ಪುತ್ತೂರು

ಪುತ್ತಿಲ ಪರಿವಾರದ ನಗರ, ಗ್ರಾಮಾಂತರ ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳ ಸಮಾಗಮ

ಪುತ್ತೂರು: ಒಗ್ಗಟ್ಟಿನಿಂದ ಮಾಡುವ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಸಾಮಾಜಿಕ ಚಟುವಟಿಕೆಯಿಂದ ನಿಜವಾದ ಸಂತೋಷವನ್ನು ಗಳಿಸಬಹುದು. ಜಯ ಸಿಗುವ ತನಕ ಪ್ರಯತ್ನವನ್ನು ಕೈಬಿಡಬಾರದು ಎಂದು ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ ಹೇಳಿದರು. ಅವರು ಭಾನುವಾರ ಪುತ್ತೂರು ಕೋಟೆಚಾ ಹಾಲ್ ನಲ್ಲಿ ನಗರ ಮತ್ತು ಗ್ರಾಮಾಂತರದ ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಪುತ್ತಿಲ ಪರಿವಾರದ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ ಪುತ್ತಿಲ ಮಾತನಾಡಿ, ರಾಜಕೀಯ ಉದ್ದೇಶ ಮಾತ್ರವಲ್ಲದೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ […]

ಪುತ್ತಿಲ ಪರಿವಾರದ ನಗರ, ಗ್ರಾಮಾಂತರ ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳ ಸಮಾಗಮ Read More »

ಅಂದ್ರಿಗೇರು ನಿವಾಸಿ ತಿಮ್ಮಪ್ಪ ಗೌಡ ಆತ್ಮಹತ್ಯೆ

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರು ಎಂಬಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರು ನಿವಾಸಿ ತಿಮ್ಮಪ್ಪ ಗೌಡ ಆತ್ಮಹತ್ಯೆ ಮಾಡಿಕೊಂಡವರು. ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿರುವುದಾಗಿ ತಿಳಿದು ಬಂದಿದೆ.

ಅಂದ್ರಿಗೇರು ನಿವಾಸಿ ತಿಮ್ಮಪ್ಪ ಗೌಡ ಆತ್ಮಹತ್ಯೆ Read More »

ಮಾಣಿಲ ಕ್ಷೇತ್ರಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ | ನೂರಾರು ವಾಹನಗಳಲ್ಲಿ ತೆರಳಿದ ಹೊರೆಕಾಣಿಕೆ

ಪುತ್ತೂರು: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತರದಲ್ಲಿ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ಅಂಗವಾಗಿ ಪುತ್ತೂರಿನಿಂದ ತೆರಳುವ ಬೃಹತ್ ಹೊರೆಕಾಣಿಕೆ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿ, ಎಲ್ಲೆಡೆ ನಡೆಯುವ ಬ್ರಹ್ಮಕಲಶೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಕೇಂದ್ರಗಳಿಗೆ ಹೊರೆಕಾಣಿಕೆ ಸಮರ್ಪಣೆಯಾಗುತ್ತಿದೆ. ಅದರಂತೆ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಸ್ವಾಮೀಜಿಯವರು ಪ್ರತಿಯೊಂದು

ಮಾಣಿಲ ಕ್ಷೇತ್ರಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ | ನೂರಾರು ವಾಹನಗಳಲ್ಲಿ ತೆರಳಿದ ಹೊರೆಕಾಣಿಕೆ Read More »

ಮೌನಕ್ರಾಂತಿಯ ಹರಿಕಾರ ಡಿ.ದೇವರಾಜು ಅರಸು 108ನೇ ಜನ್ಮ ದಿನಾಚರಣೆ

ಪುತ್ತೂರು: ದೇವರಾಜರು ಮಾಡಿದ ಉತ್ತಮ ಕೆಲಸವನ್ನು ದೇಶವೆ ಗುರುತಿಸಿದ್ದು, ಇಂದಿರಾ ಗಾಂಧಿ ಭೂಸುಧಾರಣೆ ಕಾನೂನು ಜಾರಿಗೆ ತಂದಾಗ ಅದನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದು ದೇವರಾಜು ಅರಸು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ, ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೌನಕ್ರಾಂತಿಯ ಹರಿಕಾರ ಡಿ.ದೇವರಾಜು ಅರಸು 108ನೇ ಜನ್ಮ ದಿನಾಚರಣೆ Read More »

