ಪುತ್ತೂರು

ಅಗಳಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ | ಜ. 16ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ

ಪುತ್ತೂರು: ಕಾಣಿಯೂರಿನ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಜ. 11ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬುಧವಾರ ಬೆಳಿಗ್ಗೆ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬುಧವಾರ ಸಂಜೆ ಅಗಳಿ ಶ್ರೀ ಸದಾಶಿವ ಭಜನಾ ಮಂಡಳಿ ಸದಸ್ಯರಿಂದ ಮತ್ತು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸದಸ್ಯರಿಂದ […]

ಅಗಳಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ | ಜ. 16ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ Read More »

ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆ

ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲ ಕಾರ್ಯ ನಿರ್ವಹಣಾ ತಂಡದ ಸಭೆ ಗುರುವಾರ ಪುತ್ತೂರು ಟೌನ್ ಬ್ಯಾಂಕ್ ಸಬಾಭವನದಲ್ಲಿ ನಡೆಯಿತು. ಶಾಸಕ  ಸಂಜೀವ ಮಠಂದೂರು ಮಾತನಾಡಿ, ಸಂಘಟನೆಗೆ ಪ್ರಾಮುಖ್ಯತೆ ನೀಡಬೇಕು. ನಮ್ಮ ಪಕ್ಷ ಅಧಿಕಾರದಲ್ಲಿದೆ ಎಂದು ಕೂತಲ್ಲಿಯೇ ಪ್ರಚಾರ ಮಾಡಿದರೆ ಸಾಕಾಗುವುದಿಲ್ಲ. ಪ್ರಚಾರಕ್ಕಾಗಿ ಎಷ್ಟು ಸಮಯ ನೀಡುತ್ತೇವೋ, ಸಂಪರ್ಕ ಸಾಧಿಸುತ್ತೇವೋ, ಎಷ್ಟು ಬಾರಿ ಬೂತ್ ಪ್ರವಾಸ ಕೈಗೊಳ್ಳುತ್ತೇವೆಯೋ ಅಷ್ಟು ಸಂಘಟನೆ ಆಗುತ್ತದೆ. ಪಕ್ಷ ಇನ್ನಷ್ಟು ಬಲಗೊಳ್ಳುತ್ತದೆ ಎಂದರು. ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೆರಳೆ,

ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆ Read More »

ಜ. 14: ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಯುವ ಸಪ್ತಾಹ | ವಿವೇಕ ರಥ – ಯುವ ಪಥ, ತಾಲೂಕು ಯುವ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಯುವ ಸಪ್ತಾಹ ವಿವೇಕ ರಥ – ಯುವ ಪಥ, ತಾಲೂಕು ಯುವ ಪ್ರಶಸ್ತಿ ಪ್ರದಾನ ಸಮಾರಂಭ ಜ. 14ರಂದು ಬೆಳಿಗ್ಗೆ 10ರಿಂದ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ. ಪುತ್ತೂರು ತಾಲೂಕು ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿ ಅಭಿವೃದ್ಧಿ

ಜ. 14: ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಯುವ ಸಪ್ತಾಹ | ವಿವೇಕ ರಥ – ಯುವ ಪಥ, ತಾಲೂಕು ಯುವ ಪ್ರಶಸ್ತಿ ಪ್ರದಾನ ಸಮಾರಂಭ Read More »

ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ | ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ತುಂಬಾ ಪ್ರಯೋಜನಕಾರಿಯಾಗಲಿದೆ ಎಂ ಅವರು, ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಶ್ರೀಧರ ಗೌಡ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಆಸ್ತಿ. ಮಾನವೀಯ ಮೌಲ್ಯಗಳನ್ನು ಬೆಳೆಸಿ

ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ | ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಜನನ ಮರಣ, ವ್ಯಾಪಾರ ಅರ್ಜಿ ವಿಲೇ ಕಾರ್ಯ ವಿಳಂಬ | ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ

