ಮಾ.22-23 : ನೇಮೋತ್ಸವ ಶ್ರೀ ಬ್ರಹ್ಮ ಆದಿಮೊಗೇರ್ಕಳ, ಶ್ರೀ ಚಾಮುಂಡೇಶ್ವರೀ ಅಮ್ಮ, ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಶ್ರೀ ಬ್ರಹ್ಮ ಆದಿಮೊಗೇರ್ಕಳ, ಶ್ರೀ ಚಾಮುಂಡೇಶ್ವರೀ ಅಮ್ಮನವರ ಸೇವಾ ಸಮಿತಿ ವತಿಯಿಂದ ಮಾ.22 ಹಾಗೂ 23 ರಂದು ನಡೆಯುವ 5ನೇ ವರ್ಷದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಕರ ಸಂಕ್ರಮಣ ದಿನವಾದ ಮಂಗಳವಾರ (ಇಂದು) ಶ್ರೀ ಕೊರಗಜ್ಜನ ಸನ್ನಿಧಿಯಲ್ಲಿ ಬಿಡುಗಡೆಗೊಂಡಿತು. ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ನೇಮೋತ್ಸವ ಶ್ರೀ ಬ್ರಹ್ಮ ಆದಿಮೊಗೇರ್ಕಳ, ಶ್ರೀ ಚಾಮುಂಡೇಶ್ವರೀ ಅಮ್ಮ, ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಲಿದೆ. […]