ಪುತ್ತೂರು

ಸರ್ವೆ ವಲಯ ಕಾಂಗ್ರೆಸ್‌ನಿಂದ ಕಾಯಕರ್ತರ ಸಭೆ, ಶಾಸಕರಿಗೆ ಸನ್ಮಾನ

ಪುತ್ತೂರು : ಪುತ್ತೂರು ಸಹಿತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಿದ್ದು, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಸರ್ವೆ ವಲಯ ಕಾಂಗ್ರೆಸ್ ವತಿಯಿಂದ ಕಲ್ಪನೆ ಸಮುದಾಯಭವನದಲ್ಲಿ ಶನಿವಾರ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿಲ್ಲದ ಕಾರಣ ಕಾರ್ಯಕರ್ತರು ನೋವು, ಯಾತನೆಯನ್ನು ಅನುಭವಿಸುವಂತಾಗಿತ್ತು. ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ […]

ಸರ್ವೆ ವಲಯ ಕಾಂಗ್ರೆಸ್‌ನಿಂದ ಕಾಯಕರ್ತರ ಸಭೆ, ಶಾಸಕರಿಗೆ ಸನ್ಮಾನ Read More »

ಮಾಜಿ ಶಾಸಕ ಮಠಂದೂರು ಕಾಲೆಳೆದ ಶಾಸಕ ಅಶೋಕ್ ರೈ

ಪುತ್ತೂರು : ಶಾಸಕನಾಗಿ ನಾನು ಹೊಸ ಒಂದು ತಿಂಗಳು ಕಳೆದಿದೆ ಅಷ್ಟೆ. ಕೃಷಿ ವಿಮಾ ಯೋಜನೆಯ ಬಗ್ಗೆ ಮಾತನಾಡುವಾಗ ಶಬ್ದದಲ್ಲಿ ಎಡವಿರಬಹುದು. ಅದನ್ನೇ ದೊಡ್ಡದು ಮಾಡಿ ಪುತ್ತೂರಿನ ಮಾಜಿ ಶಾಸಕರು ಪುತ್ತೂರಿನ ಶಾಸಕರಿಗೆ ತಿಳುವಳಿಕೆ ಇಲ್ಲ, ರೈತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದು, ಅವರಿಗೆ ಪುತ್ತೂರು ಕ್ಷೇತ್ರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಶಾಸಕರಾದ ಅಶೋಕ್ ರೈ ಹೇಳಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ವಿಚಾರಕ್ಕೆ

ಮಾಜಿ ಶಾಸಕ ಮಠಂದೂರು ಕಾಲೆಳೆದ ಶಾಸಕ ಅಶೋಕ್ ರೈ Read More »

ಬನ್ನೂರಿನಲ್ಲಿ ಮೆಡಿಕಲ್ ಕಾಲೇಜಿನ ಸ್ಥಳ ವೀಕ್ಷಣೆ | ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಿಯೇ ಸಿದ್ದ: ಅಶೋಕ್ ರೈ

ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು ಎಂಬ ಆಗ್ರಹ ನನಗೆ ಶಾಸಕನಾಗುವ ಮೊದಲೇ ಇತ್ತು, ಅಭಿವೃದ್ದಿಯಾಗುತ್ತಿರುವ ಪುತ್ತೂರಿಗೆ ಈ ಯೋಜನೆಯನ್ನು ಜಾರಿಗೆ ತರಲು ಈಗಾಗಲೇ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದು ಕ್ಯಾಬಿನೆಟ್‌ನಲ್ಲಿ ಅನುಮೋದನೆ ಮಾಡಿಸಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಸಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಭಾನುವಾರ ಮೆಡಿಕಲ್ ಕಾಲೇಜಿಗೆ ನಿಗಧಿಪಡಿಸಲಾದ ಜಾಗವನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ತಿಳಿಸಿದರು. ಸುಮಾರು 40 ಎಕ್ರೆ ಸರಕಾರಿ ಜಾಗವನ್ನು ಕಾಲೇಜು ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ದ ಕ

