ಪುತ್ತೂರು

ಸವಣೂರು ಸೀತಾರಾಮ ರೈ 76ನೇ ವರ್ಷದ ಹುಟ್ಟುಹಬ್ಬ | ನಾಳೆ (ಜೂನ್ 9) ಸವಣೂರು ವಿದ್ಯಾರಶ್ಮಿ ಆವರಣದಲ್ಲಿ ಆಚರಣೆ

ಸವಣೂರು: ಸವಣೂರಿನ ಶಿಲ್ಪಿ ಸವಣೂರು ಸೀತಾರಾಮ ರೈ ಅವರ 76ನೇ ಹುಟ್ಟುಹಬ್ಬದ ಸಂಭ್ರಮ ಜೂನ್ 9ರಂದು ನಡೆಯಲಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಭಾಗೀರಥಿ ಮುರುಳ್ಯ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸವಣೂರು ಸೀತಾರಾಮ ರೈ ಅವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಗುವುದು. ಇದೇ ಸಂದರ್ಭ ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸವಣೂರು ಸೀತಾರಾಮ ರೈ 76ನೇ ವರ್ಷದ ಹುಟ್ಟುಹಬ್ಬ | ನಾಳೆ (ಜೂನ್ 9) ಸವಣೂರು ವಿದ್ಯಾರಶ್ಮಿ ಆವರಣದಲ್ಲಿ ಆಚರಣೆ Read More »

ದೈಪಿಲ ಕ್ರೀಡಾ ಸೇವಾ  ಸಂಘದಿಂದ ಶ್ರಮದಾನ

ಪುತ್ತೂರು: ದೈಪಿಲ ಕ್ರೀಡಾ ಸೇವಾ ಸಂಘದವರು ವಿದ್ಯುತ್ ಕಂಬಳಿಗೆ ತಾಕುವ ಮರಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿದರು. ಕಾಪೆಜಾಲಿನಿಂದ ನಾನಿಲ ತನಕ ಎಚ್‍ ಟಿ ಲೈನ್‍ಗಳನ್ನು ಸ್ಪರ್ಶಿಸುವ ಮರದ ಗೆಲ್ಲುಗಳನ್ನು ಕಡಿದು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ದೈಪಿಲ ಕ್ರೀಡಾ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ದೈಪಿಲ ಕ್ರೀಡಾ ಸೇವಾ  ಸಂಘದಿಂದ ಶ್ರಮದಾನ Read More »

ಗೋಪಾಲಕೃಷ್ಣ ಶಗ್ರಿತ್ತಾಯ ನಿಧನ

ಪುತ್ತೂರು: ಶಾಂತಿಗೋಡು ಪುಂಡಿಕಾಯಿ ಯ ಜ್ಯೋತಿಷಿ, ನಿವೃತ್ತ ಶಿಕ್ಷಕ, ಮಕ್ಕಳ ಸಾಹಿತಿ,ಯಕ್ಷಗಾನ ಅರ್ಥಧಾರಿ,ಯಕ್ಷಗಾನ ಮಕ್ಕಳ ಮೇಳ ಸಂಘಟಕ ,ಕನ್ನಡ ರತ್ನ  ಗೋಪಾಲಕೃಷ್ಣ ಶಗ್ರಿತ್ತಾಯ (87) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಾಮಕುಂಜ ಓರಿಯಂಟಲ್ ಹೈಸ್ಕೂಲ್ ನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಅವರು ನಂತರ ಪಡುಬೆಟ್ಟು ,ಹೊಸ್ತೋಟ, ಶಿರಾಡಿ ಮುಂತಾದ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಶಿಕ್ಷಕ ವೃತ್ತಿ ನಡೆಸಿ ನಿವೃತ್ತರಾಗಿದ್ದರು. ಯಕ್ಷಗಾನ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಹನ್ನೆರಡು ವರ್ಷದೊಳಗಿನ ಬಾಲಕಲಾವಿದರುಗಳನ್ನೇ ಸಂಘಟಿಸಿ

ಗೋಪಾಲಕೃಷ್ಣ ಶಗ್ರಿತ್ತಾಯ ನಿಧನ Read More »

ಅಕ್ಷಯ ಕಾಲೇಜಿನಲ್ಲಿ “ಕೃತ್ವ 2023” ಯುಜಿ ಲೆವೆಲ್ ಫೆಸ್ಟ್  ಉದ್ಘಾಟನೆ.

