ಪುತ್ತೂರು

ತಂಬುತ್ತಡ್ಕ: ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ

ಪುತ್ತೂರು: ಡೇ-ಎನ್.ಆರ್.ಎಲ್.ಎಂ. ಯೋಜನೆಯಡಿ ಸ್ಪಂದನ ಕೃಷಿ ಉತ್ಪಾದಕ ಸಂಘದ ವತಿಯಿಂದ ನಿಡ್ಪಳ್ಳಿ ಗ್ರಾಮ ಪಂಚಾಯತ್ನ ತಂಬುತ್ತಡ್ಕದಲ್ಲಿ ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ ನಡೆಯಿತು. ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲೀಕರಣ ಆಗಬೇಕು ಎಂದ ಅವರು, ಸದ್ರಿ ಘಟಕಕ್ಕೆ ಹಳೆ ಸಿ.ಎ. ಬ್ಯಾಂಕ್ ಕಟ್ಟಡವನ್ನು ಬಾಡಿಗೆ ರಹಿತವಾಗಿ ನೀಡಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯತ್ ಉಪ್ಯಾಧ್ಯಕ್ಷ ವೆಂಕಟರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. NRLM ತಾಲೂಕು […]

ತಂಬುತ್ತಡ್ಕ: ಹಾಳೆತಟ್ಟೆ ಘಟಕದ ಮಾಹಿತಿ ಕಾರ್ಯಕ್ರಮ Read More »

ಡ್ರಾಯಿಂಗ್ ಪರೀಕ್ಷೆ: ಅಂಬಿಕಾ ಸಿಬಿಎಸ್ಇ ವಿದ್ಯಾರ್ಥಿಗಳ ಸಾಧನೆ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾಲಯದ ಸಿ.ಬಿ.ಎಸ್.ಇ.ಯಿಂದ ೧೫ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಆರ್ಯ ಎಂ. 50.50%, ಪ್ರಾರ್ಥನಾ ರೈ ಯು.ಎಸ್ 77.50%, ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಯಶಸ್ವಿ ಸುರುಳಿ 75.83%, ಅರುಂಧತಿ ಎಲ್. ಆಚಾರ್ಯ 71.50%, ಸಿಂಚನಾ ಹರೀಶ್ 71.33%, ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ.ಕೆ 72.17%, ಅಕ್ಷಜ್ ರೈ ಪಿ. 71.33% ಶೇಕಡವಾರು

ಡ್ರಾಯಿಂಗ್ ಪರೀಕ್ಷೆ: ಅಂಬಿಕಾ ಸಿಬಿಎಸ್ಇ ವಿದ್ಯಾರ್ಥಿಗಳ ಸಾಧನೆ Read More »

ಜ. 7: ನರಿಮೊಗರು ಸರಸ್ವತಿ ವಿದ್ಯಾಮಂದಿರದ ಶೈಕ್ಷಣಿಕೋತ್ಸವ

ಪುತ್ತೂರು: ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಶಿಶುಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವರ್ಧಂತ್ಯುತ್ಸವ ಪ್ರತಿಭಾ ಸರಸ್ವತಿ ಜ. 7ರಂದು ಮಧ್ಯಾಹ್ನ 3 ಗಂಟೆಗೆ ಶಾಲೆಯ ಸರಸ್ವತಿ ವಂದನಾದಲ್ಲಿ ನಡೆಯಲಿದೆ.ಕೃಷಿಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಮುಖ್ಯ ಅತಿಥಿಯಾಗಿರುವರು. ಪುತ್ತೂರು ಆಡ್ ಮೀಡಿಯಾದ ಆರ್.ಸಿ. ನಾರಾಯಣ ಮುಖ್ಯ ಅತಿಥಿಯಾಗಿರುವರು. ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೆ. ಸುಧಾಕರ ಪುತ್ತೂರಾಯ, ರೋಟರಿ ಪುತ್ತೂರು ಪೂರ್ವದ ಅಧ್ಯಕ್ಷ ಶರತ್

