ಪುತ್ತೂರು

ಬೈಕ್-ಓಮ್ನಿ ಡಿಕ್ಕಿ : ಬೈಕ್ ಸವಾರ ಮೃತ್ಯು

ಪುತ್ತೂರು: ನಗರದ ಹೊರವಲಯದ ಮುಕ್ರಂಪಾಡಿಯಲ್ಲಿ ಓಮ್ನಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಉಪ್ಪಳಿಗೆಯ ಅಜಲಡ್ಕ ನಿವಾಸಿ ನಾರಾಯಣ್ ಎಂದು ಗುರುತಿಸಲಾಗಿದೆ. ಮೂಲತಃ ಕೆಮ್ಮಾಯಿ ನಿವಾಸಿಯಾವಗಿರುವ ನಾರಾಯಣ್ ಉಪ್ಪಳಿಗೆಯಲ್ಲಿ ವಾಸವಾಗಿದ್ದು, ಅಡಕೆ ತೆಗೆಯುವುದು, ಅಡಕೆಗೆ ಔಷಧಿ ಸಿಂಪಡಣೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬೈಕ್-ಓಮ್ನಿ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

ಬಂಟರ ಸಂಘದಿಂದ ಆಟಿಡೊಂಜಿ ದಿನ| ವಿವಿಧ ಕ್ಷೇತ್ರದ ಸಾಧಕ 13 ಮಂದಿಗೆ ಚಿನ್ನದ ಪದಕ ನೀಡಿ ಗೌರವ

ಪುತ್ತೂರು: ಬಂಟರ ಸಮುದಾಯ ಎನ್ನುವುದು ನಮಗೆ ಹೆಮ್ಮೆ ಎನಿಸಿದ್ದು, ಸಂಘ ಇಂದು  ವಿಸ್ತಾರವಾಗಿ ಬೆಳೆದು ಫಲ ನೀಡಿದೆ ಎಂದು ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಹೇಳಿದರು. ಅವರು ಭಾನುವಾರ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ಸಂಘದ ಸಹಯೋಗದಲ್ಲಿ ಕೊಂಬೆಟ್ಟು ಬಂಟರ ಭವನದಲ್ಲಿ ಜರಗಿದ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಚಿನ್ನದ ಪದಕ

ಬಂಟರ ಸಂಘದಿಂದ ಆಟಿಡೊಂಜಿ ದಿನ| ವಿವಿಧ ಕ್ಷೇತ್ರದ ಸಾಧಕ 13 ಮಂದಿಗೆ ಚಿನ್ನದ ಪದಕ ನೀಡಿ ಗೌರವ Read More »

ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ

ಎಡನೀರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನವು ಕಳೆದೆರಡು ವರ್ಷಗಳಿಂದ ನಡೆಸುತ್ತಿರುವ  ಸೇವಾ ಚಟುವಟಿಕೆಗಳು ಉದಾತ್ತ  ಭಾವನೆಯಿಂದ ಕೂಡಿದ್ದು ಸಮಾಜಕ್ಕೆ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡುತ್ತಿದೆ. ಪರಿಪಕ್ವ ಮನಸ್ಸಿನ ಹಿರಿಯರು ಸಮಾಜಕ್ಕೆ ಮತ್ತು ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಎಲ್ಲಾ ಕಾರ್ಯಕ್ರಮಗಳಿಗೆ ಮಠದಿಂದ ಸದಾ ಪ್ರೋತ್ಸಾಹವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು. ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಮಠದ ಸಹಯೋಗದಲ್ಲಿ ಚಾತುರ್ಮಾಸ್ಯ ಸಭಾಂಗಣದಲ್ಲಿ ಜರಗಿದ ಹಿರಿಯರ

ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ Read More »

ಸೌಜನ್ಯಳ ನ್ಯಾಯಕ್ಕಾಗಿ ಸಂಘರ್ಷ ಹೋರಾಟಕ್ಕೂ ಸಿದ್ಧ : ಅರುಣ್ ಕುಮಾರ್ ಪುತ್ತಿಲ| ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಘೋಷ ವಾಕ್ಯದೊಂದಿಗೆ ಬೃಹತ್ ಮೌನಮೆರವಣಿಗೆ | ಬೃಹತ್ ಸಂಖ್ಯೆಯಲ್ಲಿ ಸೇರಿದ ಜನಸಮೂಹ

