ಧಾರ್ಮಿಕ

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ

ದೇವಾಲಯದ ಸಂಪ್ರದಾಯ, ಭಕ್ತರ ನಂಬಿಕೆ ಎತ್ತಿ ಹಿಡಿಯಲು ಆದ್ಯತೆ ತಿರುವಂತಪುರ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂಬ ಮಹತ್ವದ ತೀರ್ಮಾನವನ್ನು ತಿರುವಾಂಕೂರು ದೇವಸ್ವಂ ಮಂಡಳಿ ತೆಗೆದುಕೊಂಡಿದೆ. ಋತುಮತಿಯರಾಗುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್‌ 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ದೇವಸ್ವಂ ಬೋರ್ಡ್‌ ಅಧ್ಯಕ್ಷ ಕೆ.ಜಯಕುಮಾರ್ ತಿಳಿಸಿದ್ದಾರೆ. ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ. […]

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ Read More »

ನಾಳೆ ಚಂದ್ರ ಗ್ರಹಣ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

ಧರ್ಮಸ್ಥಳ: ಮಂಗಳವಾರ ಚಂದ್ರ ಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಸೇರಿದಂತೆ ಕರಾವಳಿಯ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ಪೂಜೆಯ ಸಮಯದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1.30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1.30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ

ನಾಳೆ ಚಂದ್ರ ಗ್ರಹಣ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ Read More »

ದೇವಸ್ಥಾನಗಳಲ್ಲಿ ರೀಲ್ಸ್‌ ಶೂಟಿಂಗ್‌ ಮಾಡಲು ತೆರಬೇಕು ಶುಲ್ಕ!

ಯೂಟ್ಯೂಬರ್ಸ್‌, ರೀಲ್ಸ್‌ ಮಾಡುವವರ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮ ಬೆಂಗಳೂರು : ಇನ್ನು ಮುಂದೆ ದೇವಸ್ಥಾನಗಳಲ್ಲಿ ರೀಲ್ಸ್‌ ಮತ್ತಿತರ ಉದ್ದೇಗಳಿಗೆ ಶೂಟಿಂಗ್‌ ಮಾಡಬೇಕಾದರೆ ಶುಲ್ಕ ಪಾವತಿಸಬೇಕು. ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ. ರಾಜ್ಯದ ಎಲ್ಲ ಎ ಮತ್ತು ಬಿ

ದೇವಸ್ಥಾನಗಳಲ್ಲಿ ರೀಲ್ಸ್‌ ಶೂಟಿಂಗ್‌ ಮಾಡಲು ತೆರಬೇಕು ಶುಲ್ಕ! Read More »

ಫೆ.20: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠೆ

ವಿಟ್ಲ: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಫೆ.20 ರಂದು ನಡೆಯಲಿದೆ. ಸುಮಾರು 300 ವರ್ಷಗಳ ಹಿಂದೆ ವಿಟ್ಲ ಅರಮನೆಯ ರಾಜರ ಆಳ್ವಿಕೆಯ ಕಾಲದಲ್ಲಿ ಜನರಿಗೆ ಹಾಗೂ ಕೃಷಿ ಬೆಳೆಗಳಿಗೆ ಪಕ್ಷಿ ಮೃಗಾದಿಗಳ ಉಪದ್ರವಗಳು ಜಾಸ್ತಿಯಾದಗ ಆಗಿನ ರಾಜರ ಸೂಚನೆ ಮೇರೆಗೆ ಒತ್ತೆಸಾರು ಕುಟುಂಬಸ್ಥರ ಹಿರಿಯರು ಹುಲಿ, ಹಂದಿ, ಪಕ್ಷಿ ಮೃಗಾದಿಗಳನ್ನು ಬೇಟೆಯಾಡಿ ಹಿಡಿದಿದ್ದರಿಂದ ರಾಜರಿಂದ ಪ್ರಶಸ್ತಿ ಲಭಿಸಿದ್ದು ಮತ್ತು ರಾಜರಿಂದ ಮಲರಾಯ, ಕಕ್ಕರಿ ಚಾಮುಂಡಿ ಎಂಬೀ

ಫೆ.20: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠೆ Read More »

