ಪುತ್ತೂರು

ಸೌಜನ್ಯ ಕೊಲೆ ಪ್ರಕರಣ | ಜಿಲ್ಲೆಯ ಎಲ್ಲಾ ಯುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೌಜನ್ಯ ಮನೆಗೆ ಭೇಟಿ

ಪುತ್ತೂರು: ಸೌಜನ್ಯ ಪ್ರಕರಣ ಸಂಬಂಧಿಸಿದಂತೆ ಪುತ್ತೂರು, ಕಡಬ, ಯುವ ಒಕ್ಕಲಿಗರ ಸಂಘ ಸೇರಿದಂತೆ ಜಿಲ್ಲೆಯ ಎಲ್ಲಾ ಯುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೌಜನ್ಯ ಮನೆಗೆ ಭಾನುವಾರ ಭೇಟಿ ನೀಡಿ ಮುಂದಿನ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಸೌಜನ್ಯ ಕೊಲೆ ಪ್ರಕರಣ ಮುಂದಿನ ಹೋರಾಟದ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಯುವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೌಜನ್ಯ ಕೊಲೆ ಪ್ರಕರಣ | ಜಿಲ್ಲೆಯ ಎಲ್ಲಾ ಯುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೌಜನ್ಯ ಮನೆಗೆ ಭೇಟಿ Read More »

ಕೆಎಸ್‍ಟಿಎ ಪುತ್ತೂರು ಕ್ಷೇತ್ರ ಸಮಿತಿ ವಾರ್ಷಿಕ ಮಹಾಸಭೆ

ಪುತ್ತೂರು:ಕಾರ್ಮಿಕ ವರ್ಗವಾಗಿರುವ ಟೈಲರ್ಸ್ ಗಳ ಸಮಸ್ಯೆ ಕುರಿತು ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರ ಅನುದಾನ ಕೊಡುವಂತಹದ್ದನ್ನು ಎಲ್ಲಿ ಸೆಲ್ಪ್ ಫಂಡ್ ಇದೆ ಅಲ್ಲಿಗೆ ಜೋಡಣೆ ಮಾಡಿದರೆ ಮಾತ್ರ ನಮ್ಮ ಕೆಲಸ ಸುಲಭವಾಗುತ್ತದೆ. ನೀವು ಕೂಡಾ ಕಾರ್ಮಿಕ ಇಲಾಖೆಯಲ್ಲಿ ಸೇರಿಸುವ ಕೆಲಸ ಮಾಡಿದರೆ ಯೋಜನೆಯ ಪಂಡ್ ಬರುತ್ತದೆ

ಕೆಎಸ್‍ಟಿಎ ಪುತ್ತೂರು ಕ್ಷೇತ್ರ ಸಮಿತಿ ವಾರ್ಷಿಕ ಮಹಾಸಭೆ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರು ಹಾಗೂ ಕೃತಜ್ಞತಾ ಸಭೆ

ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಕೃತಜ್ಞತಾ ಸಭೆ ಶನಿವಾರ ನಡೆಯಿತು. ಮುಖ್ಯ ಅತಿಥಿಯಾಗಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ, ಶೈಕ್ಷಣಿಕ ಚಿಂತನೆಯ ಕುರಿತು ಶಾಲೆಯ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಸಲಹೆ ಸೂಚನೆಯನ್ನು ನೀಡಿದರು. ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಕೃತಜ್ಞತಾ ಮಾತಗಳನ್ನಾಡಿ, ಎವಿಜಿ ವಿದ್ಯಾಸಂಸ್ಥೆಯು ಆರಂಭವಾಗಲು ಶ್ರಮಿಸಿದ ಎಲ್ಲರಿಗೂ ಹಾಗೂ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟ ಪೋಷಕ ವೃಂದದವರಿಗೂ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರು ಹಾಗೂ ಕೃತಜ್ಞತಾ ಸಭೆ Read More »

