ಪುತ್ತೂರು

ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕ ಉದ್ಘಾಟನೆ

ಪುತ್ತೂರು: ನಗರಸಭೆ ಬೆಂಗಳೂರು ಸಾಹಸ ಸರಕಾರೇತರ ಸಂಸ್ಥೆಯ ಸಹಯೋಗದೊಂದಿಗೆ  ಎಚ್‍ ಡಿಬಿ ಫೈನಾನ್ಸಿಯಲ್ ಸರ್ವೀಸಸ್ ನ ಆರ್ಥಿಕ ನೆರವಿನ ಮೂಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಸ್ಥಾಪಿಸಲಾಯಿತು. ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಮಾಜಿ ಶಾಸಕ ಸಂಜೀವ ಮಟಂದೂರು ಚಾಲನೆ ನೀಡಿ, ಸ್ವಚ್ಛತೆಗೆ ಪುತ್ತೂರು ನಗರಸಭೆ ಸಹಕಾರ ನೀಡುತ್ತಿರುವ ಬಗ್ಗೆ ಕೃತಜ್ಞತೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ನಗರಸಭೆ ಅಧಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆ, ಸ್ಥಾಯಿ ಸಮಿತಿಯ ಅಧ್ಯಕ್ಷ […]

ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕ ಉದ್ಘಾಟನೆ Read More »

9 ನೇ  ವಾರ 58 ನೇ ದಿನಕ್ಕೆ  ಕಾಲಿರಿಸಿದ  ಭಾವ  ತೀರ  ಯಾನ | ಇಂದು ಬೆಳಗ್ಗೆ 11 ಗಂಟೆಗೆ ಶೋ

ಸುಳ್ಯದ ಯುವ  ಸಂಗೀತ  ಹಾಗೂ  ಚಿತ್ರ  ನಿರ್ದೇಶಕ  ಮಯೂರ  ಅಂಬೆಕಲ್ಲು  ನಿರ್ಮಾಣದ “ಭಾವ  ತೀರ  ಯಾನ’  ಸಿನಿಮಾ  ಪ್ರೇಕ್ಷಕರ  ಮೆಚ್ಚುಗೆ  ಪಡೆದು   9ನೇ  ವಾರದಲ್ಲಿ  58  ನೇ  ದಿನಕ್ಕೆ ಯಶಸ್ವಿಯಾಗಿ  ಮುನ್ನಡೆಯುತ್ತಿದ್ದು  ಚಿತ್ರಕ್ಕೆ  ವ್ಯಾಪಕ  ಬೆಂಬಲ  ವ್ಯಕ್ತವಾಗುತ್ತಿದೆ. ನಾಳೆ  ಏ.19  ಶನಿವಾರದಂದು  ಬೆಳಗ್ಗೆ  11:00  ಗಂಟೆಗೆ  ಚಿತ್ರ  ಪ್ರದರ್ಶನಗೊಳ್ಳಲಿದೆ.

9 ನೇ  ವಾರ 58 ನೇ ದಿನಕ್ಕೆ  ಕಾಲಿರಿಸಿದ  ಭಾವ  ತೀರ  ಯಾನ | ಇಂದು ಬೆಳಗ್ಗೆ 11 ಗಂಟೆಗೆ ಶೋ Read More »

ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ಕಾಯ್ದೆ ಕುರಿತು ಪುತ್ತೂರು ಶಾಸಕರ ಹೇಳಿಕೆ ಖಂಡನೀಯ : ಅರುಣ್ ಜಿ. ಶೇಟ್ | ಮುಸಲ್ಮಾನರ ತುಷ್ಠೀಕರಣದ ಮೂಲಕ ಓಟ್ ಬ್ಯಾಂಕ್ ನ್ನಾಗಿ ಮಾಡಿ ಮುಗ್ದ ಬಡ ಮುಸ್ಲಿಮರ ತಲೆ ಕೆಡಿಸಲು ಕಾಂಗ್ರೆಸ್ ಹೊರಟಿರುವುದು ಖೇದಕರ

