ಪುತ್ತೂರು

ಬನ್ನೂರು ಗ್ರಾಪಂ ಎರಡನೇ ಅವಧಿಗೆ ಅಧ್ಕ್ಷಕ್ಷರಾಗಿ ಸ್ಮಿತಾ ಎನ್., ಉಪಾಧ್ಯಕ್ಷರಾಗಿ ಶೀನಪ್ಪ ಕುಲಾಲ್ ಅವಿರೋಧವಾಗಿ ಆಯ್ಕೆ

ಪುತ್ತೂರು: ಬನ್ನೂರು, ಚಿಕ್ಕಮುಡ್ನೂರು, ಪಡ್ನೂರು ಗ್ರಾಮಗಳ ಬನ್ನೂರು ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷರಾಗಿ ಸ್ಮಿತಾ ಎನ್. ಹಾಗೂ ಉಪಾಧ್ಯಕ್ಷರಾಗಿ ಶೀನಪ್ಪ ಕುಲಾಲ್ ಸೇಡಿಯಾಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ಆ.17ರಂದು ನಡೆಯಿತು. ಒಟ್ಟು 13 ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಯಲ್ಲಿ ಎಲ್ಲಾ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೊಂದಿದೆ. ಪ.ಪಂಗಡ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸ್ಮಿತಾ ಎನ್. ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶೀನಪ್ಪ ಕುಲಾಲ್ ಹಾಗೂ ಶ್ರೀನಿವಾಸ ಪೆರೋಡಿ […]

ಬನ್ನೂರು ಗ್ರಾಪಂ ಎರಡನೇ ಅವಧಿಗೆ ಅಧ್ಕ್ಷಕ್ಷರಾಗಿ ಸ್ಮಿತಾ ಎನ್., ಉಪಾಧ್ಯಕ್ಷರಾಗಿ ಶೀನಪ್ಪ ಕುಲಾಲ್ ಅವಿರೋಧವಾಗಿ ಆಯ್ಕೆ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಮತ್ತೆ ಗರಿಗೆದರಿದ ಪ್ರಶಸ್ತಿ | ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನೀಡುವ ಪ್ರಶಸ್ತಿಗೆ ಭಾಜನ

ಪುತ್ತೂರು: ಉತ್ತಮ ಸಾಧನೆಗೈದ ಸಹಕಾರ ಸಂಘಗಳಿಗೆ ಜಿಲ್ಲಾ ಸಹಕಾರಿ ಬ್ಯಾಂಕ್‍ ನಿಂದ ನೀಡುವ ಪ್ರಶಸ್ತಿಗೆ ವಿಶೇಷ ಸಾಧನೆಗೈದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಭಾಜನವಾಗಿದೆ. ಪುತ್ತೂರಿನಲ್ಲಿ 2002 ರಲ್ಲಿ ಆರಂಭಗೊಂಡ ಬ್ಯಾಂಕ್‍ ಉತ್ತಮ ವ್ಯವಹಾರ ಮಾಡಿ ಬಳಿಕದ ದಿನಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿ ಪುತ್ತೂರು ಎಸ್‍ ಎಂಟಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಪಿಎಂಸಿ, ಕಾಣಿಯೂರು ಹಾಗೂ ಬೆಳ್ಳಾರೆಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಒಟ್ಟು 9 ಶಾಖೆಗಳನ್ನು ಸಂಘ ಹೊಂದಿದೆ. ಸಂಘವು ಸುಮಾರು

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಮತ್ತೆ ಗರಿಗೆದರಿದ ಪ್ರಶಸ್ತಿ | ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನೀಡುವ ಪ್ರಶಸ್ತಿಗೆ ಭಾಜನ Read More »

ಆ.18 : ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ : ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ಆ.18 ರಂದು ನಡೆಯಲಿರುವ ತಿರಂಗಾ ಯಾತ್ರೆಯ ಪೂರ್ವಭಾವಿ ಸಭೆ ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆಯಿತು. ತಿರಂಗ ಯಾತ್ರೆ ಕಿಲ್ಲೇ ಮೈದಾನದ ಬಳಿಯಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಿಂದ ಹೊರಟು ಪುತ್ತೂರು ಟೌನ್ ಬ್ಯಾಂಕ್‍ ನಲ್ಲಿ ನಡೆಯುವ ಸಭಾ ಕಾರ್ಯಕ್ರಮದೊಂದಿಗೆ ಸಮಾಪನಗೊಳ್ಳಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಪಕ್ಷದ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ

ಆ.18 : ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ : ಪೂರ್ವಭಾವಿ ಸಭೆ Read More »

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ : ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ಪುತ್ತೂರು: ಮಂಗಳೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ತಂಡವನ್ನು ರಿತೇಶ್.ಕೆ, ಪ್ರಣಾಮ್.ಎಂ, ಚಿನ್ಮಯಿ.ಸಿ.ಎಸ್, ಪ್ರೀತಮ್, ಮೋಶಿತ್.ಕೆ.ಜೆ, ಯಶ್ಮಿತ್.ಎಂ.ಡಿ, ತೃತೇಶ್.ಬಿ., ಅಶ್ವಿನ್, ಸ್ನೇಹಿತ್ ಕುಮಾರ್, ಜಿತಿನ್.ಕೆ, ನಿವೇದ್  ಮತ್ತು ಮನ್ವಂತ್ ಗೋಪಾಲ್ ಪ್ರತಿನಿಧಿಸಿದ್ದರು. ತಂಡವನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದು ವರ್ಗ ಅಭಿನಂದಿಸಿದೆ.

