ಧಾರ್ಮಿಕ

ನಾಳೆ (ಜೂ.14) : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡಿ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶ ಜೂ.14 ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಮಧ್ಯಾಹ್ನ 11.10 ರ ಸಿಂಹಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೇವರಿಗೆ ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ ನಡೆಯಲಿದೆ. 12.30 ರಿಂದ ಮಹಾಪೂಜೆ, […]

ನಾಳೆ (ಜೂ.14) : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾ ಕಲಶ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಜೂ.12 ರಂದು ಸೋಮವಾರ ಪಾದುಕನ್ಯಾಸ ಕಾರ್ಯಕ್ರಮ ನೆರವೇರಿತು.    ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಪೂಜಾವಿಧಾನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ,  ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ವ್ಯವಸ್ಥಾಪನಾ ಸಮಿತಿಯ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ Read More »

ಉತ್ತಮ ಮಳೆಗಾಗಿ ರುದ್ರ ಪಠಣ, ಪರ್ಜನ್ಯ ಜಪ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ

ಪುತ್ತೂರು: ಉತ್ತಮ ಮಳೆಗಾಗಿ ವೇದ ಸಂವರ್ಧನಾ ಪ್ರತಿಷ್ಟಾನದಿಂದ ರುದ್ರ ಪಠಣ, ಪರ್ಜನ್ಯ ಜಪ ಮತ್ತು ಭಕ್ತರಿಂದ ಸಾಮೂಹಿಕ ಪ್ರಾರ್ಥನೆಯು ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ತಡವಾದ ಮಳೆಯು ಪ್ರಕೃತಿಯ ಸಮತೋಲನ ಮೇಲೆ ಪರಿಣಾಮ ಬೀರುವುದರಿಂದ ಎಲ್ಲಾ ವ್ಯವಸ್ಥೆಯಲ್ಲೂ ಸಮಸ್ಯೆ ಆಗದಂತೆ ಲೋಕಕ್ಷೇಮ ಮತ್ತು ಉತ್ತಮ ಮಳೆಗಾಗಿ ಪರ್ಜನ್ಯ ಜಪವನ್ನು ಮಾಡಲಾಯಿತು. ದೇವಳದ ಗೋಪುರದಲ್ಲಿ ರುದ್ರ ಪಠಣ, ಪರ್ಜನ್ಯ ಜಪ ಮಾಡಲಾಯಿತು

ಉತ್ತಮ ಮಳೆಗಾಗಿ ರುದ್ರ ಪಠಣ, ಪರ್ಜನ್ಯ ಜಪ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ Read More »

ಅರುಣ್ ಕುಮಾರ್ ಪುತ್ತಿಲದಿಂದ ಪೇಜಾವರ ಮಠಾಧೀಶರಿಗೆ ಪಾದ ಪೂಜೆ

ಪುತ್ತೂರು: ಪೇಜಾವರ ಮಠಾಧೀಶರಾದ ಶ್ರೀ ಶ್ರೀ  ವಿಶ್ವಪ್ರಸನ್ನತೀರ್ಥ ಸ್ವಾಮಿಜೀ ಯವರು ಅರುಣ್ ಕುಮಾರ್ ಪುತ್ತಿಲರ ಮನೆಯಲ್ಲಿ ಜೂ.9 ಶುಕ್ರವಾರ ವಾಸ್ತವ್ಯ ಮಾಡಿದರು. ಅರುಣ್ ಕುಮಾರ್ ಪುತ್ತಿಲ ದಂಪತಿ ಸ್ವಾಮೀಜಿಯವರ ಪಾದ ಪೂಜೆ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಅರುಣ್ ಪುತ್ತಿಲರಲ್ಲಿ ಹಲವು ಮಾತುಕತೆ ನಡೆಸಿದರು. ಸ್ವಾಮೀಜಿ ಜೊತೆ ಪೇಜಾವರ ಆಪ್ತ ವರ್ಗ ಕೂಡ ಆಗಮಿಸಿತ್ತು.