ಪುತ್ತೂರು: ಜನನ ಮರಣ ಅರ್ಜಿಗಳು ಪೆಂಡಿAಗ್ ಇದೆ. ವಿಲೇವಾರಿ ಕಾರ್ಯದಲ್ಲಿ ವಿಳಂಬ ಆಗುತ್ತಿದೆ ಎಂದು ನಗರಸಭಾ ಸದಸ್ಯರು ಆರೋಪಿಸಿದರು. ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುತ್ತೂರು ನಗರಸಭಾ ಸಾಮಾನ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. ಅರ್ಜಿ ಸಲ್ಲಿಸಿದ ಸಾರ್ವಜನಿಕರನ್ನು ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಸತಾಯಿಸುತ್ತಿರುವ ವಿಷಯದ ಬಗ್ಗೆ ಪ್ರಸ್ತಾಪಿಸಿದ, ಮಹಮ್ಮದ್ ರಿಯಾಝ್ ಅವರು ಜನನ ಮರಣ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಸಮಸ್ಯೆ ಕ್ಲಿಷ್ಟಗೊಳಿಸಿ ಗೊಂದಲ ಮೂಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ಜನನ ಮರಣ, ವ್ಯಾಪಾರ ಅರ್ಜಿ ವಿಲೇ ಕಾರ್ಯ ವಿಳಂಬ | ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ Read More »

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ ಸಂಸ್ಮರಣೆ: ವಿವಿಧೆಡೆ ವಲಯವಾರು, ಗ್ರಾಮವಾರು ಪೂರ್ವಭಾವಿ ಸಭೆ

ಪುತ್ತೂರು: ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 86ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಪೂರ್ವಭಾವಿಯಾಗಿ ವಲಯವಾರು ಹಾಗೂ ಗ್ರಾಮವಾರು ಸಭೆ ನಡೆಸಲಾಗುತ್ತಿದೆ.

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ ಸಂಸ್ಮರಣೆ: ವಿವಿಧೆಡೆ ವಲಯವಾರು, ಗ್ರಾಮವಾರು ಪೂರ್ವಭಾವಿ ಸಭೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು ರಚನಾ ಎನರ್ಕೇರ್ ನಡುವೆ ಒಪ್ಪಂದ

ಪುತ್ತೂರು: ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಮೈಸೂರಿನ ಇಂಧನ ನಿರ್ವಹಣಾ ಸಂಸ್ಥೆ ರಚನಾ ಎನರ್ ಕೇರ್ ನಡುವೆ ತಿಳುವಳಿಕೆ ಒಪ್ಪಂದ ನಡೆಯಿತು. ಮೆಕ್ಯಾನಿಕಲ್ ಸಿವಿಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ಮತ್ತು ತರಬೇತಿಗಳನ್ನು ನಡೆಸುವುದು, ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಪ್ರಾಜೆಕ್ಟ್ಗಳನ್ನು ಗುರುತಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಸಹಕರಿಸುವುದು, ಯೋಜನೆಗಳ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಗುರುತಿಸಿ ಅದಕ್ಕೆ ತಾಂತ್ರಿಕ ಹಾಗೂ ವಾಣಿಜ್ಯಿಕ ಮಾರ್ಗದರ್ಶನವನ್ನು ನೀಡುವುದು, ವೃತ್ತಿಪರ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು ರಚನಾ ಎನರ್ಕೇರ್ ನಡುವೆ ಒಪ್ಪಂದ Read More »

ಪಣೋಲಿಬೈಲು: ಇಂದಿನಿಂದ ಜ. 16ರವರೆಗೆ ಅಗೇಲು, ಕೋಲ ಇಲ್ಲ

ಬಂಟ್ವಾಳ: ಕಾರಣಿಕ ಕ್ಷೇತ್ರ ಬಂಟ್ವಾಳ ತಾಲೂಕಿನ ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಜ. 9ರಿಂದ ಜ. 16ರವರೆಗೆ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ. ಸಜೀಪ ಮಾಗಣೆ ಶ್ರೀ ಉಳ್ಳಾಲ್ದಿ ಅಮ್ಮನವರ ವಾರ್ಷಿಕ ಪುದ್ವಾರ್ ಮೆಚ್ಚಿ ಜಾತ್ರೆಯ ಹಿನ್ನೆಲೆಯಲ್ಲಿ ಪಣೋಲಿಬೈಲು ದೈವಸ್ಥಾನದಲ್ಲಿ ಅಗೇಲು ಸೇವೆ ಮತ್ತು ಕೋಲ ಸೇವೆ ಜ. 16ರವರೆಗೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

ಪಣೋಲಿಬೈಲು: ಇಂದಿನಿಂದ ಜ. 16ರವರೆಗೆ ಅಗೇಲು, ಕೋಲ ಇಲ್ಲ Read More »

