ಇಂದಿನಿಂದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ
ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ.15ರಿಂದ ಫೆ.17ರ ತನಕ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವೀರಮಂಗಲ ಕ್ಷೇತ್ರವು ಪ್ರಾಚೀನ ಕಾಲದಲ್ಲಿ ನಿತ್ಯಮಂಗಲ ಎಂಬ ಹೆಸರನ್ನು ಪಡೆದಿತ್ತು. ತದನಂತರ ಬಲ್ಲಾಳ ಮನೆತನದ ವೀರಮ್ಮ ಬಳ್ಳಾಲ್ತಿಯ ಶೌರ್ಯದ ಪ್ರತೀಕವಾಗಿ ವೀರಮಂಗಲವಾಯಿತೆಂಬ ಇತಿಹಾಸವಿದೆ. ಈ ಊರಿನ ಭಕ್ತರ ಪ್ರತೀಕವಾಗಿ ಪುಣ್ಯವಾಹಿನಿ ಕುಮಾರಧಾರ ನದಿ ತಟದಲ್ಲಿ ಕಂಗೊಳಿಸುವ ಪವಿತ್ರ ಕ್ಷೇತ್ರವಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ಸಂದರ್ಭ ವೀರಮಂಗಲ ಶ್ರೀ ವಿಷ್ಣುಮೂರ್ತಿ […]
ಇಂದಿನಿಂದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ Read More »