ಅರುಣ್ ಕುಮಾರ್ ಪುತ್ತಿಲದಿಂದ ಪೇಜಾವರ ಮಠಾಧೀಶರಿಗೆ ಪಾದ ಪೂಜೆ Read More »

ನಾಳೆ (ಜೂ.11) : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಜೂ.11 ಭಾನುವಾರ ಬೆಳಿಗ್ಗೆ 8 ರಿಮದ 11.15 ತನಕ ನಡೆಯಲಿದೆ. ವೇದ ಸಂವರ್ಧನಾ ಪ್ರತಿಷ್ಠಾನದಿಂದ ರುದ್ರ ಪಠಣ, ಪರ್ಜನ್ಯ ಜಪ ಮತ್ತು ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಈ ಲೋಕ ಕ್ಷೇಮಕರ ಕಾರ್ಯದಲ್ಲಿ ಭಾಗವಹಿಸಿ ಕೃತಾರ್ಥರಾಗೋಣ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜೂ.11) : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ Read More »

ದುಡಿಮೆಯ ಒಂದು ಭಾಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿ : ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು | ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಪುತ್ತೂರು: ಹಿಂದೂ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದ್ದು ನಮ್ಮ ಕರ್ತವ್ಯವಾಗಿದ್ದು, ಇದಕ್ಕಾಗಿ ನಮ್ಮ ದುಡಿಮೆಯ ಒಂದು ಭಾಗವನ್ನು ಅರ್ಪಣೆ ಮಾಡಬೇಕು. ಹೀಗಾದಲ್ಲಿ ದೇವಸ್ಥಾನಗಳಿಗೆ ಚೈತನ್ಯ ಬರುವ ಜತೆಗೆ ನಮ್ಮ ಜೀವನವೂ ನೆಮ್ಮದಿಯಿಂದಿರಲು ಸಾಧ್ಯ ಎಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. 800 ವರ್ಷ ಇತಿಹಾಸ ಇರುವ

ದುಡಿಮೆಯ ಒಂದು ಭಾಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿ : ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು | ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ Read More »

ಶಿಲಾನ್ಯಾಸ ಸಂದರ್ಭ ಕೂರ್ಮಾವತಾರಿಯಾಗಿ ಪ್ರತ್ಯಕ್ಷನಾದ ಹರಿ! | ಹರನ ಶಿಲಾನ್ಯಾಸಕ್ಕೆ ಹರಿಯೇ ತಾ ಬಂದ…| ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಶ್ರೀ ಕೇಪಳೇಶ್ವರ ದೇವಳದಲ್ಲಿ ಹೀಗೊಂದು ವಿಸ್ಮಯ

ಸವಣೂರು: ಪ್ರಾಚೀನ ದೇವಸ್ಥಾನವಾದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಳದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು. ಇದೇ ಸಂದರ್ಭ ಶಿವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶುಭಕೋರುವಂತೆ ವಿಷ್ಣುವಿನ ಅವತಾರವಾದ ಕೂರ್ಮ (ಆಮೆ) ಪ್ರತ್ಯಕ್ಷವಾದ ಘಟನೆಗೆ ಬರೆಪ್ಪಾಡಿ ದೇವಳ ಸಾಕ್ಷಿಯಾಯಿತು. ದೇವಸ್ಥಾನ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಶಿಲಾನ್ಯಾಸ ನಡೆಯುತ್ತಿದೆ. ಹೀಗೆ ನಡೆಯುವ ಶಿಲಾನ್ಯಾಸಕ್ಕೆ ಒಂದು ಹೊಂಡವನ್ನು ನಿರ್ಮಿಸಲಾಗಿತ್ತು. ಶನಿವಾರ ಮುಂಜಾನೆ ಬಂದು ಶಿಲಾನ್ಯಾಸದ ಹೊಂಡ ನೋಡಿದರೆ, ಅಲ್ಲೊಂದು ಆಮೆ ಕಾರ್ಯಕ್ರಮಕ್ಕೆ ಶುಭಕೋರುವಂತೆ ಕುಳಿತಿತ್ತು. ನೆರೆದಿದ್ದ ಭಕ್ತ ಸಮೂಹಕ್ಕೆ ಆಶ್ಚರ್ಯವೋ ಆಶ್ಚರ್ಯ.

