ಪುತ್ತೂರು

ಪುತ್ತೂರು : ಇತಿಹಾಸವುಳ್ಳ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ

ಪುತ್ತೂರು: ಸಾವಿರ ವರ್ಷ ಇತಿಹಾಸವಿರುವ ಶ್ರೀ ಮಹಾಕಾಳಿ ದೇವಸ್ಥಾನದ ಷಡಾಧಾರ ಹಾಗೂ ನಿಧಿಶುಂಭ ಪ್ರತಿಷ್ಠೆ ಭಾನುವಾರ ಬೆಳಿಗ್ಗೆ ನಡೆಯಿತು. ಷಡಾಧಾರ ಹಾಗೂ ನಿಧಿಶುಂಭ ಪ್ರತಿಷ್ಠೆ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಬನ್ನಂಜೆ ರಾಮದಾಸ್ ಭಟ್ ಅವರ ಆಚಾರ್ಯತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯಲ್ಲಿ ಆಗಮಿಸಿದ ನಿಧಿಕುಂಭವನ್ನು ಭಾನುವಾರ ಪ್ರತಿಷ್ಠಾಪಿಸಲಾಯಿತು. ಬಂಗರಸರ ಆಡಳಿತ ಕಾಲದಲ್ಲಿ ಆರಾಧ್ಯ ದೇವಿಯಾಗಿದ್ದ ಈ ಸಾನಿಧ್ಯ ಮುಂದೆ ಸಾರಸ್ವತ ಬ್ರಾಹ್ಮಣ ಮನೆತನದ ರಾಧಾಬಾಯಿ ಅವರ […]

ಪುತ್ತೂರು : ಇತಿಹಾಸವುಳ್ಳ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ Read More »

ಆರೋಗ್ಯ ರಕ್ಷಣೆಗೆ ಸಾವಯವ ಕೃಷಿ ಅಗತ್ಯ : ಡಾ. ನಿವೇದಿತಾ

ಪುತ್ತೂರು : ಮನೆಯ ಪರಿಸರದಲ್ಲಿ ಲಭ್ಯವಿರುವ ಸ್ಥಳದಲ್ಲಿ ಹಣ್ಣು ತರಕಾರಿಗಳನ್ನು ಬೆಳೆಸಿ ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ವಸ್ತುಗಳು ವಿಷಕಾರಿ ಅಂಶಗಳನ್ನು ಹೊಂದಿದ್ದು ಇದರ ಬಗ್ಗೆ ಜಾಗೃತಿಯ ಅಗತ್ಯವಿದೆಯೆಂದು ಅಡ್ಯನಡ್ಕದ ವಾರಣಾಸಿ ಫಾರ್ಮ್ಸ್ ನ ಡಾ. ನಿವೇದಿತಾ ತಿಳಿಸಿದರು.  ಪುತ್ತೂರು ನಗರದ ಶ್ರೀಮಾ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ.ಮೆಲ್ಕಾರು  ಕೇಂದ್ರ ಸಮಿತಿಯ ಸಭೆಯಲ್ಲಿ ಅವರು ಸಾವಯವ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು.   ಪುತ್ತೂರು ವಿವೇಕಾನಂದ

ಆರೋಗ್ಯ ರಕ್ಷಣೆಗೆ ಸಾವಯವ ಕೃಷಿ ಅಗತ್ಯ : ಡಾ. ನಿವೇದಿತಾ Read More »

ಮೇ 20 : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಜನಾಂದೋಲನ | ಪತ್ರಿಕಾಗೋಷ್ಠಿಯಲ್ಲಿ ನೀರಜ್ ದೋನೆರಿಯಾ

ಪುತ್ತೂರು ; ಕಾರಿಂಜ ಸಮೀಪದ ಪುಳಿಮಜಲು ನಿವಾಸಿ, ಹಿಂದೂ ಸಂಘಟನೆ ಕಾರ್ಯಕರ್ತ ಬಜರಂಗದಳದ ಗೋ ರಕ್ಷಾ ಪ್ರಮುಖ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಜನಾಂದೋಲನಕ್ಕೆ ವಿಹಿಂಪ ಬಜರಂಗಳ ಯೋಜನೆ ರೂಪಿಸಿದೆ. ಮೇ ೨೦ಕ್ಕೆ ಮಂಗಳೂರಿನಲ್ಲಿ ಬೃಹತ್ ಆಂದೋಲನ ನಡೆಯಲಿದೆ ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಹೇಳಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಹಾಸ್ ಶೆಟ್ಟಿಯವರ ಹತ್ಯೆಯನ್ನು ಹಿಂದುಗಳನ್ನು ಭಯದ ವಾತಾವರಣಕ್ಕೆ ತಳ್ಳುವ ಮತ್ತು ಧರ್ಮ

