ಪುತ್ತೂರು

ನೂತನ ಸಹಕಾರ ಸಚಿವ ರಾಜಣ್ಣ ಅವರನ್ನು ಅಭಿನಂದಿಸಿದ ಸವಣೂರು ಸೀತಾರಾಮ ರೈ 

ಸವಣೂರು : ಕರ್ನಾಟಕ ರಾಜ್ಯದ ನೂತನ ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣ ಅವರನ್ನು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಕೆ ಸೀತಾರಾಮ ರೈ ಸವಣೂರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಸೀತಾರಾಮ ರೈ ಅವರು ಅಭಿನಂದನೆಯನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಂ.ಬಾಪೂ ಸಾಹೇಬ್ ಮತ್ತು ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ನಾಗೇಶ್ ಬಾಬು […]

ನೂತನ ಸಹಕಾರ ಸಚಿವ ರಾಜಣ್ಣ ಅವರನ್ನು ಅಭಿನಂದಿಸಿದ ಸವಣೂರು ಸೀತಾರಾಮ ರೈ  Read More »

ಅಖಿಲ ಕನಾ೯ಟಕ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಸಭೆ

ಪುತ್ತೂರು: ಅಖಿಲ ಕನಾ೯ಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಪಧಾಧಿಕಾರಿಗಳ ಸಭೆ ಪುತ್ತೂರಿನ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಕಚೇರಿ ಸಭಾಂಗಣದಲ್ಲಿ ನಡೆಯಿತು. ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ     ಪೂಜ್ಯ ಖಾವಂದರ ಮಾಗ೯ದಶ೯ನದಲ್ಲಿ ವೇದಿಕೆ ಮೂಲಕ ರಾಜ್ಯಾದ್ಯಂತ ಮದ್ಯವಜ೯ನ ಶಿಬಿರ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ನವಜೀವನ ಸಮಿತಿ ಸಮಾವೇಶ, ವಿದ್ಯಾಥಿ೯ಗಳಿಗೆ ಸ್ವಸ್ಥ್ಯಾ ಸಂಕಲ್ಪ ಕಾಯ೯ಕ್ರಮ, ಗಾಂಧಿ ಜಯಂತಿ ಕಾಯ೯ಕ್ರಮ, ವಿಪತ್ತು ನಿವ೯ಹಣೆ,

ಅಖಿಲ ಕನಾ೯ಟಕ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಸಭೆ Read More »

8 ತಿಂಗಳ ಹಿಂದೆ 15 ಲಕ್ಷ ನಗದು ಕಳ್ಳತನ -ಆರೋಪಿಗಳ ಬಂಧನ

ಪುತ್ತೂರು:  ಅಂಗಡಿಯೊಂದರಿಂದ ಎಂಟು ತಿಂಗಳ ಹಿಂದೆ 15 ಲಕ್ಷ ರೂ. ನಗದು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ದೇವರಾಜ ಅರಸ್‌ ಬಡವಾಣೆಯ ಸಮೀರ್‌ (ಕಪ್ಪ), ಹಾಸನ ಶಂಕರಿಪುರಂನ ಚಂದ್ರಶೇಖರ್‌ (ಚಂದು) ಬಂಧಿತರು. ಆರೋಪಿಗಳು 2022 ಸೆ. 16ರಂದು ಪುತ್ತೂರು ನಗರದ ಮುಖ್ಯ ರಸ್ತೆಯ ಮಾಯಿದೆ ದೇವುಸ್‌ ಚರ್ಚ್‌ ಸಮೀಪದ ಪ್ರಕಾಶ್‌ ಫೂಟ್ ವೇರ್‌ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 15 ಲಕ್ಷ ರೂ. ಅನ್ನು ಕಳ್ಳತನ ಎಸಗಿದ್ದರು. ಈ ಬಗ್ಗೆ

8 ತಿಂಗಳ ಹಿಂದೆ 15 ಲಕ್ಷ ನಗದು ಕಳ್ಳತನ -ಆರೋಪಿಗಳ ಬಂಧನ Read More »

