ಪುತ್ತೂರು

ಬೆಂಗಳೂರು ಕೆಆರ್ ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಪುತ್ತೂರಿನ ನಿವಾಸಕ್ಕೆ ಲೋಕಾಯುಕ್ತ ದಾಳಿ

ಪುತ್ತೂರು: ಬೆಂಗಳೂರು ಕೆ.ಆರ್‍.ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಪುತ್ತೂರಿನ ನಿವಾಸಕ್ಕೆ ಬುಧವಾರ ಲೋಕಾಯುಕ್ತ ದಾಳಿ ಪೊಲೀಸರು ದಾಳಿ ಮಾಡಿದ್ದಾರೆ. ಪುತ್ತೂರಿನ ಸೊರಕೆ ಎಂಬಲ್ಲಿರುವ ಮನೆಗೆ ದಾಳಿ ಮಾಡಿದ ಸಂದರ್ಭ ಕಂತೆ ಕಂತೆ ನೋಟು ಪತ್ತೆಯಾಗಿದ್ದು, ಆದಾಯಕ್ಕಿಂತ ಜಾಸ್ತಿ ಆದಾಯ ಹೊಂದಿದ ಆರೋಪದ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಜಿತ್ ಕುಮಾರ್ ರೈ ಅವರ ತಂದೆ ಆನಂದ ರೈ ಅವರು ಸರ್ವೆಯರ್ ಆಗಿ ಸರಕಾರಿ ಹುದ್ದೆಯಲ್ಲಿ ಕರ್ತವ್ಯದಲ್ಲಿದ್ದಾಗ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಅಜಿತ್ […]

ಬೆಂಗಳೂರು ಕೆಆರ್ ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಪುತ್ತೂರಿನ ನಿವಾಸಕ್ಕೆ ಲೋಕಾಯುಕ್ತ ದಾಳಿ Read More »

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಸುಳ್ಯ: ಯುವಕನೋರ್ವ ಬಂದೂಕಿನಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ‌ ಉಬರಡ್ಕದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ರವಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ‌ ಗುಡ್ಡವೊಂದರಲ್ಲಿ ಕೋವಿಯಿಂದ ಗುಂಡು‌ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತ ಯುವಕ ಬೆಳ್ರಂಪಾಡಿಯ ಮನೆಯೊಂದರಲ್ಲಿ ಕೆಲಸಕ್ಕಿದ್ದ ಎನ್ನಲಾಗಿದ್ದು, ಸ್ಥಳಕ್ಕೆ‌ ರಾತ್ರಿಯೇ ಪೋಲೀಸರು ‌ಬಂದು‌ ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲುನೋಟಕ್ಕೆ ಆತ್ಮಹತ್ಯೆ ಪ್ರಕರಣ ‌ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ Read More »

ಸವಾಲುಗಳನ್ನು ಎದುರಿಸಿದರೆ ಯಶಸ್ಸು ಖಂಡಿತ: ಕೃಷ್ಣಕುಮಾರ್ ಹೆಚ್ ಎಮ್ |

ಪುತ್ತೂರು : ಕೌಶಲ್ಯ ಅಭಿವೃದ್ಧಿಗಳಂತಹ ಕಾರ್ಯಕ್ರಮಗಳು ಜೀವನದ ಮೌಲ್ಯವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವ ವಿಕಸನಗೊಳಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ದಿನಗಳಲ್ಲಿ ಕೌಶಲ್ಯ ಒಂದು ಇದ್ರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಇದು ಯಶಸ್ಸು ಪಡೆಯಲು ಇರುವ ಸುಲಭದ ಹಾದಿ” ಎಂದು ಪುತ್ತೂರಿನ ಕ್ಯಾಂಪ್ಕೋ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ  ಕೃಷ್ಣ ಕುಮಾರ್ ಹೆಚ್ ಎಂ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ  (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐ ಕ್ಯೂ

ಸವಾಲುಗಳನ್ನು ಎದುರಿಸಿದರೆ ಯಶಸ್ಸು ಖಂಡಿತ: ಕೃಷ್ಣಕುಮಾರ್ ಹೆಚ್ ಎಮ್ | Read More »

