ಪುತ್ತೂರು

ಕೆಯ್ಯೂರು ಗ್ರಾಪಂ ಅಧ್ಯಕ್ಷರಾಗಿ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷರಾಗಿ ಸುಮಿತ್ರ ಪಲ್ಲತ್ತಡ್ಕ ಆಯ್ಕೆ

ಪುತ್ತೂರು: ಕೆಯ್ಯೂರು ಗ್ರಾಪಂ ಅಧ್ಯಕ್ಷರಾಗಿ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷರಾಗಿ ಸುಮಿತ್ರ ಪಲ್ಲತ್ತಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಗ್ರಾಪಂನ ಎರಡನೇ ಅವಧಿಗೆ ಆಯ್ಕೆ ಪ್ರಕ್ರಿಯೆ ಬುಧವಾರ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶರತ್ ಕುಮಾರ್ ಹಾಗೂ ಸುಮಿತ್ರ ಬಿಜೆಪಿ ಬೆಂಬಲಿತರಾಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಯುವ ಮೋರ್ಚಾದ ಸಹಜ್ ರೈ ಬಳೆಜ್ಜ, ಮುಖಂಡರಾದ ನಿತೀಶ್ ಕುಮಾರ್ ಶಾಂತಿವನ, ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಮತ್ತಿತರರು ಉಪಸ್ಥಿತರಿದ್ದರು.

ಕೆಯ್ಯೂರು ಗ್ರಾಪಂ ಅಧ್ಯಕ್ಷರಾಗಿ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷರಾಗಿ ಸುಮಿತ್ರ ಪಲ್ಲತ್ತಡ್ಕ ಆಯ್ಕೆ Read More »

ಕೋಡಿಂಬಾಡಿ ಗ್ರಾಪಂ ಅಧ್ಯಕ್ಷರಾಗಿ ಮಲ್ಲಿಕಾ ಅಶೋಕ್, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು

ಪುತ್ತೂರು: ಕೋಡಿಂಬಾಡಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಲ್ಲಿಕಾ ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರ್ ಆಯ್ಕೆಯಾಗಿದ್ದಾರೆ. ಒಟ್ಟು 11 ಮಂದಿ ಸದಸ್ಯರ ಪೈಕಿ 6 ಬಿಜೆಪಿ ಮತ್ತು 5 ಕಾಂಗ್ರೆಸ್ ಬೆಂಬಲಿತರಿದ್ದು, ಬುಧವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆಯೋರ್ವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ ಮತ ಚಲಾವಣೆ ಮಾಡುವ ಮೂಲಕ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಬಂದಿದೆ.

ಕೋಡಿಂಬಾಡಿ ಗ್ರಾಪಂ ಅಧ್ಯಕ್ಷರಾಗಿ ಮಲ್ಲಿಕಾ ಅಶೋಕ್, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು Read More »

ಬಲ್ನಾಡು ಗ್ರಾಪಂ ಅಧ್ಯಕ್ಷರಾಗಿ ಪರಮೇಶ್ವರಿ ಭಟ್, ಉಪಾಧ್ಯಕ್ಷರಾಗಿ ರವಿಚಂದ್ರ ಸಾಜ

ಬಲ್ನಾಡು: ಬಲ್ನಾಡು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪರಮೇಶ್ವರಿ ಭಟ್ ಬಲ್ನಾಡು ಮತ್ತು ಉಪಾಧ್ಯಕ್ಷರಾಗಿ ರವಿಚಂದ್ರ ಸಾಜ ಆಯ್ಕೆಯಾಗಿದ್ದಾರೆ. ಆ.16ರಂದು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪರಮೇಶ್ವರಿ ಭಟ್ ಬಲ್ನಾಡು ನೂತನ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರವಿಚಂದ್ರ ಸಾಜ ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮನಿಯಾಣಿ, ಜೀವಂದರ್ ಜೈನ್, ಗ್ರಾ ಪಂ ಸದಸ್ಯರು, ಮತ್ತಿರರು

ಬಲ್ನಾಡು ಗ್ರಾಪಂ ಅಧ್ಯಕ್ಷರಾಗಿ ಪರಮೇಶ್ವರಿ ಭಟ್, ಉಪಾಧ್ಯಕ್ಷರಾಗಿ ರವಿಚಂದ್ರ ಸಾಜ Read More »

ಕಾಣಿಯೂರು ಗ್ರಾಪಂನಲ್ಲಿ 77ನೇ ವರ್ಷದ ಸ್ವಾತಂತ್ರ್ಯೋತ್ಸವ | ಶವ ಪೆಟ್ಟಿಗೆ ಲೋಕಾರ್ಪಣೆ

ಪುತ್ತೂರು: ಕಾಣಿಯೂರು ಗ್ರಾಪಂನಲ್ಲಿ 77 ನೇ ವರುಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ಲಲಿತಾ ದರ್ಖಾಸ್ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ  ಪಂಚಾಯತ್ ನೆಲೆಯಿಂದ ಖರೀದಿಸಿದ ಶವ ಪೆಟ್ಟಿಗೆಯನ್ನು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು. ಲೋಕಾರ್ಪಣೆ ಮಾಡಿದರು. ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಕೆ.ಎಸ್. ಉದನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಶವ ಪೆಟ್ಟಿಗೆಯನ್ನು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಉಚಿತವಾಗಿ ಹಾಗೂ ಪರ ಊರಿನ ಜನರಿಗೆ ನಿಗದಿತ ಬಾಡಿಗೆದರದಲ್ಲಿ ನೀಡುವುದಾಗಿ ತಿಳಿಸಿದರು. ಬಳಿಕ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪಂಚ ಅಭಿಯಾನದಡಿ