ಶಿಲಾನ್ಯಾಸ ಸಂದರ್ಭ ಕೂರ್ಮಾವತಾರಿಯಾಗಿ ಪ್ರತ್ಯಕ್ಷನಾದ ಹರಿ! | ಹರನ ಶಿಲಾನ್ಯಾಸಕ್ಕೆ ಹರಿಯೇ ತಾ ಬಂದ…| ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಶ್ರೀ ಕೇಪಳೇಶ್ವರ ದೇವಳದಲ್ಲಿ ಹೀಗೊಂದು ವಿಸ್ಮಯ Read More »

ಜೂ. 10: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾನ್ಯಾಸ | ಜೀರ್ಣೋದ್ಧಾರ ಸಿದ್ಧತೆಯಲ್ಲಿರುವ ಪ್ರಾಚೀನ ದೇವಳ

ಸವಣೂರು: ಇಲ್ಲಿನ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂರ್ವಭಾವಿಯಾಗಿ ಜೂನ್ 10ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6.58ರಿಂದ 7.55ರ ನಡುವಿನ ಸಮುಹೂರ್ತದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಆರು ಗ್ರಾಮದ ಭಕ್ತಾದಿಗಳು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಂಚಿತವಾಗಿ ಹಾಜರಿರುವಂತೆ ಕೋರಲಾಗಿದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸೀಯಾಳ, ತೆಂಗಿನಕಾಯಿ, ತರಕಾರಿ, ಹೂವು, ಬಾಳೆ ಎಲೆ ಅಗತ್ಯವಿದ್ದು, ಭಕ್ತಾದಿಗಳು ನೀಡಬಹುದು ಎಂದು ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ.

ಜೂ. 10: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾನ್ಯಾಸ | ಜೀರ್ಣೋದ್ಧಾರ ಸಿದ್ಧತೆಯಲ್ಲಿರುವ ಪ್ರಾಚೀನ ದೇವಳ Read More »

ಇಂದು ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನದ ಲೋಕಾರ್ಪಣೆ | ಜಮ್ಮುವಿನ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ದೇವಾಲಯ

ಜಮ್ಮು: ಜಮ್ಮು ಮತ್ತು ಕಾಶ್ಮೀರ್ ಮಜೀನ್‍ನ ಶಿವಾಲಿಕ್ ಕಾಡುಗಳ ಮಧ್ಯೆ ಇರುವ ಸುಂದರವಾದ ತಿರುಪತಿ ಬಾಲಾಜಿ ದೇವಾಲಯ ಇಂದು ಉದ್ಘಾಟನೆಗೊಳ್ಳಲಿದೆ. ಜೂ.8 ರಂದು ಭಕ್ತಾದಿಗಳಿಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶ್ರೀ ವೆಂಕಟೇಶ್ವರ ದೇವಾ;ಲಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 62 ಎಕ್ರೆ ಜಾಗದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಜಮ್ಮು ಪ್ರದೇಶದ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಲಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ತಿರುಪತಿ ಬಾಲಾಜಿ ದೇವಾಲಯ ಆಂಧ್ರಪ್ರದೇಶದ

ಇಂದು ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನದ ಲೋಕಾರ್ಪಣೆ | ಜಮ್ಮುವಿನ ಅತೀ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ದೇವಾಲಯ Read More »

ನಾಳೆ (ಜೂ.8) : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ

ಸವಣೂರು: ಸವಣೂರು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೂ.8 ರಂದು ರಂಗ ಪೂಜೆ ನಡೆಯಲಿದೆ. ಸವಣೂರು ಗ್ರಾಮದ ಕಣಿಮಜಲು ಶ್ರೀ ಬೂಡು ಸಾನಿಧ್ಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಪರಿಹಾರರ್ಥ ಹಾಗೂ ಕ್ಷೇತ್ರ ಸಾನಿಧ್ಯ ಜೀರ್ಣೋದ್ಧಾರಕ್ಕಾಗಿ ಈ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುವಾರ  ಬೆಳಿಗ್ಗೆ 10ಕ್ಕೆ ಪವಮಾನ ಅಭಿಷೇಕ ,ಸಂಜೆ 7 ಕ್ಕೆ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದರು.

ನಾಳೆ (ಜೂ.8) : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ Read More »

error: Content is protected !!
Scroll to Top