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಯುಜಿ ಲೆವೆಲ್ ಫೆಸ್ಟ್ “ಕೃತ್ವ 2023” ಕಾರ್ಯಕ್ರಮ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಅಕ್ಷಯ ಕಾಲೇಜಿನ ಆಡಳಿತ ವ್ಯವಸ್ಥಾಪಕಿ ಕಲಾವತಿ ಜಯಂತ್ ದೀಪ ಬೆಳಗಿಸಿ ಉದ್ಘಾಟಿಸಿ, ಟ್ರೋಪಿಗಳನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕುಳಾಯಿ ಫೌಂಡೇಶನ್ ಸ್ಥಾಪಕಾಧ್ಯಕ್ಷೆ ಪ್ರತಿಭಾ ಕುಳಾಯಿ ಮಾತನಾಡಿ, ವಿದ್ಯಾರ್ಥಿಗಳು  ಶಿಕ್ಷಣದ ಮಹತ್ವವನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೈಗೂಡಿಸಿಕೊಳ್ಳಬೇಕಾದ ನೈತಿಕತೆಯನ್ನು ತಿಳಿ ಹೇಳಿದರು. ಮತ್ತೋರ್ವ ಅತಿಥಿ ಕೆನರಾ

ಅಕ್ಷಯ ಕಾಲೇಜಿನಲ್ಲಿ “ಕೃತ್ವ 2023” ಯುಜಿ ಲೆವೆಲ್ ಫೆಸ್ಟ್  ಉದ್ಘಾಟನೆ. Read More »

ಜೂ.13 : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ಷಯಮುಕ್ತ ಭಾರತ ಮಾಹಿತಿ ಶಿಬಿರ

ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಕ್ಷಯಮುಕ್ತ ಭಾರತ-ಮಾಹಿತಿ ಶಿಬಿರ ಜೂ.13 ಮಂಗಳವಾರ ಪುತ್ತೂರು ಪತ್ರಿಕಾಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೆರವೇರಿಸಲಿದ್ದು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಿಕ್ ನಿರಾಜೆ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್, ಮಂಗಳೂರು ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿ ಸಂಯೋಜಕ ಮನೋಜ್ ಮಾಹಿತಿ ನೀಡಲಿದ್ದಾರೆ. ಮುಖ್ಯ

ಜೂ.13 : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ಷಯಮುಕ್ತ ಭಾರತ ಮಾಹಿತಿ ಶಿಬಿರ Read More »

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ 6.5 ರಲ್ಲೇ ಮುಂದುವರಿಕೆ |ಸಾಲಗಾರರಿಗೆ ಬಿಗ್ ರಿಲೀಫ್

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ ರೆಪೋ ದರವನ್ನು 6.5 ಶೇಕಡಾದಲ್ಲಿಯೇ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದು, ಪರಿಣಾಮ ಸಾಲಗಾರರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ. ಆರ್‍ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಹಣದುಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆ ಮಾಡುವ ಪ್ರಮೇಯ ಬರಲಿಲ್ಲ. ಆದರೆ ಹಣದುಬ್ಬರ ಇಳಿಕೆಯಾಗಿದ್ದರೂ ಸಹ ಸಮಾಧಾನಕರ ಸ್ಥಿತಿಗೆ ನಾವು ಬಂದಿಲ್ಲ. ನಮ್ಮ ಗುರಿ ಇನ್ನೂ ಮೇಲ್ಮಟ್ಟದಲ್ಲಿದೆ. ಹೀಗಾಗಿ ನಾವು ಹಣದುಬ್ಬರದ ಬಗ್ಗೆ ಅರ್ಜುನನ ಕಣ್ಣಿಡಬೇಕು ಎಂದು ಹೇಳಿದ್ದಾರೆ. ಕಳೆದ ಮೂರು

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ 6.5 ರಲ್ಲೇ ಮುಂದುವರಿಕೆ |ಸಾಲಗಾರರಿಗೆ ಬಿಗ್ ರಿಲೀಫ್ Read More »

ಬದಲಾಗಲಿದ್ದಾರೆಯೇ ಬಿಜೆಪಿ ರಾಜ್ಯಾಧ್ಯಕ್ಷ ? ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನ ಸಭೆ?

