಿ ಹೇಳಿದರು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಪುತ್ತೂರು ನಾರಾಯಣ ಗುರು ಸಭಾಭವನದಲ್ಲಿ 

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ | ನಾರಾಯಣ ಗುರುಗಳು ಮೋಡದ ಮಧ್ಯೆ ಮೂಡಿ ಬಂದ ಬೆಳ್ಳಿರೇಖೆ : ಪ್ರೊ. ಎ.ಕೃಷ್ಣಪ್ಪ ಪೂಜಾರಿ Read More »

14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ | ಸ್ಟಿಕ್ಕರ್ ಅಭಿಯಾನ

ಪುತ್ತೂರು: ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ನೇತೃತ್ವದಲ್ಲಿ ಆ.31 ರಂದು ನಡೆಯುವ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಪ್ರಚಾರಾರ್ಥ ಅಂಗವಾಗಿ ಸ್ಟಿಕ್ಕರ್ ಅಭಿಯಾನ ಭಾನುವಾರ ನಡೆಯಿತು. ಪುತ್ತೂರು ನಗರದಲ್ಲಿ ಆಟೋರಿಕ್ಷಾಗಳಿಗೆ ಕಾರ್ಯಕ್ರಮದ ಪ್ರಚಾರರ್ಥ ಸ್ಟಿಕ್ಕರ್ ಅಭಿಯಾನ ನಡೆಯಿತು ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ | ಸ್ಟಿಕ್ಕರ್ ಅಭಿಯಾನ Read More »

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ | ಶ್ರೀ ಕೃಷ್ಣ ಲೀಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೀರಮಂಗಲ ವೈಷ್ಣವಿ ಮಹಿಳಾ ಮಂಡಲದ 23ನೇ ವರ್ಷಾಚರಣೆ ಪ್ರಯುಕ್ತ 12ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಕಲಾ ಕೇಂದ್ರದ 21ನೇ ವರ್ಷಾಚರಣೆ ಪ್ರಯುಕ್ರ 4ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ, ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್‍ ಕೋಡಿಬೈಲು, ಕಾರ್ಯದರ್ಶಿ ಹರ್ಷ ಗುತ್ತು, ವೀರಮಂಗಲ ಪಿಎಂಶ್ರೀ

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ | ಶ್ರೀ ಕೃಷ್ಣ ಲೀಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಸವಣೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಸವಣೂರಿನಲ್ಲಿ ನಡೆಯಿತು. ಸಮಿತಿ ಗೌರವಾಧ್ಯಕ್ಷರಾದ ಕೆ. ಸೀತಾರಾಮ ರೈ ಸವಣೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು,  ಉಪಾಧ್ಯಕ್ಷ ರಾಘವ ಗೌಡ ಗುರುಪುತ್ತಾರು, ಜೊತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ನಡುಬೈಲು, ಕೋಶಧಿಕಾರಿ ರಾಮಕೃಷ್ಣ ಪ್ರಭು, ಸದಸ್ಯರಾದ ಸುಂದರ ರೈ ಸವಣೂರು, ಸಂಜೀವ ಪೂಜಾರಿ ಅಗರಿ, ಗಂಗಾಧರ ಪೆರಿಯಡ್ಕ, ವೆಂಕಪ್ಪ

ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top