ಕಾಣಿಯೂರು ಗ್ರಾಪಂನಲ್ಲಿ 77ನೇ ವರ್ಷದ ಸ್ವಾತಂತ್ರ್ಯೋತ್ಸವ | ಶವ ಪೆಟ್ಟಿಗೆ ಲೋಕಾರ್ಪಣೆ Read More »

ಬೆಳ್ತಂಗಡಿ ರೆಖ್ಯ ನಿವಾಸಿ ಲೋಕೇಶ್ ನಾಪತ್ತೆ |ಬೈಕ್ ಉದನೆ ಬಳಿಯ ಕಡೆಂಬಿಲ ಎಂಬಲ್ಲಿ ಹೊಳೆ ಸಮೀಪದ ಪತ್ತೆ| ಅಗ್ನಿಶಾಮಕದಿಂದ ಹುಡುಕಾಟ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಲೋಕೇಶ್ (43) ಎಂಬವರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಉದನೆ ಬಳಿಯ ಕಡೆಂಬಿಲ ಎಂಬಲ್ಲಿಯ ಹೊಳೆ ಸಮೀಪದ ಹೆದ್ದಾರಿ ಬದಿಯಲ್ಲಿ ಪತ್ತೆಯಾಗಿದೆ. ಲೋಕೇಶ್ ಅವರು ಗುಂಡ್ಯ ಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ಲೆಯಲ್ಲಿ ಹುಡುಕಾಟ ನಡೆಸಲಾಗಿದೆ.ಲೋಕೇಶ್ ಅವರು ಸೋಮವಾರ ತನ್ನ ಬೈಕ್‍ನಲ್ಲಿ ಉದನೆ ಪೇಟೆಗೆಂದು ಹೋಗಿದ್ದು, ಲೋಕೇಶ್ ಅವರ ಅಣ್ಣ ರಾಮಚಂದ್ರ  ಗೌಡರು ನೆಲ್ಯಾಡಿಗೆ ಹೋಗಿ ಹಿಂದಿರುಗು ಬರುತ್ತಿದ್ದಾಗ ತಮ್ಮ ಲೋಕೇಶ್ ಅವರ ಬೈಕ್ ಉದನೆ ಕಡೆಂಬಿಲ ಎಂಬಲ್ಲಿ ರಾಷ್ಟ್ರೀಯ

ಬೆಳ್ತಂಗಡಿ ರೆಖ್ಯ ನಿವಾಸಿ ಲೋಕೇಶ್ ನಾಪತ್ತೆ |ಬೈಕ್ ಉದನೆ ಬಳಿಯ ಕಡೆಂಬಿಲ ಎಂಬಲ್ಲಿ ಹೊಳೆ ಸಮೀಪದ ಪತ್ತೆ| ಅಗ್ನಿಶಾಮಕದಿಂದ ಹುಡುಕಾಟ Read More »

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಚಿಕಿತ್ಸಾ ವೆಚ್ಚದ ಹಣ ಹಸ್ತಾಂತರ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಕೆದಿಲ ‘ಬಿ’ ಕಾರ್ಯಕ್ಷೇತ್ರದ ‘ಶ್ರೀ ಮಂಜುನಾಥ’ ಸ್ವ ಸಹಾಯ ಸಂಘದ ಸದಸ್ಯ ಶಿವಾನಂದರವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂ. 25,000/- ಕ್ರಿಟಿಕಲ್ ಇಲ್ನೆಸ್ ಫಂಡ್ ನ್ನು ಹಸ್ತಾಂತರಿಸಲಾಯಿತು. ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಶಾರದ,  ಸೇವಾಪ್ರತಿನಿಧಿ ಜಯಂತಿ, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಸಹಕಾರ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಚಿಕಿತ್ಸಾ ವೆಚ್ಚದ ಹಣ ಹಸ್ತಾಂತರ Read More »

ಆಸ್ಪತ್ರೆಗೆ ದಾಖಲಾದ ಬಾಲಕ ಶಸ್ತ್ರಚಿಕಿತ್ಸೆ ಬಳಿಕ ಮೃತ್ಯು : ವೈದ್ಯರ ಬೇಜವಾಬ್ದಾರಿ ಆರೋಪ |ಆಸ್ಪತ್ರೆ ಮುಂಭಾಗ ಮೃತದೇಹ ಇಟ್ಟು ದಲಿತ ಸಂಘಟನೆಯಿಂದ ಪ್ರತಿಭಟನೆ