ಜ. 7: ನರಿಮೊಗರು ಸರಸ್ವತಿ ವಿದ್ಯಾಮಂದಿರದ ಶೈಕ್ಷಣಿಕೋತ್ಸವ Read More »

ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕೋತ್ಸವ

ಪುತ್ತೂರು: ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಜ. 6ರಂದು ಶೈಕ್ಷಣಿಕೋತ್ಸವ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲೆಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿವೆ. ಪ್ರಧಾನಮಂತ್ರಿಯವರು ಶೈಕ್ಷಣಿಕ ಚಟುವಟಿಕೆಗಾಗಿ ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಎಲ್ಲಾ ಶಾಲೆಗಳಿಗೂ ಹೊಸ ಮೆರುಗು ಬರಲಿದೆ ಎಂದ ಅವರು, ದೇವಾಲಯಗಳು ಸಂಸ್ಕೃತಿಯನ್ನು ಕಲಿಸಿದರೆ, ಶಾಲೆಗಳು ಜ್ಞಾನವನ್ನು ಕಲಿಸುವ ಕೆಲಸವನ್ನು ಮಾಡುತ್ತಿವೆ ಎಂದರು.ಕಳೆದ 57 ವರ್ಷಗಳಿಂದ ವಿದ್ಯಾಭ್ಯಾಸ ನೀಡವು ಕಾಯಕದಲ್ಲಿ ಸೀತಾರಾಘವ ಪದವಿಪೂರ್ವ ಕಾಲೇಜು

ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕೋತ್ಸವ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರದ ಸ್ಟಿಕ್ಕರ್ ವಿತರಣೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣೆಯ ಹಿನ್ನೆಲೆಯಲ್ಲಿ ಮಹಾಸ್ವಾಮೀಜಿ ಅವರ ಭಾವಚಿತ್ರದ ಸ್ಟಿಕ್ಕರನ್ನು ಸವಣೂರು ಗ್ರಾಮದಲ್ಲಿ ವಿತರಿಸಲಾಯಿತು. ಇದರೊಂದಿಗೆ ಪ್ರತಿ ಮನೆಮನೆಗೆ ಆಮಂತ್ರಣವನ್ನು ನೀಡಿ, ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರದ ಸ್ಟಿಕ್ಕರ್ ವಿತರಣೆ Read More »

ಜ. 8, 9,10: ಕಾಡು ಬಯಲು ರಂಗಮಂದಿರದಲ್ಲಿ ಇಫಿಜೀನಿಯಾ, ಮುಕ್ತಧಾರಾ, ಲೀಕ್ ಔಟ್ ನಾಟಕ ಪ್ರದರ್ಶನ

ಪುತ್ತೂರು: ಇಲ್ಲಿನ ನೆಹರೂನಗರದ ಕಾಡು ಬಯಲು ರಂಗಮಂದಿರದಲ್ಲಿ ಜ. 8, 9, 10ರಂದು ನೀನಾಸಂ ತಂಡದ ಇಫಿಜೀನಿಯಾ, ಮುಕ್ತಧಾರಾ ಹಾಗೂ ಏಕವ್ಯಕ್ತಿ ನಾಟಕ ಲೀಕ್ ಔಟ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾಡು ಬಯಲು ರಂಗಮಂದಿರದ ನಿರ್ದೇಶಕ ರಾಘವೇಂದ್ರ ಎಚ್.ಎಂ. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು ಬಯಲುರಂಗಮಂದಿರದಲ್ಲಿ ಪ್ರತಿ ವರ್ಷ ನಿರಂತರವಾಗಿ ರಂಗ ಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನೀನಾಸಂ ನಾಟಕ ಕಳೆದ 30 ವರ್ಷಗಳಿಂದ ಕಾಡು ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೋವಿಡ್ ಕಾರಣಗಳಿಂದ ಕಳೆದ 2 ವರ್ಷ

