ಪುತ್ತೂರು

ಗೃಹ ಮಂತ್ರಿ ಪರಮೇಶ್ವರರಿಂದ ಕೆಜೆ, ಡಿಜೆ ಹಳ್ಳಿ ಅಮಾಯಕ ಮೇಲಿನ ಕೇಸು ಹಿಂತೆಗೆಯಬೇಕು ಹೇಳಿಕೆ | ವಿಹಿಂಪ, ಬಜರಂಗದಳ ಖಂಡನೆ

ಪುತ್ತೂರು: ಪರಮೇಶ್ವರರವರು ಗೃಹ ಮಂತ್ರಿಗಳಾಗಿ ಕೆಜೆ ಹಳ್ಳಿ .ಡಿಜೆ ಹಳ್ಳಿಯ ಅಮಾಯಕರ ಹೆಸರಿನಲ್ಲಿರುವ ಕೇಸ್ ಗಳನ್ನು ತೆಗೆಯಬೇಕೆಂದು ಹೇಳಿರುವುದನ್ನು ವಿಶ್ವ  ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಜರಂಗದಳ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಇಂದು ಉಡುಪಿಯಲ್ಲಿ ಬಹಳ ಒತ್ತಡಕ್ಕೆ ಮಣಿದು ಶೌಚಾಲಯದಲ್ಲಿ ವೀಡಿಯೊ ಮಾಡಿರುವ ಮತಾಂಧ ದುಷ್ಟ ಶಕ್ತಿಗಳ ವಿರುದ್ಧ ಎಫ್.ಐ.ಅರ್ ಮಾಡಿದ್ದಾರೆ. ಆದರೆ ಅವರನ್ನು ಬಂಧನ ಮಾಡಲು ಆಗದ ಪೊಲೀಸ್  ವ್ಯವಸ್ಥೆಯನ್ನು ಖಂಡಿಸುತ್ತೇವೆ. ಇದೇ ರೀತಿಯ ಕೆಜೆ […]

ಗೃಹ ಮಂತ್ರಿ ಪರಮೇಶ್ವರರಿಂದ ಕೆಜೆ, ಡಿಜೆ ಹಳ್ಳಿ ಅಮಾಯಕ ಮೇಲಿನ ಕೇಸು ಹಿಂತೆಗೆಯಬೇಕು ಹೇಳಿಕೆ | ವಿಹಿಂಪ, ಬಜರಂಗದಳ ಖಂಡನೆ Read More »

ಚಾರ್ವಾಕ ಶ್ರೀ ಕುಕ್ಕೆನಾಥ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಜನರೇಟರ್ ಉದ್ಘಾಟನೆ

ಚಾರ್ವಾಕ : ಚಾರ್ವಾಕ ಗ್ರಾಮದ ಕುಕ್ಕೆನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದ ನೂತನ ಜನರೇಟರ್ ಉದ್ಗಾಟನೆ ನೆರವೇರಿತು. ಅರುವಗುತ್ತು ಯಜಮಾನ ಪ್ರದೀಪ್ ಆರ್. ಗೌಡ ಜನರೇಟರನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ ಸದಸ್ಯ ವೆಂಕಪ್ಪ ಮೀಯೊಳ್ಪೆ, ಪ್ರಕಾಶ್ ಅರುವ, ಜತ್ತಪ್ಪ ಉದುಲಡ್ಡ, ಅರ್ಚಕ ನೂತನ್ ಭಟ್, ಸಮಿತಿ ಸದಸ್ಯರಾದ ಸುಲೋಚನಾ ಮೀಯೊಳ್ಪೆ, ಸುಮ ದೇವಸ್ಯ, ಆಡಳಿತ ಪಂಗಡದ ಅಧ್ಯಕ್ಷ ಶೀನಪ್ಪ ಮಾಚಿಲ  ಮತ್ತು ಕೂಡುಕಟ್ಟಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಚಾರ್ವಾಕ ಶ್ರೀ ಕುಕ್ಕೆನಾಥ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಜನರೇಟರ್ ಉದ್ಘಾಟನೆ Read More »

ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸ್ ಆಚರಣೆ | ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ವಿಶೇಷ ಕಾರ್ಯಕ್ರಮ

ಪುತ್ತೂರು: ಕ್ಷಾತ್ರ ಪರಂಪರೆ, ವೀರತ್ವವನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ಯಾವಾಗ ರಾಷ್ಟ್ರದ ಸೈನಿಕ ತನ್ನ ಕೋವಿಯನ್ನು ಕೆಳಗಿಳಿಸುತ್ತಾನೋ ಆಗ ಆ ರಾಷ್ಟ್ರ ಅರಾಜಕತೆಯಿಂದ ನಲುಗಿಹೋಗುತ್ತದೆ. ಹಾಗಾಗಿ ಸೈನಿಕರಿಗೆ ನೈತಿಕ ಶಕ್ತಿ ತುಂಬುವ, ನಿರಂತರವಾಗಿ ಬೆಂಬಲ ತೋರುವ ಸಂಸ್ಕಾರವನ್ನು ನಾಡಿನ ಜನ ಬೆಳೆಸಿಕೊಳ್ಳಬೇಕು ಎಂದು ಉಡುಪಿಯ ವಾಗ್ಮಿ ಶ್ರೀಕಾಂತ ಶೆಟ್ಟಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂಪಿಸಲ್ಪಟ್ಟಿರುವ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಬುಧವಾರ ನಡೆದ

ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸ್ ಆಚರಣೆ | ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ವಿಶೇಷ ಕಾರ್ಯಕ್ರಮ Read More »

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಸ್ಮೃತಿ ದಿನ | ರಕ್ತದಾನ ಶಿಬಿರ

ಬೆಳ್ಳಾರೆ : ಒಂದು ವರ್ಷದ ಹಿಂದೆ ಪಿಎಫ್ಐನ ಮತಾಂಧ ಜಿಹಾದಿಗಳಿಂದ ಹತ್ಯೆಗೀಡಾಗಿರುವ ಬಿಜೆಪಿಯ ಯುವ ಮುಖಂಡ, ದಿ ಪ್ರವೀಣ್ ನೆಟ್ಟಾರು ಅವರ ಸ್ಮ್ರತಿದಿನ ದಂದು ಅವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪ್ರವೀಣ್ ನೆಟ್ಟಾರು ಅವರ ಮನೆಯ ಪರಿಸರದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಾಣೆಗೈದರು. ನಂತರ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಬೆಳ್ಳಾರೆ ಪೆರುವಾಜೆ ಜೆ.ಡಿ. ಆಡಿಟೋರಿಯಂ ಜರುಗಿದ ರಕ್ತದಾನ ಶಿಬಿರವನ್ನು

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಸ್ಮೃತಿ ದಿನ | ರಕ್ತದಾನ ಶಿಬಿರ Read More »

ಆರ್ಯಾಪು ಗ್ರಾಪಂ ಉಪ ಚುನಾವಣೆ | ಪುತ್ತಿಲ ಬೆಂಬಲಿತ ಅಭ್ಯರ್ಥಿ ಗೆಲುವು | ವಿಜಯೋತ್ಸವ ಮೆರವಣಿಗೆ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯಿತಿ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಜಯಭೇರಿ ಗಳಿಸಿದ ಹಿನ್ನಲೆಯಲ್ಲಿ ಪುತ್ತಿಲ ಪರಿವಾರದಿಂದ ವಿಜಯೋತ್ಸವ ಬುಧವಾರ ನಡೆಯಿತು. ಆಡಳಿತ ಸೌಧದ ಬಳಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ ಬಳಿಕ ತೆರೆದ ವಾಹನದಲ್ಲಿ ಆಡಳಿತ ಸೌಧದ ಬಳಿಯಿಂದ ವಿಜಯೋತ್ಸವ ಮೆರವಣಿಗೆ ಸಾಗಿ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಸದಸ್ಯರು ಪಾಲ್ಗೊಂಡಿದ್ದರು.

