ಪುತ್ತೂರು

ಬಿಸಿಯೂಟ ಕಾರ್ಮಿಕರ ಬದುಕನ್ನೇ ಬಿಸಿಯಾಗಿಸುವ ಸರಕಾರಗಳು  : ಬಿ.ಎಂ.ಭಟ್

ಪುತ್ತೂರು: ಅಕ್ಷರದಾಸೋಹ ಯೋಜನೆ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮವಾಗಿದ್ದರೂ, ಬಿಸಿಯೂಟ ತಯಾರಿಸುವ ಕಾರ್ಮಿಕರ ಬದುಕಿಗೆ ತಕ್ಕ ರಕ್ಷಣೆ, ಭದ್ರತೆ ದುಡಿಮೆಗೆ ತಕ್ಕ ವೇತನ ಇಲ್ಲದೆ ಅವರ ಬದುಕೇ ಬಿಸಿಯಾಗುವಂತಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್  ಹೇಳಿದರು. ಅವರು ಪುತ್ತೂರು ಎಸಿ ಕಚೇರಿ ಎದುರು ನಡೆದ ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ನೌಕರರ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದರು. ಜನರ ಬದುಕಿನ ಬಗ್ಗೆ ಕಾಳಜಿಯೇ ಇಲ್ಲದ ಬಿಜೆಪಿ ಸರಕಾರವನ್ನು ಜನ ಕಿತ್ತೆಸಿದಿದ್ದರೂ ಈಗ ಅದಿಕಾರಕ್ಕೆ ಬಂದ […]

ಬಿಸಿಯೂಟ ಕಾರ್ಮಿಕರ ಬದುಕನ್ನೇ ಬಿಸಿಯಾಗಿಸುವ ಸರಕಾರಗಳು  : ಬಿ.ಎಂ.ಭಟ್ Read More »

ನಾಥಪಂಥ ಬೇರೆಯಲ್ಲ, ಭಾರತ ಪಂಥ ಬೇರೆಯಲ್ಲ: ಡಾ. ಬಿ. ವಿ ವಸಂತಕುಮಾರ್ | ವಿವೇಕಾನಂದ ಮಹಾವಿದ್ಯಾಲದಲ್ಲಿ ಡಾ. ಶ್ರೀಧರ್ ಹೆಚ್ ಜಿ ಕೃತಿ ’ನಾಥಪಂಥ’ ಲೋಕಾರ್ಪಣೆ

ಪುತ್ತೂರು : ನಾಥಪಂಥ ಕೃತಿ ವ್ಯಷ್ಟಿಯ ಮೂಲಕ ಹೊರಬಂದಿರುವ ಸಮಷ್ಟಿ. ಆತ್ಮಹತ್ಯೆಯೇ ಮುಂದಿನ ದಾರಿ, ಬೇರೆ ಯಾವುದೇ ದಾರಿ ಇಲ್ಲ ಎನ್ನುವ ವ್ಯಕ್ತಿಯ ಮನಸ್ಸನ್ನು ಆತ್ಮ ಮತ್ತು ವಿಕಾಸದೆಡೆಗೆ ಕೊಂಡೊಯ್ಯಲು ನಾಥಪಂಥ ಸಹಾಯವಾಗುತ್ತದೆ. ಜೀವನದ ಪ್ರತಿ ಹಂತದಲ್ಲೂ ಈ ಕೃತಿಯ ಪಾತ್ರ ಪಹತ್ವವಾದದ್ದು, ಅಂತೆಯೇ ಪಂಥಗಳ ಕುರಿತು ಅಧ್ಯಯನ ಮಾಡುವವರಿಗೆ ಈ ಪುಸ್ತಕ ಮಾದರಿಯಾಗಲಿದೆ ಎಂದು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಪ್ರಾಚಾರ್ಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ. ವಿ ವಸಂತಕುಮಾರ್

ನಾಥಪಂಥ ಬೇರೆಯಲ್ಲ, ಭಾರತ ಪಂಥ ಬೇರೆಯಲ್ಲ: ಡಾ. ಬಿ. ವಿ ವಸಂತಕುಮಾರ್ | ವಿವೇಕಾನಂದ ಮಹಾವಿದ್ಯಾಲದಲ್ಲಿ ಡಾ. ಶ್ರೀಧರ್ ಹೆಚ್ ಜಿ ಕೃತಿ ’ನಾಥಪಂಥ’ ಲೋಕಾರ್ಪಣೆ Read More »

ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆ | ಎರಡು ಬಣಗಳೊಳಗೆ ಮಾರಾಮಾರಿ

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಕುರಿತು ಕಡಬ ಅಂಬೇಡ್ಕರ‍ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ. ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಉಚ್ಚಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆ | ಎರಡು ಬಣಗಳೊಳಗೆ ಮಾರಾಮಾರಿ Read More »

ಪ್ರಕೃತಿ ವಿಕೋಪಕ್ಕೆ ತಯಾರಿ, ಫಲಾನುಭವಿಗಳ ಅನುದಾನ ಕುರಿತು ಸಭೆ ನಡೆಸಲು ಡಿಸಿ ಅಧಿಕಾರಿಗಳಿಗೆ ಸೂಚನೆ | ಪುತ್ತೂರು ನಗರಸಭೆಯಲ್ಲಿ ಪರಿಶೀಲನಾ ಸಭೆ

ಪುತ್ತೂರು: ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳ ಜತೆಗೆ ಫಲಾನುಭವಿಗಳಿಗೆ ಅನುದಾನ ನೀಡಲು ಅವರ ದಾಖಲೆಗಳನ್ನು ನಗರಸಭೆ, ಕಂದಾಯ ಇಲಾಖೆ ಜಂಟಿಯಾಗಿ ಚರ್ಚಿಸಿ ಪರಿಹರಿಸುವಂತೆ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಕಾರ್ಯಗಳ ಕುರಿತ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಪುತ್ತೂರು ನಗರಸಭೆಯಲ್ಲಿ ಅಭಿವೃದ್ಧಿಗೆ ಸಿಬ್ಬಂದಿಗಳ ಕೊರತೆಯಿದೆ. ಬಹುತೇಕ ಅಧಿಕಾರಿಗಳನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ. ಅಮೃತ ನಗರೋತ್ಥಾನದ ಗುತ್ತಿಗೆದಾರರೊಬ್ಬರ ಸಮಸ್ಯೆಯಿಂದ ಕಾಮಗಾರಿಗಳು ವಿಳಂಬವಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ.,

ಪ್ರಕೃತಿ ವಿಕೋಪಕ್ಕೆ ತಯಾರಿ, ಫಲಾನುಭವಿಗಳ ಅನುದಾನ ಕುರಿತು ಸಭೆ ನಡೆಸಲು ಡಿಸಿ ಅಧಿಕಾರಿಗಳಿಗೆ ಸೂಚನೆ | ಪುತ್ತೂರು ನಗರಸಭೆಯಲ್ಲಿ ಪರಿಶೀಲನಾ ಸಭೆ Read More »

ಬಜತ್ತೂರು ಶಾಲೆಯಲ್ಲಿ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ

ಬಜತ್ತೂರು : ಉಪ್ಪಿನಂಗಡಿ ಬಜತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ತೆಂಗಿನ ಗಿಡ ನೆಡುವುದು, ಶಾಲಾ ಕೊಠಡಿಯ ಮುರಿದ ಹಂಚುಗಳನ್ನು ತೆರವುಗೊಳಿಸಿ ಹೊಸ ಹಂಚುಗಳನ್ನು ಹಾಕಲಾಯಿತು, ಪಂಚಾಯತ್ ಆವರಣಕ್ಕೆ ಅಡ್ಡಲಾಗಿದ್ದ ಗಿಡ ಮರಗಳನ್ನು ಕಡಿದು ಸ್ವಚ್ಚ ಮಾಡಲಾಯಿತು . ಈ ಸಂದರ್ಭದಲ್ಲಿ  ಸ್ವಯಂಸೇವಕರಾದ ಮಮತಾ, ಸದಾನಂದ, ಮನೋಜ್ ಕುಮಾರ್, ಸಾವಿತ್ರಿ, ಸುರೇಶ್, ಅನಿತಾ, ದಯಾನಂದ, ವಾಸುದೇವ, ವಾಸಪ್ಪ, ಭವ್ಯ, ಮಿಥುನ್ ಕುಮಾರ್, ಇಂದಿರಾ, ಪಾಲ್ಗೊಂಡಿದ್ದರು.