ತುಳು ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ – ದಂಬೆಕ್ಕಾನ ಸದಾಶಿವ ರೈ

ಪುತ್ತೂರು : ತುಳು ಭಾಷೆಯ ಕವಿಗೋಷ್ಠಿ, ಸಾಹಿತ್ಯಗೋಷ್ಟಿಗಳು ನಿರಂತರವಾಗಿ ಜರಗಿ ತುಳು ಭಾಷೆ ಇನ್ನಷ್ಟು ಶ್ರೀಮಂತವಾಗಲಿ ಎಂದು ಸಾಹಿತಿ, ಕೃಷಿಕ ಸಹಕಾರಿ ರತ್ನ ದಂಬೆಕ್ಕಾನ ಸದಾಶಿವ ರೈ ಹೇಳಿದರು. ಪುತ್ತೂರು ತುಳುಕೂಟ, ಚಿಗುರೆಲೆ ಸಾಹಿತ್ಯ ಬಳಗ ಮತ್ತು ರೇಡಿಯೋ ಪಾಂಚಜನ್ಯ 90.8 ಸಂಯುಕ್ತ ಆಶ್ರಯದಲ್ಲಿ ನಡೆದ “ಬರ್ಸದ ಪನಿ – ಕಬಿತೆ ಕೇನಿ” ತುಳು ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಕೆದಂಬಾಡಿ ಜತ್ತಪ್ಪ ರೈಯವರ ಕವಿತೆಯೊಂದನ್ನು ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  ಪಾಂಚಜನ್ಯ ರೇಡಿಯೋದ ಕಾರ್ಯದರ್ಶಿ ಪದ್ಮಾ

ತುಳು ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ – ದಂಬೆಕ್ಕಾನ ಸದಾಶಿವ ರೈ Read More »

ಪುತ್ತೂರಿನಲ್ಲಿ ಕನ್ನಡಭವನ ನಿರ್ಮಾಣ- ಶಾಸಕ ಅಶೋಕ್ ರೈ ಭರವಸೆ | ಕನ್ನಡ ಮಾಧ್ಯಮದಲ್ಲಿ 100 ಅಂಕ ಪಡೆದ ಕನ್ನಡ ಪ್ರತಿಭೆಗಳನ್ನು ಗೌರವಿಸುವ ವಿನೂತನ ಕಾರ್ಯಕ್ರಮ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ವತಿಯಿಂದ 2022-23 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ 100 ಅಂಕ ಪಡೆದ ಕನ್ನಡ ಪ್ರತಿಭೆಗಳನ್ನು ಗೌರವಿಸುವ ವಿನೂತನ ಕಾರ್ಯಕ್ರಮ ಶನಿವಾರ ಪುತ್ತೂರು ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕನ್ನಡನಾಡಿನಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿ ಕನ್ನಡಕ್ಕೆ ತಮ್ಮದೇ ರೀತಿಯ ಕೊಡುಗೆಯನ್ನು ನೀಡಿದವರನ್ನು ಗೌರವಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು

ಪುತ್ತೂರಿನಲ್ಲಿ ಕನ್ನಡಭವನ ನಿರ್ಮಾಣ- ಶಾಸಕ ಅಶೋಕ್ ರೈ ಭರವಸೆ | ಕನ್ನಡ ಮಾಧ್ಯಮದಲ್ಲಿ 100 ಅಂಕ ಪಡೆದ ಕನ್ನಡ ಪ್ರತಿಭೆಗಳನ್ನು ಗೌರವಿಸುವ ವಿನೂತನ ಕಾರ್ಯಕ್ರಮ Read More »

ಶಾಖಾ ಪ್ರಬಂಧಕರು, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಮತ್ತು ಅವಿರತ ಪರಿಶ್ರಮದಿಂದ ಸಂಘ ಬೆಳೆದು ಬಂದಿದೆ : ಚಿದಾನಂದ ಬೈಲಾಡಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಸಂಘದ ಸದಸ್ಯರಿಗೆ ಶೇ.13 ಡಿವಿಡೆಂಡ್

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ. ಜಿಲ್ಲೆಗೆ ಪುತ್ತೂರು ತಾಲೂಕು ಕೇಂದ್ರ ಸ್ಥಾನವಾಗಿದ್ದು, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ. ದುರೀಣರ ದೂರದೃಷ್ಟಿಯಿಂದ ಮತ್ತೂರಿನಲ್ಲಿ ಇವತ್ತು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿದೆ ಈ ಹಿನ್ನಲೆಯಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಗೌಡ ಸಮುದಾಯದ ಸಂಘಟನೆಯು ಹಲವಾರು ದಶಕದ ಹಿಂದೆಯೇ ಪ್ರಾರಂಭಗೊಂಡಿದ್ದು, ಡಿ.ವಿ

ಶಾಖಾ ಪ್ರಬಂಧಕರು, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಮತ್ತು ಅವಿರತ ಪರಿಶ್ರಮದಿಂದ ಸಂಘ ಬೆಳೆದು ಬಂದಿದೆ : ಚಿದಾನಂದ ಬೈಲಾಡಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಸಂಘದ ಸದಸ್ಯರಿಗೆ ಶೇ.13 ಡಿವಿಡೆಂಡ್ Read More »

ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಿ: ಶಾಸಕ ಅಶೋಕ್ ರೈ  | ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ವಿಟ್ಲ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ, ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ, ಈ ಯೋಜನೆಗಳು ಜನರಿಗೆ ಪ್ರಯೋಜನವಾಗಿದ್ದು ಜನ ಸರಕರದ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ, ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬೆಲೆ

ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಿ: ಶಾಸಕ ಅಶೋಕ್ ರೈ  | ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ Read More »

ಆ.2 : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸೌಜನ್ಯ ನ್ಯಾಯಕ್ಕಾಗಿ ಹಕ್ಕೊತ್ತಾಯ | ಕಾಲ್ನಡಿಗೆ ಜಾಥಾ

ಕಡಬ : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೌಜನ್ಯ ನ್ಯಾಯಕ್ಕಾಗಿ ಹಕ್ಕೊತ್ತಾಯ ಕಾಲ್ನಡಿಗೆ ಜಾಥಾ ಆ.2 ರಂದು ಕಡಬದಲ್ಲಿ ನಡೆಯಲಿದೆ. ಶನಿವಾರ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ವತಿಯಿಂದ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆ.2 : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸೌಜನ್ಯ ನ್ಯಾಯಕ್ಕಾಗಿ ಹಕ್ಕೊತ್ತಾಯ | ಕಾಲ್ನಡಿಗೆ ಜಾಥಾ Read More »

ದರ್ಬೆ ಪ್ರಶಾಂತ್ ಮಹಲ್‍ ನಲ್ಲಿ ಮೇಳೈಸಿದ “ಆಟಿಡೊಂಜಿ ದಿನ” | ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, 49 ಬಗೆಯ ಖಾದ್ಯಗಳು

ಪುತ್ತೂರು: ಸವಣೂರು ಸೀತಾರಾಮ ರೈ ಅವರ ಮುಂದಾಳುತ್ವದಲ್ಲಿ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮ ಶನಿವಾರ ದರ್ಬೆ ಪ್ರಶಾಂತ್ ಮಹಲ್‍ ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಟಿದ ಅಟಿಲ್ ನಲ್ಲಿ 49 ಬಗೆಯ ಖಾದ್ಯಗಳು ನೆರೆದಿದ್ದವರ ಬಾಯಿ ಚಪ್ಪರಿಸುವಂತೆ ಮಾಡಿತು. ಕಾರ್ಯಕ್ರಮದ ಆರಂಭದಲ್ಲಿ ಹಿರಿಯರ ಆಟಿ ತಿಂಗಳ ಸುಂದರ ಆಟವಾಗಿರುವ “ಚೆನ್ನಮಣೆ” ಆಟವನ್ನು ಮಹಿಳೆಯರು ಹಾಗೂ ಪುರುಷರು ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಒದಗಿಸಲಾಯಿತು. ಪುರುಷರಕಟ್ಟೆ, ಗುರುಕುಲ ಕಲಾ ಕೇಂದ್ರದ ಮಕ್ಕಳಿಂದ

ದರ್ಬೆ ಪ್ರಶಾಂತ್ ಮಹಲ್‍ ನಲ್ಲಿ ಮೇಳೈಸಿದ “ಆಟಿಡೊಂಜಿ ದಿನ” | ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, 49 ಬಗೆಯ ಖಾದ್ಯಗಳು Read More »

ಸೌಜನ್ಯ ಕೊಲೆ ಪ್ರಕರಣ | ಮರು ತನಿಖೆಗೆ ಒತ್ತಾಯಿಸಿ ಒಕ್ಕಲಿಗ ಯುವ ಗೌಡ ಸಂಘದ ವತಿಯಿಂದ ಆ.1 ರಂದು ಸುಳ್ಯದಲ್ಲಿ ವಾಹನ ಜಾಥಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಕೆಗೆ ನಿರ್ಧಾರ

ಸುಳ್ಯ: ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಲು ಸುಳ್ಯದ ಗೌಡರ ಯುವ ಸೇವಾ ಸಂಘ ಒತ್ತಾಯಿಸಿದ್ದು, ಆ.1ರಂದು ಸುಳ್ಯದಲ್ಲಿ ವಾಹನ ಜಾಥಾ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ. ಶನಿವಾರ ಸುಳ್ಯ ಪ್ರೆಸ್ರ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಟಾರ್ ಮಾತನಾಡಿ, ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣ 2011

ಸೌಜನ್ಯ ಕೊಲೆ ಪ್ರಕರಣ | ಮರು ತನಿಖೆಗೆ ಒತ್ತಾಯಿಸಿ ಒಕ್ಕಲಿಗ ಯುವ ಗೌಡ ಸಂಘದ ವತಿಯಿಂದ ಆ.1 ರಂದು ಸುಳ್ಯದಲ್ಲಿ ವಾಹನ ಜಾಥಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಕೆಗೆ ನಿರ್ಧಾರ Read More »

error: Content is protected !!
Scroll to Top