ಕರಾವಳಿಯಲ್ಲಿ ಗುರುವಾರದಿಂದ ರಮ್ಜಾನ್‌ ಉಪವಾಸ ಆರಂಭ

ಮಂಗಳೂರು: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಗುರುವಾರದಿಂದ ಪವಿತ್ರ ರಮ್ಜಾನ್‌ ಉಪವಾಸ ಆರಂಭವಾಗಲಿದೆ. ಪವಿತ್ರ ರಮ್ಜಾನ್‌ನ ಪ್ರಥಮ ಚಂದ್ರದರ್ಶನ ಮಂಗಳವಾರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಗುರುವಾರದಿಂದ ಉಪವಾಸ ವ್ರತ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಂಗಳೂರು ಝೀನತ್ ಬಕ್ಸ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ದಾನಿ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ. ಚಂದ್ರದರ್ಶನವಾಗದ ಕಾರಣ ಗುರುವಾರದಿಂದ ರಮಝಾನ್ ಪ್ರಾರಂಭ ಎಂದು

ಕರಾವಳಿಯಲ್ಲಿ ಗುರುವಾರದಿಂದ ರಮ್ಜಾನ್‌ ಉಪವಾಸ ಆರಂಭ Read More »

ತನ್ನಿಂದ ತಾನೇ ತೂಗಿದ ದೈವದ ಮಂಚ : ಮಂಗಳೂರಿನಲ್ಲೊಂದು ವಿಸ್ಮಯದ ಘಟನೆ

ಪಿಲಿಚಂಡಿ ನೇಮೋತ್ಸವದ ವೇಳೆ ಮಹಿಮೆ ಮೆರೆಯಿತು ದೈವ ಮಂಗಳೂರು : ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆ ನಡೆದಿದೆ. ಮಂಗಳೂರು ಭಾಗದ ಶ್ರೀ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಮಂಚ ತನ್ನಿಂದ ತಾನೇ ತೂಗಿದ ದೃಶ್ಯ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗಿದ್ದು, ಇದು ದೈವದ ಮಹಿಮೆ ಎಂದೇ ಜನರು ನಂಬಿದ್ದಾರೆ. ನೇಮೋತ್ಸವ ನಡೆಯುತ್ತಿರುವಾಗಲೇ ಯಾರೋ ಕುಳಿತು ನಿಧಾನವಾಗಿ

ತನ್ನಿಂದ ತಾನೇ ತೂಗಿದ ದೈವದ ಮಂಚ : ಮಂಗಳೂರಿನಲ್ಲೊಂದು ವಿಸ್ಮಯದ ಘಟನೆ Read More »

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ : 9 ನ್ಯಾಯಾಧೀಶರ ಪೀಠದಲ್ಲಿ ಅಂತಿಮ ವಿಚಾರಣೆ

ಸಂವಿಧಾನ ಪೀಠದಲ್ಲಿ ಏ.22ರೊಳಗೆ ಮುಕ್ತಾಯವಾಗಲಿರುವ ವಿಚಾರಣೆ ನವದೆಹಲಿ: ಶಬರಿಮಲೆ ದೇಗುಲವೂ ಸೇರಿ ಕೆಲ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸುವ ತಾರತಮ್ಯ ಕುರಿತಾದ ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿ ಆದೇಶಿಸಿದೆ. ಈ ಸಾಂವಿಧಾನಿಕ ಪೀಠ ಏ.7ರಿಂದ ಅರ್ಜಿಗಳ ವಿಚಾರಣೆ ಆರಂಭಿಸಿ ಏ.22ರೊಳಗೆ ಮುಕ್ತಾಯಗೊಳಿಸಲಿದೆ. ಪುನರ್‌ ಪರಿಶೀಲನೆಯನ್ನು ಬೆಂಬಲಿಸುವವರ ಅರ್ಜಿ ಏ.7ರಿಂದ ಏ.9ರ ನಡುವೆ ವಿಚಾರಣೆಗೆ ಬರಲಿದೆ. ಆ ಬಳಿಕ ಏ.14ರಿಂದ ಏ.16ರವರೆಗೆ ತೀರ್ಪಿನ ಪುನರ್‌ ಪರಿಶೀಲನಾ ಅರ್ಜಿಗಳ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ : 9 ನ್ಯಾಯಾಧೀಶರ ಪೀಠದಲ್ಲಿ ಅಂತಿಮ ವಿಚಾರಣೆ Read More »

