ಪುತ್ತೂರು

ಮತಬೇಟೆಗೆ ಅಂತಿಮ ತಯಾರಿ | ಮಸ್ಟರಿಂಗ್ ಕೇಂದ್ರದಲ್ಲಿ ಅಧಿಕಾರಿಗಳು ರೆಡಿ

ಪುತ್ತೂರು: ಮೇ 10ರಂದು ನಡೆಯುವ ಪ್ರಜಾಪ್ರಭುತ್ವದ ಹಬ್ಬಕ್ಕೆ ಅಂತಿಮ ತಯಾರಿಗಳು ತೆಂಕಿಲ ವಿವೇಕಾನಂದ ಶಾಲೆಯಲ್ಲಿ ನಡೆಯುತ್ತಿವೆ. ವಿವೇಕಾನಂದ ಶಾಲೆಯನ್ನು ಮಸ್ಟರಿಂಗ್ ಕೇಂದ್ರವಾಗಿ ಪರಿವರ್ತಿಸಿದ್ದು, ಅಧಿಕಾರಿಗಳು ಮಸ್ಟರಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಂಜೆ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳಿಗೆ ತೆರಳಲಿದ್ದಾರೆ. ನಾಳೆ ಅಂದರೆ ಮೇ 10ರಂದು ಮತಗಟ್ಟೆಗಳಲ್ಲಿ ಮತದಾನ ನಡೆಸಿಕೊಡಲಿದ್ದಾರೆ. 1 ಸಾವಿರಕ್ಕಿಂತ ಹೆಚ್ಚಿನ ಮತದಾರರಿರುವ ಬೂತ್ ಗಳಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಸ್ಟರಿಂಗ್ ಕೇಂದ್ರದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಬಂದೋಬಸ್ತಿನ ವ್ಯವಸ್ಥೆಗಳಲ್ಲಿ ನಿರತರಾಗಿದ್ದಾರೆ.

ಮತಬೇಟೆಗೆ ಅಂತಿಮ ತಯಾರಿ | ಮಸ್ಟರಿಂಗ್ ಕೇಂದ್ರದಲ್ಲಿ ಅಧಿಕಾರಿಗಳು ರೆಡಿ Read More »

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೇರಲು ತಲೆಬೈಲು ಮಠದಲ್ಲಿ ಯತೀಶ್ ಆರ್ವಾರ್ ಪ್ರಾರ್ಥನೆ

ಪುತ್ತೂರು: ಶತ್ರುನಿಗ್ರಹ ಕ್ಷೇತ್ರ ತಲೆಬೈಲು ಶ್ರೀ ನರಸಿಂಹ ದೇವರ ಮಠಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಭಾರಿ, ಬಿಜೆಪಿಯ ಪ್ರಾಂತ ಸಹಸಂಘಟನಾ ಮಾಜಿ ಕಾರ್ಯದರ್ಶಿ ಯತೀಶ್ ಆರ್ವಾರ್ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಲ್ಲಿ ಬಿಜೆಪಿ ಬಹುಮತದಿಂದ ಸರ್ಕಾರ ರಚಿಸುವಂತಾಗಬೇಕು ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅತ್ಯಧಿಕ ಮತಗಳ ಅಂತರದಿಂದ ಜಯ ಗಳಿಸಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಠದ ಮಂಜುನಾಥ್ ಉಡುಪ ಅವರು ಅನುಗ್ರಹ ಪ್ರಾರ್ಥನೆ ಮಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೇರಲು ತಲೆಬೈಲು ಮಠದಲ್ಲಿ ಯತೀಶ್ ಆರ್ವಾರ್ ಪ್ರಾರ್ಥನೆ Read More »

