ಪುತ್ತೂರು

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು

ನೆಲ್ಯಾಡಿ: ಬೈಕೊಂದು ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನೆಲ್ಯಾಡಿ ಮೊರಂಕಳ ನಿವಾಸಿ ಬೈಕ್ ಸವಾರ ಇಕ್ಬಾಲ್ ಮೃತಪಟ್ಟ ಯುವಕ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಣ್ಣಂಪಾಡಿ ಬಳಿ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿ ಕೆಟ್ಟು ನಿಂತಿದ್ದ ಪಾರ್ಸೆಲ್ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಮೃತದೇಹವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು Read More »

ನಾಳೆಯಿಂದ (ಜು.26): ಪ್ರತಿಷ್ಠಿತ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಆಷಾಢ ಬಿಗ್ಗೆಸ್ಟ್ ಸೇಲ್

ಪುತ್ತೂರು: ಪ್ರತಿಷ್ಠಿತ ಬಟ್ಟೆ ಮಳಿಗೆ ಎಂ.ಸಂಜೀವ ಶೆಟ್ಟಿ ಸಿಲ್ಸ್ಕ್ & ರೆಡಿಮೇಡ್ಸ್ ನಲ್ಲಿ ವರ್ಪಪ್ರತಿ ಆಯೋಜಿಸುವ ಆಷಾಢ (ಆಟಿ) ಬಿಗ್ಗೆಸ್ಟ್ ಸೇಲ್ ನಾಳೆಯಿಂದ (ಜು.26) ಆರಂಭಗೊಳ್ಳಲಿದೆ. ಈ ಆಷಾಢ ಸೇಲ್‍ನಲ್ಲಿ ಪ್ರಖ್ಯಾತ ಮಿಲ್‍ಗಳಿಂದ ನೇರವಾಗಿ ಖರೀದಿಸಿದ ಹೊಸ ಹೊಸ ಡಿಸೈನ್ ಸೀರೆಗಳು ಹಾಗೂ ಸಿದ್ಧ ಉಡುಪುಗಳ ಹೊಸ ಹೊಸ ಕಲೆಕ್ಷನ್ಸ್ ಪ್ರತಿದಿನವೂ ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ಆಷಾಢ ಬಿಗ್ಗೆಸ್ಟ್ ಸೇಲ್ ಕೆಲವೇ ದಿನಗಳು ಮಾತ್ರ ಇರಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನಾಳೆಯಿಂದ (ಜು.26): ಪ್ರತಿಷ್ಠಿತ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಆಷಾಢ ಬಿಗ್ಗೆಸ್ಟ್ ಸೇಲ್ Read More »

ಪಡುಮಲೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಆ.25 ರಂದು ನಡೆಯಲಿರುವ ಶ್ರೀ ವರ ಮಹಾಲಕ್ಷ್ಮೀ ವೃತ ಪೂಜಾ ಸಮಿತಿಯ ಸಭೆ ನಡೆಯಿತು.ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಭಾಕರ ಗೌಡ ಕೋಡಿಯಡ್ಕ, ಧ.ಗ್ರಾ. ಯೋಜನೆಯ ಬಡಗನ್ನೂರು ಎ ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಉಪಸ್ಥಿತರಿದ್ದರು.ನೂತನ ಸಮಿತಿ ರಚನೆ : ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ನೂತನ

ಪಡುಮಲೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಆಯ್ಕೆ Read More »

ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬಲಿಯಾದ ಬಜರಂಗದಳ ಸಕ್ರಿಯ ಕಾರ್ಯಕರ್ತರ ನೆನಪಿನಲ್ಲಿ ಬೃಹತ್ ರಕ್ತದಾನ ಶಿಬಿರ | 270 ಮಂದಿಯಿಂದ ರಕ್ತದಾನ

ಬಂಟ್ವಾಳ: ವಿಧಿಯ ಕ್ರೂರ ಲೀಲೆಗೆ ಸಿಲುಕಿ ಬಲಿಯಾದ ಬಜರಂಗದಳ ಕಾರ್ಯಕರ್ತರಾದ  ವಿಜಯ್ ಪುಣ್ಕೆದಡಿ, ಸುರೇಶ್ ಮೇಗಿನಮನೆ ಹಾಗೂ ನಿತಿನ್ ಪೂಜಾರಿ ನೆಲ್ಯಪಲ್ಕೆ ಅವರ ಸವಿನೆನಪಿಗಾಗಿ ಬಂಟ್ವಾಳ ಸರಪಾಡಿ ಪ್ರಖಂಡ ಬೃಹತ್ ರಕ್ತದ಻ನ ಶಿಬಿರ ಆಯೋಜಿಸುವ ಮೂಲಕ ಅಗಲಿದ ಕಾರ್ಯಕರ್ತರನ್ನು ನೆನಪಿಸುವ ಕಾರ್ಯ ಮಂಗಳವಾರ ನಡೆಯಿತು. ಶಿಬಿರದಲ್ಲಿ ಸುಮಾರು 270 ಜನ ರಕ್ತದಾನಿಗಳು ರಕ್ತದಾನ ನೀಡಿ ಅಗಲಿದ ಕಾರ್ಯಕರ್ತರನ್ನು ಮತ್ತೊಮ್ಮೆ ನೆನೆಪಿಸಿಕೊಳ್ಳುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ವಿಶ್ವ ಹಿಂದೂ

ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬಲಿಯಾದ ಬಜರಂಗದಳ ಸಕ್ರಿಯ ಕಾರ್ಯಕರ್ತರ ನೆನಪಿನಲ್ಲಿ ಬೃಹತ್ ರಕ್ತದಾನ ಶಿಬಿರ | 270 ಮಂದಿಯಿಂದ ರಕ್ತದಾನ Read More »

ಜು.29 : ದರ್ಬೆ ಪ್ರಶಾಂತ್ ಮಹಲ್ ನಲ್ಲಿ “ಆಟಿಡೊಂಜಿ ದಿನ” | ಆಟಿದ ಅಟಿಲ್ ನ ಬಂಜಾರ ವನಸ್ ನಲ್ಲಿ 49 ಬಗೆಯ ಖಾದ್ಯ

ಪುತ್ತೂರು: ಆಟಿಡೊಂಜಿ ದಿನ ಕಾರ್ಯಕ್ರಮ ಜು.29 ರಂದು ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ನ ಸನ್ನಿಧಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಸವಣೂರು ಸೀತಾರಾಮ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ತುಳು ಜನಪದ ಸಾಂಸ್ಕೃತಿಕ ಲೇಸ್, ಆಟಿದ ಗೊಬ್ಬುಲು, ಛಾವಡಿದ ಲೇಸ್ ಮುಂತಾದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ. ವಿಶೇಷವಾಗಿ ತುಳುವೆರ್ನ ಆಟಿದ ಅಟಿಲ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 49 ಬಗೆಯ ಬಂಜಾರ ವನಸ್ ಕೇವಲ 349 ರೂಪಾಯಿಗೆ

ಜು.29 : ದರ್ಬೆ ಪ್ರಶಾಂತ್ ಮಹಲ್ ನಲ್ಲಿ “ಆಟಿಡೊಂಜಿ ದಿನ” | ಆಟಿದ ಅಟಿಲ್ ನ ಬಂಜಾರ ವನಸ್ ನಲ್ಲಿ 49 ಬಗೆಯ ಖಾದ್ಯ Read More »

ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದಿಂದ ಸಂಸ್ಥಾಪನಾ ದಿನಾಚರಣೆ

ಪುತ್ತೂರು: ಪುತ್ತೂರು ಬಿ.ಎಂ.ಎಸ್ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನಾಚರಣೆಯನ್ನು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆಯಿತು. ಧ್ವಜಾರೋಹಣ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದರಾಜೇಶ್ ಕೆ ಮರಿಲ್, ಮಾಜಿ ಗೌರವಾಧ್ಯಕ್ಷ ದೇವಪ್ಪ ಗೌಡ, ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್ ಹೆಗ್ಡೆ , ಹುಸೇನ್, ಸುರೇಶ ಸುಧಾಕರ್ ನಾಯಕ್, ಸತೀಶ್ ಪ್ರಭು ಮಣಿಯ, ಪಾರ್ಕಿನ ಘಟಕದ ಅಧ್ಯಕ್ಷರುಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದಿಂದ ಸಂಸ್ಥಾಪನಾ ದಿನಾಚರಣೆ Read More »

ಕಾರು-ಟಿಪ್ಪರ್ ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಂಭೀರ ಗಾಯ

ವಿಟ್ಲ: ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೋಟ್ಟು ಎಂಬಲ್ಲಿ ನಡೆದಿದೆ. ಮುಂಬೈ ಮೂಲದ ಪ್ರಯಾಣಿಕರು ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರು ಹಾಗೂ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಹಿತ ನಾಲ್ವರು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದಾಗಿ

ಕಾರು-ಟಿಪ್ಪರ್ ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಂಭೀರ ಗಾಯ Read More »

