ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಸ್ವಚ್ಚತಾ ಸೇ ಸಹಕಾರ್’

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್, ದ.ಕ.ಜಿಲ್ಲಾ ಸಹಕಾರ ಇಲಾಖೆ ಹಾಗೂ ಸಂತ ಪೀಲೋಮಿನಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ-2025 ಅಂಗವಾಗಿ ‘ಸ್ವಚ್ಚತಾ ಸೇ ಸಹಕಾರ್’ ಕಾರ್ಯಕ್ರಮ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಯಿತು.  ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ ನಿರ್ಮಾಣ […]

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಸ್ವಚ್ಚತಾ ಸೇ ಸಹಕಾರ್’ Read More »

ಶಾಂತಿ-ಸೌಹಾರ್ದ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲ | ರಾಜ್ಯ ಸರಕಾರ ರಾಜೀನಾಮೆ ನೀಡಿ ರಾಷ್ಟ್ರಪತಿ ಆಳ್ವಿಕೆ ಬರಲಿ : ಅಶ್ರಫ್‍ ಕಲ್ಲೇಗ ಆಗ್ರಹ

ಪುತ್ತೂರು : ಬಂಟ್ವಾಳದಲ್ಲಿ ನಡೆದ ಕೊಲೆಯನ್ನು ನೋಡಿದರೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ದ.ಕ.ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಎದ್ದುಕಾಣುತ್ತಿದೆ. ಪೊಲೀಸರನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದ ಸರಕಾರ ರಾಜೀನಾಮೆ ನೀಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಎಂದು ದ. ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆಗ್ರಹಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕೊಲೆಯಾದ ರೌಡಿ ಶೀಟರ್ ಸಂತಾಪ ಸಭೆಗಳಲ್ಲಿ ಪ್ರತೀಕಾರದ ಮಾತನ್ನು ಹಿಂದುತ್ವವಾದಿಗಳು ಹೇಳುತ್ತಿದ್ದರು. ಇಲಾಖೆ ಇಂತವರ ಮೇಲೆ

ಶಾಂತಿ-ಸೌಹಾರ್ದ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲ | ರಾಜ್ಯ ಸರಕಾರ ರಾಜೀನಾಮೆ ನೀಡಿ ರಾಷ್ಟ್ರಪತಿ ಆಳ್ವಿಕೆ ಬರಲಿ : ಅಶ್ರಫ್‍ ಕಲ್ಲೇಗ ಆಗ್ರಹ Read More »

ಯುವಕನ ಮೇಲೆ  ಬಿಯರ್‌ ಬಾಟಲ್‌ನಿಂದ ಹಲ್ಲೆ | ದೂರು ದಾಖಲು

ಪುತ್ತೂರು:  ಯುವಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ನಿನ್ನೆ ಪಾಣಾಜೆ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಅರ್ಲಪದವು ನಿವಾಸಿ ಪ್ರಕಾಶ್ (28) ಎನ್ನಲಾಗಿದೆ. ಹಲ್ಲೆ ಮಾಡಿದ ಆರೋಪಿಗಳು ಧನಂಜಯ ಮತ್ತು ಪುನೀತ್  ಎಂದು ತಿಳಿದು ಬಂದಿದೆ. ಪಾಣಾಜೆ ಗ್ರಾಮದ ವೈನ್‌ ಶಾಪ್‌ ನಿಂದ ಬಿಯರ್‌ ಬಾಟಲಿಯನ್ನು ಖರೀದಿ ಮಾಡಿ, ವೈನ್‌ ಶಾಪ್‌ ನಲ್ಲಿ ಇರುವ ಶೆಡ್‌ ನಲ್ಲಿದ್ದ ಚಯರ್‌ನಲ್ಲಿ ಕುಳಿತು ಬಿಯರ್ ಕುಡಿಯುತ್ತಿದ್ದ ವೇಳೆ ಪರಿಚಯದವರಾದ ಧನಂಜಯ ಮತ್ತು ಪುನೀತ್‌ ಎಂಬುವವರು ಬಂದಿದ್ದರು. ಬಂದ