ಬೆಂಗಳೂರು: ಚುನಾವಣೆಯ ಬಳಿಕ ಮೊದಲ ಬಾರಿಗೆ ಬಿಜೆಪಿ ಗುರುವಾರ ಸಂಜೆ ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಅವಲೋಕನ ಸಭೆಯನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕರೆದಿದೆ.ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ ಹಾಗೂ ಹೊಸ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷಗಳನ್ನು ಪೂರೈಸಿರುವ

ಬದಲಾಗಲಿದ್ದಾರೆಯೇ ಬಿಜೆಪಿ ರಾಜ್ಯಾಧ್ಯಕ್ಷ ? ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನ ಸಭೆ? Read More »

ಪುತ್ತೂರು: ದ.ಕ. : ಹೆಚ್ಚುತ್ತಿರುವ ಹೃದಯ ಕಾಯಿಲೆ : ತಪಾಸಣೆಗೆ ಹೃದಯ ವೈಶಾಲ್ಯ ವಿನೂತನ ಕಾರ್ಯಕ್ರಮ | ಜೂ.14ರಂದು ಕೊಳ್ತಿಗೆ ,ಜೂ. 21ರಂದು ವಿಟ್ಲ ಆರೋಗ್ಯ ಕೇಂದ್ರಗಳು ಕೇಂದ್ರದಲ್ಲಿ ಹೃದಯ ವೈಶಾಲ್ಯ 

ಪುತ್ತೂರು :  ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತದ ಪ್ರಕರಣಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ‘ಹೃದಯ ವೈಶಾಲ್ಯ’ ಎಂಬ ವಿನೂತನ ಕಾರ್ಯಕ್ರಮ ಆಯೋಜನೆಗೊಂಡಿದೆ. ದ.ಕ.ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್ ಫೌಂಡೇಷನ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್ ಫೌಂಡೇಷನ್ ಜಿಲ್ಲೆಯ ವಿವಿಧೆಡೆಗಳ ಆರೋಗ್ಯ ಕೇಂದ್ರಗಳಿಗೆ 135 ಇಸಿಜಿ ಯಂತ್ರಗಳನ್ನು ಉಚಿತವಾಗಿ ಪೂರೈಸಿದೆ. ಇದರಿಂದಾಗಿ ಗ್ರಾಮೀಣ ಜನರು ಹೃದಯ

ಪುತ್ತೂರು: ದ.ಕ. : ಹೆಚ್ಚುತ್ತಿರುವ ಹೃದಯ ಕಾಯಿಲೆ : ತಪಾಸಣೆಗೆ ಹೃದಯ ವೈಶಾಲ್ಯ ವಿನೂತನ ಕಾರ್ಯಕ್ರಮ | ಜೂ.14ರಂದು ಕೊಳ್ತಿಗೆ ,ಜೂ. 21ರಂದು ವಿಟ್ಲ ಆರೋಗ್ಯ ಕೇಂದ್ರಗಳು ಕೇಂದ್ರದಲ್ಲಿ ಹೃದಯ ವೈಶಾಲ್ಯ  Read More »

ಇಂದು (ಜೂ.8)  :ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿ.ವಿ ಪದವಿ ಕಾಲೇಜುಗಳ ಅಂತರ್-ಕಾಲೇಜು ಫೆಸ್ಟ್

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಅಂತರ್-ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ಸಾಂಸ್ಕೃತಿಕ ಫೆಸ್ಟ್ ‘ಕೃತ್ವ ‘ಜೂ.8 ರಂದು ಕಾಲೇಜಿನಲ್ಲಿ ಜರಗಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಫೈನಾನ್ಸ್ ಆಫೀಸರ್ ಪ್ರೊ|ವೈ ಸಂಗಪ್ಪರವರು ಫೆಸ್ಟ್ ಅನ್ನು ದೀಪ ನ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಮಾಜಿ  ಕಾರ್ಪೋರೇಟರ್ ಹಾಗೂ ಕುಳಾಯಿ ಫೌಂಡೇಶನ್ ನ

ಇಂದು (ಜೂ.8)  :ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿ.ವಿ ಪದವಿ ಕಾಲೇಜುಗಳ ಅಂತರ್-ಕಾಲೇಜು ಫೆಸ್ಟ್ Read More »

ಕಡಬದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ರವರಿಗೆ ಮನವಿ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸಚಿವರ ಬಳಿ ತೆರಳಿದ ಶಾಸಕರು ಸಚಿವರ ಜೊತೆ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಮತುಕತೆ ನಡೆಸಿದರು. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಡಯಾಲಿಸ್ ಕೇಂದ್ರವನ್ನು ತಕ್ಷಣವೇ ಆರಂಭಿಸಬೇಕಿದೆ. ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಡಯಾಲಿಸಿಸ್ ಕೇಂದ್ರವನ್ನು ಆರಂಭ ಮಾಡಿ, ಮೂರು ಡಯಾಲಿಸಿಸ್

ಕಡಬದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ Read More »

error: Content is protected !!
Scroll to Top