ಪುತ್ತೂರು

ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆ | ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಉಸಿರುಗಟ್ಟಿ ನಿಧನ

ಪುತ್ತೂರು: ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆಯಿಂದಾಗಿ ಉಸಿರುಗಟ್ಟಿ ಆಸ್ಪತ್ರೆಗೆ ದಾಖಲಾದ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಕೂರ್ನಡ್ಕ ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಡೆದಿದೆ.   ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ (80) ಮೃತಪಟ್ಟವರು. ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರ ಮನೆಯಲ್ಲಿ ಜು.4 ರಂದು ಕೊಠಡಿಯಲ್ಲಿನ ಹವಾನಿಯಂತ್ರಣ ಉಪಕರಣದಲ್ಲಿ ದೋಷ ಕಂಡು ಹೊಗೆ ಕಾಣಿಸಿಕೊಂಡಿತ್ತು. ಘಟನೆಗೆ ಸಂಬಂಧಿಸಿ ಮನೆಯ ಕಪಾಟು, ಮಂಚ ಹಾನಿಯಾಗಿದೆ. ಅಗ್ನಿಶಾಮಕದಳದವರು […]

ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆ | ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಉಸಿರುಗಟ್ಟಿ ನಿಧನ Read More »

ಅಕ್ಷಯ ಕಾಲೇಜಿನಲ್ಲಿ ಅಧ್ಯಾಪಕರಿಗೆ ಒಂದು ದಿನದ “ಅಧ್ಯಾಪಕರ ತರಬೇತಿ” ಕಾರ್ಯಾಗಾರ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಸಹಭಾಗಿತ್ವದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಒಂದು ದಿನದ “ಅಧ್ಯಾಪಕರ ತರಬೇತಿ ಕಾರ್ಯಗಾರ” ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರವನ್ನು ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ, ಅಧ್ಯಾಪಕರ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು ಕಳೆದ ಮೂರು

ಅಕ್ಷಯ ಕಾಲೇಜಿನಲ್ಲಿ ಅಧ್ಯಾಪಕರಿಗೆ ಒಂದು ದಿನದ “ಅಧ್ಯಾಪಕರ ತರಬೇತಿ” ಕಾರ್ಯಾಗಾರ Read More »

ಸಂತ್ರಸ್ತೆಯ ಮದುವೆಯ ಪ್ರಯತ್ನದ ಜತೆ ಕಾನೂನಿನ ನೆರವನ್ನು ಕಲ್ಪಿಸುತ್ತೇನೆ : ಪ್ರತಿಭಾ ಕುಳಾಯಿ | ವಂಚನೆಗೊಳಗಾದ ಸಂತ್ರಸ್ತೆ ಮನೆಗೆ ಭೇಟಿ ನೀಡಿದ ಪ್ರತಿಭಾ ಕುಳಾಯಿ

ಪುತ್ತೂರು : ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದ ಪ್ರಕರಣ ಸಂಬಂಧಿಸಿದ ಸಂತ್ರಸ್ತೆ ಮನೆಗೆ ರಾಜ್ಯ ಹಿಂದುಳಿದ ವರ್ಗ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಗುರುವಾರ ಸಂಜೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ಈ ವಿಚಾರದಲ್ಲಿ ಕಾನೂನು ಸಂಘರ್ಷವೇ ಪರಿಹಾರವಲ್ಲ. ಮಾತುಕತೆ ಮೂಲಕ ಯುವತಿ-ಯುವಕನನ್ನು ಒಂದು ಮಾಡಿ ಮದುವೆ ಮಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ತಾಯಿ ಮಗುವಿನ ಹಣಕಾಸು ಖರ್ಚನ್ನು ನಾನು ಸಂಪೂರ್ಣ ಭರಿಸಲಿದ್ದೇನೆ. ಅಗತ್ಯವಿದ್ದರೆ

ಸಂತ್ರಸ್ತೆಯ ಮದುವೆಯ ಪ್ರಯತ್ನದ ಜತೆ ಕಾನೂನಿನ ನೆರವನ್ನು ಕಲ್ಪಿಸುತ್ತೇನೆ : ಪ್ರತಿಭಾ ಕುಳಾಯಿ | ವಂಚನೆಗೊಳಗಾದ ಸಂತ್ರಸ್ತೆ ಮನೆಗೆ ಭೇಟಿ ನೀಡಿದ ಪ್ರತಿಭಾ ಕುಳಾಯಿ Read More »