ಸೆ.2 ರಿಂದ 24 : ಲೋಕಕಲ್ಯಾಣಾರ್ಥವಾಗಿ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ” :  ಪೂರ್ವಭಾವಿ ಸಭೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯ ವೃದ್ಧಿಗಾಗಿ ಸೆ.2 ರಿಂದ 24 ರ ತನಕ ನಡೆಯಲಿರುವ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ”ದ ಪೂರ್ವಭಾವಿ ಸಭೆ ಭಾನುವಾರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ಹಿಂದೂ ಧರ್ಮಕ್ಕೆ ಬಂದಿರುವ ಸರ್ವ ಕಷ್ಟ, ನಷ್ಟಗಳು,

ಸೆ.2 ರಿಂದ 24 : ಲೋಕಕಲ್ಯಾಣಾರ್ಥವಾಗಿ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ” :  ಪೂರ್ವಭಾವಿ ಸಭೆ Read More »

ವಿದ್ಯಾಭಾರತಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ

ಪುತ್ತೂರು: ಬೆಳಗಾವಿಯ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ  ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದಿದೆ. ತಂಡವನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಧನುಷ್ ಆರ್, ಲಿಖಿತ್ ಗೌಡ ಕೆ, ವಾಣಿಜ್ಯ ವಿಭಾಗದ ನಿರ್ಮಿತ್ ,ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿನಯ್ ಡಿ, ವಿಜ್ಞಾನ ವಿಭಾಗದ ಮೋನಿಷ್ ಪ್ರತಿನಿಧಿಸಿದ್ದರು. ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿನಯ್ ಡಿ ಆರ್ಟಿಸ್ಟಿಕ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನ

ವಿದ್ಯಾಭಾರತಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ Read More »

ಕಾವೇರುತ್ತಿರುವ ಸೌಜನ್ಯ ಕೊಲೆ ಪ್ರಕರಣ | ಜಿಲ್ಲೆಯಾದ್ಯಂತ ಪ್ರತಿಭಟನೆ | ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಜಿ.ಪರಮೇಶ್ವರ್ ಸಾವಿನ ತನಿಖೆ ಮುಗಿದಿದೆ ಎಂದು ಹೇಳಿಕೆ ನೀಡಿರುವುದು ಸರಿಯೇ? | ಹಾಗಾದರೆ ಪ್ರಕರಣದ ನೈಜ ಆರೋಪಿಗಳ ಪತ್ತೆಯಾಗದೇ ಇರುವುದು ತನಿಖಾಧಿಕಾರಿಗಳ ವೈಫಲ್ಯವೇ ? | ಹಾಗಾದರೇ ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿಕೊಡುವವರು ಯಾರು?

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ಶಾಂತಿನಗರ ವಿಟ್ಟ, ಯುವ ಘಟಕ ಹಾಗೂ ಮಹಿಳಾ ಸಂಘ, ಗೌಡರ ಸ್ವಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ವಲಯ ನೇತೃತ್ವದಲ್ಲಿ ಕುಮಾರಿ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡಲು ಹಕ್ಕೊತ್ತಾಯ ಮಾಡುವ ಬೃಹತ್ ಪ್ರತಿಭಟನಾ ಮೆರವಣಿಗೆಯು ಆ.19 ಬೆಳಿಗ್ಗೆ ವಿಟ್ಲದಲ್ಲಿ ನಡೆಯಿತು. ಧರ್ಮಸ್ಥಳದ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ವಿಟ್ಲ ಜಂಕ್ಷನ್

ಕಾವೇರುತ್ತಿರುವ ಸೌಜನ್ಯ ಕೊಲೆ ಪ್ರಕರಣ | ಜಿಲ್ಲೆಯಾದ್ಯಂತ ಪ್ರತಿಭಟನೆ | ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಜಿ.ಪರಮೇಶ್ವರ್ ಸಾವಿನ ತನಿಖೆ ಮುಗಿದಿದೆ ಎಂದು ಹೇಳಿಕೆ ನೀಡಿರುವುದು ಸರಿಯೇ? | ಹಾಗಾದರೆ ಪ್ರಕರಣದ ನೈಜ ಆರೋಪಿಗಳ ಪತ್ತೆಯಾಗದೇ ಇರುವುದು ತನಿಖಾಧಿಕಾರಿಗಳ ವೈಫಲ್ಯವೇ ? | ಹಾಗಾದರೇ ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿಕೊಡುವವರು ಯಾರು? Read More »

ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಣ ಶನಿವಾರದಂದು ವಿಶೇಷ ಪೂಜೆ, ಸೋಣ ಶನಿವಾರ ವೃತಧಾರಿಗಳಿಗೆ ಅನ್ನದಾನ | ಆ.21 : ನಾಗರ ಪಂಚಮಿ ಹಬ್ಬ

ಪುತ್ತೂರು: ಕಾರಣಿಕ ಕ್ಷೇತ್ರ ಆರ್ಯಾಪು ಗ್ರಾಮದ  ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ19, 26, ಸೆ.2, 9 ಹಾಗೂ ಸೆ.16 ರ ಶನಿವಾರದಂದು ವಿಶೇಷ ಪೂಜೆ ಹಾಗೂ ಸೋಣ ಶನಿವಾರದ ವೃತಧಾರಿಗಳಿಗೆ ಅನ್ನದಾನ ನಡೆಯಲಿದೆ. ಈ ದಿನಗಳಲ್ಲಿ ಸರ್ವಸೇವೆ, ಮಹಾಪೂಜೆ, ಕ್ಷೀರಾಭಿಷೇಕ, ಬಲಿವಾಡು ಸೇವೆ, ಕಲಶಸ್ನಾನ, ಹೂವಿನ ಪೂಜೆ, ಎಳ್ಳೆಣ್ಣೆ ಸೇವೆ, ಕುಂಕುಮಾರ್ಚನೆ ಸೇವೆ ನಡೆಯಲಿದೆ. ಅಲ್ಲದೆ ಪ್ರತಿ ವರ್ಷದಂತೆ ನಾಗರ ಪಂಚಮಿ ಹಬ್ಬ ಆ.21 ಸೋಮವಾರ ನಡೆಯಲಿದ್ದು, ಹಬ್ಬದ ಅಂಗವಾಗಿ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ

ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಣ ಶನಿವಾರದಂದು ವಿಶೇಷ ಪೂಜೆ, ಸೋಣ ಶನಿವಾರ ವೃತಧಾರಿಗಳಿಗೆ ಅನ್ನದಾನ | ಆ.21 : ನಾಗರ ಪಂಚಮಿ ಹಬ್ಬ Read More »

ವೈದ್ಯರ ನಿರ್ಲ್ಯಕ್ಷದಿಂದ ಯುವಕ ಸಾವು | ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಆ.24 ರಂದು ಪ್ರತಿಭಟನೆ

ಪುತ್ತೂರು: ಪುತ್ತೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ವೈದ್ಯರನ್ನು ತಕ್ಷಣ ಬಂಧಿಸಬೇಕು ಮತ್ತು ಸರಕಾರ ನೊಂದ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ದ.ಕ.ದಲಿತ್ ಸೇವಾ ಸಮಿತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆ ಮುಂದೆ ಆ.24ರಂದು ಪ್ರತಿಭಟನೆ ನಡೆಸುವುದಾಗಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಳ್ಯ ತಾಲೂಕಿನ ಶ್ರೀಜಿತ್ ಎಂಬ ಯುವಕನನ್ನು ಹೊಟ್ಟೆನೋವೆಂದು ಪುತ್ತೂರು ಚೇತನಾ

ವೈದ್ಯರ ನಿರ್ಲ್ಯಕ್ಷದಿಂದ ಯುವಕ ಸಾವು | ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಆ.24 ರಂದು ಪ್ರತಿಭಟನೆ Read More »

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಶೇಷ ಸಾಧನೆಗೆ ಎಸ್‍ಸಿಡಿಸಿಸಿ ಬ್ಯಾಂಕ್‍ನಿಂದ ಪ್ರಶಸ್ತಿ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತನ್ನ ವ್ಯವಹಾರ ಕ್ಷೇತ್ರದ ಸಾಧನೆಗಾಗಿ ಸತತ 12 ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆ.19 ರಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉತ್ಕೃಷ್ಟ ಸೌಧದಲ್ಲಿ ನಡೆದ ಎಸ್‌ಸಿಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಸವಣೂರು ಸಿ.ಎ.ಬ್ಯಾಂಕಿನ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ.ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸವಣೂರು ಸಿ.ಎ. ಬ್ಯಾಂಕಿನ ಉಪಾಧ್ಯಕ್ಷ

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಶೇಷ ಸಾಧನೆಗೆ ಎಸ್‍ಸಿಡಿಸಿಸಿ ಬ್ಯಾಂಕ್‍ನಿಂದ ಪ್ರಶಸ್ತಿ Read More »

error: Content is protected !!
Scroll to Top