ಯುವಕನ ಮೇಲೆ  ಬಿಯರ್‌ ಬಾಟಲ್‌ನಿಂದ ಹಲ್ಲೆ | ದೂರು ದಾಖಲು Read More »

ಜೂ.1 ರಿಂದ 7 : ಪುತ್ತೂರಿನಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ

ಪುತ್ತೂರು : ಬಹುವಚನಂ ಪುತ್ತೂರು, ದಿ.ಜಿ.ಎಲ್.ಆಚಾರ್ಯ ಜನ್ಮಶತಾಬ್ಧಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಾಮಿ ಕಲಾಮಂದಿರದ ಆಶ್ರಯದಲ್ಲಿ ಏಳು ದಿನಗಳ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ ಜೂ.1 ರಿಂದ 7ರ ತನಕ ಪುತ್ತೂರು ತೆಂಕಿಲ ದರ್ಶನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಜಿ.ಎಲ್‍.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಮದ್ಭಾಗವತ, ಗರುಡಪುರಾಣಗಳ ಕುರಿತು  ಭಾರತೀಯ ಆಧ್ಯಾತ್ಮದ ಕುರಿತು ಮುಂದಿನ ತಲೆಮಾರುಗಳಿಗೆ ತಿಳಿಯಪಡಿಸುವುದೇ ಸಪ್ತಾಹದ ಉದ್ದೇಶವಾಗಿದೆ. ಸನಾತನ

ಜೂ.1 ರಿಂದ 7 : ಪುತ್ತೂರಿನಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ Read More »

ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್‌  ಬಿಡುಗಡೆ

ಪುತ್ತೂರು : ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ಚಲನಚಿತ್ರ ನಟ ಆರ್ಯನ್ ಇವರ ಸಹಕಾರದಲ್ಲಿ ಅಶ್ವಥ್ ಎನ್ ಪುತ್ತೂರು  ಇವರ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮೋಡಿಬಂದ ವಿಭಿನ್ನ ಕಥಾಧಾರಿತವಾದ  “ಅಸ್ಮಿತ” ಕಿರುಚಿತ್ರದ ಪೋಸ್ಟರನ್ನು ಅಭಿನಯ ಆರ್ಟ್ಸ್ ತಂಡದ  ನಿರ್ದೇಶಕರಾದ  ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾಚತುರ   ಕೇಶವ ಮಚ್ಚಿಮಲೆ ಬಿಡುಗಡೆ ಮಾಡಿದ್ದು, ಇದೀಗ ಕನ್ನಡ, ತುಳು ತೆನ್ಕಾಯಿ ಮಲೆ ಸಿನಿಮಾದ ಖ್ಯಾತ ನಿರ್ದೇಶಕರಾದ ರವೀಚಂದ್ರ ಮುಂಡೂರು  ಟ್ರೈಲರನ್ನು  ಬಿಡುಗಡೆ ಮಾಡಿದ್ದಾರೆ. “ಅಸ್ಮಿತ” ಕಿರುಚಿತ್ರ ಟ್ರೈಲರ್‌ ಮೂಲಕ

ಮಾತೃಶ್ರೀ ಕ್ರಿಯೇಷನ್  ಅರ್ಪಿಸುವ  ವಿಭಿನ್ನ ಕಥಾಧಾರಿತ ಕಿರುಚಿತ್ರದ ಟ್ರೈಲರ್‌  ಬಿಡುಗಡೆ Read More »

