ಪುತ್ತೂರು

ದರ್ಬೆ ‘ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್’ ಮಾಲಕ ಆತ್ಮಹತ್ಯೆ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಮೀಪದ ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ರಮೇಶ್ (49 ವ.) ತಮ್ಮ ಶಾಪ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಜೇಸಿಐ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ದರ್ಬೆ ‘ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್’ ಮಾಲಕ ಆತ್ಮಹತ್ಯೆ Read More »

ಯುವ ಮತದಾರರೊಂದಿಗೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಂವಾದ

ಪುತ್ತೂರು: ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ, ಸಿಂಗಂ ಖ್ಯಾತಿಯ ಅಣ್ಣಾಮಲೈ ಅವರು ಯುವಮತದಾರರೊಂದಿಗೆ ಶನಿವಾರ ಸಂವಾದ ನಡೆಸಿದರು. ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಪಡೆಯುವ ಶಿಕ್ಷಣ ಯುವಜನಾಂಗವನ್ನು ಪ್ರಜ್ಞಾವಂತರನ್ನಾಗಿಸುತ್ತದೆ. ಮಾತ್ರವಲ್ಲ, ದೇಶಕಟ್ಟುವ ಕಾಯಕದಲ್ಲಿ ಪ್ರತಿಯೋರ್ವರನ್ನು ಸಮರ್ಥವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಶಿಕ್ಷಣ ಪಡೆಯುತ್ತಾ ಹೋದಂತೆ, ಮನಸ್ಸು ದೇಶಪ್ರೇಮದಿಂದ ವಿಚಲಿತವಾಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಶಿಕ್ಷಣ ಪಡೆಯುವ ಜೊತೆಜೊತೆಗೆ ರಾಷ್ಟ್ರೀಯ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು. ಸುಡಾನಿನಲ್ಲಿ ತೊಂದರೆ ಅನುಭವಿಸುತ್ತಿದ್ದ ಭಾರತೀಯರನ್ನು

ಯುವ ಮತದಾರರೊಂದಿಗೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಂವಾದ Read More »

ಮೇ 1ರಂದು ಪುತ್ತೂರಿನಲ್ಲಿ ಎಸ್.ಸಿ. ಸಮಾವೇಶ|ಎಸ್.ಸಿ. ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆಗಳ ವಿವರ ನೀಡಿದ ಅಣ್ಣಪ್ಪ ಕಾರೆಕ್ಕಾಡ್

ಪುತ್ತೂರು: ಮೇ 1ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರಿನ ದರ್ಶನ್ ಹಾಲಿನಲ್ಲಿ ಎಸ್.ಸಿ. ಸಮಾವೇಶ ನಡೆಯಲಿದೆ ಎಂದು ಎಸ್.ಸಿ. ಮೋರ್ಚಾ ಜಿಲ್ಲಾ ಸದಸ್ಯ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದನ್ನು ನೋಡಿಕೊಂಡು ಜನರು ಮತ ಚಲಾಯಿಸಬೇಕು. ಯಾವುದೇ ಆಮಿಷಗಳಿಗೂ ಜನರು ಒಳಗಾಗಬಾರದು ಎಂದ ಅವರು, ಬಿಜೆಪಿ ನೀಡಿರುವ ಯೋಜನೆಗಳು ಹಾಗೂ ಕೆಲಸಗಳ ವಿವರ ನೀಡಿದರು. 1. ಬಿಜೆಪಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪಾಯಿ ಹಳ್ಳಿ

ಮೇ 1ರಂದು ಪುತ್ತೂರಿನಲ್ಲಿ ಎಸ್.ಸಿ. ಸಮಾವೇಶ|ಎಸ್.ಸಿ. ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆಗಳ ವಿವರ ನೀಡಿದ ಅಣ್ಣಪ್ಪ ಕಾರೆಕ್ಕಾಡ್ Read More »

ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ

ಪುತ್ತೂರು: ಬಹಳ  ಧೈರ್ಯಶಾಲಿ  ಕ್ರಮವನ್ನು ಮೋದಿ ತೆಗೆದುಕೊಂಡಿದ್ದಾರೆ ಎಂದರೆ ಅದಕ್ಕೆ ಮತದಾರರು ಕಾರಣ. ಮುಂದೆಯೂ ಇಂತಹ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ 130ಕ್ಕೂ ಅಧಿಕ ಸೀಟ್ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಿಜೆಪಿಯ ಭದ್ರ ಬುನಾದಿ ಇರುವ ಪುತ್ತೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಮಾತನಾಡಲ್ಲ. ಕರಾವಳಿಯಲ್ಲಿ ಬಿಜೆಪಿ ಭದ್ರಬುನಾದಿ ಇರುವ ಕಾರಣ, ಪಕ್ಷೇತರರು ಬಿಜೆಪಿಯಲ್ಲಿ

ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ Read More »

ಪೋಲೀಸರ ಸೂಚನೆ ಲೆಕ್ಕಿಸದೆ,ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಪಿಕ್ ಅಪ್ ಪರಾರಿ

ಕಡಬ : ಕಡಬ ಠಾಣಾ ವ್ಯಾಪ್ತಿಯ ಆತೂರು ಚೆಕ್ ಪೋಸ್ಟ್ ನಲ್ಲಿ ಪೋಲೀಸರ ಸೂಚನೆಯನ್ನೂ ಲೆಕ್ಕಿಸದೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ಎನ್ನಲಾದ ಪಿಕ್ ಅಪ್ ವಾಹನವೊಂದು ಪರಾರಿಯಾದ ಘಟನೆ ಶನಿವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ಚೆಕ್ಕ್ ಪೋಸ್ಟ್ ನಲ್ಲಿ ಹಾಕಲಾದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಬದಿಗೆ ತಳ್ಳಿರುವುದಲ್ಲದೆ ಕರ್ತವ್ಯದಲ್ಲಿದ್ದ ಪೋಲೀಸ್ ಸಿಬ್ಬಂದಿಯ ಮೇಲೆಯೂ ಪಿಕ್ ಅಪ್ ಹಾಯಿಸಲು ಹೋಗಿದ್ದು, ಪೋಲೀಸ್ ಸಿಬ್ಬಂದಿ ಬದಿಗೆ ಹಾರಿ ಅಪಾಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಪರಾರಿಯಾದ

ಪೋಲೀಸರ ಸೂಚನೆ ಲೆಕ್ಕಿಸದೆ,ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಪಿಕ್ ಅಪ್ ಪರಾರಿ Read More »

ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ

ಪುತ್ತೂರು: ಚುನಾವಣಾ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಬಿಜೆಪಿ ಕಾರ್ಯದರ್ಶಿ, ಅಡ್ವೊಕೇಟ್ ಸುರೇಶ್ ಅವರು ಶನಿವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಅಶ್ಮಿ ಕಂಫರ್ಟಿನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಈ ಸಂದರ್ಭ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.

ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ Read More »

ಹಿರೇಬಂಡಾಡಿ ಗ್ರಾಮದಲ್ಲಿ ಆಶಾ ತಿಮ್ಮಪ್ಪ ಮತಯಾಚನೆ

ಪುತ್ತೂರು: ಹಿರೇಬಂಡಾಡಿ ಗ್ರಾಮದ 48 ನೇ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತಯಾಚನೆ ಮಾಡಿದರು. ಹಿರೇಬಂಡಾಡಿ ಗ್ರಾಮದ 48 ನೇ ಬೂತ್ ನಲ್ಲಿ ಬೆಳಿಯಪ್ಪ ಗೌಡ ಅವರ ಮನೆಗೆ ಭೇಟಿ ನೀಡಿ, ಕರಪತ್ರ ವಿತರಿಸಿದರು. ಈ ಸಂದರ್ಭ ಶಕ್ತಿಯ ಕೇಂದ್ರ ಪ್ರಮುಖರಾದ ದಯಾನಂದ ಸರೋಳಿ, ನವೀನ್ ಕುಬಲ, ರಕ್ಷಿತ್, ವಿಶ್ವನಾಥ, ಸತೀಶ, ನಾರಾಯಾಣ ಮೊದಲಾದವರು ಉಪಸ್ಥಿತರಿದ್ದರು.