ಆರ್ಯಾಪು ಗ್ರಾಪಂ ಉಪ ಚುನಾವಣೆ | ಪುತ್ತಿಲ ಬೆಂಬಲಿತ ಅಭ್ಯರ್ಥಿ ಗೆಲುವು | ವಿಜಯೋತ್ಸವ ಮೆರವಣಿಗೆ Read More »

ವಿವೇಕಾನಂದ ಕಲಾ-ವಿಜ್ಞಾನ-ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) : ಶೇ.94 ಉತ್ತೀರ್ಣತೆ ದಾಖಲು

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಯ (ಸ್ವಾಯತ್ತ) ಇದರ ದ್ವಿತೀಯ ಸೆಮಿಸ್ಟರ್ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ ಪದವಿ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಶೇ.94 ಉತ್ತೀರ್ಣತೆ ದಾಖಲಾಗಿದೆ. ದ್ವಿತೀಯ ಬಿ.ಎ. ಶೇ.95, ಬಿ.ಎಸ್ಸಿ. ಶೇ.90, ಬಿ.ಕಾಂ. ಶೇ.92, ಬಿ.ಬಿ.ಎ. ಶೇ.99, ಬಿ.ಸಿ.ಎ. ಶೇ.95 ರಂತೆ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಉತ್ತಮ ಫಲಿತಾಂಶ ಬಂದಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್. ಜಿ. ಮತ್ತು ಪ್ರಾಂಶುಪಾಲ ವಿ. ಜಿ. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವೇಕಾನಂದ ಕಲಾ-ವಿಜ್ಞಾನ-ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) : ಶೇ.94 ಉತ್ತೀರ್ಣತೆ ದಾಖಲು Read More »

ಜು.24 ರಿಂದ ಮುಳಿಯ ಕೇಶವ ಭಟ್ಟ & ಸನ್ಸ್ ಪುತ್ತೂರು, ಬೆಳ್ತಂಗಡಿ ಸಂಸ್ಥೆಯಲ್ಲಿ ಮುಳಿಯ “ಮಾನ್ಸೂನ್ ಧಮಾಕ”

ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ತನ್ನ ಶಾಖೆಯನ್ನು ಹೊಂದಿರುವ ಮುಳಿಯ ಕೇಶವ ಭಟ್ಟ & ಸನ್ಸ್ ನ ಪುತ್ತೂರು ಹಾಗೂ ಬೆಳ್ತಂಗಡಿ ಸಂಸ್ಥೆಯಲ್ಲಿ ಮುಳಿಯ ಮಾನ್ಸೂನ್ ಧಮಾಕ ಜು.24 ರಿಂದ ಆರಂಭಗೊಂಡಿದೆ. ಕಳೆದ ಹಲವಾರು ವರ್ಷಗಳಿಂದ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮುಳಿಯ ಜ್ಯುವೆಲ್ಲರ್ಸ್ ಎಲ್ಲೆಡೆ ತನ್ನ ಸಂಸ್ಥೆಯನ್ನು ತೆರೆದು ಗ್ರಾಹಕ ವರ್ಗದ ವಿಶ್ವಾಸ ಪಡೆದು ಪ್ರಾಮಾಣಿಕ ಸೇವೆಯೊಂದಿಗೆ ಬೆಳೆದು ಬಂದಿದೆ. ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಮುಳಿಯ ಮಾನ್ಸೂನ್

ಜು.24 ರಿಂದ ಮುಳಿಯ ಕೇಶವ ಭಟ್ಟ & ಸನ್ಸ್ ಪುತ್ತೂರು, ಬೆಳ್ತಂಗಡಿ ಸಂಸ್ಥೆಯಲ್ಲಿ ಮುಳಿಯ “ಮಾನ್ಸೂನ್ ಧಮಾಕ” Read More »