ಕ್ಯಾಂಪ್ಕೋ ಡೆಪ್ಯುಟಿ ಮೆನೇಜರಿಗೆ ಸನ್ಮಾನ, ಬೀಳ್ಕೊಡುಗೆ

ಪುತ್ತೂರು: ಕ್ಯಾಂಪ್ಕೋದಲ್ಲಿ ಡೆಪ್ಯುಟಿ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾದ ಉಷಾ ದಂಪತಿಯನ್ನು ಪುತ್ತೂರು ಕ್ಯಾಂಪ್ಕೋ ಕಚೇರಿಯಲ್ಲಿ ಸನ್ಮಾನ ಮಾಡಿ, ಬೀಳ್ಕೊಡಲಾಯಿತು. ಕಳೆದ 26 ವರ್ಷಗಳ ಕಾಲ ಉಷಾ ಅವರು ಕ್ಯಾಂಪ್ಕೋದಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ನಿವೃತ್ತಗೊಳ್ಳುತ್ತಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ ಎಂಡಿ ಕೃಷ್ಣ ಕುಮಾರ್ ಸನ್ಮಾನ ನೆರವೇರಿಸಿದರು. ಕ್ಯಾಂಪ್ಕೋ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕ್ಯಾಂಪ್ಕೋ ಡೆಪ್ಯುಟಿ ಮೆನೇಜರಿಗೆ ಸನ್ಮಾನ, ಬೀಳ್ಕೊಡುಗೆ Read More »

ಬನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ಪರ ಮತ ಯಾಚನೆ

ಪುತ್ತೂರು: ಬನ್ನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ, ಸಾರ್ವಜನಿಕ ಸಭೆ ಈಶ್ವರ ಗೌಡ ಗೋಳ್ತಿಲ ಅವರ ಮನೆಯಲ್ಲಿ ನಡೆಯಿತು. ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಜಯ ಏಕ, ಸೂರಜ್ ಗೋಳ್ತಿಲ, ಚಂದ್ರ ಗೋಳ್ತಿಲ, ಹರೀಶ್ ಪ್ರಭು, ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್, ಹರಿಣಾಕ್ಷಿ, ಶೀನಪ್ಪ ಕುಲಾಲ್, ತಿಮ್ಮಪ್ಪ ಪೂಜಾರಿ, ಅಕ್ಷಯ್ ಗೋಳ್ತಿಲ, ರೇಷ್ಮಾ ಗೋಳ್ತಿಲ, ಕವನ ಗೋಳ್ತಿಲ  ಮತ್ತಿತರರು ಉಪಸ್ಥಿತರಿದ್ದರು.

ಬನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ಪರ ಮತ ಯಾಚನೆ Read More »

ಈಶ್ವರಮಂಗಲ ಪೇಟೆಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ | ಮತ ಯಾಚನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ಈಶ್ವರಮಂಗಲ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ರಮೇಶ್, ಪ್ರದೀಪ್ ಕಾರ್ನೂರ್, ದೀಪಕ್ ಮುಂಡ್ಯ, ಅಬ್ದುಲ್ ಖಾದರ್ ನರ್ಸಿನಡ್ಕ, ಅಬ್ದುಲ್ ರಝಾಕ್, ದೀಪಕ್, ಚಂದ್ರಹಾಸ್, ಎಪಿಎಂಸಿ ಸದಸ್ಯೆ ಮೋಹನಾಂಗಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈಶ್ವರಮಂಗಲ ಪೇಟೆಯಲ್ಲಿ ಬಿಜೆಪಿ ಬೃಹತ್ ರೋಡ್ ಶೋ | ಮತ ಯಾಚನೆ Read More »

ದ್ವಿತೀಯ ಪಿಯುಸಿಯಲ್ಲಿ 584 ಅಂಕ ಪಡೆದ ಸಂಜನಾಗೆ ಕ್ಯಾಂಪ್ಕೋ ವತಿಯಿಂದ ಸನ್ಮಾನ

ಪುತ್ತೂರು: 2022-23ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 584 ಅಂಕ ಪಡೆದ ಸಂಜನಾ ಕೆ ಅವರನ್ನು ಪುತ್ತೂರು ಕ್ಯಾಂಪ್ಕೋ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಕ್ಯಾಂಪ್ಕೋ ಎಂಡಿ ಕೃಷ್ಣಕುಮಾರ್ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿಯಲ್ಲಿ 584 ಅಂಕ ಪಡೆದ ಸಂಜನಾಗೆ ಕ್ಯಾಂಪ್ಕೋ ವತಿಯಿಂದ ಸನ್ಮಾನ Read More »