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ : ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ Read More »

ಕಾವು ಸಸ್ಪೆಟ್ಟಿ ಸೀರೆ ಹೊಳೆಯಲ್ಲಿ ಮಾಂಸದ ಮುದ್ದೆ ಪತ್ತೆ.

ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿ ದೇವರಕಟ್ಟೆ ಬಳಿ ಹರಿಯುವ ನೀರಿಗೆ ಗೋಣಿಯಲ್ಲಿ ಕಟ್ಟಿದ ಸ್ಥಿತಿಯಲ್ಲಿ ಮಾಂಸ ಮತ್ತು ಉಪಯೋಗಿಸಿದ ಬಟ್ಟಲು ಬಾಟ್ಲಿಗಳು ಕಂಡು ಬಂದಿದೆ. ವಿಪರೀತ ವಾಸನೆ ಬಂದು ಸಂಶಯಗೊಂಡು ನೋಡಿದಾಗ ಮಾಂಸ, ಎಲುಬುಗಳು ಕಂಡು ಬಂದಿದೆ. ಸೀರೆ ಹೊಳೆಯಲ್ಲಿ ಸಾಕಷ್ಟು ಮಹಿಳೆಯರು ಬಟ್ಟೆ ತೊಳೆಯುವುದು ಮಕ್ಕಳು ಸ್ನಾನ ಮಾಡುವುದೂ ಮಾಡುತ್ತಿದ್ದು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಅರಿಯಡ್ಕ ಪಂಚಾಯಿತಿಗೂ, ಪೋಲೀಸರಿಗೂ ಮಾಹಿತಿ ನೀಡಲಾಗಿದೆ.

ಕಾವು ಸಸ್ಪೆಟ್ಟಿ ಸೀರೆ ಹೊಳೆಯಲ್ಲಿ ಮಾಂಸದ ಮುದ್ದೆ ಪತ್ತೆ. Read More »

ಅಂಬಿಕಾ ವಿದ್ಯಾಲಯದಲ್ಲಿ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ”

ಪುತ್ತೂರು: ಸ್ವಾತಂತ್ರ್ಯ ನಮಗೆ ಸುಮ್ಮನೆ ದೊರೆತದ್ದಲ್ಲ. ಬದಲಿಗೆ ಅದು ಹಲವರ ರಕ್ತ ತರ್ಪಣ, ಬಲಿದಾನಗಳ ಪ್ರತಿಫಲ. ಹೀಗಾಗಿ ಅವರ ಸ್ಮರಣೆ ಶಿಕ್ಷಣದ ಜೊತೆ ಜೊತೆಯಲ್ಲಿ ಸಾಗಬೇಕು ಎಂದು ಅಂಬಿಕಾ ಶಿಕ್ಷಣ ಸಂಸ್ಥೆಯ ಉಪನ್ಯಾಸಕ, ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ನಡೆದ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜಿಸುವ ಎಷ್ಟೇ ಪ್ರಯತ್ನಗಳು ನಡೆದರೂ ಅದು ಸಾಧ್ಯವಾದದ್ದು ಮಾತ್ರ ಸ್ವಾತಂತ್ರ್ಯ ದೊರೆತ ನಂತರವೇ ಎನ್ನುವುದು

ಅಂಬಿಕಾ ವಿದ್ಯಾಲಯದಲ್ಲಿ “ದೇಶ ವಿಭಜನೆಯ ಭಯಾನಕ ಸ್ಮರಣ ದಿನ” Read More »

ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ

ಪುತ್ತೂರು: ಪುತ್ತೂರು ಉಪನೋಂದಣಾ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಲಾಗಿದೆ. 2023-24ನೇ ಸಾಲಿಗೆ ಸಂಬಂಧಿಸಿ ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿ ಮಾರುಕಟ್ಟೆ ಮೌಲ್ಯ ಪರಿಷ್ಕರಿಸಿದೆ. ದರ ಪಟ್ಟಿನಲ್ಲಿ ಹೊಸ ಯೋಜನೆಯನ್ನು ಸೇರ್ಪಡೆ ಮಾಡಿ ಪರಿಷ್ಕೃತ ದರ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕ ಅವಗಾಹನೆಗೆ ತರಲು ಪುತ್ತೂರು ವ್ಯಾಪ್ತಿಯ ತಾಲೂಕು ಕಚೇರಿ, ಉಪನೋಂದಣಾ ಕಚೇರಿ, ಪುತ್ತೂರು ನಗರಸಭೆ ಕಚೇರಿ ಹಾಗೂ ಕಡಬ ತಾಲೂಕು ಕಚೇರಿ, ಕಡಬ ಪಟ್ಟಣ ಪಂಚಾಯತ್‍ ನ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ Read More »

ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ| ವೀರಮಂಗಲ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಚಾಂಪಿಯನ್, ಬಾಲಕರ ವಿಭಾಗದಲ್ಲಿ ಎರಡು ಪ್ರಥಮ ಬಹುಮಾನಗಳು

ಪುತ್ತೂರು: ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವೀರಮಂಗಲ ಶಾಲೆ ವಿಶೇಷ ಸಾಧನೆ ಗೈದು ಬಾಲಕಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನ ಪಡೆದಿದೆ. ಅಥ್ಲೆಟಿಕ್ ವಿಭಾಗದಲ್ಲಿ  ಪ್ರಜ್ವಲ್ ಪ್ರಥಮ ಸ್ಥಾನ ಹಾಗೂ ರಿದಮಿಕ್ ಯೋಗದಲ್ಲಿ ಪ್ರವೀಣ್ ರಾಜ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಪ್ರಮೀಳಾ ಮತ್ತು ಹಿತಶ್ರೀ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ರಿದಮಿಕ್ ಯೋಗದಲ್ಲಿ ಹಂಸಿನಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸ್ನೇಹ, ಭವಿಷ್ಯ

ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ| ವೀರಮಂಗಲ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಚಾಂಪಿಯನ್, ಬಾಲಕರ ವಿಭಾಗದಲ್ಲಿ ಎರಡು ಪ್ರಥಮ ಬಹುಮಾನಗಳು Read More »

ಪುತ್ತೂರು ಕ್ಷೇತ್ರದ ಅಭಿವೃದ್ದಿ ವಿಚಾರ ಮುಖ್ಯಮಂತ್ರಿಗಳ ಜೊತೆ ಶಾಸಕರ ಮಾತುಕತೆ| ಮೆಡಿಕಲ್‌ ಕಾಲೇಜು, ಎಸ್ಪಿ ಕಚೇರಿ ಸ್ಥಳಾಂತರ, ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ವಿಚಾರ ಪ್ರಸ್ತಾಪ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈಯವರು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿ ಪುತ್ತೂರು ಕ್ಷೇತ್ರದ ಅಭಿವೃದ್ದಿಗೆ ಸಂಬಂದಿಸಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವ ಮೂಲಕ ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಕಾಲೇಜು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡರು. ಮಂಗಳೂರಿನಲ್ಲಿರುವ ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವ ಬಗ್ಗೆ

ಪುತ್ತೂರು ಕ್ಷೇತ್ರದ ಅಭಿವೃದ್ದಿ ವಿಚಾರ ಮುಖ್ಯಮಂತ್ರಿಗಳ ಜೊತೆ ಶಾಸಕರ ಮಾತುಕತೆ| ಮೆಡಿಕಲ್‌ ಕಾಲೇಜು, ಎಸ್ಪಿ ಕಚೇರಿ ಸ್ಥಳಾಂತರ, ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ವಿಚಾರ ಪ್ರಸ್ತಾಪ Read More »

ಬೆಳ್ತಂಗಡಿ ರೆಖ್ಯ ನಿವಾಸಿ ಲೋಕೇಶ್ ಮೃತದೇಹ ಗುಂಡ್ಯ ಹೊಳೆಯಲ್ಲಿ ಪತ್ತೆ

ಬೆಳ್ತಂಗಡಿ: ಸೋಮವಾರ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಲೋಕೇಶ್ (43) ಎಂಬವರ ಮೃತದೇಹ ಗುಂಡ್ಯ ಹೊಳೆಯಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ. ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಉದನೆ ಬಳಿಯ ಕಡೆಂಬಿಲ ಎಂಬಲ್ಲಿಯ ಹೊಳೆ ಸಮೀಪದ ಹೆದ್ದಾರಿ ಬದಿಯಲ್ಲಿ ಪತ್ತೆಯಾಗಿತ್ತು. ಲೋಕೇಶ್ ಅವರು ಗುಂಡ್ಯ ಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಲೋಕೇಶ್ ಅವರು ಸೋಮವಾರ ತನ್ನ ಬೈಕ್‍ನಲ್ಲಿ ಉದನೆ ಪೇಟೆಗೆಂದು ಹೋಗಿದ್ದು, ಲೋಕೇಶ್ ಅವರ ಅಣ್ಣ ರಾಮಚಂದ್ರ  ಗೌಡರು ನೆಲ್ಯಾಡಿಗೆ ಹೋಗಿ ಹಿಂದಿರುಗು

ಬೆಳ್ತಂಗಡಿ ರೆಖ್ಯ ನಿವಾಸಿ ಲೋಕೇಶ್ ಮೃತದೇಹ ಗುಂಡ್ಯ ಹೊಳೆಯಲ್ಲಿ ಪತ್ತೆ Read More »

error: Content is protected !!
Scroll to Top