ಹೊಸ ಅಡಿಕೆ ದರ ಏರಿಕೆಯಿಂದ ರೈತರಲ್ಲಿ ಹರ್ಷ |ಮಾರುಕಟ್ಟೆಯಲ್ಲಿ ಸಂಚಲನ

ಪುತ್ತೂರು: ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಧಾರಣೆ, ಅದರಲ್ಲೂ ವಿಶೇಷವಾಗಿ ಹೊಸ ಅಡಿಕೆಯ ದರವು ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ 500 ರೂಪಾಯಿಗಳ ಗಡಿಯನ್ನು ದಾಟಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಬೆಳೆಗಾರರಲ್ಲಿ ಹೊಸ ಭರವಸೆ ಮತ್ತು ಸಂಭ್ರಮವನ್ನು ಸೃಷ್ಟಿಸಿದೆ. ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸುವ ಸುದ್ದಿ ಹೊರಬಿದ್ದಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಧಾರಣೆ, ಅದರಲ್ಲೂ ವಿಶೇಷವಾಗಿ ಹೊಸ ಅಡಿಕೆಯ ದರವು ಮಾರುಕಟ್ಟೆಯಲ್ಲಿ ಕೆ.ಜಿ. ಒಂದಕ್ಕೆ 500 ರೂಪಾಯಿಗಳ ಗಡಿಯನ್ನು ದಾಟಿ ಐತಿಹಾಸಿಕ

ಹೊಸ ಅಡಿಕೆ ದರ ಏರಿಕೆಯಿಂದ ರೈತರಲ್ಲಿ ಹರ್ಷ |ಮಾರುಕಟ್ಟೆಯಲ್ಲಿ ಸಂಚಲನ Read More »

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರು

ಕಡಬ: ಕೊಯಿಲ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಬೃಹತ್ ಗಾತ್ರದ ಮಾವಿನ ಮರವೊಂದು ಕಾರಿನ ಮೇಲೆ ಬಿದ್ದ ಘಟನೆ ಇಂದು ನಡೆದಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಮಾರುತಿ-800 ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಮೂರು ಮಂದಿ ಇದ್ದು, ಅಪಾಯದ ಅರಿವು ಆಗುತ್ತಿದ್ದಂತೆ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ನಿಂತಿದ್ದ ಕಾರಿನ ಮೇಲೆ ಬಿದ್ದ ಮರ | ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರು Read More »

ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

ವೀರಮಂಗಲ  : ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆಯು ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ನಡೆಯಿತು. ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ಹಾಗೂ ಸುಶ್ರಾವ್ಯ ಸ್ವರದ ಯಕ್ಷಗಾನ ಭಾಗವತರಾದ ಕು.ರಚನಾ ಚಿದ್ಗಲ್ ಇವರಿಗೆ  ಶ್ರವಣಸ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಯಾಗಿದ್ದುಕೊಂಡು ಯಕ್ಷಗಾನದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಆ ಬಳಿಕ ನಡೆದ  ಜಾಂಬವತಿ‌ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದ ಭಾಗವತರಾಗಿ ಆನಂದ ಸವಣೂರು,  ಕು.ರಚನಾ ಹಾಗೂ

ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ Read More »

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳ ಖರೀದಿಗೆ ಸಹಾಯ ಧನ – ವಿವಿಧ ಕೃಷಿಗೆ ಸಹಾಯ ಧನ | ತೋಟಗಾರಿಕೆ ಇಲಾಖೆ ಮಾಹಿತಿ

ಪುತ್ತೂರು: ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ವೇಟ್ (ಮೈಲು ತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ ರೂ. 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3000 ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ 1) ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು.

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳ ಖರೀದಿಗೆ ಸಹಾಯ ಧನ – ವಿವಿಧ ಕೃಷಿಗೆ ಸಹಾಯ ಧನ | ತೋಟಗಾರಿಕೆ ಇಲಾಖೆ ಮಾಹಿತಿ Read More »

ಬೈಕ್‍ ಗೆ ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಕಡಬ : ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದು  ಬೈಕ್‌ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ವಿಶ್ವಜಿತ್ (23) ಮೃತಪಟ್ಟವರು. ವಿಶ್ವಜಿತ್ ಮರ್ಧಾಳದ ಪಾಲಡ್ಕದಲ್ಲಿ ಫ್ಯಾಬ್ರಿಕೇಷನ್ ವ್ಯತ್ತಿ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆ ಸ್ಟೇಷನ್ ಬಳಿ

ಬೈಕ್‍ ಗೆ ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

error: Content is protected !!
Scroll to Top