ಪುತ್ತೂರು

ಜ. 22ರಂದು ಗ್ರಾಮ ಸಾಹಿತ್ಯ ಸಂಭ್ರಮ 2023

ಪುತ್ತೂರು: ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2023 ಜ. 22ರಂದು ಬೆಳಿಗ್ಗೆ 9.30ರಿಂದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ದ.ಕ.ಜಿ.ಪಂ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ 3ನೇ ಸರಣಿ ಕಾರ್ಯಕ್ರಮ ಇದಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷ […]

ಜ. 22ರಂದು ಗ್ರಾಮ ಸಾಹಿತ್ಯ ಸಂಭ್ರಮ 2023 Read More »

ಫೆ. 8ರಿಂದ 10ರವರೆಗೆ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ: ಆಮಂತ್ರಣ ಬಿಡುಗಡೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಫೆ. 8ರಿಂದ 10ರತನಕ ನಡೆಯುವ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಪತ್ರ ಬಿಡುಗಡೆ ಮತ್ತು ಜೀರ್ಣೋದ್ಧಾರ ಸಮಿತಿ ಸಭೆ ಬುಧವಾರ ರಾತ್ರಿ ನಡೆಯಿತು. ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷತೆಯಲ್ಲಿ ಗ್ರಾಮದ ವಿವಿಧ ಭಾಗದ ಬೈಲ್ವಾರ್ ಸಮಿತಿಯ ಸಭೆ ನಡೆಸಲು ಜವಾಬ್ದಾರಿ ನೀಡಲಾಯಿತು. ಫೆ. 10ರಂದು ಬಾಲಾಲಯ ಪ್ರತಿಷ್ಠೆ ಬಳಿಕ ನಡೆಯುವ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಜೀರ್ಣೋದ್ಧಾರ ಕಾರ್ಯಕ್ಕೆ ಸರ್ವ

ಫೆ. 8ರಿಂದ 10ರವರೆಗೆ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ: ಆಮಂತ್ರಣ ಬಿಡುಗಡೆ Read More »

ಸಂಪ್ಯ ಜಾತ್ರೆಗೆ ಗೊನೆ ಮುಹೂರ್ತ

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ ಪ್ರಯುಕ್ತ ಜ. 19ರಂದು ಗೊನೆ ಮಹೂರ್ತ ನೆರವೇರಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಪುತ್ತೂರಾಯ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಸಮಿತಿ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು

ಸಂಪ್ಯ ಜಾತ್ರೆಗೆ ಗೊನೆ ಮುಹೂರ್ತ Read More »

ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಶಾಸಕ ಸಂಜೀವ ಮಠಂದೂರು ಅವರಿಂದ ಜಯಂತ್ಯೋತ್ಸವ ಸಂಸ್ಮರಣೆಯ ಆಮಂತ್ರಣ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಆಮಂತ್ರಣವನ್ನು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಸಂಸ್ಮರಣಾ ಸಮಿತಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಅವರು ಸಂಸ್ಥಾನದಲ್ಲಿ ನೀಡಿದರು. ಜ. ೨೨ರಂದು ನಡೆಯುವ ಕಾರ್ಯಕ್ರಮಕ್ಕೆ ಮೊದಲನೆ ದಿನ ಆಗಮಿಸಲಿರುವ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಶಾಸಕ ಸಂಜೀವ ಮಠಂದೂರು ಅವರ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಮರುದಿನ ಬೆಳಗ್ಗೆಯಿಂದಲೇ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಸಂಸ್ನರಣಾ

ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಶಾಸಕ ಸಂಜೀವ ಮಠಂದೂರು ಅವರಿಂದ ಜಯಂತ್ಯೋತ್ಸವ ಸಂಸ್ಮರಣೆಯ ಆಮಂತ್ರಣ Read More »

