ಪುತ್ತೂರು

ಮಾಂತೂರು ಅಂಗನವಾಡಿ ಕೇಂದ್ರದ ಹೊರಾಂಗಣ ಉದ್ಘಾಟನೆ

ಸವಣೂರು : ಸವಣೂರು ಗ್ರಾಮ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣಗೊಂಡ ಮಂತೂರು ಅಂಗನವಾಡಿ ಕೇಂದ್ರದ ಹೊರಂಗಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ ಉದ್ಘಾಟಿಸಿದರು.  ಬಾಲವಿಕಾಸ ಸಮಿತಿ ಅಧ್ಯಕ್ಷೆ ರುಬೀನಾ ಸಭೆಯ ಅಧ್ಯಕ್ಷತೆ ವಹಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ  ಪುಷ್ಪ, ಇಡನ್ ಗ್ಲೋಬ್ಲೆಲ್ ಸ್ಕೂಲ್ ಟ್ರಸ್ಟಿ ಅಬ್ದುಲ್ ಖಾದರ್ ಮಂತೂರು  ,ಅಲ್ನೂರ್ ಮುಸ್ಲಿಂ ಯೂಥ್ ಫೆಡರೇಶನ್ ಅಧ್ಯಕ್ಷ ಝಕರಿಯ ಮಂತೂರು, ಸವಣೂರು ಮೊಗರು ಶಾಲಾ ಮುಖ್ಯ ಶಿಕ್ಷಕಿಜುಸ್ತಿನಾ […]

ಮಾಂತೂರು ಅಂಗನವಾಡಿ ಕೇಂದ್ರದ ಹೊರಾಂಗಣ ಉದ್ಘಾಟನೆ Read More »

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ | ನರಿಮೊಗರು ಸಾಂದೀಪನಿ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು:  ಕಡಬದ ಸರಸ್ವತಿ ವಿದ್ಯಾಲಯದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ನಿಖಿತಾ ಎ.ಎಂ. ರಿಧಮಿಕ್ ವಿಭಾಗದಲ್ಲಿ ಪ್ರಥಮ, 7ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ದ್ವಿತೀಯ ಸ್ಥಾನ ಪಡೆದು ಆಗಸ್ಟ್ 17 ಹಾಗೂ 18 ರಂದು ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ | ನರಿಮೊಗರು ಸಾಂದೀಪನಿ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ Read More »

ಲಘು ಉದ್ಯೋಗ ಭಾರತೀ ಕರ್ನಾಟಕದ ಪುತ್ತೂರು ಹಾಗೂ ಸುಳ್ಯ ಉದ್ದಿಮೆದಾರರ  17ನೇ ಮಾಸಿಕ ಸಭೆ | ಡಿಜಿಟಲ್ ಮಾರ್ಕೆಟ್ ತರಬೇತಿ

ಪುತ್ತೂರು: ಲಘು ಉದ್ಯೋಗ ಭಾರತಿ ಕರ್ನಾಟಕ ಪುತ್ತೂರು ಘಟಕ ಹಾಗೂ ಸುಳ್ಯ ತಾಲೂಕಿನ ಉದ್ದಿಮೆದಾರ ಸದಸ್ಯರ 17ನೇ ಮಾಸಿಕ ಸಭೆ ಏಳ್ಮುಡಿ ಪ್ರಭು ಬಿಲ್ಡಿಂಗ್‍ನಲ್ಲಿರವ ಪ್ರೇರಣಾ ಸಂಸ್ಥೆಯ ಹಾಲ್‍ ನಲ್ಲಿ ನಡೆಯಿತು. ಕೋಕೋಗುರು ಕೋಕನಟ್ ಇಂಡಸ್ಟ್ರೀಸ್ ಮತ್ತು ಕೋಕೋಗುರು ಅಡಿಗೆ ಮನೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸ್ವತಃ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಕೇಶವರಾಮ್ ಬೋನಂತಾಯ ಸಂಪನ್ಮೂಲ ವ್ಯಕ್ತಿಯಾಗಿ, ಸ್ವಂತ ಉದ್ಯಮದಲ್ಲಿ ತಾವು ತಮ್ಮ ತಂಡದೊಂದಿಗೆ ಯಾವ ರೀತಿ ಆನ್‌ಲೈನ್ ಮಾರ್ಕೆಟಿಂಗ್ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದೇನೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ

ಲಘು ಉದ್ಯೋಗ ಭಾರತೀ ಕರ್ನಾಟಕದ ಪುತ್ತೂರು ಹಾಗೂ ಸುಳ್ಯ ಉದ್ದಿಮೆದಾರರ  17ನೇ ಮಾಸಿಕ ಸಭೆ | ಡಿಜಿಟಲ್ ಮಾರ್ಕೆಟ್ ತರಬೇತಿ Read More »

ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದಾಗ ಬ್ಯಾಗ್‍ನಿಂದ ಸಾವಿರಾರು ಮೌಲ್ಯದ ವಸ್ತುಗಳ ಕಳವು | ಪುತ್ತೂರು ಠಾಣೆಗೆ ದೂರು

ಪುತ್ತೂರು: ಬೆಂಗಳೂರಿನಿಂದ ಪುತ್ತೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಬರುತ್ತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಸಾವಿರಾರು ರೂ.ಮೌಲ್ಯದ ಸೊತ್ತುಗಳು ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪುಣಚ ಗ್ರಾಮದ ಅಜೇರು ನಿವಾಸಿ ದಿವಾಕರ ನಾಯಕ್ ಎಂಬವರ ಪುತ್ರಿ ದೀಪಿಕಾ ಅವರ ಬ್ಯಾಗ್‌ನಿಂದ ಲ್ಯಾಪ್‌ಟಾಪ್, ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್, ಡೇನಿಯಲ್ ಕ್ಲೀನ್ ಕಂಪೆನಿಯ ವಾಚ್ ಸಹಿತ ಒಟ್ಟು ರೂ.53 ಸಾವಿರ ಮೌಲ್ಯದ ಸೊತ್ತು ಕಳವಾಗಿದೆ. ಅವರು ಬೆಂಗಳೂರಿನ ಟಿಸಿಎಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಜು.26ರಂದು ರಾತ್ರಿ ಬೆಂಗಳೂರಿನಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಪುತ್ತೂರಿಗೆ

ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದಾಗ ಬ್ಯಾಗ್‍ನಿಂದ ಸಾವಿರಾರು ಮೌಲ್ಯದ ವಸ್ತುಗಳ ಕಳವು | ಪುತ್ತೂರು ಠಾಣೆಗೆ ದೂರು Read More »

ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಪುತ್ತೂರು:  ಕಡಬದ ಸರಸ್ವತಿ ವಿದ್ಯಾಲಯದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆದು ಆಗಸ್ಟ್ 17 ಹಾಗೂ 18 ರಂದು ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದೆ. ತಂಡವನ್ನು  ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಧನುಷ್ ಆರ್, ಲಿಖಿತ್ ಗೌಡ ಕೆ, ಶ್ರೀನಿಧಿ ಎ, ವಾಣಿಜ್ಯ ವಿಭಾಗದ ನಿರ್ಮಿತ್ ,ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿನಯ್ ಡಿ ಪ್ರತಿನಿಧಿಸಿದ್ದರು. ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ

ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಪ್ಪೊಪ್ಪಿಕೊಳ್ಳಲು ಆರೋಪಿಗಳಿಗೆ ಕಿರುಕುಳ ನೀಡಿದ ಇಲಾಖೆ | ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ಕೇಂದ್ರ ಯೋಜನಾ ಸಂಚಾಲಕರು, ತಾಂತ್ರಿಕ ತಂಡಕ್ಕೆ ಹೈಕೋರ್ಟ್ ನಿರ್ದೇಶನ

ಪುತ್ತೂರು: ಬೆಳ್ಳಾರೆ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೋಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪದಿಂದ ಅದಕ್ಕೆ ಸಂಬಂಧಪಟ್ಟ ಮತ್ತು ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ತನ್ನ ಕೇಂದ್ರ ಯೋಜನಾ ಸಂಚಾಲಕರು ಮತ್ತು ತಾಂತ್ರಿಕ ತಂಡಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಜಾಬಿರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಎಫ್‌ಎಸ್ಎಲ್ ಮತ್ತು ಎನ್ಎಐ ಕಚೇರಿಗಳಲ್ಲಿ 2022ರ ನವೆಂಬರ್ ತಿಂಗಳ ಸಿಸಿಟಿವಿ ದೃಶ್ಯಾವಳಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಪ್ಪೊಪ್ಪಿಕೊಳ್ಳಲು ಆರೋಪಿಗಳಿಗೆ ಕಿರುಕುಳ ನೀಡಿದ ಇಲಾಖೆ | ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ಕೇಂದ್ರ ಯೋಜನಾ ಸಂಚಾಲಕರು, ತಾಂತ್ರಿಕ ತಂಡಕ್ಕೆ ಹೈಕೋರ್ಟ್ ನಿರ್ದೇಶನ Read More »

ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ವಿವೇಕಾನಂದಕ್ಕೆ ಎರಡು ರ್‍ಯಾಂಕ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2023-24ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2 ರ್‍ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಜಾಗೃತಿ.ಜೆ.ನಾಯಕ್ 9.59 ಸಿಜಿಪಿಎ ಅಂಕಗಳೊಂದಿಗೆ 4ನೇ ರ್‍ಯಾಂಕ್ ಹಾಗೂ ದಿವ್ಯಶ್ರೀ.ಎಸ್ 9.58 ಸಿಜಿಪಿಎ ಅಂಕಗಳೊಂದಿಗೆ ಏಳನೇ ರ್‍ಯಾಂಕ್ ಗಳಿಸಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು

ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ವಿವೇಕಾನಂದಕ್ಕೆ ಎರಡು ರ್‍ಯಾಂಕ್ Read More »

ಕಡಬ ನೆಟ್ಟಣ ಉಪವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ

ಕಡಬ: ಕಡಬ ತಾಲೂಕಿನ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಕಾಸರಗೋಡು ಹೊಸದುರ್ಗ ನಿವಾಸಿ ಸುಭಾಷ್ ಬಿ. (55) ಜು.28 ಅನಾರೋಗ್ಯದಿಂದ ಶುಕ್ರವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ. ಸುಭಾಷ್ ಅವರು 1990ರಲ್ಲಿ ಬೆಳ್ತಂಗಡಿಯಲ್ಲಿ ಅರಣ್ಯ ವೀಕ್ಷಕರಾಗಿ ಇಲಾಖಾ ಸೇವೆಗೆ ಸೇರಿದ್ದರು. ಬೆಳ್ತಂಗಡಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ 2021ರಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ನೆಟ್ಟದ ಕೇಂದ್ರೀಯ ಮರ ಸಂಗ್ರಹಾಲಯಕ್ಕೆ ನೇಮಕಗೊಂಡು ಕಳೆದ

ಕಡಬ ನೆಟ್ಟಣ ಉಪವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ Read More »

ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ”

ಪುತ್ತೂರು: ವೈಕುಂಠಪುರ ವಿಷ್ಣು ಗೆಳೆಯರ ಬಳಗದ ವತಿಯಿಂದ ದ್ವಿತೀಯ ವರ್ಷದ ಪುರುಷ ಹಾಗೂ ಮಹಿಳೆಯರ ಸಾರ್ವಜನಿಕ ಹಿಂದೂ ಬಾಂಧವರ ಕೆಸರ್‍ ಡ್‍ ಒಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ-2023 ಜು.30 ರಂದು ಸಾಜ ಕಾಡ್ಲ ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ನಡೆಯುವ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ್ ಭಂಡಾರಿ ಕೂಟೇಲು ಉದ್ಘಾಟಿಸಲಿದ್ದು, ಬುಳೇರಿಕಟ್ಟೆ ಕಲ್ಲಕ್ಕಿನಾಯ ವುಡ್ ಫರ್ನೀಚರ್ & ಇಂಟಿರಿಯರ್ ಮಾಲಕ ಗಣೇಶ್ ಭಟ್ ಸುದನಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ರೈ ಮುಗೆರೋಡಿ, ಹಿರಿಯರಾದ

ಜು.30 : ವೈಕುಂಠಪುರ ವಿಷ್ಣು ಗೆಳೆಯರ ಬಳಗದಿಂದ ಕೆಸರುಗದ್ದೆ ಕ್ರೀಡಾಕೂಟ “ಕೆಸರ್ ಡ್ ಒಂಜಿ ದಿನ” Read More »

ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಕುರಿತು ಅಂತರಾಷ್ಟ್ರೀಯ ಸಮ್ಮೇಳನ “ದೃಷ್ಟಿ-2023”ಕ್ಕೆ ಚಾಲನೆ

ಪುತ್ತೂರು: ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ತಾವು ಮಾಡುವ ಕೆಲಸದ ಬಗ್ಗೆ ಸ್ಪಷ್ಟತೆ ಇರಬೇಕು . ಆ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸುವ ಛಲ ಇರಬೇಕು ಎಂದು ಎನ್‌ಐಟಿಕೆ ಸುರತ್ಕಲ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹಿತ್.ಪಿ.ತಹಿಲಿಯಾನಿ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗ ಹಾಗೂ ಯುನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಎನ್ನುವ ಕುರಿತು

ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಕುರಿತು ಅಂತರಾಷ್ಟ್ರೀಯ ಸಮ್ಮೇಳನ “ದೃಷ್ಟಿ-2023”ಕ್ಕೆ ಚಾಲನೆ Read More »

error: Content is protected !!
Scroll to Top