ಮೇ 20 : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಜನಾಂದೋಲನ | ಪತ್ರಿಕಾಗೋಷ್ಠಿಯಲ್ಲಿ ನೀರಜ್ ದೋನೆರಿಯಾ Read More »

ಸವಣೂರಿನಲ್ಲಿ ಮೇಲ್ಸೇತುವೆ  ನಿರ್ಮಾಣಕ್ಕೆ ತಯಾರಿ | ಮೈಸೂರು ವಿಭಾಗದ ಅಧಿಕಾರಿಗಳಿಂದ ಮೇ30 ರಂದು ಪರೀಶೀಲನೆಯ ಭರವಸೆ

ಪುತ್ತೂರು: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಮಧ್ಯೆ ಸವಣೂರಿನಲ್ಲಿ ಮೇಲ್ಸೇತುವೆ  ನಿರ್ಮಾಣ ಬಹಳ ಹಿಂದಿನ ಮಾತಾಗಿತ್ತು. ಈ ಬಗ್ಗೆ ಕಾರ್ಯರೂಪಕ್ಕೆ ತರುವಲ್ಲಿ ತಡವಾದರೂ ಇದೀಗ ಸವಣೂರಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ ಎನ್ನಬಹುದು. ರೈಲ್ವೆ ಇಲಾಖೆ ಮೈಸೂರು ವಿಭಾಗದ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲಿಸಲು ಮೇ.30ರಂದು ಸವಣೂರಿಗೆ ಬರುವದಾಗಿ ಭರವಸೆಯನ್ನಿತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ರೈಲು ಬಳಕೆದಾರ ಉಮೇಶ್ ಕುಮಾರಮಂಗಲ ಬೇರಿಕೆ ಇವರಲ್ಲಿ ಮಾಹಿತಿ ಹಕ್ಕಿನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ

ಸವಣೂರಿನಲ್ಲಿ ಮೇಲ್ಸೇತುವೆ  ನಿರ್ಮಾಣಕ್ಕೆ ತಯಾರಿ | ಮೈಸೂರು ವಿಭಾಗದ ಅಧಿಕಾರಿಗಳಿಂದ ಮೇ30 ರಂದು ಪರೀಶೀಲನೆಯ ಭರವಸೆ Read More »

ಹೊಸತನದೊಂದಿಗೆ ಮುಳಿಯ |  ಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ

ಮುಳಿಯ ನೂತನ ನವೀಕೃತ ವಿಸ್ತೃತ  ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಿದೆ. ಈ ಪ್ರಯುಕ್ತ ಮೇ.11 ರಂದು  ಪುತ್ತೂರಿನ ಸುಲೋಚನಾ ಟವರ್ಸ್‌ನ ಅಪರಂಜಿ ರೂಫ್‌ ಗಾರ್ಡನ್‌ 3 ನೇ ಮಹಡಿಯಲ್ಲಿ ವಿವಿಧ ಕೃಷಿ ವಿಷಯಗಳು ಹಾಗೂ ಕೃಷಿ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಕೃಷಿ ಗೋಷ್ಟಿ ನಡೆಯಲಿದೆ ಎಂದು ಮುಳಿಯ ಗೋಲ್ಡ್‌ ಮತ್ತು ಡೈಮಂಡ್‌ ಆಡಳಿತ ಮಂಡಳಿಯ ಕೇಶವ ಪ್ರಸಾದ್‌ ಮುಳಿಯ ಹಾಗೂ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ. ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಹಾರದಲ್ಲಿ

ಹೊಸತನದೊಂದಿಗೆ ಮುಳಿಯ |  ಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ Read More »

ಯುವಕನೋರ್ವನನ್ನು ಮನೆ ಅಂಗಳದಲ್ಲೇ ಇರಿದು ಹತ್ಯೆ

ನೆಲ್ಯಾಡಿ: ಯುವಕನೋರ್ವನನ್ನು ಮನೆ ಅಂಗಳದಲ್ಲೇ ಇರಿದು ಹತ್ಯೆ ನಡೆಸಿದ ಘಟನೆ ನೆಲ್ಯಾಡಿಯ ಮಾದೇರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಯುವಕನೋರ್ವನನ್ನು ಮನೆ ಅಂಗಳದಲ್ಲೇ ಇರಿದು ಹತ್ಯೆ Read More »

ನೆಲ್ಯಾಡಿಯಲ್ಲಿ ಮನೆಯಂಗಳದಲ್ಲೇ ಯುವಕನ ಕೊಲೆ

ನೆಲ್ಯಾಡಿ : ಮನೆಯಂಗಳದಲ್ಲೇ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಮನೆಯ ಅಂಗಳದಲ್ಲಿ ಶರತ್‌ನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು, ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿಯಲ್ಲಿ ಮನೆಯಂಗಳದಲ್ಲೇ ಯುವಕನ ಕೊಲೆ Read More »

