ಧಾರ್ಮಿಕ

ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹುಟ್ಟುಹಬ್ಬ ಆಚರಣೆ

ಪುತ್ತೂರು: ಯುವಿಕ ಪಟ್ಟೆ ಎಂಬ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಳ್ಳಲಾಗಿದೆ. ಬಿರಮಲೆ ಗುಡ್ಡದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಮಧ್ಯಾಹ್ನ ಮಗುವಿನ ಹುಟ್ಟುಹಬ್ಬವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ನಡೆಯಿತು. ಕೇಕ್ ಕತ್ತರಿಸಿ, ಮೊಂಬತ್ತಿ ಬೆಳಗಿಸಿ, ಪಾರ್ಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸುವ ಇಂದಿನ ದಿನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಮಗುವಿಗೆ ಹಾಗೂ ಜನರಿಗೆ ದೇಶಪ್ರೇಮದ ಪ್ರಜ್ಞೆ ಜಾಗೃತವಾಗಿಸಲು ಇದು ಸಹಕಾರಿಯಾಗಿದೆ. ಕುಟುಂಬ ಸದಸ್ಯರ […]

ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹುಟ್ಟುಹಬ್ಬ ಆಚರಣೆ Read More »

ಪುತ್ತೂರು ದೇಗುಲದಲ್ಲಿ ಎಸ್.ಪಿ.ವೈ.ಎಸ್.ಎಸ್.ನಿಂದ 108 ಸೂರ್ಯ ನಮಸ್ಕಾರ

ಪುತ್ತೂರು: ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು. ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ರಾಮದಾಸ ಗೌಡ, ಸಮಿತಿಯ ಪ್ರಾಂತ ಸಂಚಾಲಕ ಹರೀಶ್, ಕಾರ್ಯಕ್ರಮ ಸಂಚಾಲಕ ರಾಮಚಂದ್ರ, ಸಮಿತಿಯ ಮಹಾಲಿಂಗೇಶ್ವರ ಶಾಖೆಯ ಮುಖ್ಯ ಶಿಕ್ಷಕಿ ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು. ಅ.ರಾ. ರಾಮಸ್ವಾಮಿ

ಪುತ್ತೂರು ದೇಗುಲದಲ್ಲಿ ಎಸ್.ಪಿ.ವೈ.ಎಸ್.ಎಸ್.ನಿಂದ 108 ಸೂರ್ಯ ನಮಸ್ಕಾರ Read More »

ಸಂಪ್ಯ – ಕುಂಜೂರುಪಂಜ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಸಂಪ್ಯದಿಂದ ಕುಂಜೂರು ಪಂಜ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ 50 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಕಾಮಗಾರಿಗೆ ಜ. 27ರಂದು ಚಾಲನೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ತಾಯಿಯ ಪಾತ್ರ ನಿರ್ವಹಿಸುತ್ತಾರೆ. ಹಲವು ಮಕ್ಕಳನ್ನು ತನ್ನ ಮಕ್ಕಳಂತೆ ಶಿಕ್ಷಕರು ಪೋಷಿಸುತ್ತಾರೆ, ಶಿಕ್ಷಣ ನೀಡುತ್ತಾರೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪ್ರೋತ್ಸಾಹ ನೀಡುತ್ತಾ, ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸವೂ ಶಾಲೆಗಳಲ್ಲಿ ಆಗುತ್ತದೆ ಎಂದರು.ಪ್ರೀತಮ್ ಪುತ್ತೂರಾಯ ಮಾತನಾಡಿ, ಮುಂದಿನ ಪೀಳಿಗೆಗೆ ಅನುಕೂಲ ಆಗುವಂತೆ ಕುಂಜೂರುಪಂಜದಿಂದ

ಸಂಪ್ಯ – ಕುಂಜೂರುಪಂಜ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು Read More »

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು  ಹೊನಲು‌ ಬೆಳಕಿನ 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಬೆಳಿಗ್ಗೆ ಚಾಲನೆ ನೀಡಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಿದ್ದರು. ಈ ಸಂದರ್ಭದಲ್ಲಿ  ಕಂಬಳ ಸಮಿತಿ ಗೌರವ

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆ Read More »

ಶ್ರೀ ಸವಿತಾ ಮಹರ್ಷಿ ಜಯಂತಿ

ಪುತ್ತೂರು:ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ‌ ವತಿಯಿಂದ  ಶ್ರೀ ಸವಿತಾ ಮಹರ್ಷಿ ಜಯಂತಿ ಶನಿವಾರ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು‌. ಪುತ್ತೂರು ಉಪವಿಭಾಗಾಧಿಕಾರಿ  ಗಿರೀಶ್ ನಂದನ್ ಸಂಸ್ಮರಣ ಜ್ಯೋತಿ ಪ್ರಜ್ವಲನೆ ಮಾಡಿ, ಸವಿತಾ ಸಮಾಜದವರು ಯಾವುದೇ ಮತ, ಭೇದವಿಲ್ಲದೆ ಸೇವೆ ಮಾಡುತ್ತಿದ್ದಾರೆ. ಸಮಾಜದ‌ ಶ್ರಿ ಸವಿತಾ ಮಹರ್ಷಿಗಳ ಆದರ್ಶ ಇಂದಿಗೂ ಪ್ರಸ್ತುತ. ಸಮಾಜದವರು ಉತ್ತಮ ಸೇವೆ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡುವಂತಾಗಲಿ ಎಂದರು. ಗ್ರೇಡ್ 2 ತಹಶೀಲ್ದಾರ್ ದಯಾನಂದ ಸ್ವಾಗತಿಸಿದರು. ತಾಲೂಕು ಸವಿತಾ