ಪುತ್ತೂರು; ಅಪ್ರಾಪ್ತ ಬಾಲಕನೋರ್ವ ಕರುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಹೊಟ್ಟೆನೋವು ಉಂಟಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಬಾಲಕನ ಸಾವಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರುಗಳೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಶವವನ್ನು ಆಸ್ಪತ್ರೆಯ ಮುಂದಿಟ್ಟು ದಲಿತ ಸಂಘಟನೆ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪ್ರತಿಭಟನಾ ನಿರತ ದಲಿತ ಸಂಘಟನೆ ಮೃತ ಬಾಲಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು, ಜತೆಗೆ ಬೇಜವಾಬ್ದಾರಿ ವಹಿಸಿ

ಆಸ್ಪತ್ರೆಗೆ ದಾಖಲಾದ ಬಾಲಕ ಶಸ್ತ್ರಚಿಕಿತ್ಸೆ ಬಳಿಕ ಮೃತ್ಯು : ವೈದ್ಯರ ಬೇಜವಾಬ್ದಾರಿ ಆರೋಪ |ಆಸ್ಪತ್ರೆ ಮುಂಭಾಗ ಮೃತದೇಹ ಇಟ್ಟು ದಲಿತ ಸಂಘಟನೆಯಿಂದ ಪ್ರತಿಭಟನೆ Read More »

ಅಕ್ಷಯ ಕಾಲೇಜಿನಲ್ಲಿ 77 ನೇ ಸ್ವಾತಂತ್ರೊತ್ಸವ  ಆಚರಣೆ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ, ನಾರಾಯಣ ರೈ ಕುಕ್ಕುವಳ್ಳಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿ77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ನಾವೆಲ್ಲ ಶತಮಾನೋತ್ಸವವನ್ನು ಆಚರಿಸುವಂತಾಗಲಿ. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸಾಧನೆಯನ್ನು ವಿವಿಧ ಮಾಧ್ಯಮಗಳಲ್ಲಿ ಗಮನಿಸಿದ್ದು, ಇನ್ನೂ ಅನೇಕ ಸಾಧನೆಗಳು ವಿದ್ಯಾರ್ಥಿಗಳಿಂದ ಮೂಡಿ ಬರಲಿ ಎಂದು ಹಾರೈಸಿದರು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು

ಅಕ್ಷಯ ಕಾಲೇಜಿನಲ್ಲಿ 77 ನೇ ಸ್ವಾತಂತ್ರೊತ್ಸವ  ಆಚರಣೆ Read More »

ಮಾಣಿಲ ಪ್ರೌಢಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ | ವಿದ್ಯಾರ್ಥಿಗಳಿಗೆ ಅಭಿನಂದನೆ

ಮಾಣಿಲ : ಪ್ರತಿಭೆಯನ್ನು ಬಳಸಿಕೊಳ್ಳುವುದರಲ್ಲಿ ಯಶಸ್ಸು ಅಡಗಿದೆ ಎಂದು ಖ್ಯಾತ ನಿರೂಪಕ , ಹಿನ್ನೆಲೆ ಧ್ವನಿ ಕಲಾವಿದ, ನಟ ಬಡೆಕ್ಕಿಲ ಪ್ರದೀಪ್ ಹೇಳಿದರು. ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿ, ಸ್ವಾತಂತ್ರ್ಯೋತ್ತರ  ಭಾರತದ ಸಾಧನೆಗಳು , ವ್ಯಕ್ತಿತ್ವ ನಿರ್ಮಾಣ ಹೀಗೆ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು. ಎಸ್‍ ಡಿ ಎಂ ಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ  ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಈ

ಮಾಣಿಲ ಪ್ರೌಢಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ | ವಿದ್ಯಾರ್ಥಿಗಳಿಗೆ ಅಭಿನಂದನೆ Read More »

ಶಾಂತಿಗೋಡು ಅಂಗನವಾಡಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಶಾಂತಿಗೋಡು ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಂತಿಗೋಡು ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ಸಚ್ಚೀಂದ್ರ ಬೊಳ್ಳೆಕ್ಕು ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ನಾಗಮ್ಮ ತೋಟ, ಸುಧೀರ್ ಶೆಟ್ಟಿ ಕುದುರೆಪ್ಪಾಡಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಚಂದ್ರಕಲಾ, ಯುವಕ ಮಂಡಲ ಸದಸ್ಯರಾದ ಶಿವಪ್ರಸಾದ್, ವಿನೋದ್ ಕರ್ಪುತ್ತಮೂಲೆ, ಪ್ರವೀಣ್, ಶ್ರೀನಿವಾಸ್, ನೇತ್ರಾವತಿ ನರ್ಸರಿ ಮಾಲಕ ರಘುನಾಥ ಕೈಂದಾಡಿ, ಶ್ರೀಕೃಷ್ಣ, ಹರೀಶ್, ವಿಶ್ವನಾಥ, ಚಿರಂಜೀವಿ ತೋಟ, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸದಸ್ಯರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ನಳಿನಿ

ಶಾಂತಿಗೋಡು ಅಂಗನವಾಡಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ Read More »

error: Content is protected !!
Scroll to Top