ಪುತ್ತೂರು

ಪಾದಚಾರಿಗೆ ಡಿಕ್ಕಿ ಹೊಡೆದ ಕಾರು

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗೆ ಡಿಕ್ಕಿ ಹೊಡೆದ ಘಟನೆ ಅಡ್ಯನಡ್ಕ ಬಳಿ ನಡೆದಿದೆ. ಘಟನೆ ಪರಿಣಾಮ ಪಾದಚಾರಿಗೆ ಮತ್ತು ಕಾರು ಚಾಲಕನಿಗೆ ಗಾಯಗಳಾಗಿದ್ದು ಅವರನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ಮಣಿಯಾಣಿ ಸ್ಥಳೀಯರ ಸಹಕಾರದೊಂದಿಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪಾದಚಾರಿಗೆ ಡಿಕ್ಕಿ ಹೊಡೆದ ಕಾರು ಬದಿಯ ಧರೆಗೆ ಅಪ್ಪಳಿಸಿ ನಿಂತಿದೆ ಎನ್ನಲಾಗಿದೆ.

ಪಾದಚಾರಿಗೆ ಡಿಕ್ಕಿ ಹೊಡೆದ ಕಾರು Read More »

ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಕೇಶವ ಸಂಕಲ್ಪ ಆಡಿಟೋರಿಯಂನಲ್ಲಿ ಆಚರಿಸಲಾಯಿತು. ಒಂದು ಆರೋಗ್ಯ, ಒಂದು ಭೂಮಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲೇಜು ಆಡಳಿತ್ತ ಮಂಡಳಿ ಸಂಚಾಲಕ ಗೋವಿಂದ ಪ್ರಕಾಶ್‍ ಸಾಯ ಹಾಗೂ ಪ್ರಾಂಶುಪಾಲ ಡಾ.ಗುರುರಾಜ ಎಮ್.ಪಿ. ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನೆದರ್ ಲ್ಯಾಂಡ್‍ ನ ಭಾರತಿೇಯ ರಾಯಭಾರಿ, ಖ್ಯಾತ ಯೋಗಗುರು ಯೋಗಾಚಾರ್ಯ ವಿಜಯ ಗಣೇಶ್‍ ಮಾತನಾಡಿ, ಯೋಗ ಅಭ್ಯಾಸ ನಮ್ಮ ಉತ್ತಮ ಮನಸ್ಸು

ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ

ಪುತ್ತೂರು: ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಪಡೆಯಲು ಪ್ರಾಚೀನ ಮಾರ್ಗವಾಗಿದೆ. ’ಯೋಗ’ ಎಂಬ ಪದದ ಅರ್ಥ ಒಗ್ಗೂಡಿಸುವುದು. ಮನುಷ್ಯನು ತನ್ನ ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟಿಗೆ ತರಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ. ಹೀಗಾಗಿ ನಿರ್ಣಾಯಕ ಶಾಂತಿಯನ್ನು ಪಡೆಯುತ್ತದೆ ಎಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕಿ ಶರಾವತೀ ರವಿನಾರಾಯಣ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು. ವೇದಿಕೆಯಲ್ಲಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಎನ್‌.ಸಿ.ಸಿ. ಆರ್ಮಿ ಮತ್ತು ನೇವಿ ಘಟಕಗಳು, ಎನ್‌.ಎಸ್‌.ಎಸ್‌. ಘಟಕಗಳು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್‌.ಸಿ.ಸಿ. ಘಟಕಗಳು ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್‌.ಸಿ.ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯವಾಕ್ಯದೊಂದಿಗೆಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಸಭಾಭವನದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಆಚರಿಸಲಾಯಿತು. ಮಾಯ್‌ ದೆ ದೇವುಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅ.ವಂ. ಲಾರೆನ್ಸ್ ಮಸ್ಕರೇನ್ಹಸ್ ಉದ್ಘಾಟಿಸಿ ಮಾತನಾಡಿ,

ಸಂತ ಫಿಲೋಮಿನಾ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ

ಕುದ್ಮಾರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುದ್ಮಾರು ಇಲ್ಲಿನ ಮುಖ್ಯ ಶಿಕ್ಷಕ ಕುಶಾಲಪ್ಪ ಬರೆಮೇಲು ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮತ್ತು ವಿದಾಯ ಕೂಟವನ್ನು ಜೂ.21 ಶನಿವಾರ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾಮ ಪಂಚಾಯತ್’ನ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಇವರು ವಹಿಸಿದ್ದರು. ಉದ್ಘಾಟಕರಾಗಿ ಕುಶಾಲಪ್ಪ ಬಿ. ಇವರ ಗುರುಗಳಾದ ರಾಮಚಂದ್ರ ಗೌಡ ಪೆರಿಂಜೆ ಇವರು ಆಗಮಿಸಿದ್ದರು. ಅಭಿನಂದನೆ ಸಲ್ಲಿಕೆಗಾಗಿ ಉದ್ದನೆಯ ಸಾಲು, ಹಾರ-ಶಾಲುಗಳ ರಾಶಿಗಳು ಅಭಿನಂದನಾ ಭಾಷಣಗೈದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ಪುತ್ತೂರು ಇದರ ಆಡಳಿತಾಧಿಕಾರಿ