ಕುಂಜೂರು ದೇವಸ್ಥಾನದಲ್ಲಿ ಶ್ರದ್ದಾ ಕೇಂದ್ರ ಸ್ವಚ್ಛತಾ  ಕಾರ್ಯಕ್ರಮ

ಪುತ್ತೂರು: ಕುಂಜೂರು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಂಜೂರು ಪಂಜ  ಒಕ್ಕೂಟದ  ವತಿಯಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ  ಕಾರ್ಯಕ್ರಮ ನಡೆಯಿತು. ವಲಯ  ಮೇಲ್ವಿಚಾರಕ ಹರೀಶ್ ಕುಲಾಲ್ ಹಾಗೂ ಒಕ್ಕೂಟದ  ಅಧ್ಯಕ್ಷ ಮಹಾಲಿಂಗ ನಾಯ್ಕ ಅವರ  ಸಹಕಾರದೊಂದಿಗೆ  ಸ್ವಚ್ಛತೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ  ಸಮಿತಿ  ಅಧ್ಯಕ್ಷ ಪ್ರದೀಪ್ ಕೃಷ್ಣ  ಭಟ್, ವ್ಯವಸ್ಥಾಪನ  ಸಮಿತಿ  ಸದಸ್ಯರು  ಉಪಸ್ಥಿತರಿದ್ದರು, ಸೇವಾಪ್ರತಿನಿಧಿ ಆಶಾ, ಒಕ್ಕೂಟದ  ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು.

ಕುಂಜೂರು ದೇವಸ್ಥಾನದಲ್ಲಿ ಶ್ರದ್ದಾ ಕೇಂದ್ರ ಸ್ವಚ್ಛತಾ  ಕಾರ್ಯಕ್ರಮ Read More »

ಫೆ. 10-12: 5ನೇ ಕೃಷಿ ಯಂತ್ರಮೇಳಕ್ಕೆ ಚಪ್ಪರ ಮುಹೂರ್ತ

ಪುತ್ತೂರು: ಕ್ಯಾಂಪ್ಕೋ ಮಂಗಳೂರು ಮತ್ತು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಆವರಣದಲ್ಲಿ ಫೆಬ್ರವರಿ 10ರಿಂದ 12ರವರೆಗೆ ನಡೆಯಲಿರುವ 5ನೇ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ ಬೃಹತ್ ಪ್ರದರ್ಶನದ ಚಪ್ಪರ ಮುಹೂರ್ತ ಜ. 18ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ, ಕಾರ್ಯದರ್ಶಿಗಳಾದ ಡಾ. ಕೆ.ಎಂ. ಕೃಷ್ಣ ಭಟ್, ಕ್ಯಾಂಪ್ಕೋ ಸಂಸ್ಥೆಯ

ಫೆ. 10-12: 5ನೇ ಕೃಷಿ ಯಂತ್ರಮೇಳಕ್ಕೆ ಚಪ್ಪರ ಮುಹೂರ್ತ Read More »

ಪುರುಷರಕಟ್ಟೆ: ಜ. 28ರಂದು ಸಾರ್ವಜನಿಕ ಶ್ರೀ ದುರ್ಗಾ ಪೂಜೆ

ಪುತ್ತೂರು: ಪುರುಷರಕಟ್ಟೆ ಹಿಂದು ಜಾಗರಣ ವೇದಿಕೆ ಶಿವಾಜಿ ಶಾಖೆಯ ಆಶ್ರಯದಲ್ಲಿ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನ ಸಂತರ್ಪಣೆ ಜ. 28ರಂದು ನಡೆಯಲಿದೆ. ಸಂಜೆ ಗಂಟೆ 6:30ಕ್ಕೆ ದುರ್ಗಾ ಪೂಜೆ ಆರಂಭಗೊಳ್ಳಲಿದ್ದು, ಬಳಿಕ ಪುರುಷರಕಟ್ಟೆ ದೇವಿನಗರ ವನದುರ್ಗಂಬಿಕಾ ಭಜನಾ ಮಂಡಳಿಯಿಂದ ಭಜನೆ, ರಾತ್ರಿ 7:30ಕ್ಕೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, 9.30ರಿಂದ ಪುತ್ತೂರು ವಿಶ್ವಕಲಾನಿಕೇತನ ಇನ್ ಸ್ಟಿಟ್ಯೂಷನ್  ಆಫ್ ಆರ್ಟ್ಸ್ ಆ್ಯಂಡ್ ಕಲ್ಚರಲ್ ಇವರಿಂದ ನೃತ್ಯ ವೈವಿಧ್ಯ