ಶ್ರೀ ಸವಿತಾ ಮಹರ್ಷಿ ಜಯಂತಿ Read More »

ಪುರುಷರಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ

ಪುತ್ತೂರು: ಪುರುಷರಕಟ್ಟೆ ಶಿವಾಜಿ ಹಿಂದು ಜಾಗರಣ ವೇದಿಕೆ ಇವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆಯು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಬಗದಲ್ಲಿ ಇಂದು ಬೆಳಿಗ್ಗೆ ಗಣಹೋಮ ನಡೆಯಿತು. ಸಂಜೆ ಗಂಟೆ 6:30 ರಿಂದ ದುರ್ಗಾ ಪೂಜೆ ಹಾಗೂ ವನದುರ್ಗಂಬಿಕಾ ಭಜನಾ ಮಂಡಳಿ, ದೇವಿನಗರ ಪುರುಷರಕಟ್ಟೆ  ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7:30 ಕ್ಕೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ, 9.30ರಿಂದ ವಿಶ್ವಕಲಾನಿಕೇತನ ಇನ್ ಸ್ಟಿಟ್ಯೂಷನ್  ಆಫ್ ಆರ್ಟ್ಸ್ &ಕಲ್ಚರಲ್ ಪುತ್ತೂರು ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ

ಪುರುಷರಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ Read More »

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.3 ಹಾಗೂ 4 ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ‌ ಮುಹೂರ್ತ ಶುಕ್ರವಾರ ಬೆಳಿಗ್ಗೆ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ‌ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರ್ಚಕ ಸದಾಶಿವ ಹೊಳ್ಳ ಗೊನೆ‌ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪತಿ ಬೈಪಡಿತ್ತಾಯ, ಶ್ರೀಧರ ಬೈಪಡಿತ್ತಾಯ, ಸದಸ್ಯರು, ಊರ ಭಕ್ತಾಧಿಗಳು‌ ಉಪಸ್ಥಿತರಿದ್ದರು.

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

ಫೆ‌. 1: ಮಡಿವಾಳ ಮಾಚಿದೇವ ಜಯಂತಿ‌ ದಿನಾಚರಣೆ‌

ಪುತ್ತೂರು : ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ‌ ವತಿಯಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿ‌ ದಿನಾಚರಣೆ‌ ಫೆ.1 ಬುಧವಾರ ಬೆಳಿಗ್ಗೆ‌ 10.30 ಕ್ಕೆ ತಾಲೂಕು ಆಡಳಿತ ಸೌಧದ ತಾಲೂಕು ಕಛೆರಿ ಸಭಾಂಗಣದಲ್ಲಿ ನಡೆಯಲಿದೆ. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಸಂಸ್ಕರಣಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ  ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪೂಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣ್ವ, ಪೊಲೀಸ್ ಉಪಾಧೀಕ್ಷಕ ವೀರಯ್ಯ

ಫೆ‌. 1: ಮಡಿವಾಳ ಮಾಚಿದೇವ ಜಯಂತಿ‌ ದಿನಾಚರಣೆ‌ Read More »

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆ

ಪುತ್ತೂರು: ಇಂದು ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವನ್ನು ಅಸ್ಥಿತ್ವಗೊಳಿಸಿದ ದಿನ. ಜನರು ತಮ್ಮ ಸ್ವಂತ ಆಯ್ಕೆಯ ಪ್ರಕಾರ ದೇಶದ ಆಡಳಿತಗಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ನಾವು ಸಂವೇದನಾಶೀಲರಾಗಿ ಆಯ್ಕೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್. ಹೇಳಿದರು. ಕಾಲೇಜಿನಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮಾಡಿ ಮಾತನಾಡಿದರು.ಅಸಂಖ್ಯಾತ ನೇತಾರರು, ತ್ಯಾಗ ಬಲಿದಾನದ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆ Read More »

ಕಾರ್ಪಾಡಿ ದೇವಳದ ಜೀರ್ಣೋದ್ಧಾರ ಹಿನ್ನೆಲೆ: ಬೈಲ್ವಾರು ಸಭೆ

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಒಳತ್ತಡ್ಕ, ಗೆಣಸಿನಕುಮೇರು, ಮೇಗಿನಪಂಜ, ಬಂಗಾರಡ್ಕ, ಕುಂಜೂರುಪಂಜ, ದೊಡ್ಡಡ್ಕ  ಭಾಗದ ಭಕ್ತಾಧಿಗಳ ಬೈಲ್ವಾರ್ ಸಭೆ  ದೇವಸ್ಯದ ಧರ್ಮಸ್ಥಳ ಸಭಾ ಭವನದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ವ್ಯವಸ್ಥಾಪನಾ ಸಮತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಜತೆ ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಉಪಾಧ್ಯಕ್ಷ ನಾರಾಯಣ ನಾಯ್ಕ್ ಗೆಣಸಿನ ಕುಮೇರ್ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ರುಕ್ಮಯ ಕುಲಾಲ್ ಸ್ವಾಗತಿಸಿದರು.

ಕಾರ್ಪಾಡಿ ದೇವಳದ ಜೀರ್ಣೋದ್ಧಾರ ಹಿನ್ನೆಲೆ: ಬೈಲ್ವಾರು ಸಭೆ Read More »

error: Content is protected !!
Scroll to Top