ಮುಂದಿನ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಈಗಲೇ ಸಿದ್ಧರಾಗಿ : ಪ್ರಾಕೃತಿಕ ವಿಕೋಪ ಸಭೆಯಲ್ಲಿ ಸಹಾಯ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ
ಪುತ್ತೂರು: ಮುಂದಿನ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಂದರ್ಭದಲ್ಲಿ ಸಮರ್ಪಕವಾಗಿ ಎದುರಿಸಲು ಎಲ್ಲಾ ಇಲಾಖೆಗೆಳ ಸಹಕಾರ ಅತೀ ಆವಶ್ಯಕವಾಗಿದ್ದು, ಉತ್ತಮ ರೀತಿಯಲ್ಲಿ ಸ್ಪಂಧಿಸಿ, ಸಹಕರಿಸುವ ನಿಟ್ಟಿನಲ್ಲಿ ಈಗಲೇ ಸಜ್ಜಾಗಿ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಅಗ್ನಿಶಾಮಕ ಇಲಾಖೆಯವರ ಪಾತ್ರ ಪ್ರಾಮುಖ್ಯವಾಗಿದೆ. ಜೊತೆಗೆ ಎಸ್‌ಡಿಆರ್‌ಎಫ್ ತಂಡವಿದೆ. ಹೋಂಗಾರ್ಡ್ ನವರು ಜೊತೆಗೆ ಸಹಕರಿಸಲಿದ್ದಾರೆ. […]