ಕರ್ಣಾಟಕ ಬ್ಯಾಂಕ್‌ ಗಿಲ್ಲ ಯಾವುದೇ ಆಪತ್ತು, ಗ್ರಾಹಕರೇ ಅಭದ್ರತೆಯ ಭಯ ಬಿಡಿ

ಕರ್ಣಾಟಕ ಬ್ಯಾಂಕ್ ಎಂಬ ಸಾಂಪ್ರದಾಯಿಕ ಖಾಸಗಿ ಬ್ಯಾಂಕ್ ತನ್ನ ಕಾರ್ಯವೈಖರಿ, ಗ್ರಾಹಕ ಸ್ನೇಹಿ ವರ್ತನೆಗಳ ಮೂಲಕವೇ ಇಂದು ಜನಮಾನಸದಲ್ಲಿ ಹೆಸರು ಪಡೆದಿದೆ. ನಮ್ಮಲ್ಲಿ ಹಲವರು ಇಂದು ಕರ್ಣಾಟಕ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರಿದ್ದೇವೆ, ಹಲವಾರು ವ್ಯವಹಾರಗಳನ್ನು ನಡೆಸುತ್ತಿರುವವರಿದ್ದೇವೆ. ಸುಳ್ಳು ಸುದ್ದಿ ಮೂಲಕ ಕರ್ಣಾಟಕ ಬ್ಯಾಂಕಿನ ಗೌರವಕ್ಕೆ ಧಕ್ಕೆ ಕರ್ಣಾಟಕ ಬ್ಯಾಂಕಿನ ಬಗ್ಗೆ ಸರಿಯಾದ ದಾಖಲೆಗಳಿಲ್ಲದ ಮತ್ತು ಮಾನ ಹಾನಿಕರ ಸುದ್ದಿ ಬಿತ್ತರಿಸಿ, ಬ್ಯಾಂಕ್ ಬಗ್ಗೆ ಜನರಲ್ಲಿ ಗೊಂದಲ ಹುಟ್ಟುವಂತೆ ನಕಲಿ ಸುದ್ದಿಗಳು ಮಾಡಿದ್ದವು. ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ಎಂದು

ಕರ್ಣಾಟಕ ಬ್ಯಾಂಕ್‌ ಗಿಲ್ಲ ಯಾವುದೇ ಆಪತ್ತು, ಗ್ರಾಹಕರೇ ಅಭದ್ರತೆಯ ಭಯ ಬಿಡಿ Read More »

ಪುತ್ತಿಲ ಪರಿವಾರ ಟ್ರಸ್ಟ್ ನಿಂದ ದ.ಕ. ಜಿಲ್ಲಾಧಿಕಾರಿ ಭೇಟಿ | ಪ್ರಾಕೃತಿಕ ವಿಕೋಪಗಳ ಕುರಿತು ಚರ್ಚೆ

ಪುತ್ತೂರು: ತಾಲೂಕಿನ ಹಲವು ಕಡೆ ಪ್ರಾಕೃತಿಕ ವಿಕೋಪಗಳ ಹಾಗೂ ಹಲವು ಸಮಸ್ಯೆಗಳ ಬಗ್ಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರನ್ನು  ಭೇಟಿ ಮಾಡಿ ಚರ್ಚಿಸಲಾಯಿತು. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ, ಹಿರೇಬಂಡಾಡಿ, ನರಿಮೊಗರು ಸಹಿತ ಹಲವು ಕಡೆ  ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ , ಮನೆಗಳ  ಕುಸಿತ ಹಾಗೂ  ಹಲವಾರು ಮನೆಗಳು ಬೀಳುವ ಹಂತದಲ್ಲಿ ರುತ್ತದೆ. ಹಾಗಾಗಿ ನೆರೆ ಹಾವಳಿಯಿಂದ ಸಾಕಷ್ಟು ಬಡ ಕುಟುಂಬಗಳು ಬೀದಿ ಪಾಲಾಗಿದ್ದು ಇದುವರೆಗೆ  ಸರಿಯಾದ ಸವಲತ್ತು

ಪುತ್ತಿಲ ಪರಿವಾರ ಟ್ರಸ್ಟ್ ನಿಂದ ದ.ಕ. ಜಿಲ್ಲಾಧಿಕಾರಿ ಭೇಟಿ | ಪ್ರಾಕೃತಿಕ ವಿಕೋಪಗಳ ಕುರಿತು ಚರ್ಚೆ Read More »

ಅನುಮತಿ ಇಲ್ಲದೆ ಪ್ರತಿಭಟನೆ | ಎಸ್‍ ಡಿಪಿಐ ಮುಖಂಡರ ಸಹಿತ 30 ಮಂದಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಅನುಮತಿ ರಹಿತ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ 30 ಜನರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಸಂಜೆ ಪುತ್ತೂರು ಕಿಲ್ಲೆ ಮೈದಾನದ ಬಳಿ ಎಸ್‍ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ,ದ ವತಿಯಿಂದ ಅಧ್ಯಕ್ಷ ಅಶ್ರಫ್ ಬಾವು ಎಂಬವರು ಹಾಗೂ ಇತರ ಸುಮಾರು 30 ಜನರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮ ಗುಂಪು ಸೇರಿ, ಧ್ವನಿವರ್ಧಕವನ್ನು ಬಳಸಿ, ಪ್ರತಿಭಟನೆ ನಡೆಸಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಅಶ್ರಫ್‍ ಬಾವು ಸಹಿತ 30

ಅನುಮತಿ ಇಲ್ಲದೆ ಪ್ರತಿಭಟನೆ | ಎಸ್‍ ಡಿಪಿಐ ಮುಖಂಡರ ಸಹಿತ 30 ಮಂದಿ ವಿರುದ್ಧ ಪ್ರಕರಣ ದಾಖಲು Read More »