ಇರ್ದೆ ಉಪ್ಪಳಿಗೆ ಶಾಲಾ ಆರಂಭೋತ್ಸವ | ಉಚಿತ ಪಠ್ಯಪುಸ್ತಕ ಸಮವಸ್ತ್ರ ವಿತರಣೆ

ನಿಡ್ಪಳ್ಳಿ: ಇರ್ದೆ ಉಪ್ಪಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಮೇ 31ರಂದು ನಡೆಯಿತು. ಆರಂಭದಲ್ಲಿ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಜಾಥಾ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು  ಕೃಷ್ಣಪ್ರಸಾದ್ ಆಳ್ವ ಚೆಲ್ಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ  ಉಮಾವತಿ ಹಾಗೂ ವಿದ್ಯಾ ಸರೋಲಿಕಾನ ಶುಭಹಾರೈಸಿದರು. ಒಂದನೇ ತರಗತಿಗೆ ಸೇರಿದ ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ಸಿಲ್ ನೀಡುವ ಮೂಲಕ ಸ್ವಾಗತಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೂ ಸರಕಾರದಿಂದ ಸಿಗುವ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ

ಇರ್ದೆ ಉಪ್ಪಳಿಗೆ ಶಾಲಾ ಆರಂಭೋತ್ಸವ | ಉಚಿತ ಪಠ್ಯಪುಸ್ತಕ ಸಮವಸ್ತ್ರ ವಿತರಣೆ Read More »

ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಶುಭಾರಂಭ | ಅಲೋಪಥಿ, ಆಯುರ್ವೇದ, ಜನರಿಕ್, ವೆಟರ್ನರಿ ಉತ್ಪನ್ನಗಳ ಎ.ಎನ್. ಮೆಡಿಕಲ್ಸ್ ಉದ್ಘಾಟನೆ

ಪುತ್ತೂರು: ಒಮ್ಮಿಂದೊಮ್ಮೆಗೆ ಬಂದೆರಗುವ ತೀವ್ರ ತೆರನಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಹಾಗೂ ಎ.ಎನ್. ಮೆಡಿಕಲ್ಸ್ ಪುತ್ತೂರು ಕೋಟಿ – ಚೆನ್ನಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಪಿಂಗ್ ಮಾಲ್ ನಲ್ಲಿ ಜೂನ್ 1ರಂದು ಶುಭಾರಂಭಗೊಂಡಿತು. ತಕ್ಷಣದಲ್ಲಿ ಕಾಡುವ ಸ್ಟ್ರೋಕ್, ಕಾರ್ಡಿಯಾಕ್ (ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ), ನ್ಯೂರೋ (ನರ), ರೆಸ್ಪಿರೇಟರಿ (ಉಸಿರಾಟ) ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರಾದ ಡಾ. ಪ್ರಭು ಚಿಕಿತ್ಸೆ ನೀಡಲಿದ್ದಾರೆ. ವೈದ್ಯರ ಹೆತ್ತವರಾದ ಅನಿಲಾವತಿ, ಪಿ.

ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಶುಭಾರಂಭ | ಅಲೋಪಥಿ, ಆಯುರ್ವೇದ, ಜನರಿಕ್, ವೆಟರ್ನರಿ ಉತ್ಪನ್ನಗಳ ಎ.ಎನ್. ಮೆಡಿಕಲ್ಸ್ ಉದ್ಘಾಟನೆ Read More »

ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿ | ರಾಜ್ಯ ಗುಣ ನಿಯಂತ್ರಣ ಮಾನಿಟರ್ ಪರಿಶೀಲನೆ

ನರಿಮೊಗರು: ಮಹಾತ್ಮ‌ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ‌ ಮಾಡುವ ಸಲುವಾಗಿ ರಾಜ್ಯ ಗುಣ ನಿಯಂತ್ರಣ ಮಾನಿಟರ್ ಎಸ್.ವೈ. ಹೊಂಬಾಳ ಅವರು ಪುತ್ತೂರು ತಾಲೂಕಿನ ವಿವಿಧೆಡೆ ಪರಿಶೀಲನೆ ನಡೆಸಿದರು. ಪುತ್ತೂರು ತಾಲೂಕಿನ ನರಿಮೊಗರು,ಆರ್ಯಾಪು,ಹಿರೇಬಂಡಾಡಿ ಹಾಗೂ ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಗಳಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭ ಸಹಾಯಕ ನಿರ್ದೇಶಕರಾದ ಶೈಲಜಾ ಭಟ್, ತಾಂತ್ರಿಕ ಸಂಯೋಜಕ ವಿನೋದ್ ಕುಮಾರ್, ತಾಂತ್ರಿಕ ಸಹಾಯಕ ಅಭಿಯಂತರರಾದ ಮನೋಜ್ ಕುಮಾರ್, ಶ್ರೀಲಕ್ಷ್ಮೀ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು,

ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿ | ರಾಜ್ಯ ಗುಣ ನಿಯಂತ್ರಣ ಮಾನಿಟರ್ ಪರಿಶೀಲನೆ Read More »

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮದ ವಾತಾವರಣ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಅದ್ದೂರಿ ಸ್ವಾಗತದೊಂದಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು , ಸಿಬ್ಬಂದಿ ವರ್ಗದವರು ಬಹಳ ಪ್ರೀತಿಯಿಂದ ಬರಮಾಡಿಕೊಂಡರು. ಬ್ಯಾಂಡ್ ಸೆಟ್ಟಿನೊಂದಿಗೆ ಸಭಾಂಗಣಕ್ಕೆ ಬಂದ ವಿದ್ಯಾರ್ಥಿ ಬಳಗವನ್ನು ಶಿಕ್ಷಕ ವೃಂದದವರು ಆರತಿ ಎತ್ತಿ ತಿಲಕವನ್ನು ಇಡುವ  ಮೂಲಕ ಈ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ವಿದ್ಯಾಸರಸ್ವತಿಯ ಅನುಗ್ರಹವನ್ನು ಪಡೆಯುವ ಮೂಲಕ ಎಲ್ಲಾ ಮಕ್ಕಳು ತರಗತಿಗೆ ಹಾಜರಾದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ Read More »

ಪುತ್ತೂರಿನ  ಒಳಿತು ಮಾಡು ಮನುಷ ತಂಡದಿಂದ ನೇತ್ರದಾನ ನೋಂದಣಿ | ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಪುತ್ತೂರು: ಇಲ್ಲಿನ  ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ನೇತ್ರದಾನ ನೋಂದಣಿ, ಮಧುಮೇಹ ಉಚಿತ ತಪಾಸಣೆ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 23ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮ ಪುತ್ತೂರಿನ ಸೈನಿಕ ಭವನ ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಅರುಣ್

ಪುತ್ತೂರಿನ  ಒಳಿತು ಮಾಡು ಮನುಷ ತಂಡದಿಂದ ನೇತ್ರದಾನ ನೋಂದಣಿ | ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ Read More »

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಯಲ್ಲಿ ಶಾಲಾರಂಬೋತ್ಸದ ಅಂಗವಾಗಿ ಶಾಲಾ ಮಕ್ಕಳನ್ನು ಮೆರವಣಿಗೆಯೊಂದಿಗೆ ಕರೆ ತಂದು ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರತಿ ಬೆಳಗಿ ಪುಷ್ಪಗುಚ್ಚ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ದಲಾರಿ, ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಪದ್ಮಯ್ಯ

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ Read More »

ಕ್ಯಾಂಪ್ಕೋ ಜ್ಯೂನಿಯರ್ ಅಸಿಸ್ಟೆಂಟ್ ಕೃಷ್ಣಪ್ಪ ಅವರಿಗೆ ಬೀಳ್ಕೊಡುಗೆ

ಪುತ್ತೂರು: ಇಲ್ಲಿನ ಕ್ಯಾಂಪ್ಕೋ ಸಂಸ್ಥೆಯ ಜ್ಯೂನಿಯರ್ ಅಸಿಸ್ಟೆಂಟ್ ಕೃಷ್ಣಪ್ಪ ಕೆ. ಅವರಿಗೆ ಬೀಳ್ಕೊಡುಗೆ ಸಮಾರಂಭ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೃಷ್ಣಪ್ಪ ಕೆ. ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ರೀಜನಲ್ ಮ್ಯಾನೇಜರ್ ರಮೇಶ್ ಶೆಟ್ಟಿ, ಎ.ಆರ್.ಡಿ.ಎಫ್. ಸಂಯೋಜಕ ಕೇಶವ ಭಟ್, ವ್ಯವಸ್ಥಾಪಕ ಅಮರೇಶ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕ್ಯಾಂಪ್ಕೋ ಜ್ಯೂನಿಯರ್ ಅಸಿಸ್ಟೆಂಟ್ ಕೃಷ್ಣಪ್ಪ ಅವರಿಗೆ ಬೀಳ್ಕೊಡುಗೆ Read More »

error: Content is protected !!
Scroll to Top