ಫೆ. 15: ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ಶಿವರಾತ್ರಿ ಮಹೋತ್ಸವ

ಬೆಂಗಳೂರು: ಮಹಾ ಶಿವರಾತ್ರಿಯ ಪ್ರಯುಕ್ತ ಫೆ. 15 ರಂದು ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ, H.A.L. ಮೂರನೇ ಹಂತ, ಹೊಸ ತಿಪ್ಪೆಸಂದ್ರದಲ್ಲಿ ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ ವರೆಗೆ 6 ನೇ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ಫೆ. 14 ರಂದು 10.30 ಕ್ಕೆ ಉತ್ಸವ ಸ್ಥಳಕ್ಕೆ ಶಿವಲಿಂಗವನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಫೆ. 15 ರ ಶಿವರಾತ್ರಿಯಂದು ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಮಹತೋಭಾರ ಶ್ರೀ

ಫೆ. 15: ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ಶಿವರಾತ್ರಿ ಮಹೋತ್ಸವ Read More »

ಫೆ.20-24: ಶ್ರೀ ಕಾಣಿಯೂರು ಮಠದಲ್ಲಿ ಜಾತ್ರಾ ಮಹೋತ್ಸವ

ಕಾಣಿಯೂರು: ಶ್ರೀ ಜಗದ್ಗುರು ಶ್ರೀ ಮನ್ಮದ್ವಚಾರ್ಯ ಮೂಲ‌ ಮಹಾಸಂಸ್ಥಾನಂ ಶ್ರೀ ಕಾಣಿಯೂರು ಮಠ, ಕಾಣಿಯೂರಿನ ಜಾತ್ರಾ ಮಹೋತ್ಸವವು ಫೆ. 20 ರಿಂದ 24 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಫೆ. 13 ರಂದು ಬೆಳಿಗ್ಗೆ 9 ಗಂಟೆಗೆ ಗೊನೆ ಕಡಿಯುವ ಕಾರ್ಯಕ್ರಮದ ಮೂಲಕ ಜಾತ್ರಾ ಸಿದ್ಧತೆಗೆ ಚಾಲನೆ ದೊರೆತಿದೆ. ಫೆ. 18 ರಂದು 10 ಗಂಟೆಗೆ : ಮುಂಡ್ಯ ಹಾಕುವುದು ಫೆ. 20 ರಂದು: ಶ್ರೀ ಲಕ್ಷ್ಮೀನೃಸಿಂಹ ದೇವರು ಮತ್ತು ಮುಖ್ಯಪ್ರಾಣ

ಫೆ.20-24: ಶ್ರೀ ಕಾಣಿಯೂರು ಮಠದಲ್ಲಿ ಜಾತ್ರಾ ಮಹೋತ್ಸವ Read More »

ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ

ಪುತ್ತೂರು: ಯಕ್ಷಗಾನ ಕಲಾವಿದ, ಸಂಘಟಕ ಪಿ.ಹರಿಶ್ಚಂದ್ರ ಆಚಾರ್ಯ ಇಳಂತಿಲ ಮತ್ತು ಅರ್ಥಧಾರಿ, -ಪ್ರಸಂಗಕರ್ತ ಗಣೇಶ ಆಚಾರ್ಯ ಕುಂಜೂರು ಇವರ ಸಂಸ್ಮರಣೆ ಕಾರ್ಯಕ್ರಮವು 50ನೇ ವರ್ಷಾಚರಣೆಯಲ್ಲಿರುವ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಹಯೋಗದಲ್ಲಿ ಇಚ್ಚೂರು ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಪ್ರಧಾನ ಅರ್ಚಕ ಸುರೇಶ್ ಪುತ್ತೂರಾಯ ವಹಿಸಿದ್ದರು. ಅತಿಥಿಯಾಗಿ ಅರ್ಥಧಾರಿ ಜಬ್ಬಾರ್ ಸಮೋ , ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷ ಕವಿ ಪ್ರದೀಪ ಹೆಬ್ಬಾರ್ ಚಾರ, ಉಪ್ಪಿನಂಗಡಿ ಕಾಳಿಕಾಂಬಾ

ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ Read More »

error: Content is protected !!
Scroll to Top