ಮಳೆಯ ಅವಾಂತರ | ರಸ್ತೆಗೆ ಬಿದ್ದ ಮರ ತೆರವು ಮಾಡಿ ಜವಾಬ್ದಾರಿ ಮೆರೆದ ಪತ್ರಕರ್ತರು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕಡಬ, ಸುಬ್ರಹ್ಮಣ್ಯ ಭಾಗದಲ್ಲಿ ಅತೀ ಹೆಚ್ಚಿನ ಅನಾಹುತಗಳು ನಡೆದಿದೆ. ಮಂಜೇಶ್ವರ ಸುಬ್ರಹ್ಮಣ್ಯ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಹಲವೆಡೆ ನದಿ ನೀರು ರಸ್ತೆಗೆ ಬಂದು ಸಂಚಾರ ಸ್ಥಗಿತಗೊಂಡಿದೆ. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯಿಂದ ಯಾವುದೇ ವಾಹನಗಳು ಮುಂದಕ್ಕೆ ಸಾಗುವಂತಿಲ್ಲ. ಕಳೆದ ಎರಡು ದಿನಗಳಿಂದ ಇದೇ ಪರಿಸ್ಥಿತಿ ಇದ್ದು ಈ ರಸ್ತೆಯಲ್ಲಿ ಸಾಗುವವರು ಬಳ್ಪ ಗ್ರಾಮದಿಂದ ಗುತ್ತಿಗಾರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಬೇಕಾಗಿದೆ. ಮಳೆಯ ಈ ಅವಾಂತರದ ವರದಿ ಮಾಡಲು ತೆರಳಿದ್ದ ಟಿವಿ ಮಾದ್ಯಮದವರೂ

ಮಳೆಯ ಅವಾಂತರ | ರಸ್ತೆಗೆ ಬಿದ್ದ ಮರ ತೆರವು ಮಾಡಿ ಜವಾಬ್ದಾರಿ ಮೆರೆದ ಪತ್ರಕರ್ತರು Read More »

ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ | ಮಾದಕ ವಸ್ತು ಸೇವನೆ ಶಂಕೆ

ಪುತ್ತೂರು: ಯುವಕನೋರ್ವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸಂಪ್ಯ ಪೊಲೀಸರು ವಿಚಾರಿಸಿದಾಗ ಯುವಕ ಗಾಂಜಾ ಸೇವನೆ ಮಾಡಿ ಈ ರೀತಿ ವರ್ತಿಸಿದ್ದಾನೆ ಎಂದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇರ್ದೆ ಗ್ರಾಮ ತನ್ನೀರ್ ಮಂಜಿಲ್ ನಿವಾಸಿ ಮೊಹಮ್ಮದ್ ತಪ್ಪಿರ್ (21)ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣಾ ಎಸ್.ಐ ಧನಂಜಯ ಬಿ.ಸಿ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಇರ್ದೆ ಗ್ರಾಮದ ದೂಮಡ್ಕ ಗೋಳಿಪದವು ಸಮೀಪ

ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ | ಮಾದಕ ವಸ್ತು ಸೇವನೆ ಶಂಕೆ Read More »

ಹೆಜ್ಜೇನು ಕಡಿದು ವ್ಯಕ್ತಿಯೋರ್ವರು ಮೃತ್ಯು

ಪುತ್ತೂರು: ಪುತ್ತೂರು: ಕಟ್ಟಿಗೆಗಾಗಿ ಮನೆಯ ಪಕ್ಕದ ಗುಡ್ಡೆಗೆ ಹೋಗಿದ್ದ ವೇಳೆ ಹೆಜ್ಜೇನು(ಪಿಲಿಕುಡೊಲು)ಕಡಿದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಮಾಯಿಲ ಎಂಬವರ ಪುತ್ರ ಗುರುವ (55)  ಮೃತಪಟ್ಟವರು. ಅವರು ಜು.23ರಂದು ಮಧಾಹ್ನ ಕಟ್ಟಿಗೆಗೆಂದು ಮನೆ ಪಕ್ಕದ ಗುಡ್ಡೆಗೆ ಹೋದವರು ಅರ್ಧ ಗಂಟೆ ಬಿಟ್ಟು ಗುಡ್ಡೆಯಿಂದ ಓಡೋಡಿ ಬಂದಾಗ ಅವರ ಮುಖ, ಕುತ್ತಿಗೆ, ಮೈಯೆಲ್ಲಾಯಾವುದೋ ಊದಿಕೊಂಡಿರುವುದು ಕಂಡು ಬಂದಿತ್ತು. ಈ ಕುರಿತು ಅವರ ತಾಯಿ ವಿಚಾರಿಸಿದಾಗ ಹೆಚ್ಚೇನು

ಹೆಜ್ಜೇನು ಕಡಿದು ವ್ಯಕ್ತಿಯೋರ್ವರು ಮೃತ್ಯು Read More »

error: Content is protected !!
Scroll to Top