ಪುತ್ತೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರ ಸಂಘಟನೆ ವತಿಯಿಂದ ಬೃಹತ್ ಮೌನ ಮೆರವಣಿಗೆ, ಪ್ರತಿಭಟನಾ ಸಭೆ ಸೋಮವಾರ ನಡೆಯಿತು. “ನಮ್ಮ ನಡೆ ನ್ಯಾಯದ ಕಡೆ “ ಎಂಬ ಘೋಷ ವಾಕ್ಯದೊಂದಿಗೆ ನಗರದ ದರ್ಬೆ ವೃತ್ತದಲ್ಲಿ ಮೌನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸೌಜನ್ಯ ಕುಟುಂಬದವರಿಗೆ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಪ್ರಥಮ ಬಾರಿ ಎಂಬಂತೆ ಪ್ರತಿಭಟನೆಯಲ್ಲಿ ಬೃಹತ್

ಸೌಜನ್ಯಳ ನ್ಯಾಯಕ್ಕಾಗಿ ಸಂಘರ್ಷ ಹೋರಾಟಕ್ಕೂ ಸಿದ್ಧ : ಅರುಣ್ ಕುಮಾರ್ ಪುತ್ತಿಲ| ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಘೋಷ ವಾಕ್ಯದೊಂದಿಗೆ ಬೃಹತ್ ಮೌನಮೆರವಣಿಗೆ | ಬೃಹತ್ ಸಂಖ್ಯೆಯಲ್ಲಿ ಸೇರಿದ ಜನಸಮೂಹ Read More »

ಸವಣೂರು ವಿದ್ಯಾಗಂಗ್ರೋತ್ರಿಯಲ್ಲಿ ನಡೆದ “ಶೀಂಟೂರು ಸ್ಮೃತಿ-2023” | ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 12ನೇ ವರ್ಷದ ಸ್ಥಾಪಕರ ದಿನಾಚರಣೆ

ಸವಣೂರು : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 12ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ-2023” ಸೋಮವಾರ  ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಇಂಡಿಯನ್ ನೇವಿ ಚೀಫ್ ಇಲೆಕ್ಟಿಕಲ್ ಆರ್ಟಿಫಿಶರ್ ರೆಡಿಯೋ ಚಿಯರ್ (ನಿವೃತ್ತ) ವಿಕ್ರಂ ದತ್ತರಿಗೆ ಶೀಂಟೂರು ಸನ್ಮಾನ ಮಾಡಿದರು. ಮಂಗಳೂರು ಕಾಲೇಜ್ ಆಫ್ ಫಿಷರೀಸ್ ನ ನಿವೃತ್ತ ಡೈರೆಕ್ಟರ್ ಆಫ್ ಇನ್ಸ್‌ಕ್ಷನ್ ಪ್ರೊ.

ಸವಣೂರು ವಿದ್ಯಾಗಂಗ್ರೋತ್ರಿಯಲ್ಲಿ ನಡೆದ “ಶೀಂಟೂರು ಸ್ಮೃತಿ-2023” | ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 12ನೇ ವರ್ಷದ ಸ್ಥಾಪಕರ ದಿನಾಚರಣೆ Read More »

ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ

ಪುತ್ತೂರು: ನಾವು ವಿದ್ಯೆ ಕಲಿತು ಎಷ್ಟೇ ದೊಡ್ಡ ಉನ್ನತ ಪದವಿ ಪಡೆದು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಬಹುದು. ಆದರೆ ನಮಗೆ ನಮ್ಮ ತಂದೆ ತಾಯಿಯ ಆಶೀರ್ವಾದ ಇಲ್ಲದೇ ಇದ್ದರೆ ನಾವು ಶೂನ್ಯ ವ್ಯಕ್ತಿಗಳಾಗುತ್ತೇವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಸಾಲ್ಮರ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಹಾಗೂ ಪೌಢ ಶಾಲೆಯಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶನ ಮಾಡಬೇಕು, ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಚಿಂತೆಯನ್ನು ಬಿಟ್ಟು

ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ Read More »

ಸೌಜನ್ಯ ಕೊಲೆ ಪ್ರಕರಣ | ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆಹಚ್ಚಿ : ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದಿಂದ ಸರಕಾರಕ್ಕೆ ಮನವಿ

ಪುತ್ತೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯ ಮೂಲಕ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಿ ಸಮಾಜದಲ್ಲಿ ಹೆಣ್ಣು ಮಕ್ಕಳು ಗೌರವದಿಂದ ಬದುಕುವಂತೆ ಮಾಡಬೇಕಾಗಿದೆ ಎಂದು ಆಗ್ರಹಿಸಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸಹಾಯಕ ಆಯುಕ್ತರ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಉಜಿರೆಯಲ್ಲಿ 2011 ರಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತ

ಸೌಜನ್ಯ ಕೊಲೆ ಪ್ರಕರಣ | ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆಹಚ್ಚಿ : ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದಿಂದ ಸರಕಾರಕ್ಕೆ ಮನವಿ Read More »

ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರ ಆತ್ಮಕಥನ “ದೀವಿಗೆ” ಕೃತಿ ಅನಾವರಣ|ಪುಸ್ತಕ ಹಬ್ಬ,-ಪುಸ್ತಕ ದಾನಿಗಳ ಮೇಳ- ಸಾಹಿತ್ಯ ವೈಭವ

ಪುತ್ತೂರು: ಆತ್ಮಕಥನ ‘ದೀವಿಗೆ’ ನಿಜಕ್ಕೂ ದಾರಿದೀಪ’ವೆನಿಸಿದ್ದು, ಡಾ.ಪೀಟರ್ ವಿಲ್ಸನ್ ಪ್ರಭಾಕರ್‌ರವರ ಆತ್ಮಚರಿತ ಉತ್ತಮವಾಗಿ ಸರಳವಾಗಿ, ಸುಸೂತ್ರವಾಗಿ ಎಲ್ಲಿ, ಏನು ಹೇಳಬೇಕು ಅಲ್ಲಿ ಹೇಳುತ್ತಾ ನಿರರ್ಗಳವಾಗಿ ಮೂಡಿ ಬಂದಿದ್ದು, ಈ ಕೃತಿ ಓದುಗನಿಗೆ ಓದಿಸಿಕೊಂಡು ಹೋಗುವ ಕೃತಿಯಾಗಿದೆ ಎಂದು ಕಾಸರಗೋಡು ಪ್ರಾಧ್ಯಾಪಕರಾದ ಡಾ.ರಾಧಾಕೃಷ್ಣ ಬೆಳ್ಳೂರು ಹೇಳಿದರು. ಅವರು ಪುತ್ತೂರು ಕೋ ಓಪರೇಟಿವ್  ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜ್ಞಾನಗಂಗಾ ಪುಸ್ತಕ ಮಳಿಗೆ ಜಂಟಿ ಆಶ್ರಯದಲ್ಲಿ ನಡೆದ ಪುಸ್ತಕ ಹಬ್ಬ,

ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರ ಆತ್ಮಕಥನ “ದೀವಿಗೆ” ಕೃತಿ ಅನಾವರಣ|ಪುಸ್ತಕ ಹಬ್ಬ,-ಪುಸ್ತಕ ದಾನಿಗಳ ಮೇಳ- ಸಾಹಿತ್ಯ ವೈಭವ Read More »

ಉಸಿರಾಟದ ತೊಂದರೆಯಿಂದ ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು

ಬೆಳ್ತಂಗಡಿ: ಜ್ವರದಿಂದ ಬಳಲಿ ಚಿಕಿತ್ಸೆ ಪಡೆದು, ಮನೆಯಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ನಡೆದಿದೆ. ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ ರಾಜು ದೇವಾಡಿಗ ಪುತ್ರಿ ಸುಮಾ(19) ಎಂಬವರು ಆ.13ರಂದು ಮೃತಪಟ್ಟ ಯುವತಿ. ಮಂಗಳೂರಿನ ಕಾಲೇಜೊಂದರ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದರು. ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಉಸಿರಾಟದ ತೊಂದರೆಯಿಂದ ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು Read More »

ಉಪ್ಪಿನಂಗಡಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ

ಪುತ್ತೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನವನ್ನು ಉಪ್ಪಿನಂಗಡಿಯಲ್ಲಿ ಭಾನುವಾರ ಸಂಜೆ ಆಚರಿಸಲಾಯಿತು. ಅಖಂಡ ಭಾರತ ವಿಭಜನೆಗೊಂಡ 1947 ಆಗಸ್ಟ್ 14 ರ ದುರಂತದ ಬಗ್ಗೆ ನೆನಪಿಸುತ್ತಾ ನಡೆದ ಸಂಕಲ್ಪ ದಿನಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಹಿಂಪ, ಬಜರಂಗದಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಪ್ಪಿನಂಗಡಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ Read More »

error: Content is protected !!
Scroll to Top