ಬನ್ನೂರಿನಲ್ಲಿ ಮೆಡಿಕಲ್ ಕಾಲೇಜಿನ ಸ್ಥಳ ವೀಕ್ಷಣೆ | ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಿಯೇ ಸಿದ್ದ: ಅಶೋಕ್ ರೈ Read More »

ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ನಿಧನ

ಪುತ್ತೂರು: ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ (64) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 50 ವರ್ಷಗಳಿಂದ ಸ್ಯಾಕ್ಸೋಫೋನ್ ವಾದನ ಸೇವೆ ಮಾಡಿಕೊಂಡು ಬಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಮತ್ತಿತರ ಗಣ್ಯರು ತೆರಳಿ ಸಂತಾಪ ಸೂಚಿಸಿದರು.

ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ನಿಧನ Read More »

ನಾಯಿ ದಾಳಿಗೆ ಸಿಲುಕಿ ಜಿಂಕೆ ಮೃತ್ಯು

ಬೆಳ್ತಂಗಡಿ: ಬೀದಿ ನಾಯಿ ದಾಳಿಗೆ ಸಿಲುಕಿ ಜಿಂಕೆಯೊಂದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಹೊಸಮುಗೇರು ಎಂಬಲ್ಲಿ ನಡೆದಿದೆ. ಎರಡು ವರ್ಷ ಪ್ರಾಯದ ಗಂಡು ಜಿಂಕೆ ಮೇಯುತ್ತಾ ಕಡಿನಂಚಿಗೆ ಬಂದ ಸಂದರ್ಭ ನಾಯಿಯ ದಾಳಿಗೆ ಸಿಲುಕಿದೆ, ಗಂಭೀರ ಸ್ಥಿತಿಯಲ್ಲಿದ್ದ ಜಿಂಕೆಯನ್ನು ಕಂಡು ಸ್ಥಳೀಯರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ಸಮೀಪದ ಪಶು ಶಿಕಿತ್ಸಾಲಯಕ್ಕೆ ಕೊಂಡೊಯ್ಯಲಾದರೂ ಆದಾಗಲೇ ಜಿಂಕೆ ಸಾವನ್ನಪ್ಪಿದೆ. ಮೃತದೇಹವನ್ನು ಅರಣ್ಯ ಇಲಾಖಾ ಡಿಪೋ ಇರುವ ಮಣ್ಣಗುಂಡಿ

ನಾಯಿ ದಾಳಿಗೆ ಸಿಲುಕಿ ಜಿಂಕೆ ಮೃತ್ಯು Read More »

ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ದಂಪತಿ |  ಪತಿ ಮೃತ್ಯು – ಪತ್ನಿಯ ಸ್ಥಿತಿ ಗಂಭೀರ

ಪುತ್ತೂರು : ಅನಂತಾಡಿಯ ಬಾಕಿಲ ಎಂಬಲ್ಲಿ ಪತಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಮೃತಪಟ್ಟು ಪತ್ನಿಯನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಂತಾಡಿ ಬಾಕಿಲ ನಿವಾಸಿ ಪ್ರತಾಪ್(35) ಮೃತಪಟ್ಟಿದ್ದು ಪತ್ನಿ ವೀಣಾ(32)ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ರಾತ್ರಿ ನೇಣು ಬಿಗಿದುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದು ಇಬ್ಬರನ್ನೂ ಪುತ್ತೂರು ಆಸ್ಪತ್ರೆಗೆ ಕರೆ ತರಲಾಗಿತ್ತು.ಆದರೆ ಪ್ರತಾಪ್ ಮೃತಪಟ್ಟಿದ್ದಾರೆ. ಪತ್ನಿ ವೀಣಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ

ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ದಂಪತಿ |  ಪತಿ ಮೃತ್ಯು – ಪತ್ನಿಯ ಸ್ಥಿತಿ ಗಂಭೀರ Read More »

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ

ಪುತ್ತೂರು : ಧರ್ಮ ಆಧಾರಿತ ರಾಜಕಾರಣ ಇರಬೇಕೆಂಬ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಅವರು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ಹಮ್ಮಿಕೊಂಡ ಧಾರ್ಮಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಲಿದೆ ಎಂದರು. ಈ

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ Read More »

ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ವತಿಯಿಂದ ನೇತ್ರದಾನ ನೋಂದಣಿ, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ | ಒಳಿತು ಮಾಡು ಮನುಷ ತಂಡದ 24ನೇ ಕಾರ್ಯಕ್ರಮ

ಪುತ್ತೂರು: ಇಲ್ಲಿನ  ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ,ಜೆಸಿಐ ಪುತ್ತೂರು,ಲಯನ್ಸ್ ಕ್ಲಬ್ ಪುತ್ತೂರು ಇದರ ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ  ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 24ನೇ ಯೋಜನೆ  ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ಜೂನ್30 ರಂದು ಪುತ್ತೂರಿನ  ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪುತ್ತೂರು

ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ವತಿಯಿಂದ ನೇತ್ರದಾನ ನೋಂದಣಿ, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ | ಒಳಿತು ಮಾಡು ಮನುಷ ತಂಡದ 24ನೇ ಕಾರ್ಯಕ್ರಮ Read More »

ಪುತ್ತೂರಿನಲ್ಲಿ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಕಾರ್ಪೊರೇಟ್ ಕಚೇರಿ ಶುಭಾರಂಭ

ಪುತ್ತೂರು: ವಿಟ್ಲದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಕಾರ್ಪೊರೇಟ್ ಕಚೇರಿಯು ಪುತ್ತೂರು ಕಲ್ಲಾರೆ ಪವಾಜ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಶುಭಾರಂಭಗೊಂಡಿತು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಕಚೇರಿಯನ್ನು ತೆಂಗಿನ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪೆನಿ

ಪುತ್ತೂರಿನಲ್ಲಿ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಕಾರ್ಪೊರೇಟ್ ಕಚೇರಿ ಶುಭಾರಂಭ Read More »

ಪ್ರವೀಣ್ ನೆಟ್ಟಾರೆ ಹತ್ಯೆ ಆರೋಪಿಗಳಿಗೆ ನ್ಯಾಯಾಲಯಕ್ಕೆ ಶರಣಾಗಲು ಜೂ.30 ಡೆಡ್ ಲೈನ್ | ಶರಣಾಗದ ಆರೋಪಿಗಳು | ಎನ್‍ಐಎ ಮೂಲಗಳಿಂದ ಮಾಹಿತಿ

ಪುತ್ತೂರು: ಬೆಳ್ಳಾರೆಯ ಹಿಂದೂ ಕಾರ್ಯಕರ್ತ ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ ಆರೋಪಿಗಳಿಗೆ ಜೂ.30 ರಂದು ಡೆಡ್ ಲೈನ್ ನೀಡಲಾಗಿದ್ದು, ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿಲ್ಲ ಎಂದು ಎನ್‍ಐಎ ಮೂಲಗಳಿಂದ ಮಾಹಿತಿ ಲಭಿಸಿದೆ. ಪ್ರಮುಕ ಆರೋಪಿಗಳಾದ ುಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್, ತುಫೈಲ್, ಮೊಹಮ್ಮದ್ ಮುಸ್ತಾಫಾ ಎನ್‍ಐಗೆ ಬೇಕಾಗಿರುವ ಆರೋಪಿಗಳಾಗಿದ್ದಾರೆ. ಈ ನಾಲ್ಕು ಜನರ ಪತ್ತೆಗೆ 14 ಲಕ್ಷ ರೂ. ಬಹುಮಾನ ಪತ್ತೆ ಮಾಡಿದವರಿಗೆ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಈ ಪೈಕಿ ತುಫೈಲ್, ಮೊಹಮ್ಮದ್ ಮುಸ್ತಾಫ ಸುಳಿವಿಗೆ ತಲಾ

ಪ್ರವೀಣ್ ನೆಟ್ಟಾರೆ ಹತ್ಯೆ ಆರೋಪಿಗಳಿಗೆ ನ್ಯಾಯಾಲಯಕ್ಕೆ ಶರಣಾಗಲು ಜೂ.30 ಡೆಡ್ ಲೈನ್ | ಶರಣಾಗದ ಆರೋಪಿಗಳು | ಎನ್‍ಐಎ ಮೂಲಗಳಿಂದ ಮಾಹಿತಿ Read More »

error: Content is protected !!
Scroll to Top