ಅಕ್ಷಯ ಕಾಲೇಜು ಫ್ಯಾಷನ್ ಡಿಸೈನ್ ವಿಭಾಗ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರಕ್ಕೆ ಉದ್ಯಮಿಕ ಪ್ರವಾಸ

ಪುತ್ತೂರು : ಅಕ್ಷಯ ಕಾಲೇಜು ಫ್ಯಾಷನ್ ಡಿಸೈನ್ ವಿಭಾಗ 4ನೇ ಮತ್ತು 6ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ 2025 ಏಪ್ರಿಲ್ 26 ರಿಂದ 30 ರವರೆಗೆ ಮಹಾರಾಷ್ಟ್ರಕ್ಕೆ ಉದ್ಯಮಿಕ ಪ್ರವಾಸವನ್ನು ಆಯೋಜಿಸಿತು. ಈ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳನ್ನು ಉದ್ಯಮದ ಪ್ರಸ್ತುತ ಪ್ರವೃತ್ತಿಗಳೊಂದಿಗೆ ಪರಿಚಯಿಸುವುದು ಹಾಗೂ ಬಟ್ಟೆಗಳ ತಯಾರಿಕಾ ವಿಭಾಗಗಳ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸುವುದಾಗಿದೆ. ಉದ್ಯಮಿಕ ಪ್ರವಾಸಗಳು ವಿದ್ಯಾರ್ಥಿಗಳಿಗೆ ಸಂವಾದ, ಕಾರ್ಯಪದ್ಧತಿ ಮತ್ತು ಉದ್ಯೋಗ ಅಭ್ಯಾಸಗಳ ಮೂಲಕ ವ್ಯಾವಹಾರಿಕವಾಗಿ ಕಲಿಯಲು ಸಹಾಯ ಮಾಡುತ್ತವೆ. ಇದು ವಿದ್ಯಾರ್ಥಿಗಳಿಗೆ ಕಾಲೇಜು ತರಗತಿಗಳಲ್ಲಿ ಕಲಿಸುತ್ತಿರುವ

ಅಕ್ಷಯ ಕಾಲೇಜು ಫ್ಯಾಷನ್ ಡಿಸೈನ್ ವಿಭಾಗ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರಕ್ಕೆ ಉದ್ಯಮಿಕ ಪ್ರವಾಸ Read More »

ಇಂದು ಮುಳಿಯದಲ್ಲಿ “ಪುದರ್ ದೀತಿಜಿ” ತುಳು ಹಾಸ್ಯ ನಾಟಕ

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಇಂದು (ಮೇ 9) ರಂದು ಮುಳಿಯ ಆವರಣದಲ್ಲಿ  ಖ್ಯಾತ ಹಾಸ್ಯ ನಟರಿಂದ “ಪುದರ್ ದೀತಿಜಿ” ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಗೆ ಸರಿಯಾಗಿ ಆರಂಭವಾಗುವ ಈ ನಾಟಕದಲ್ಲಿ ಜನಪ್ರಿಯ ತುಳು ಹಾಸ್ಯ ನಟರು ಜನರನ್ನು ರಂಜಿಸಲಿದ್ದಾರೆ. ನಾಟಕ ಪ್ರಿಯರು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವ ನಿರೀಕ್ಷೆ ಇದೆ.  ನಾಟಕ ಮುಗಿದ ನಂತರ ಭೋಜನದ ವ್ಯವಸ್ಥೆ ಇರಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇಂದು ಮುಳಿಯದಲ್ಲಿ “ಪುದರ್ ದೀತಿಜಿ” ತುಳು ಹಾಸ್ಯ ನಾಟಕ Read More »

ಆಪರೇಷನ್‍ ಸಿಂಧೂರ : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಪ್ರಾರ್ಥನೆ

ಪುತ್ತೂರು : ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಪ್ರತಿಕಾರವಾಗಿ ನಡೆದ “ಆಪರೇಷನ್ ಸಿಂಧೂರ” ಕಾರ್ಯಾಚರಣೆ ಹಿನ್ನಲೆಯಲ್ಲಿ ಭಾರತೀಯ ಸೇನೆಗೆ ಒಳಿತಾಗಲಿ ಹಾಗೂ ಸೇನೆಗೆ ಮತ್ತಷ್ಟು ಶಕ್ತಿ ತುಂಬುವಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಮುಜಿರಾಯಿ ಸಚಿವರ ಸೂಚನೆಯಂತೆ ವಿಶೇಷ ಪ್ರಾರ್ಥನೆ ಹಾಗೂ ಸಂಕಲ್ಪ ಪೂಜೆ ಗುರುವಾರ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. ವಸಂತ ಕದಿಲಾಯ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ

ಆಪರೇಷನ್‍ ಸಿಂಧೂರ : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಪ್ರಾರ್ಥನೆ Read More »

error: Content is protected !!
Scroll to Top