ಹೆರಿಗೆ ಬಳಿಕ ವಿಪರೀತ ರಕ್ತ ಸ್ರಾವದಿಂದ ಮಹಿಳೆ ಮೃತ್ಯು | ಪ್ರಕರಣ ದಾಖಲು

ಪುತ್ತೂರು: ಹೆರಿಗೆ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿ ಕರ್ನೂರಿನ ಮಹಿಳೆಯೋರ್ವರು ಮೃತರಾದ ಘಟನೆ ನಡೆದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಕರ್ನೂರು ಮೊಹಮ್ಮದ್ ಬಶೀರ್ ಕೆ.ಎ.ಅವರ ಪತ್ನಿ ಆಯಿಷತ್ ಸೌಜಾನ ಮೃತಪಟ್ಟವರು. ಆಯಿಷತ್ ಸೌಜಾನ ಅವರನ್ನು ಜೂ.27ರಂದು ಹೆರಿಗೆಗಾಗಿ ಆಕೆಯ ಗಂಡ ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಆರೈಕೆಯಲ್ಲಿ ಜುಬೈದಾ ಕಾವು ಅವರು ಇದ್ದರು. ಜು.1ರಂದು ಬೆಳಿಗ್ಗೆ, 05.30 ಗಂಟೆಗೆ ಆಯಿಷತ್ ಸೌಜಾನರಿಗೆ ಸಾಮಾನ್ಯ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ

ಹೆರಿಗೆ ಬಳಿಕ ವಿಪರೀತ ರಕ್ತ ಸ್ರಾವದಿಂದ ಮಹಿಳೆ ಮೃತ್ಯು | ಪ್ರಕರಣ ದಾಖಲು Read More »

ಮರಳು ಬ್ಲಾಕ್‍ ಗಳ ಕಡತಗಳಲ್ಲಿ ವ್ಯತ್ಯಾಸ | ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‍ | ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆ

ಪುತ್ತೂರು: ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ ಗುರುತಿಸಿದ ಮರಳು ಬ್ಲಾಕ್‌ ಗಳ ಕಡತಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಈ ಕುರಿತು ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡದ್ದು ಮಂಗಳವಾರ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆಯಲ್ಲಿ. ಕಡತಗಳಲ್ಲಿ ಸಮಸ್ಯೆಗಳಿರುವುದನ್ನು ಯಾರೂ ಗಮನಿಸುವುದಿಲ್ಲವಾ? ಸಮಿತಿಯವರೆಗೆ ಯಾಕೆ ಸಮಸ್ಯೆಯ ಕಡತಗಳನ್ನು ತರುವುದು ಯಾಕೆ? ತಪ್ಪುಗಳನ್ನು ನನ್ನ ಹಂತದವರೆಗೆ ತರುವುದಾದರೆ ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ? ಸಂಬಂಧಪಟ್ಟ

ಮರಳು ಬ್ಲಾಕ್‍ ಗಳ ಕಡತಗಳಲ್ಲಿ ವ್ಯತ್ಯಾಸ | ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‍ | ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆ Read More »

ಭಾರೀ ಮಳೆ ಹಿನ್ನಲೆ : ಇಂದು ಕಡಬ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ

ಕಡಬ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕಡಬ ತಾಲೂಕಿನಾದ್ಯಂತ ವ್ಯಾಪಕ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಇಂದು (ಜು.3) ರಜೆ  ಘೋಷಿಸಲಾಗಿದೆ. ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿ, ತೋಡುಗಳ ಬಳಿ ಹೋಗುವುದಾಗಲಿ, ವಿದ್ಯುತ್ ಕಂಬದ ಸಮೀಪ ಹೋಗುವುದನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಪ್ರಾಕೃತಿಕವಾಗಿ ಯಾವುದೇ ಘಟನೆಗಳು ಸಂಭವಿಸಿದಲ್ಲಿ ಸಾರ್ವಜನಿಕರು ತಕ್ಷಣ ಸಂಬಂಧ ಪಟ್ಟ ಪಂಚಾಯತ್, ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ

ಭಾರೀ ಮಳೆ ಹಿನ್ನಲೆ : ಇಂದು ಕಡಬ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ Read More »

ಸೆ.27-28 : ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು 2025 ಸೀಸನ್‍3 | ಪೂರ್ವಭಾವಿ ಸಭೆ

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಸೆ.27 ಹಾಗೂ 28 ರಂದು ನಡೆಯುವ ಪಿಲಿಗೊಬ್ಬು-2025 ಸೀಸನ್-3 ಇದರ ಪೂರ್ವಭಾವಿ ಸಭೆ ದರ್ಬೆ ಶ್ರೀರಾಮ ಸೌಧದ ಕಟ್ಟಡದಲ್ಲಿ ಇಂದು ನಡೆಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚೆ ನಡೆಸಲಾಯಿತು. ವೇದಿಕೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷ ಶಂಕರ್ ಭಟ್

ಸೆ.27-28 : ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು 2025 ಸೀಸನ್‍3 | ಪೂರ್ವಭಾವಿ ಸಭೆ Read More »

error: Content is protected !!
Scroll to Top