ಪುತ್ತೂರು: ವಕ್ಫ್ ತಿದ್ದುಪಡಿ ಕಾಯ್ದೆ ಸಾಂವಿಧಾನಿಕವಾಗಿ ಅಂಗೀಕಾರಗೊಂಡು, ರಾಷ್ಟ್ರಪತಿಯವರಿಂದಲೂ ಅಂಕಿತಗೊಂಡು ಪೂರ್ಣ ಪ್ರಮಾಣದ ಕಾಯ್ದೆಯಾಗಿ ರೂಪುಗೊಂಡಿದ್ದು, ಈ ಕಾಯ್ದೆ ಜಾರಿಯಾಗುತ್ತಿದ್ದಂತೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ಹಿಂಬಾಗಿಲಿನ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಹುನ್ನಾರ ಖಂಡನೀಯ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನ ಶಾಸಕರು ತರಾತುರಿಯಲ್ಲಿ ಮುಸಲ್ಮಾನರನ್ನು ತುಷ್ಠೀಕರಣ ಮಾಡುವ ಭರದಲ್ಲಿ ಬಡ ಹಾಗೂ ಹಿಂದುಳಿದ ಮುಸಲ್ಮಾನರಿಗಾಗಿ

ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ಕಾಯ್ದೆ ಕುರಿತು ಪುತ್ತೂರು ಶಾಸಕರ ಹೇಳಿಕೆ ಖಂಡನೀಯ : ಅರುಣ್ ಜಿ. ಶೇಟ್ | ಮುಸಲ್ಮಾನರ ತುಷ್ಠೀಕರಣದ ಮೂಲಕ ಓಟ್ ಬ್ಯಾಂಕ್ ನ್ನಾಗಿ ಮಾಡಿ ಮುಗ್ದ ಬಡ ಮುಸ್ಲಿಮರ ತಲೆ ಕೆಡಿಸಲು ಕಾಂಗ್ರೆಸ್ ಹೊರಟಿರುವುದು ಖೇದಕರ Read More »

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪಾಕಶಾಲೆ ಉದ್ಘಾಟನೆ

ಪುತ್ತೂರು: ಸದಾ ಹೊಸತನ ಮತ್ತು ವಿಶೇಷತೆಗಳಿಗೆ ಹೆಸರಾದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ  ಗ್ರಾಹಕರಿಗೆ  ಮತ್ತು ಸಿಬ್ಬಂದಿಗಳಿಗೆ ಮನೆ ಪದ್ಧತಿಯ ಅಪರಾಹ್ನ ಭೋಜನ ಹಾಗೂ ಸಂಜೆ ಉಪಹಾರ ನೀಡುವ ನೂತನ ಪಾಕಶಾಲೆ ಹಾಗೂ ಭೋಜನಶಾಲೆ ಆರಂಭಿಸಿದೆ. ಮನೆ ಮನ ಗೆದ್ದಿರುವ ಯುವ ಉದ್ಯಮಿ ಹಾಗೂ ಭಟ್ ಅಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಅವರು ಈ ಶಾಲೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ,  ಗ್ರಾಹಕ ಸಂತೃಪ್ತಿಯ ಅದ್ಯತೆಯಲ್ಲಿ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪಾಕಶಾಲೆ ಉದ್ಘಾಟನೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ | ಪುನೀತರಾದ ಲಕ್ಷಾಂತರ ಭಕ್ತರು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತ ಜಯಘೋಷಗಳೊಂದಿಗೆ ಗುರುವಾರ ರಾತ್ರಿ ನಡೆಯಿತು. ಸಂಜೆ ಶ್ರಿ ದೇವಸ್ಥಾನದ ಒಳ ಹಾಗೂ ಹೊರಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಶ್ರೀ ದೇವರು ರಥಬೀದಿಗೆ ಬಂದು, ಬಳಿಕ ಶ್ರೀ ಮಹಾಲಿಂಗೇಶ್ವರ ದೇವರು ರಥಾರೋಢರಾದರು. ಬಳಿಕ ಸಿಡಿಮದ್ದು ಪ್ರದರ್ಶನ ಪ್ರಾರಂಭಗೊಂಡು ಸುಮಾರು ಒಂದು ಗಂಟೆಗಳ ಕಾಲ ಸಿಡಿಮದ್ದು ಪ್ರದರ್ಶನ ಬಾನೆತ್ತರದಲ್ಲಿ ಬೆಳಕಿನ ಚಿತ್ತಾರವನ್ನೇ ಮೂಡಿಸಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಭಕ್ತರು ಹರ್ಷೋದ್ದಾರವಾದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ | ಪುನೀತರಾದ ಲಕ್ಷಾಂತರ ಭಕ್ತರು Read More »