ಕುದ್ಮಾರು ಹಿ.ಪ್ರಾ.ಶಾಲೆಯಲ್ಲಿ ವಿದಾಯ ಕೂಟ, ಸನ್ಮಾನ ಮತ್ತು ಧ್ವಜ ಕಟ್ಟೆಯ ಲೋಕಾರ್ಪಣೆ Read More »

ನಾಳೆ (ಜೂ.22) : ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

ಕಡಬ: ತಾಲೂಕಿನ ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಶತಮಾನೋತ್ಸವ ಸಮಿತಿ ನೇತೃತ್ವದಲ್ಲಿ ಸುಳ್ಯ ಕೆವಿಜಿ ದಂತ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದಲ್ಲಿ, ಪುಣ್ಚಪ್ಪಾಡಿ ಸಮರ್ಥ ಜನಸೇವಾ ಟ್ರಸ್ಟ್‍, ಸವಣೂರು ಸೇವಾ ಭಾರತಿ ಸಹಕಾರದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಜೂ.22 (ನಾಳೆ) ಭಾನುವಾರ ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯುವ ಶಿಬಿರದಲ್ಲಿ ದಂತ

ನಾಳೆ (ಜೂ.22) : ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ Read More »

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನ

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಆಚರಿಸಲಾಯಿತು. ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದ  ಅಂತರಾಷ್ಟ್ರೀಯ ಯೋಗ ದಿನವನ್ನು ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಲಾಗಿದ್ದು, ಗೇರುಕಟ್ಟೆ ಕ್ಷೀರಸಂಗಮ ಸಭಾಭವನ ಕಳಿಯ ಶಾಖಾ ಯೋಗ ಶಿಕ್ಷಕಿ ಪ್ರೇಮಲತಾ, ಸಹಶಿಕ್ಷಕ ಸುಕೇಶ್‍, ಸಂಚಾಲಕ ಕೇಶವ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯೋಗ ಬಂಧುಗಳಾದ ಅರುಣ, ಶುಭಮಂಗಳ, ಹರೀಶ ಮಾವಿನಕಟ್ಟೆ,

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನ Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನವ್ಯ, ಸದಸ್ಯರಾದ ಸುರೇಶ್ ಗಂಡಿ, ವಿನುತ ಅರ್ಚನಾ, ಚಂದ್ರಾವತಿ ಹರೀಶ್, ರಝಾಕ್, ಸಲೀಂ, ಫಾರೂಕ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ., ಶೋಭಾ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ಸವಿತಾ, ಸಂಚನಾ, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ Read More »

ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ

ಪುತ್ತೂರು: ನಗರಸಭಾ ಸದಸ್ಯ ಶೀನಪ್ಪ ನಾಯ್ಕ ಅನಾರೋಗ್ಯದಿಂದ ಶನಿವಾರ ನಿಧನರಾದರು. ಮುಕ್ರಂಪಾಡಿ ಆನಂದಾಶ್ರಮ ನಿವಾಸಿಯಾಗಿದ್ದ ಶೀನಪ್ಪ ನಾಯ್ಕರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ Read More »

ಕುದ್ಮಾರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭದ ಕೊಡುಗೆ

ಪುತ್ತೂರು: ಕಡಬ ತಾಲೂಕು ಕುದ್ಮಾರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಪಡೆದ ಕುಶಾಲಪ್ಪ ಬರೆಮೇಲು ಅವರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭವೊಂದನ್ನು ಕೊಡುಗೆಯಾಗಿ ನೀಡಿದರು. ಸುಸಜ್ಜಿತ ಧ್ವಜಸ್ತಂಭಸುಮಾರು 85,000/- ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಧ್ವಜಸ್ತಂಭವು ಮೂರು ಹಂತಗಳ ಮೆಟ್ಟಿಲುಗಳನ್ನು ಹೊಂದಿದ್ದು ರಾಷ್ಟ್ರ ಧ್ವಜದ ತ್ರಿವರ್ಣಗಳಿಂದ ಕಂಗೊಳಿಸುತ್ತಿದೆ. ಸುಮಾರು 50 ಚದರ ಅಡಿಗಳಷ್ಟು ವಿಶಾಲವಾಗಿರುವ ಪೀಠಕ್ಕೆ ನಾಲ್ಕು ಸುತ್ತುಗಳಿಂದಲೂ ಸ್ಟೈನ್’ಲೆಸ್ ಸ್ಟೀಲ್ ಕಂಬಿಗಳನ್ನು ಬಳಸಿ ನಿರ್ಮಿಸಿದ, ಗೇಟ್ ಸಹಿತವಾದ ತಡೆ ಬೇಲಿ ಇದೆ. ಇದರಿಂದಾಗಿ ನಾಯಿ ಇತ್ಯಾದಿ

ಕುದ್ಮಾರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭದ ಕೊಡುಗೆ Read More »

error: Content is protected !!
Scroll to Top