ನೂರರ ಗಡಿ ದಾಟಿದ ಟೊಮೆಟೋ ದರ | ಮಳೆ ಶುರುವಾಗುತ್ತಿದ್ದಂತೆ ತರಕಾರಿ ಬೆಲೆ ಏರಿಕೆ

ಪುತ್ತೂರು : ಮಳೆಗಾಲ ಶುರುವಿಟ್ಟುಕೊಂಡ ಬೆನ್ನಲ್ಲೇ ತರಕಾರಿ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಟೊಮೆಟೋ ದರ ನೂರರ ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಉಂಟಾಗಿದ್ದು, ಟೊಮೆಟೋ ಬೆಳೆಗೆ ಹಾನಿಯಾಗುವುದರ ಜತೆಗೆ ಮಾರುಕಟ್ಟೆಗೆ ಪೂರೈಕೆಯಲ್ಲಿ ಕುಂಠಿತವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಟೊಮೆಟೋ ಬೆಲೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದ್ದು, ಒಟ್ಟಿನಲ್ಲಿ ಟೊಮೆಟೋ ಉತ್ಪಾದನೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಒಂದೂವರೆ ವರ್ಷದ ಹಿಂದೆ ಟೊಮೆಟೋ ನೂರರ ಗಡಿ ದಾಟಿತ್ತು. ಬಳಿಕ ಇಳಿಮುಖವಾದ ದರ

ನೂರರ ಗಡಿ ದಾಟಿದ ಟೊಮೆಟೋ ದರ | ಮಳೆ ಶುರುವಾಗುತ್ತಿದ್ದಂತೆ ತರಕಾರಿ ಬೆಲೆ ಏರಿಕೆ Read More »

ಅಕ್ರಮ ಗೋಸಾಗಾಟ, ಹತ್ಯೆ ತಡೆಯಲು ಕ್ರಮ ಕೈಗೊಳ್ಳುವಂತೆ ವಿಹಿಂಪ, ಬಜರಂಗದಳ ವತಿಯಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ

ಪುತ್ತೂರು: ಗೋವಂಶ ಬಲಿ, ಹತ್ಯೆ, ಅಕ್ರಮ ಗೋಸಾಗಾಟವಾಗದಂತೆ ಕ್ರಮ ವಹಿಸುವಂತೆ ಹಾಗೂ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಯಾವುದೇ ಕೃತ್ಯ ಅಗದಂತೆ ತಡೆಯಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ  ಪೋಲಿಸ್ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 ( ತಿದ್ದುಪಡಿ 1975 )ಇದು ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಗೋವಂಶ  ( ಯಾವುದೇ ವಯಸ್ಸಿನ

ಅಕ್ರಮ ಗೋಸಾಗಾಟ, ಹತ್ಯೆ ತಡೆಯಲು ಕ್ರಮ ಕೈಗೊಳ್ಳುವಂತೆ ವಿಹಿಂಪ, ಬಜರಂಗದಳ ವತಿಯಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ Read More »

ಕಡಬದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆ

ಕಡಬ : ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ದಿನಾಚರಣೆ ಕಡಬ ತಾಲೂಕು ಕಛೇರಿಯ  ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು. ದೀಪ ಬೆಳಗಿಸಿ ನಾಡಪ್ರಭು ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ  ಕಡಬ ತಹಸೀಲ್ದಾರ್ ಟಿ ರಮೇಶ್ ಬಾಬು, ಕೆಂಪೇ ಗೌಡ ಒಬ್ಬ ದೂರದೃಷ್ಠಿಯ ನಾಯಕನಾಗಿ  ಬೆಂಗಳೂರನ್ನು‌ ಜಗತ್ತು ನೋಡುವಂತೆ  ಅಭಿವೃದ್ಧಿ ಪಡಿಸಿದ್ದಾರೆ, ಕೃಷಿಯಿಂದಲೇ ಆರ್ಥಿಕ ಸಬಲೀಕರಣ ಎಂದು ಮನಗಂಡು ಬೆಂಗಳೂರು ಆಸು ಪಾಸಿನಲ್ಲಿ ಹತ್ತಾರು ಕೆರೆಗಳನ್ನು‌ನಿರ್ಮಾಣ ಮಾಡಿ

ಕಡಬದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆ Read More »