ಬಜತ್ತೂರು ಶಾಲೆಯಲ್ಲಿ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ Read More »

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ

ಪುತ್ತೂರು: ಪುತ್ತೂರು:ಪುತ್ತೂರು ಉಪವಿಭಾಗಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್ ನಂದನ್ ಅವರ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ತಡೆಯಾಜ್ಞೆ ನೀಡಿದೆ. ಅವಧಿಪೂರ್ವ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎತ್ತಿನಹೊಳೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಹುದ್ದೆಗೆ ಮತ್ತೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಗಿರೀಶ್ ನಂದನ್ ಕೆಎಟಿ ಗೆ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಕೆಎಟಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದೆ. ಈ ಹಿಂದೆ ಗಿರೀಶ್ ನಂದನ್ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರ ಅವರ

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ Read More »

ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಜಗಳ | ಅಣ್ಣನನ್ನು ಚೂರಿಯಿಂದ ಇರಿದು ಕೊಂದ ತಮ್ಮ

ಸುಳ್ಯ : ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸಹೋದರರ ನಡುವೆ ಜಗಳ ನಡೆದು ತಮ್ಮ ಅಣ್ಣನನ್ನು ಹತ್ಯೆಗೈದ ಭೀಕರ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ. ಉಸ್ಮಾನ್ ಎಂಬವರೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶುಕ್ರವಾರ ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಸ್ಥಳವೊಂದಕ್ಕೆ  ಹೋಗಿದ್ದ ಸಂದರ್ಭ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಈ ಸಂದರ್ಭದಲ್ಲಿ ತಮ್ಮ ಅಣ್ಣ ಉಸ್ಮಾನ್ ಅವರಿಗೆ ಚೂರಿಯಿಂದ ಚುಚ್ಚಿದ್ದು, ಈ ವೇಳೆ

ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಜಗಳ | ಅಣ್ಣನನ್ನು ಚೂರಿಯಿಂದ ಇರಿದು ಕೊಂದ ತಮ್ಮ Read More »

ಕಾಂಗ್ರೆಸ್ ಸರಕಾರದಿಂದ ದ್ವೇಷ ರಾಜಕಾರಣ : ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ರೀತಿಯ ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಪುತ್ತೂರು ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುನಿಗಳು, ಉದ್ಯಮಿಗಳು ಜತೆಗೆ ಎಲ್ಲಿಂದಲೋ ಉದ್ಯೋಗ ಅರಸಿ ಬಂದ ಕಾರ್ಮಿಕರ ಹತ್ಯೆಗಳು, ಎರಡು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ

ಕಾಂಗ್ರೆಸ್ ಸರಕಾರದಿಂದ ದ್ವೇಷ ರಾಜಕಾರಣ : ಸಂಸದ ನಳಿನ್ ಕುಮಾರ್ ಕಟೀಲ್ Read More »

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಶಸ್ವಿ ಉಡಾವಣೆಗೆ ಪ್ರಾರ್ಥನೆ

ಪುತ್ತೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಯಶಸ್ವಿ ಉಡಾವಣೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪುತ್ತೂರು ನಗರ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ, ಯುವರಾಜ ಪೆರಿಯತ್ತೋಡಿ, ದಿನೇಶ್ ಪಂಜಿಗ, ಸಂತೋಷ್ ರಾವ್, ರಾಮಪ್ರಸಾದ್ ಮಯ್ಯ,

ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಶಸ್ವಿ ಉಡಾವಣೆಗೆ ಪ್ರಾರ್ಥನೆ Read More »

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ | ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ

ಧರ್ಮಸ್ಥಳ : ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಶಕ್ತಿ “ ಯೋಜನೆ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿದ್ಧರಾಮಯ್ಯ ಅವರು ಹಂಚಿಕೊಂಡಿದ್ದು, 14ನೇ ಬಜೆಟ್ ನ ಫಲಶ್ರುತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆಗೆ ಸಿಕ್ಕಿರುವ ಮನ್ನಣೆಯಾಗಿದೆ ಎಂದು ಅವರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಧರ್ಮಸ್ಥಳಕ್ಕೆ

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ | ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ Read More »

error: Content is protected !!
Scroll to Top