ತ್ರಿವಳಿ ತಾಲೂಕು ಬೆಸೆಯುವ ಬಲೆರಾವು ಸೇತುವೆ ಸಹಿತ ಕಿಂಡಿಅಣೆಕಟ್ಟು | ಮೈಕೊಡವಿ ಮೇಲೆದ್ದ ಮೂಲೆಗುಂಪಾಗಿದ್ದ ಶಾಂತಿಗೋಡು ಗ್ರಾಮದ ಬಲೆರಾವು

ಪುತ್ತೂರು: ತೀರಾ ಕುಗ್ರಾಮವಾಗಿದ್ದ ಬಲೆರಾವು, ಆಧುನಿಕ ಜಗತ್ತಿಗೆ ತೆರೆದುಕೊಳ್ಳತೊಡಗಿದೆ. ಮುಂದೊಂದು ದಿನ ಇದು ತಾಲೂಕಿನ ಪ್ರಮುಖ ಪ್ರದೇಶವಾಗಿ ಬೆಳೆದರೂ ಅಚ್ಚರಿಪಡಬೇಕಾಗಿಲ್ಲ. ಇದಕ್ಕೆಲ್ಲಾ ಕಾರಣ, ಒಂದು ರಸ್ತೆ ಹಾಗೂ ಒಂದು ಸೇತುವೆ ಸಹಿತ ಕಿಂಡಿಅಣೆಕಟ್ಟು. ಹೌದು! ಹೆಸರಿಗೆ ತಕ್ಕಂತೆ ಬಲೆರಾವು – ಬಲ್ಲೆಗಳೇ ತುಂಬಿದ್ದ ಊರು. ತುಳುವಿನಲ್ಲಿ ಹೇಳಬೇಕೆಂದರೆ – “ರಾವು ಕುಟ್ಟುದು ಬಲ್ಲೆ ಜಿಂಜಿನ ಊರು”. ಇದೊಂದು ಸಾಲು ಸಾಕು, ಬಲೆರಾವು ಪ್ರದೇಶದ ಚಿತ್ರಣ ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಲು. ಸರಿಯಾದ ರಸ್ತೆಯೇ ಇರದಂತಹ ಸಣ್ಣ ಪ್ರದೇಶವಿದು. ಆದ್ದರಿಂದ

ತ್ರಿವಳಿ ತಾಲೂಕು ಬೆಸೆಯುವ ಬಲೆರಾವು ಸೇತುವೆ ಸಹಿತ ಕಿಂಡಿಅಣೆಕಟ್ಟು | ಮೈಕೊಡವಿ ಮೇಲೆದ್ದ ಮೂಲೆಗುಂಪಾಗಿದ್ದ ಶಾಂತಿಗೋಡು ಗ್ರಾಮದ ಬಲೆರಾವು Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ಘಟಕದ ಮಾಸಿಕ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ಘಟಕದ ಮಾಸಿಕ ಸಭೆ ಕುಂಜೂರುಪಂಜ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು. ಯೋಜನೆಯ ಮೇಲ್ವಿಚಾರಕ ಹರೀಶ್ ಕೆ. ಮಾತನಾಡಿ, ಒಗ್ಗಟ್ಟಿನಿಂದ ಮುನ್ನಡೆದರೆ ಸಂಘವನ್ನು, ಘಟಕವನ್ನು ಮಾದರಿಯಾಗಿ ರೂಪಿಸಬಹುದು. ಎಲ್ಲರ ಸಹಕಾರ ಇದ್ದರೆ ತಂಡವನ್ನು ಬಲಪಡಿಸಬಹುದು ಎಂದ ಅವರು, ಶೌರ್ಯ ತಂಡದ ಸದಸ್ಯರು ಗ್ರಾಮಕ್ಕೆ ಸಂಬಂಧಪಟ್ಟ ಬೇರೆ ಬೇರೆ ಸೇವೆಗಳಲ್ಲಿ ಭಾಗವಹಿಸಬಹುದು. ತಿಂಗಳಿಗೆ ಒಂದು ಸೇವೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದರು. ಜಾತ್ರೋತ್ಸವ ಹಾಗೂ ನೇಮೋತ್ಸವದಲ್ಲಿ ಸೇವೆ ಸಲ್ಲಿಸಿದ ಸದಸ್ಯರಿಗೆ ಅಭಿನಂದನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ಘಟಕದ ಮಾಸಿಕ ಸಭೆ Read More »

error: Content is protected !!
Scroll to Top