ಜ. 8, 9,10: ಕಾಡು ಬಯಲು ರಂಗಮಂದಿರದಲ್ಲಿ ಇಫಿಜೀನಿಯಾ, ಮುಕ್ತಧಾರಾ, ಲೀಕ್ ಔಟ್ ನಾಟಕ ಪ್ರದರ್ಶನ Read More »

ಚುಂಚಶ್ರೀ ಸಭಾಂಗಣದಲ್ಲಿ ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಸಿದ್ಧತಾ ಸಭೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಜ. 5ರಂದು ತೆಂಕಿಲ ಒಕ್ಕಲಿಗ ಗೌಡ ಸೇವಾ ಸಂಘದ ಚುಂಚಶ್ರೀ ಸಭಾಂಗಣದಲ್ಲಿ ಸಭೆ ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಸಂಘಟಿಸಿರುವುದೇ ನಮ್ಮೆಲ್ಲರ ಭಾಗ್ಯ. ರಾಜ್ಯದ ಕೇಂದ್ರವಾಗಿ ಪುತ್ತೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಜನರೇ ಪುತ್ತೂರಿನತ್ತ ನೋಡಲಿದ್ದಾರೆ. ಆದ್ದರಿಂದ ಎಲ್ಲರೂ ಜೊತೆಯಾಗಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಆದಿಚುಂಚನಗಿರಿ

ಚುಂಚಶ್ರೀ ಸಭಾಂಗಣದಲ್ಲಿ ಜಯಂತ್ಯೋತ್ಸವ ಸಂಸ್ಮರಣೆಯ ಪೂರ್ವಸಿದ್ಧತಾ ಸಭೆ Read More »

ಪುತ್ತೂರಿನಲ್ಲಿ ಮಹಿಳಾ ಮತದಾರರೇ ಅಧಿಕ | ಒಟ್ಟು 208272 ಮತದಾರರ ಪೈಕಿ 105363 ಮಹಿಳೆಯರು

ಪುತ್ತೂರು: ಇದುವರೆಗೆ ದಾಖಲಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧವಾಗಿದ್ದು, 208272 ಮತದಾರರ ಹೆಸರು ಹಕ್ಕು ಚಲಾಯಿಸುವ ಕಾರ್ಯಕ್ಕೆ ಅಂತಿಮಗೊಂಡಿದೆ. ಇದರಲ್ಲಿ 105363 ಮಂದಿ ಮಹಿಳೆಯರೇ ಎನ್ನುವುದು ವಿಶೇಷ. ಪುತ್ತೂರು ತಾಲೂಕು ಕಚೇರಿಯ ಲೆಕ್ಕಾಚಾರದಂತೆ, ಇದುವರೆಗೆ 208272 ಮಂದಿ ಮತದಾರರ ಪಟ್ಟಿ ಸಿದ್ಧವಾಗಿದೆ. ಅಂದರೆ ಇದೇ ಅಂತಿಮವಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಘೋಷಣೆ ಮಾಡುವ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ನೀಡಲು ಅವಕಾಶವಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ಮಹಿಳಾ ಮತದಾರರೇ ಅಧಿಕ | ಒಟ್ಟು 208272 ಮತದಾರರ ಪೈಕಿ 105363 ಮಹಿಳೆಯರು Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ | ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ | ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ | ಸವಣೂರಿನಲ್ಲಿ ಪೂರ್ವಸಿದ್ಧತಾ ಸಭೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸವಣೂರಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಮನೆಮನೆಗೆ ಆಮಂತ್ರಣ ಪತ್ರ ತಲುಪಿಸುವ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಭಾವಚಿತ್ರವುಳ್ಳ ಸ್ಟಿಕ್ಕರನ್ನು ಪ್ರತಿ ಮನೆಮನೆಗೆ ತಲುಪಿಸಿ, ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ | ಸವಣೂರಿನಲ್ಲಿ ಪೂರ್ವಸಿದ್ಧತಾ ಸಭೆ Read More »

error: Content is protected !!
Scroll to Top