ಪುರುಷರಕಟ್ಟೆ: ಜ. 28ರಂದು ಸಾರ್ವಜನಿಕ ಶ್ರೀ ದುರ್ಗಾ ಪೂಜೆ Read More »

ಮುಂಡೂರು: ಯುವತಿಯ ಹತ್ಯೆಗೈದ ಉಮೇಶ್ ಬಂಧನ

ಪುತ್ತೂರು: ಮುಂಡೂರಿನ ಕಂಪದಲ್ಲಿ ಮನೆ ಅಂಗಳದಲ್ಲಿ ಜಯಶ್ರೀ (23) ಎಂಬವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಮಜಲಿನ ಅಂಗಾರ ಎಂಬವರ ಪುತ್ರ ಉಮೇಶ್ ಬಂಧಿತ. ಉಮೇಶ್ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆಂಬರ್ ವೇಳೆಗೆ ಉಮೇಶನನ್ನು ದೂರ ಮಾಡಿದ್ದು, ಈ ಹಿನ್ನೆಲೆ ಕೋಪಗೊಂಡ ಉಮೇಶ್ ಆಕೆಯನ್ನು ಹತ್ಯೆ ಮಾಡಿದ್ದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಜಯಶ್ರೀ ತಾಯಿ

ಮುಂಡೂರು: ಯುವತಿಯ ಹತ್ಯೆಗೈದ ಉಮೇಶ್ ಬಂಧನ Read More »

ಮುಂಡೂರಿನಲ್ಲಿ ಯುವತಿ ಹತ್ಯೆ: ಮಾಜಿ ಪ್ರಿಯಕರನಿಂದಲೇ ಕೃತ್ಯ ಶಂಕೆ

ಪುತ್ತೂರು: ಇಲ್ಲಿನ ಮುಂಡೂರು ಕಂಪದಲ್ಲಿ ಯುವತಿಯನ್ನು ಇರಿದು ಹತ್ಯೆಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತ ಯುವತಿ ಜಯಶ್ರೀ (23). ಬಿಎಸ್ಸಿ ಪದವೀಧರೆಯಾಗಿರುವ ಈಕೆಯನ್ನು ಭಗ್ನಪ್ರೇಮಿ ಇರಿದು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ. ಮಂಗಳವಾರ ಮಧ್ಯಾಹ್ನ 11.30ಕ್ಕೆ ಮುಂಡೂರಿನ ಯುವತಿ ಮನೆಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಮೃತ ಜಯಶ್ರೀ ಅವರು ದಿ. ಗುರುವ ಹಾಗೂ ಗಿರಿಜಾ ಎಂಬವರ ಪುತ್ರಿ. ಕಳೆದ ವರ್ಷ ಗುರುವ ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಘಟನೆ: ಮೃತ ಯುವತಿ

ಮುಂಡೂರಿನಲ್ಲಿ ಯುವತಿ ಹತ್ಯೆ: ಮಾಜಿ ಪ್ರಿಯಕರನಿಂದಲೇ ಕೃತ್ಯ ಶಂಕೆ Read More »

ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಬೃಹತ್ ಮಹಿಳಾ ಸಮಾವೇಶ

ಬೆಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಚುಂಚಾದ್ರಿ ಮಹಿಳಾ ಸಮಾವೇಶ ನಡೆಯಿತು. ಸಮಾರಂಭವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಉದ್ಘಾಟಿಸಿ, ಆಶೀರ್ಚನ ನೀಡಿದರು. ಇದೇ ಸಂದರ್ಭ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಉಪಸ್ಥಿತರಿದ್ದು, ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಯರನ್ನು ಸನ್ಮಾನಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಬೃಹತ್ ಮಹಿಳಾ ಸಮಾವೇಶ Read More »

error: Content is protected !!
Scroll to Top