ಗ್ರಾಪಂ ಉಪಚುನಾವಣೆ | ಕಾಂಗ್ರೆಸ್ ಗೆ ಒಲಿದ ನಿಡ್ಪಳ್ಳಿ ಕ್ಷೇತ್ರ

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಅವರಿಗೆ ಜಯ ಲಭಿಸಿದೆ. ವಾರ್ಡ್ 1 ರ ಸಾಮಾನ್ಯ ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ಮುರಳೀಕೃಷ್ಣ ಅವರ ನಿಧನದಿಂದ ತರವಾದ ಸ್ಥಾನಕ್ಕೆ ಜು.23 ರಂದು ಉಪಚುನಾವಣೆ ನಡೆದಿತ್ತು. ಒಟ್ಟು 607 ಮತಗಳ ಪೈಕಿ 529 ಮತ ಚಲಾವಣೆಯಾಗಿದ್ದು, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಗನ್ನಾಥ ರೈ 208 ಮತ, ಕಾಂಗ್ರೆಸ್ನ ಸತೀಶ್ ಶೆಟ್ಟಿ 235 ಮತ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ

ಗ್ರಾಪಂ ಉಪಚುನಾವಣೆ | ಕಾಂಗ್ರೆಸ್ ಗೆ ಒಲಿದ ನಿಡ್ಪಳ್ಳಿ ಕ್ಷೇತ್ರ Read More »

ಜು.29 : ಎಸ್‍ಎಸ್‍ಎಲ್‍ಸಿ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದವರಿಗೆ ‘ಕನ್ನಡ ಪ್ರತಿಭೆ’ ಪ್ರಶಸ್ತಿ ಪ್ರಧಾನ

ಪುತ್ತೂರು:  ಪುತ್ತೂರು ತಾಲೂಕಿನ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿ  ಕನ್ನಡವನ್ನು ಪ್ರಥಮ ಭಾಷೆ, ದ್ವಿತೀಯ ಭಾಷೆ,ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು  ಕನ್ನಡದಲ್ಲಿ ಶೇಕಡ 100  ಅಂಕವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭೆ ಎಂಬ ನಾಮಂಕಿತದಿಂದ  ಗೌರವಿಸಿ  ಅಭಿನಂದಿಸುವ ಕಾರ್ಯಕ್ರಮ ಜು.29 ಶನಿವಾರ ಮಧ್ಯಾಹ್ನ 2:30 ಕ್ಕೆ ಪುತ್ತೂರು ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಲಿದ್ದು, ಸಹಾಯಕ ಆಯುಕ್ತ ಗಿರೀಶ್ ನಂದನ್ ವಿದ್ಯಾರ್ಥಿಗಳನ್ನು ಅಭಿನಂದಿಸಲಿದ್ದಾರೆ  ಕ್ಷೇತ್ರ ಶಿಕ್ಷಣಾಧಿಕಾರಿ

ಜು.29 : ಎಸ್‍ಎಸ್‍ಎಲ್‍ಸಿ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದವರಿಗೆ ‘ಕನ್ನಡ ಪ್ರತಿಭೆ’ ಪ್ರಶಸ್ತಿ ಪ್ರಧಾನ Read More »

ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಪಂನ ವಾರ್ಡ್ -2 ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ವಾರ್ಡ್ -2 ರ ಹಿಂದುಳಿದ ವರ್ಗ “ಎ” ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಮಯ್ಯ ಮೂಲ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ಜು.23 ರಂದು ಉಪ ಚುನಾವಣೆ ನಡೆದಿತ್ತು. ಒಟ್ಟು 1237 ಮತಗಳ ಪೈಕಿ 999 ಮತ ಚಲಾವಣೆಯಾಗಿತ್ತು. ಈ ಪೈಕಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ 499 ಮತ,

ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು Read More »

error: Content is protected !!
Scroll to Top