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ಕಾರವೇ ಪ್ರತಿಭಟನೆಗೆ ಬೆಂಬಲಿಸ್ತಿದೆ | ಪುತ್ತೂರು ಶಾಸಕರ ವಕ್ಫ್ ಪರ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ವಕ್ಫ್  ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುವ ಅಡ್ಯಾರು ಪ್ರದೇಶದಲ್ಲಿ ಹಿಂದೂ ಧಾರ್ಮಿಕ ನೇಮೋತ್ಸವಕ್ಕೆ ಹಾಕಲಾದ ಪತಾಕೆ ಬಂಟಿಂಗ್ ಗಳನ್ನು ತೆಗೆಯುವ ಪೊಲೀಸರ ಆದೇಶಕ್ಕೆ ಮತ್ತು ಪುತ್ತೂರು ಶಾಸಕರಿಂದ ವಕ್ಫ್ ಪರ ಹೇಳಿಕೆಗೆ ಅರುಣ್ ಕುಮಾರ್ ಪುತ್ತಿಲ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎ.18ರಂದು ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಂತಾಗಿದೆ. ವಕ್ಫ್ ಪ್ರತಿಭಟನೆ ನೆಪದಲ್ಲಿ ನೇಮೋತ್ಸವಕ್ಕೆ ಹಾಕಿದ ಕೇಸರಿ ಧ್ವಜ, ಬಂಟಿಂಗ್ ಯಾಕೆ ತೆಗೆಯಲಾಗುತ್ತಿದೆ. ಇಂತಹ ನೀಚ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರಿ ಪ್ರಾಯೋಜಿತ ವಕ್ಫ್

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ಕಾರವೇ ಪ್ರತಿಭಟನೆಗೆ ಬೆಂಬಲಿಸ್ತಿದೆ | ಪುತ್ತೂರು ಶಾಸಕರ ವಕ್ಫ್ ಪರ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ Read More »

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು  9ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.18 ಶುಕ್ರವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ

9 ನೇ ವಾರಕ್ಕೆ ಕಾಲಿರಿಸಿದ ಭಾವ ತೀರ ಯಾನ | ನಾಳೆ ಬೆಳಗ್ಗೆ 11-00 ಗಂಟೆಗೆ ಶೋ Read More »

ಏ.24 : ಪುತ್ತೂರು ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

ಪುತ್ತೂರು: ಲೋಕಾಯುಕ್ತ ಜನಸಂಪರ್ಕ ಸಭೆಯನ್ನು ಏ.24 ರಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಏ.24 ರಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ. ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಅಲ್ಲದೆ

ಏ.24 : ಪುತ್ತೂರು ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ Read More »

ಮರದ ಗೆಲ್ಲು ಬಿದ್ದು ಗಾಯ

ಪುತ್ತೂರು: ಚಲಿಸುತ್ತಿರುವಾಗ ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರನಿಗೆ ಗಾಯಗಳಾಗಿರುವ ಘಟನೆ ಸಾಲ್ಮರ ಜಂಕ್ಷನ್ ಬಳಿ ನಡೆದಿದೆ. ಮಾವಿನ ಮರದ ಗೆಲ್ಲು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ತನ್ನೀರ್ ತಾರಿಗುಡ್ಡೆ ಎಂಬವರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಮರದ ಗೆಲ್ಲು ಬಿದ್ದು ಗಾಯ Read More »

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ  ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ನಿಪುನ್ ಪರೀಕ್ಷೆಗೆ ಅಗತ್ಯವಾಗಿ ಏಪ್ರಿಲ್ 8 ರಂದು ಪಂಜದಲ್ಲಿರುವ ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿಗೆ ಭೇಟಿ ಮಾಡಲಾಯಿತು.  ತೊಂಡಚ್ಚನ್ ಇಂಡಸ್ಟ್ರೀಸ್ ಫ್ಯಾಕ್ಟರಿ  ಮಾಲೀಕರಾದ ಮಧು ಎಂಬವರು ಫ್ಯಾಕ್ಟರಿಯಲ್ಲಿ ತಯಾರಾಗುವ ಸಿಮೆಂಟ್ ಹಂಚುಗಳು, ಕಬ್ಬಿಣದ ವಿವಿಧ ಬಗೆಯ ಉಪಕರಣಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಒಟ್ಟು 11 ವಿದ್ಯಾರ್ಥಿಗಳು ಕೈಗಾರಿಕಾ ಭೇಟಿಯಲ್ಲಿ ಭಾಗಿಯಾಗಿದ್ದು ರೇಂಜರ್ ಲೀಡರ್ ಅಶ್ವಿನಿ ಎಸ್ ಎನ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕೆ ಎಸ್ ಎಸ್ ಕಾಲೇಜಿನ  ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಕೈಗಾರಿಕಾ  ಭೇಟಿ Read More »

error: Content is protected !!
Scroll to Top