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇ ಗೌಡ ಜಯಂತಿ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇ ಗೌಡ 514ನೇ ಜಯಂತಿ ಆಚರಣೆ ಮಂಗಳವಾರ ತಾಲೂಕು ಆಡಳಿತ ಸೌಧದಲ್ಲಿರುವ ತಹಶಿಲ್ದಾರ್ ಸಭಾಂಗಣದಲ್ಲಿ ನಡೆಯಿತು. ಸಂಸ್ಮರಣಾ ಜ್ಯೋತಿ ಬೆಳಗಿಸಿ, ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ರಾಜದಾನಿ ಬೆಂಗಳೂರನ್ನು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಂಪೇ ಗೌಡರವರು 14ನೇ ಶತಮಾನದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಅವರ ದೂರ ದೃಷ್ಠಿಯ ಕಲ್ಪಣೆಗಳು ಮಹತ್ವವಾಗಿದ್ದು 24ನೇ ಶತಮಾನದಲ್ಲಿಯೂ ನೆನಪಿಸಿಕೊಳ್ಳಲಾಗುತ್ತಿದೆ. ಸುಂದರ ನಗರ ನಿರ್ಮಾಣ, ವ್ಯಾವಹಾರಿಕ ಕೇಂದ್ರಗಳ ನಿರ್ಮಾಣ, ವಿವಿಧ ಕಸುಬುಗಳಿಗೆ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇ ಗೌಡ ಜಯಂತಿ Read More »

ಆಟೋ ರಿಕ್ಷಾ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು

ವಿಟ್ಲ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮದ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದ ಮಾಣಿಲ ತಿರುವೊಂದರಲ್ಲಿ ನಡೆದಿದೆ. ಸುಬ್ರಹ್ಮಣ್ಯ ಪಂಜ ನಿವಾಸಿ ಸುದರ್ಶನ್ (35) ಮೃತಪಟ್ಟ ಚಾಲಕ. ಸುದರ್ಶನ್ ಹಾಗೂ ಇನ್ನೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಆಟೋ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮ ಗಂಘೀರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿ ಅಲ್ಪಸ್ವಲ್ಪ ಗಾಯಗಳಾಗಿವೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಟೋ ರಿಕ್ಷಾ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು Read More »

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಗಿಡಗಳಿಂದ ತುಲಾಭಾರ ಸೇವೆ | ವಿನೂತನ ಪರಂಪರೆಗೆ ನಾಂದಿ ಹಾಡಿದ ತುಲಾಭಾರ ಸೇವೆ

ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಗಿಡಗಳಿಂದ ವಿಶಿಷ್ಟವಾದ ತುಲಾಭಾರ ಸೇವೆ ಸಲ್ಲಿಸುವ ಮೂಲಕ ವಿನೂತನ ಪರಂಪರೆಗೆ ನಾಂದಿ ಹಾಡಲಾಯಿತು. ಹಿರಿಯ ವಿದ್ವಾಂಸ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ತನ್ನ ನಿವಾಸದಲ್ಲಿ ಸ್ವಾಮೀಜಿಯವರಿಗೆ ವೃಕ್ಷ, ಬೀಜ, ಸಸಿಗಳಿಂದ ಕೂಡಿದ ಹಲಸು, ಮಾವು, ಹರಿವೆ, ಅಲಸಂಡೆ, ಹಾಗಲ, ತುಂಬೆ ಮುಂತಾದ ಸಸಿಗಳಿಂದ ತುಲಾಭಾರ ನೆರವೇರಿತು. ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಭಕ್ತರೂ ತುಲಾಭಾರ ಸಸಿಗಳನ್ನು ತಂದಿದ್ದರು. ತುಲಾಭಾರದ ಬಳಿಕ ಈ ಗಿಡಗಳನ್ನು ಭಕ್ತರಿಗೆ

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಗಿಡಗಳಿಂದ ತುಲಾಭಾರ ಸೇವೆ | ವಿನೂತನ ಪರಂಪರೆಗೆ ನಾಂದಿ ಹಾಡಿದ ತುಲಾಭಾರ ಸೇವೆ Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಸವಣೂರು :  ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೆ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಇವರು ನೆರವೇರಿಸಿದರು. ಬಳಿಕ ಮಾತನಾಡಿದ,ಸೀತಾರಾಮ ರೈ ಅವರು,ಪ್ರಜಾಪ್ರಭುತ್ವದ ಅರಿವು ವಿದ್ಯಾರ್ಥಿಗಳಿಗೆ ಆಗಬೇಕಾದರೆ ವಿದ್ಯಾರ್ಥಿ ಸಂಘಗಳು ಸಕ್ರಿಯರಾಗಬೇಕು. ಇಂತಹ ಸಂಘಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಯಕತ್ವವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿ ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ರೈ ಅವರು ಮಾತನಾಡಿ ವಿದ್ಯಾರ್ಥಿ ಸಂಘಗಳು ನಾಯಕತ್ವವನ್ನು ಮೈಗೂಡಿಸಿಕೊಳ್ಳಲು ಅತ್ಯಂತ ಸಶಕ್ತವಾದ ವೇದಿಕೆಯಾಗಿದೆ,ನಾಯಕತ್ವ

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ Read More »

error: Content is protected !!
Scroll to Top