ಹಿರೇಬಂಡಾಡಿ ಗ್ರಾಮದಲ್ಲಿ ಆಶಾ ತಿಮ್ಮಪ್ಪ ಮತಯಾಚನೆ Read More »

ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಚಾರ ಸಭೆ

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಚಾರ ಸಭೆ ನಡೆಯಿತು. ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ, ಹಿಂದುತ್ವ ಹಾಗೂ ಅಭಿವೃದ್ಧಿಯ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿ. ಹಿಂದುತ್ವ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಸರಕಾರ, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಕೋಟಿ ರೂ.ಗೂ ಮಿಕ್ಕಿ ಅನುದಾನವನ್ನು ನೀಡಿದೆ. ಆದ್ದರಿಂದ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ವಿನಂತಿಸಿದರು. ಅಭ್ಯರ್ಥಿ ಆಶಾ

ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಚಾರ ಸಭೆ Read More »

ಪುತ್ತಿಲ ಪರ ಸೀತಾ ಪರಿವಾರ | ಪುತ್ತೂರು ಬದಲಾಯಿಸಲು ಪರ್ವ ಕಾಲ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿ ಮಹಿಳಾ ಸಮಾವೇಶ ‘ಸೀತಾ ಪರಿವಾರ’ ಕಾರ್ಯಕ್ರಮ ಶುಕ್ರವಾರ ಸಂಜೆ ಸುಭದ್ರ ಸಭಾಮಂದಿರದಲ್ಲಿ ಜರಗಿತು. ದಿಕ್ಸೂಚಿ ಭಾಷಣ ಮಾಡಿದ ಅಕ್ಷಯ ಗೋಖಲೆ, ಪುತ್ತೂರಿನ ಮಹಿಳೆಯರು ಮನಸು ಮಾಡಿದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಜಯಶಾಲಿಯಾಗುವರು. ಪುತ್ತೂರನ್ನು ಬದಲಾಯಿಸಲು ಬೇಕಾದ ಸಮಯ ಬಂದಿದೆ. ಈಗ ಬೇಕಾಗಿರುವುದು ಮನಸ್ಸು ಮತ್ತು ಹೃದಯ ಎಂದರು. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಅಧಿಕಾರಕ್ಕಾಗಿ ಚುನಾವಣೆಗೆ ನಿಂತದಲ್ಲ. ಸಮಾಜದ ಅಸ್ಮಿತೆಯ ಪ್ರತೀಕವಾದ

ಪುತ್ತಿಲ ಪರ ಸೀತಾ ಪರಿವಾರ | ಪುತ್ತೂರು ಬದಲಾಯಿಸಲು ಪರ್ವ ಕಾಲ Read More »

ಕಾಸರಗೋಡು ಅನಂತೇಶ್ವರ ದೇವಸ್ಥಾನಕ್ಕೆ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಭೇಟಿ

ಪುತ್ತೂರು: ಜಿಎಸ್ ಬಿ ಸಮಾಜದ ಕಾಸರಗೋಡು ಶ್ರೀ ಮಂಜುಳಾ ಕ್ಷೇತ್ರ ಶ್ರೀಮತ್ ಅನಂತೇಶ್ವರ ದೇವಸ್ಥಾನಕ್ಕೆ ಪುತ್ತೂರು ವಿಧಾನಸಭಾ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಅರ್ಚಕರು ಪ್ರಾರ್ಥನೆ ಸಲ್ಲಿಸಿ ದೇವರ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಕಾಸರಗೋಡು ಅನಂತೇಶ್ವರ ದೇವಸ್ಥಾನಕ್ಕೆ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಭೇಟಿ Read More »

error: Content is protected !!
Scroll to Top