ಶ್ರೀ ಸಂಯಮೀಂದ್ರ ತೀರ್ಥರ ಆಶೀರ್ವಾದ ಪಡೆದ ಆಶಾ ತಿಮ್ಮಪ್ಪ

ಪುತ್ತೂರು: ಬೆಳ್ತಂಗಡಿಗೆ ಆಗಮಿಸಿದ್ದ ಕಾಶೀ ಮಠಾಧಿಪತಿ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀ ಸ್ವಾಮೀಜಿಯವರು ಫಲ, ಪುಷ್ಪ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ ಸಂಯಮೀಂದ್ರ ತೀರ್ಥರ ಆಶೀರ್ವಾದ ಪಡೆದ ಆಶಾ ತಿಮ್ಮಪ್ಪ Read More »

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ದಿವ್ಯಪ್ರಭಾ ಚಿಲ್ತಡ್ಕ ಭೇಟಿ

ಪುತ್ತೂರು: ಶ್ರೀ ತಲೆಬೈಲು ನರಸಿಂಹ ದೇವರ  ಮಠಕ್ಕೆ ಪುತ್ತೂರು ತಾಲೂಕು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಅರ್ಚಕರು ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ದಿವ್ಯಪ್ರಭಾ ಚಿಲ್ತಡ್ಕ ಭೇಟಿ Read More »

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ರಾಧಾಕೃಷ್ಣ ಬೋರ್ಕರ್ ಭೇಟಿ

ಪುತ್ತೂರು: ಶ್ರೀ ತಲೆಬೈಲು ನರಸಿಂಹ ದೇವರ  ಮಠಕ್ಕೆ ಪುತ್ತೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಪ್ರಶಿಕ್ಷಣ_ಪ್ರಕೋಷ್ಟದ ರಾಧಾಕೃಷ್ಣ ಬೋರ್ಕರ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಅರ್ಚಕರು ಬಿಜೆಪಿ ಗೆಲುವಿಗೆ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ಕ್ಷೇತ್ರಕ್ಕೆ ರಾಧಾಕೃಷ್ಣ ಬೋರ್ಕರ್ ಭೇಟಿ Read More »

ಆಶಾ ತಿಮ್ಮಪ್ಪ ಪರವಾಗಿ ಉಪ್ಪಿನಂಗಡಿಯಲ್ಲಿ ಮತಯಾಚಿಸಿದ ಕೋಟಾ, ಕುಂಟಾರು ರವೀಶ ತಂತ್ರಿ

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಉಪ್ಪಿನಂಗಡಿಯಲ್ಲಿ ಬೃಹತ್ ರೋಡ್ ಶೋ ಸೋಮವಾರ ಬೆಳಿಗ್ಗೆ ಜರಗಿತು. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಪುತ್ತೂರಿನಲ್ಲಿ ಸಮರ್ಥ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕೆ ಇಳಿಸಲಾಗಿದೆ. ಅಪಪ್ರಚಾರಗಳು ಏನೇ ನಡೆದರೂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಶಾ ತಿಮ್ಮಪ್ಪ ಅವರು ಕಾರ್ಯವೈಖರಿ ಮೆಚ್ಚುವಂತಹದ್ದೇ ಆಗಿತ್ತು. ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದ್ದಲ್ಲದೇ, ಸಂಘಟನಾತ್ಮಕವಾಗಿಯೂ ಗುರುತಿಸಿಕೊಂಡವರು. ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಸರಕಾರದ ಅಭಿವೃದ್ಧಿ ಪರ ಆಡಳಿತ, ಹಿಂದುತ್ವದ ಪರವಾಗಿ ಸರಕಾರ ಕೈಗೊಂಡ

ಆಶಾ ತಿಮ್ಮಪ್ಪ ಪರವಾಗಿ ಉಪ್ಪಿನಂಗಡಿಯಲ್ಲಿ ಮತಯಾಚಿಸಿದ ಕೋಟಾ, ಕುಂಟಾರು ರವೀಶ ತಂತ್ರಿ Read More »

error: Content is protected !!
Scroll to Top